ಮನೆಯನ್ನು ಬೆಚ್ಚಗಿರಿಸಿಕೊಳ್ಳಲು ರೂಮ್ ಹೀಟರ್ ಬೇಕಾಗಿಲ್ಲ!

By Arshad

ಬಿಸಿಲುಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ತಿಳಿದಿದೆಯೇ? ಅದೇ ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟು ಕಾಡುಗಳ ನಡುವೆ ಎತ್ತರದ ಕಟ್ಟಡದ ಕಾಂಕ್ರೀಟು ಗೋಡೆ ಛಾವಣಿಗಳ ನಡುವೆ ವಾಸಿಸುವ ನಮಗೆ ಹವಾಮಾನದ ವೈಪರೀತ್ಯವನ್ನು ತಡೆಯಲು ಸಾಧ್ಯವಿಲ್ಲ.

ಆದ್ದರಿಂದ ಬಿಸಿಲುಗಾಲದಲ್ಲಿ ಫ್ಯಾನ್, ಎಸಿಗಳ ಮೊರೆಹೊಕ್ಕರೆ ಚಳಿಗಾಲದಲ್ಲಿ ರೂಮ್ ಹೀಟರ್‌ಗಳನ್ನು ಬಳಸುತ್ತೇವೆ. ಉತ್ತರ ಭಾರತದಲ್ಲಂತೂ ಅತಿ ಶೀತದಿಂದ ಹೀಟರುಗಳನ್ನು ಖರೀದಿಸಲಾರದ ಬಡವರು ಕಲ್ಲಿದ್ದಲನ್ನು ಹೊತ್ತಿಸಿ ಮಲಗುತ್ತಾರೆ. ಆದರೆ ಅದರ ಹೊಗೆ ಹೊರಹೋಗಲು ಜಾಗವಿಲ್ಲದೇ ಇದ್ದರೆ ರಾತ್ರಿ ಮಲಗಿದ್ದಲ್ಲಿಯೇ ಮರಣಹೊಂದುತ್ತಾರೆ.

Natural Ways To Keep Your Home Warm

ಮನೆಗೆ ಕಿಟಕಿಗಳಿಗೆ ಭಾರದ ಪರದೆ ಹಾಕುವುದು, ಹಗಲಿನ ಸೂರ್ಯನ ಬೆಳಕು ಸಾಕಷ್ಟು ಒಳಬರುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಮೊದಲಾದ ಕೆಲವು ಸುಲಭ ಉಪಾಯದಿಂದ ನಿಮ್ಮ ಮನೆಯನ್ನು ಬೆಚ್ಚರಿಗಿರಿಸಿಕೊಳ್ಳಬಹುದು. ಬನ್ನಿ ಮಳೆಗಾಲದ ದಿನಗಳಲ್ಲಿ ನಿಮ್ಮ ಮನೆಯನ್ನು ಬೆಚ್ಚಗಿರಿಸಲು ಕೆಲವು ನೈಸರ್ಗಿಕ ವಿಧಾನವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ದಪ್ಪನೆಯ, ಭಾರದ ಪರದೆ ಅಡ್ಡಬಿಡಿ
ಮಳೆಗಾಲದಲ್ಲಿ ನಿಮ್ಮ ಮನೆಯ ಕಿಟಕಿ ಪರದೆಗಳನ್ನು ದಪ್ಪನೆಯ, ಭಾರದ ಮತ್ತು ಗಾಢವರ್ಣದ ಬಟ್ಟೆಯಿಂದ ಮಾಡಿದ ಪರದೆಗಳಿಗೆ ಬದಲಾಯಿಸಿ. ಇದು ಸೂರ್ಯನ ಬೆಳಕನ್ನು ಹೀರಿ ಬೆಚ್ಚಗಿರುವುದು ಮಾತ್ರವಲ್ಲದೇ ಹೊರಗಿನ ತಣ್ಣನೆಯ ಗಾಳಿ ಮನೆಯೊಳಗೆ ಬರದಂತೆ ತಡೆಯುತ್ತದೆ. ಮಳೆಗಾಲದಲ್ಲಿ ನಿಮ್ಮ ಮನೆಯ ಸ್ವಚ್ಛತೆಗೆ 6 ಸಲಹೆಗಳು

ಗವಾಕ್ಷಿಗಳನ್ನು ತೆರೆದಿಡಿ
ನಿಮ್ಮ ಕಿಟಕಿಗಳ ಮೇಲ್ಭಾಗದ ಗವಾಕ್ಷಿಗಳನ್ನು ದಿನದ ಹೊತ್ತಿನಲ್ಲಿ ತೆರೆದಿಡುವ ಮೂಲಕ ಸಾಕಷ್ಟು ಸೂರ್ಯರಶ್ಮಿ ಮನೆಯೊಳಗೆ ಬರುವಂತೆ ಮಾಡಿ. ಇದು ಮನೆಯೊಳಗಣ ಹವೆಯನ್ನು ಬಿಸಿಮಾಡಿ ಮನೆಯನ್ನು ರಾತ್ರಿಯಿಡೀ ಬೆಚ್ಚಗಿರಿಸಲು ಸಹಕರಿಸುತ್ತದೆ.

ರತ್ನಗಂಬಳಿ ಹಾಸಿ
ನಿಮ್ಮ ಮನೆಯ ನೆಲದ ಮೇಲೆ ದಪ್ಪನೆಯ ಮತ್ತು ಭಾರದ ರತ್ನಗಂಬಳಿಯನ್ನು ಹರಡುವ ಮೂಲಕವೂ ಮನೆಯನ್ನು ಬೆಚ್ಚಗಿಡಬಹುದು. ಇದು ನೆಲದ ಮಣ್ಣಿನಿಂದ ಮೇಲಕ್ಕೇರುವ ತಣ್ಣನೆಯ ತಾಪಮಾನವನ್ನು ಮನೆಯೊಳಗೆ ಬರದಂತೆ ತಡೆಯುವ ಮೂಲಕ ಕೋಣೆಯನ್ನು ಬೆಚ್ಚಗಿರಿಸುತ್ತದೆ. ಆದರೆ ಈ ದುಬಾರಿ ಕಾರ್ಪೆಟ್ ಅಥವಾ ರತ್ನಗಂಬಳಿಯ ಮೇಲೆ ಹೊರಗಿನ ಪಾದರಕ್ಷೆ ಅಥವಾ ಕೊಳಕು ಪಾದಗಳಿಂದ ತುಳಿಯಬಾರದಂತೆ ಎಚ್ಚರವಹಿಸಬೇಕು.

ಮೇಣದ ಬತ್ತಿ ಹಚ್ಚಿ
ಸಂಜೆಯಾಗುತ್ತಿದ್ದಂತೆಯೇ ಮನೆಯ ವಿವಿಧ ಕೋಣೆಗಳಲ್ಲಿ ಒಂದೆರಡು ಮೇಣದ ಬತ್ತಿಗಳನ್ನು ಹಚ್ಚಿ. ಅವುಗಳಲ್ಲಿ ಒಂದೆರಡು ಸುವಾಸಿತ ಮೇಣದ ಬತ್ತಿ ಇದ್ದರೆ ಉತ್ತಮ. ಆದರೆ ಸುವಾಸನೆಯ ಮೇಣದ ಬತ್ತಿಗಳನ್ನೇ ಇಡಿಯ ಮನೆಯಲ್ಲಿ ಹಚ್ಚಿದರೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಮೇಣದ ಬತ್ತಿಯ ಬದಲಿಗೆ ಹತ್ತಿಯ ಎಣ್ಣೆದೀಪವನ್ನೂ ಉಪಯೋಗಿಸಬಹುದು. ಇದು ನಿಮ್ಮ ಮನೆಯನ್ನು ಬೆಚ್ಚಗಿಡುವಲ್ಲಿ ಸಹಕರಿಸುತ್ತದೆ.

ಸೂಕ್ತ ವಿದ್ಯುತ್ ದೀಪಗಳನ್ನು ಬೆಳಗಿಸಿ
ಟ್ಯೂಬ್ ಲೈಟ್ ಮತ್ತು ಎಲ್ ಇಡಿ ಬಲ್ಬ್‌ಗಳು ಶಾಖರಹಿತ ಅಥವಾ ಅತಿ ಕಡಿಮೆ ಶಾಖ ನೀಡುವುದರಿಂದ ಅವುಗಳ ಬದಲಿಗೆ ಸಾಂಪ್ರಾದಾಯಿಕ ಟಂಗ್ಸ್ಟನ್ ಫಿಲಮೆಂಟ್ ಬಲ್ಬ್ ಉಪಯೋಗಿಸಿ. ಇದು ಕೋಣೆಗೆ ಬೆಳಕಿನ ಜೊತೆಗೇ ಶಾಖವನ್ನೂ ನೀಡುತ್ತದೆ. ಆದರೆ ಈ ಬಲ್ಬಗಳಿರುವಲ್ಲಿ ಸೀಲಿಂಗ್ ಫ್ಯಾನನ್ನು ನಿಧಾನಗತಿಯಲ್ಲಿ ಚಲಾಯಿಸುವ ಮೂಲಕ ಬೆಚ್ಚನೆಯ ಗಾಳಿ ಇಡಿಯ ಕೋಣೆ ಹರಡುತ್ತದೆ. ಇಲ್ಲದಿದ್ದರೆ ಬಲ್ಬ್ ತನ್ನ ಶಾಖದಿಂದಲೇ ಉರಿದುಹೋಗಬಹುದು.

X
Desktop Bottom Promotion