Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ದೀಪಾವಳಿಗೆ ದೀಪಗಳನ್ನು ನೀವೇ ತಯಾರಿಸಿ ಹಬ್ಬ ಆಚರಿಸಿ
ದೀಪಾವಳಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಸಂಭ್ರಮದಿಂದ ಆಚರಿಸುತ್ತಾರೆ. ದೀಪಗಳ ಹಬ್ಬದಲ್ಲಿ ದೀಪಗಳು ಹೆಚ್ಚು ಪ್ರಾಮುಖ್ಯವಾದುದು. ಆದ್ದರಿಂದಲೇ ಮಣ್ಣಿನ ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಾರೆ. ಮಣ್ಣಿನ ದೀಪಗಳು ಸಂಪ್ರದಾಯಬದ್ಧವಾಗಿರುವುದರಿಂದ ಇದಕ್ಕೆ ಹೆಚ್ಚು ಪ್ರಾಶಸ್ತ್ಯ.

ಇತ್ತೀಚಿನ ದಿನಗಳಲ್ಲಿ ಗೂಡು ದೀಪ, ವಿದ್ಯುತ್ ದೀಪಗಳು ಇವುಗಳ ಸ್ಥಾನವನ್ನು ಪಡೆದುಕೊಂಡು ಇನ್ನಷ್ಟು ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡಲು ಸಹಾಯಕವಾಗಿವೆ. ಆದರೆ ಇಂದಿನ ಲೇಖನದಲ್ಲಿ ದೀಪಗಳ ತಯಾರಿಯನ್ನು ನೀವೇ ಸಿದ್ಧಪಡಿಸಿ ಈ ದೀಪಾವಳಿಯನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಈ ಹಣತೆಗಳ ಚೆಲುವನ್ನು ಒಮ್ಮೆ ನೋಡಿರಣ್ಣಾ...
ಫ್ಲೋರ್ ದೀಪಗಳು
ಹಿಟ್ಟನ್ನು ನಾದಿ ನೀವು ದೀಪಗಳನ್ನು ತಯಾರಿಸಬಹುದಾಗಿದೆ. ನಂತರ ಇವುಗಳನ್ನು ಕಾಯಿಸಿ ಇದಕ್ಕೆ ಗಾಢವಾದ ಕೆಂಪು, ಹಳದಿ ಮತ್ತು ಹಸಿರು ಬಣ್ಣವನ್ನು ಹಚ್ಚಿ ತದನಂತರ ಚಿಕ್ಕ ಚಿಕ್ಕ ಮಣಿ ಮತ್ತು ಕನ್ನಡಿಗಳ ಅಲಂಕಾರವನ್ನು ಮಾಡಬಹುದಾಗಿದೆ.
ಮಣ್ಣಿನ ಹಣತೆಗಳು
ಮಣ್ಣನ್ನು ಬಳಸಿಕೊಂಡು ಇದರಿಂದ ದೀಪಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಆಕಾರವನ್ನು ನೀಡಿ. ಚಾಕುವನ್ನು ಬಳಸಿ ಇದರ ಮೇಲೆ ವಿನ್ಯಾಸವನ್ನು ಚಿತ್ರಿಸಬಹುದು. ಸಣ್ಣ ಸಣ್ಣ ತೂತುಗಳನ್ನು ರಚಿಸಬಹುದು ಇದರಿಂದ ಅವುಗಳು ಇನ್ನಷ್ಟು ಪ್ರಕಾಶಮಾನವಾಗಿ ಉರಿಯುತ್ತದೆ. ಚೆನ್ನಾಗಿ ಒಣಗಲು ಬಿಡಿ.
ಸಿಡಿ ದೀಪಗಳು
ಹಳೆಯ ಸಿಡಿಗಳನ್ನು ಬಳಸಿಕೊಂಡು ಅದರಿಂದ ದೀಪವನ್ನು ಸಿದ್ಧಮಾಡಬಹುದಾಗಿದೆ. ಸಿಡಿಗಳ ಮಧ್ಯಭಾಗದಲ್ಲಿ ಟಿ ಲೈಟ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ತದನಂತರ ಸಿಡಿಗಳನ್ನು ಬೀಡ್ಸ್, ಸೀಕ್ವನ್ಸ್, ಕುಂದನ್ ಬಳಸಿ ಸಿಂಗರಿಸಿ. ಸಿಲ್ವರ್, ಗೋಲ್ಡನ್ ಥ್ರೆಡ್ಸ್ ಮತ್ತು ಬ್ರೈಟ್ ಕಲರ್ಗಳನ್ನು ಬಳಸಿಕೊಳ್ಳಿ. ನಿಮ್ಮ ಪೂಜೆಯ ಕೊಠಡಿಯಲ್ಲಿ ಇವುಗಳನ್ನು ಸಿದ್ಧಪಡಿಸಿ. ನಂತರ ರಂಗೋಲಿಯೊಂದಿಗೆ ಸಿಂಗರಿಸಿ. ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ
ಪೇಪರ್ ಹಣತೆಗಳು
ನೀವು ಪೇಪರ್ ಹಣತೆಗಳನ್ನು ಕ್ರಿಯಾತ್ಮಕವಾಗಿ ರಚಿಸಿಕೊಳ್ಳಬಹುದಾಗಿದೆ. ಬಣ್ಣದ ಕಾಗದಗಳಿಂದ ತಾವರೆಗಳನ್ನು ತಯಾರಿಸಿ ಇದರೊಳಗೆ ಸಣ್ಣ ಟಿ ಲೈಟ್ ಕ್ಯಾಂಡಲ್ ಅನ್ನು ಇರಿಸಿ. ಕತ್ತಲೆ ಕೊಠಡಿಯಲ್ಲಿ ಈ ದೀಪಗಳ ಝಲಕ್ ಅನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.
ಫ್ಲೋಟಿಂಗ್ ಹಣತೆಗಳು
ರಿನ್ಸ್ಟೋನ್ಸ್ ಮತ್ತು ಫೋಮ್ ಶೀಟ್ನಿಂದ ಫ್ಲೋಟಿಂಗ್ ದೀಪಗಳನ್ನು ಮಾಡಬಹುದಾಗಿದೆ. ಅಂಟಿನ ಸಹಾಯದಿಂದ ಟಿ ಲೈಟ್ ಕ್ಯಾಂಡಲ್ ಅನ್ನು ದೀಪಗಳ ಮಧ್ಯಭಾಗದಲ್ಲಿ ಇರಿಸಿ. ಇದಕ್ಕೆ ಸಿಲ್ವರ್ ಮತ್ತು ಗೋಲ್ಡನ್ ಬೀಡ್ಸ್ ಬಳಸಿ ಇನ್ನಷ್ಟು ಸುಂದರಗೊಳಿಸಬಹುದಾಗಿದೆ.



Click it and Unblock the Notifications





