Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯ ಅಲಂಕಾರಕ್ಕೂ ಸ್ವಲ್ಪ ಆದ್ಯತೆ ನೀಡಿ ಸ್ವಾಮಿ..!
ಮನೆಯೇ ಮಂತ್ರಾಲಯ ಎನ್ನುವ ಮಾತಿದೆ. ಮನೆಯೆಂದರೆ ಮಂದಿರಕ್ಕೆ ಸಮಾನವೆನ್ನುತ್ತಾರೆ. ಹಾಗಾಗಿ ಮನೆಯನ್ನು ಮಂದಿರದಂತೆಯೇ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಕೆಲವರು ಮನೆಯೊಳಗೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಟ್ಟಿರುತ್ತಾರೆ. ಇದರಿಂದ ಮನೆಯ ಅಂದ ಕೆಡುತ್ತದೆ. ಅಲ್ಲದೆ ಮನೆಯ ಸೌಂದರ್ಯ ಹಾಗೂ ಸ್ವಚ್ಛತೆಯನ್ನು ನಾವು ಯಾವ ರೀತಿಯಲ್ಲಿ ಕಾಪಾಡಿಕೊಂಡು ಹೋಗುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಇಂದಿನ ದುಬಾರಿ ಸಮಯದಲ್ಲಿ ಮನೆಯನ್ನು ಅನುಕೂಲಕ್ಕೆ ತಕ್ಕಂತೆ ಶೃಂಗರಿಸಿಡುವುದು ಕಷ್ಟವಾದರೂ ಸಣ್ಣ ಬಜೆಟ್ ನಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮನೆಯ ಅಂದವನ್ನು ಹೆಚ್ಚಿಸಬಹುದು.

ನಿಮ್ಮ ಮನೆಯನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಲು ನಿಮ್ಮಲ್ಲಿನ ಸೃಜನಶೀಲತೆಯನ್ನು ಬಳಸಲು ಯಾವುದೇ ಆತಂಕಬೇಡ. ನೆರೆಮನೆಯವರ ಅಥವಾ ಸ್ನೇಹಿತರ ಮನೆಯ ವಿನ್ಯಾಸವನ್ನು ನಿಮ್ಮ ಮನೆಗೆ ಅಳವಡಿಸಿಕೊಳ್ಳುವುದು ದೊಡ್ಡ ಮಟ್ಟದ ವೈಫಲ್ಯವಾಗುತ್ತದೆ. ಮನೆ ಅಲಂಕಾರದ ವೇಳೆ ಮಾಡುವಂತಹ ತಪ್ಪುಗಳ ಬಗ್ಗೆ ನಾವಿಲ್ಲಿ ಚರ್ಚಿಸುವ. ಮನೆಯನ್ನು ಅಪೂರ್ವವಾಗಿ ವಿನ್ಯಾಸಗೊಳಿಸಲು ತಯಾರಾಗಿ.. ಮನೆಯ ಬಿಳಿ ಗೋಡೆಗಳ ಮೇಲಿನ ಕಲೆಗಳನ್ನು ನಿವಾರಿಸುವುದು ಹೇಗೆ?
ಪ್ರವೇಶ ಹಜಾರದ ನಿರ್ಲಕ್ಷ್ಯ
ಮನೆಗೆ ಬರುವ ಅತಿಥಿಗಳನ್ನು ಆಕರ್ಷಿಸುವಂತಹ ಮೊದಲ ಅವಕಾಶವನ್ನು ನಾವು ಯಾವತ್ತೂ ಕಳಕೊಳ್ಳಬಾರದು. ಒಳಾಂಗಣ ಅಲಂಕಾರದಲ್ಲಿ ಮಾಡುವಂತಹ ಅತ್ಯಂತ ಸಾಮಾನ್ಯ ತಪ್ಪೆಂದರೆ ಪ್ರವೇಶ ಹಜಾರವನ್ನು ವಿನ್ಯಾಸ ಮತ್ತು ಅಲಂಕಾರದಲ್ಲಿ ಕಡೆಗಣಿಸುವುದು. ಯಾವತ್ತಿಗೂ ಪ್ರವೇಶ ಹಜಾರವನ್ನು ಆಕರ್ಷಕವಾಗಿಟ್ಟುಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ ಅಲ್ಲಿ ಪೈಟಿಂಗ್ ಅಥವಾ ನಿಮ್ಮ ಕುಟುಂಬದ ಸಂತಸದ ಸಮಯದ ಫೋಟೋಗಳನ್ನು ಹಾಕಿ.
ಬೆಳಕಿನ ಕೊರತೆ
ಮನೆ ಅಲಂಕಾರದ ವೇಳೆ ನಾವು ಮಾಡುವಂತಹ ಮತ್ತೊಂದು ತಪ್ಪೆಂದರೆ ಮನೆಯನ್ನು ತುಂಬಾ ಪ್ರಕಾಶಮಾನ ಅಥವಾ ಮಂದ ಬೆಳಕಿರುವಂತೆ ಅಲಂಕಾರ ಮಾಡುವುದು. ನಿಮ್ಮ ಮನೆಗೆ ಸೂಕ್ತ ಪ್ರಮಾಣದಲ್ಲಿ ಬೆಳಕು ನೀಡಲು ಪ್ರಯತ್ನಿಸಿ. ಕೋಣೆಗಳಿಗೆ ಹೊಂದಿಕೊಳ್ಳುವಂತೆ ಬೆಳಕು ನೀಡಬೇಕು. ವಾಸದ ಕೋಣೆಗೆ ಅಧಿಕ ಬೆಳಕು ಬೇಕಾದರೆ ಮಲಗುವ ಕೋಣೆಗೆ ಮಂದ ಬೆಳಕು ಸಾಕಾಗುತ್ತದೆ. ಮಳೆಗಾಲದಲ್ಲಿ ಮನೆಯ ಕಾರ್ಪೆಟ್‌ನ ಸ್ವಚ್ಛತೆ ಹೀಗಿರಲಿ
ಎಲ್ಲವನ್ನೂ ಹೊಂದಾಣಿಕೆ ಮಾಡುವುದು



Click it and Unblock the Notifications


