Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆರಾಮದಾಯಕ ಮನೆಗಳಿಗೆ ಐದು ಹಂತಗಳು
ಕೆಲವೊಂದು ಮನೆಗಳು ಸುಂದರ ಮತ್ತು ಕೆಲವು ಮನೆಗಳು ಆರಾಮದಾಯಕವಾಗಿರುತ್ತದೆ. ಆದರೆ ಕೆಲವು ಮಂದಿಯು ಎರಡನ್ನು ಹೊಂದಿರುವ ಮನೆಯಲ್ಲಿರುವ ಅದೃಷ್ಟವಂತರು. ಆದರೆ ನಿಮ್ಮ ಮನೆಯು ಯಾರಾದರು ಒಬ್ಬರು ಬಂದಾಗ ಎಲ್ಲವನ್ನು ಮರೆತು ಇರಬೇಕೆಂದು ಬಯಸುವುದಾದರೆ ಆಗ ನೀವು ಮನೆಯ ಆರಾಮದ ಮಟ್ಟದ ಬಗ್ಗೆ ಗಮನಿಸಬೇಕು.
ಮನೆಯು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಆರಾಮವಾಗಿರಬಹುದಾದ ಸ್ಥಳವಾಗಿದೆ. ಮನೆಯ ಒಳಗಿನ ಅಲಂಕಾರ ಹೇಗಿರಬೇಕೆಂದರೆ ಅದು ದೀರ್ಘ ಶ್ವಾಸ ತೆಗೆದುಕೊಳ್ಳುವಂತಿರಬೇಕು. ನಿಮ್ಮ ಮನೆ ಅಥವಾ ಒಂದು ಕೋಣೆಯನ್ನು ಆರಾಮದಾಯಕವಾಗಿ ಮಾಡಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.
ನಿಮ್ಮ ಬಜೆಟ್ ನಲ್ಲೇ ಮನೆ ನವೀಕರಿಸಿ

ಮೊದಲ ಹಂತ: ಮೂಲದಿಂದ ಆರಂಭಿಸಿ
ಗೊಂದಲವಿಲ್ಲದ, ಮರುಬಳಕೆ, ಕುಗ್ಗಿಸುವುದು. ಈ ಮೂರು ಪದಗಳನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಮನೆಯ ಸುತ್ತ ಎಲ್ಲವನ್ನು ಕಾರ್ಯಗತಗೊಳಿಸಿ.

ಎರಡನೇ ಹಂತ: ಆಸನದ ಸೆಟ್
ಆರಾಮದಾಯಕ ಆಸನದ ವ್ಯವಸ್ಥೆ ಮಾಡಿ. ನಿಮ್ಮ ಸೋಫಾದ ಮೇಲೆ ಮೃದುವಾದ ಪ್ಲಶ್ ಪಿಲ್ಲೊಗಳು ಅಥವಾ ಕುಷನ್ ಹಾಕಿ. ಆಸನದ ಪ್ರದೇಶವನ್ನು ಹೆಚ್ಚು ಆಹ್ವಾನಿತ ಮತ್ತು ಆರಾಮದಾಯಕ ಮಾಡಲು ನೀವು ಅಲಂಕಾರ ಮಾಡಬಹುದು.

ಮೂರನೇ ಹಂತ: ನೆಲ
ನಿಮ್ಮ ನೆಲವು ಬದಲಾವಣೆ ಉಂಟುಮಾಡಬಹುದು. ನೆಲದಲ್ಲಿ ಡ್ಯುರಿ ಅಥವಾ ಮ್ಯಾಟ್ ಹಾಕಿದರೆ ಆಗ ನೆಲವು ತುಂಬಾ ಆಕರ್ಷಕವಾಗಿ ಕಾಣಿಸಬಹುದು. ನಿಮ್ಮ ಬೆಡ್ ಅಥವಾ ಕುರ್ಚಿಯ ಬದಿಯಲ್ಲಿ ರಗ್ ಹಾಕಿದರೆ ಆಗ ಅದು ಮೃದುವಾಗಿ ಕಾಣಿಸುತ್ತದೆ.

ನಾಲ್ಕನೇ ಹಂತ: ಬೆಡ್ ಸರಿಯಾಗಿರಲಿ
ನಿಮ್ಮ ಬೆಡ್ ಶೀಟ್ ಗಳು ತುಂಬಾ ಆರಾಮದಾಯಕವಾಗಿರುಂತಹ ಭಾವನೆ ಮೂಡಿಸುತ್ತಿರಲಿ. ಆರಾಮದಾಯಕ ಮತ್ತು ಹೆಚ್ಚಿನ ದಾರ ಎಣಿಕೆಗಳಿರುವ(ಹೆಚ್ಚಿನ ದಾರದ ಎಣೆಕೆಯು ಚೌಕಾಕಾರದಲ್ಲಿದ್ದರೆ ಅದು ತುಂಬಾ ಮೃದು ಮತ್ತು ರೇಷ್ಮೆಯಂತಿರುತ್ತದೆ.)

ಐದನೇ ಹಂತ: ಅಂದವಾದ ಮೂಲೆ
ಇದಿಲ್ಲದೆ ಎಲ್ಲಾ ಅಂಶಗಳು ಕಳಕೊಳ್ಳುತ್ತದೆ. ನಿಮ್ಮ ಮನೆಯಲ್ಲಿನ ಒಂದು ಮೂಲೆಯು ಒಂದು ಪುಸ್ತಕ, ಐಪಾಡ್, ಒಂದು ಕಪ್ ಕಾಫಿ ಇಡುವಂತಹ ಜಾಗವಾಗಿರಬೇಕು. ನಿಮ್ಮ ಸಣ್ಣ ಸ್ವರ್ಗದಲ್ಲಿ ಈ ಜಾಗ ಮಾಡಿ. ನಿಮ್ಮ ಫೇವರಿಟ್ ಕುರ್ಚಿ ಅಥವಾ ಸೋಫಾವನ್ನು ಅಲ್ಲಿಡಿ. ಇಲ್ಲಿ ಮೇಜಿನ ಮೇಲಿನ ಲ್ಯಾಂಪ್ ಅಥವಾ ಬದಿಯಲ್ಲಿ ಹೊರಗಿನ ದೃಶ್ಯ ವೀಕ್ಷಿಸಲು ದೊಡ್ಡದಾದ ಕಿಟಕಿಯಿರಬೇಕು.



Click it and Unblock the Notifications