Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಹಬ್ಬದ ನೆಪದಲ್ಲಾದರೂ, ಮನೆಯ ಅಲಂಕಾರ ರಂಗೇರಲಿ
ಹಬ್ಬ ಎಂದಾಕ್ಷಣ ಹಿಂದಿನ ಕಾಲದಿಂದಲೂ ಒಂದು ಸಂಭ್ರಮದ ಸನ್ನಿವೇಶವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಂಪ್ರದಾಯದಂತೆ ಹಸಿರುತೋರಣ ಬಾಳೆಯ ಕಂಬ ಇತ್ಯಾದಿ ಪ್ರಾಕೃತಿಕ ವಸ್ತುಗಳಿಂದ ಹಬ್ಬದ ವಾತಾವರಣವನ್ನು ಹೆಚ್ಚಿಸಲಾಗುತ್ತಿತ್ತು. ಇದು ಈಗಲೂ ಹಲವಾರು ಮನೆಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ಈಗಿನ ಜನಾಂಗವು ಸಾಂಪ್ರದಾಯಿಕ ಆಚರಣೆಗೆ ಮೊರೆಹೋಗದೇ ಆಧುನಿಕ ಅಲಂಕಾರಿಕ ಅಭ್ಯಾಸಗಳನ್ನು ಅನುಸರಿಸಲು ಹಾತೊರೆಯುತ್ತಿದ್ದಾರೆ.
ಹಬ್ಬದ ಮಜಾ ಸವಿಯಲು ಅನೇಕ ರೀತಿಯ ಅಲಂಕಾರಿಕ ವಸ್ತುಗಳಿಂದ ಮನೆಯ ವಾತಾವರಣವನ್ನು ಒಂದು ರೀತಿ ಹೊಸ ಆಯಾಮವನ್ನು ನೀಡಿ ಅದರ ಮೆರುಗನ್ನು ಹೆಚ್ಚಿಸಲಾಗುತ್ತಿದೆ. ಹಬ್ಬದ ದಿನಗಳಲ್ಲಿ ನಮ್ಮ ಮನೆಯನ್ನು ಸ್ವಚ್ಛಗೊಳಿಸಿ ಸಿಂಗಾರಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೌದಲ್ಲವೇ? ಸಾಮಾನ್ಯವಾಗಿ ಹಬ್ಬದ ದಿನಗಳಂದು ಸಾರ್ವತ್ರಿಕ ರಜೆ ಇರುವುದರಿಂದ ಎಲ್ಲರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಬ್ಬದ ಮಜಾವನ್ನು ಎಲ್ಲರಿಗೂ ಹಂಚಿಕೊಳ್ಳಲು ಹಾತೊರೆಯುತ್ತಾರೆ.

ಈ ಸಂಭ್ರಮದ ಸಂದರ್ಭದಲ್ಲಿ ಕಳೆದು ಹೋದ ದಿನಗಳ ಬಗ್ಗೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಆಲೋಚಿಸುತ್ತೇವೆ. ಇದೊಂದು ಆನಂದ ಕ್ಷಣವಾಗಿದ್ದು, ಎಲ್ಲರೊಂದಿಗೆ ಹಬ್ಬದ ಶುಭಾಶಯವನ್ನು ಹಂಚಿಕೊಂಡು ಉಡುಗೊರೆಗಳನ್ನು ಹಂಚಿಕೊಳ್ಳುತ್ತೇವೆ. ಹೆಚ್ಚಾಗಿ ಕುಟುಂಬದವರನ್ನು ಒಂದುಗೂಡಿಸಲು ಇದೊಂದು ಸುಂದರ ವೇದಿಕೆಯಾಗಿದೆ.
ನಿಮಗೆ ಹಿಂದಿನ ಕಾಲದ ಸಂಪ್ರದಾಯಬದ್ಧವಾದ ಹಬ್ಬದ ಆಚರಣೆ ಮತ್ತು ಅಲಂಕಾರ ಜೋಡಣೆಯಲ್ಲಿ ಆಸಕ್ತಿಯಿಲ್ಲದಿದ್ದರೆ ಹೊಸ ಆಧುನಿಕ ವಿನ್ಯಾಸಗಳಿಂದ ನಿಮ್ಮ ಮನೆಯನ್ನು ಸಿಂಗಾರಗೊಳಿಸಿ. ಹಬ್ಬದ ಸಂದರ್ಭದಲ್ಲಿ ಮನೆಯನ್ನು ಸಿಂಗರಿಸುವ ಅನೇಕ ವಿಧಗಳನ್ನು ಅನುಸರಿಸಬಹುದಾಗಿದೆ. ನಿಮ್ಮ ಮನೆಯ ಒಳಗಿನ ಆವರಣದಲ್ಲಿ, ಅಡುಗೆ ಮನೆಯಲ್ಲಿ ಮತ್ತು ಮನೆಯ ದ್ವಾರದಲ್ಲಿ ಇರುವ ಖಾಲಿ ಜಾಗದಲ್ಲಿ ಅಲಂಕಾರ
ವಸ್ತುಗಳಿಂದ ಅಂದಗೊಳಿಸಬಹುದು. ಸರಿಯಾಗಿ ಯೋಜಿಸಿಕೊಂಡು ಮನೆಯಲ್ಲಿಯೇ ತಯಾರಿಸಿದ ವಿಭಿನ್ನ ಅಲಂಕಾರಿಕ ವಸ್ತುಗಳನ್ನು ಮತ್ತು ಆಭರಣಗಳಿಂದ ನಿಮ್ಮ ಮನೆಯನ್ನು ಸಿಂಗರಿಸಬಹುದಾಗಿದೆ. ಈ ಲೇಖನದಲ್ಲಿ ಹಬ್ಬದ ಪ್ರಯುಕ್ತ ನೀವು ಮನೆಯನ್ನು ಸಿಂಗರಿಸುವ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...
ಮಾಲೆಗಳು ಅಥವಾ ಹಾರಗಳು
ನಿಮ್ಮ ಮನೆಯ ಹಾಲ್‌ಗೆ ಇನ್ನೂ ಹೆಚ್ಚಿನ ಬೆರಗನ್ನು ನೀಡಿ. ಇದಕ್ಕಾಗಿ ನಿಜವಾದ ಹೂವುಗಳನ್ನೇ ಬಳಸಬಹುದು ಅಥವಾ ಕಾಗದದಲ್ಲಿ ಹಾರಗಳಾಗಿ ತಯಾರಿಸಿ ಅಲಂಕರಿಸಿ. ಇದು ನಿಜಕ್ಕೂ ಹಬ್ಬದ ವಾತಾವರಣದ ಖುಷಿಯನ್ನು ಹೆಚ್ಚಿಸುತ್ತದೆ.
ಅಲಂಕಾರಿಕ ಆಭರಣಗಳು
ಕೃತಕವಾದ ಹೂವುಗಳಿಗೆ ಬಿಳಿಯ ಬಣ್ಣವನ್ನು ಸಿಂಪಡಿಸಿ ವಿಭಿನ್ನವಾದ ಅಲಂಕಾರಿಕ ವಸ್ತುಗಳಾಗಿ ತಯಾರಿಸಿಕೊಳ್ಳಿ. ಆಕರ್ಷಕ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಬಿಳಿಯ ಬಣ್ಣದ ಬದಲು ಬೆಳ್ಳಿ ಅಥವಾ ಚಿನ್ನದ ಬಣ್ಣವನ್ನು ಸಿಂಪಡಿಸಬಹುದಾಗಿದೆ. ಚಿನ್ನಲೇಪಿತ ಕೃತಕ ಹೂವುಗಳನ್ನು ನಿಮ್ಮ ಮನೆಯ ಹಾಲ್ ನಲ್ಲಿ ಅಲಂಕರಿಸಿದರೆ ನಿಮ್ಮ ಮನೆಯು ನಳನಳಿಸುತ್ತದೆ.
ಕಿಟಕಿ ಅಲಂಕರಿಸುವುದು
ನಿಮ್ಮ ಕೊಠಡಿಗೆ ಹಬ್ಬದ ಹವಾ ನೀಡಲು, ಕಾಗದದ ಆಭರಣಗಳನ್ನು ನಿಮ್ಮ ಕೊಠಡಿಯ ಕಿಟಕಿಗಳಿಗೆ ಸಿಂಗರಿಸಿ. ಕಿಟಕಿ ಅಂಚುಗಳಿಗೆ ಎಲ್ಇಡಿ ಬಲ್ಬ್ ಗಳಿಂದ ಸಿಂಗರಿಸಿದರೆ ಹಬ್ಬದ ಮೆರುಗು ಇನ್ನೂ ಹೆಚ್ಚಾಗುತ್ತದೆ. ಮನೆಯ ಕಿಟಕಿಯನ್ನು ಅಲಂಕರಿಸಲು ನವೀನ ಸಲಹೆಗಳು
ಉಪಯೋಗಿಸದ ಬಟ್ಟೆಯಿಂದ ಗೋಡೆಯನ್ನು ಅಲಂಕರಿಸಿ
ಮನೆಯೆಂದ ಮೇಲೆ ಲಗ್ನ ಪತ್ರಿಕೆಗಳಿಂದ ಹಿಡಿದು ಬ್ಯಾಂಕಿನಿಂದ ಬರುವ ಪತ್ರಗಳವರೆಗೆ ಹಲವಾರು ಪತ್ರಗಳು ಬರುತ್ತಾ ಇರುತ್ತವೆ. ಇವುಗಳನ್ನು ಅಲ್ಲಿ-ಇಲ್ಲಿ ಬಿಸಾಡುವ ಬದಲಿಗೆ ಒಂದು ಕಡೆ ಇಡಲು ಉಪಯೋಗಿಸದೆ ಇರುವ ಒಂದು ಬಟ್ಟೆಯಿಂದ ಅದಕ್ಕೆ ಚೀಲವನ್ನು ಮಾಡಿ, ಮನೆಯ ಗೋಡೆಗೆ ನೇತು ಹಾಕಿ. ಇದು ನೋಡಲು ಶೋ-ಪೀಸ್ ರೀತಿಯೂ ಇರುತ್ತದೆ. ಪತ್ರಗಳ ಜೊತೆಗೆ ಮೊಬೈಲ್ ಚಾರ್ಜರ್, ಇಯರ್ ಫೋನ್ ಇತ್ಯಾದಿಗಳನ್ನು ಸಹ ಅದರಲ್ಲಿ ಹಾಕಿ ಇಡಲು ಸಹಾಯವಾಗುತ್ತದೆ. ಇದಕ್ಕೆ ಸ್ವಲ್ಪ ದಪ್ಪನಾದ ಬಟ್ಟೆಯನ್ನು ಬಳಸಿ. ಹತ್ತಿಯ ಬಟ್ಟೆಯಾದರೆ ಇನ್ನೂ ಒಳ್ಳೆಯದು. ಕೊಠಡಿಯ ಅಂದ ಹೆಚ್ಚಿಸುವ ಗೋಡೆ ಅಲಂಕಾರ
ಬಟ್ಟೆಯನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಅದರ ಹಂಚುಗಳನ್ನು ನೋಡಲು ಚೆನ್ನಾಗಿರುವಂತೆ ಹೊಲಿಯಿರಿ. ಗೋಡೆಗೆ ನೇತು ಹಾಕಲು ಒಂದು ದಾರವನ್ನು ಸಹ ಇದಕ್ಕೆ ಸೇರಿಸಿ. ಒಂದು ವೇಳೆ ನೀವು ತಿಳಿ ಬಣ್ಣದ ಬಟ್ಟೆಯನ್ನು ಬಳಸುತ್ತಿದ್ದಲ್ಲಿ, ಗಾಢ ಬಣ್ಣದ ಬಟ್ಟೆಯನ್ನು ಅಂಚಿಗೆ ಹೊಲೆಯಿರಿ. ಇದರಿಂದ ಇದು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ನಿಮ್ಮ ಬಳಿ ಎಂಬ್ರಾಯಿಡಿಂಗ್ ಮಾಡಿದ, ಗುಂಡಿಗಳಿರುವ ಅಥವಾ ಕನ್ನಡಿಗಳು ಅಥವಾ ಮಣಿಗಳು ಇರುವ ಹಳೆಯ ಸೀರೆ ಅಥವಾ ಸಲ್ವಾರ್ ಇದ್ದಲ್ಲಿ ಅದರಲ್ಲಿನ ಅಲಂಕಾರಿಕ ಭಾಗವನ್ನು ಕತ್ತರಿಸಿ ಇದಕ್ಕೆ ಅಂಟಿಸಿ. ಗೋಡೆಗೆ ನೇತು ಹಾಕಿದಾಗ ಇದು ನೋಡಲು ಚೆನ್ನಾಗಿ ಕಾಣುತ್ತದೆ, ಜೊತೆಗೆ ಹಬ್ಬದ ಮೆರುಗು ಇನ್ನೂ ಹೆಚ್ಚಾಗುತ್ತದೆ.



Click it and Unblock the Notifications

