Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಉಪಯುಕ್ತ ಸಲಹೆಗಳು!
ದೀಪಾವಳಿ ಎಂದರೆ ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಹಬ್ಬ ಆಚರಿಸುತ್ತೇವೆ.ಆದರೆ ಕೆಲವರು ಏಕಾಂತದಲ್ಲಿ ಜನಜಂಗುಳಿಯಿಂದ ದೂರವಿರಲು ಬಯಸುತ್ತಾರೆ. ಪ್ರವಾಸಿ ಕೇಂದ್ರಗಳಿಂದ ಮತ್ತು ಜನಜಂಗುಳಿಯಿಂದ ದೂರ ಉಳಿದರೂ ಕೂಡ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಬಹುದು. ದೀಪಾವಳಿ ಹಬ್ಬ ಆಚರಿಸಲು ಇನ್ನಷ್ಟು ಸಲಹೆಗಳು ಈ ಕೆಳಗಿವೆ.
ನಿಮ್ಮ ಮನೆಯನ್ನು ಅಲಂಕರಿಸಿ
ಎಲ್ಲಾ ಉಪಕರಣಗಳು ಮತ್ತು ಪೆಟ್ಟಿಗೆಗಳನ್ನು ತೆಗೆದು ಮನೆಯನ್ನು ಶುದ್ಧಗೊಳಿಸುವುದರ ಜೊತೆಗೆ ಅದನ್ನು ಅಲಂಕರಿಸಿ. ಹೊಸ ಗಿಡಗಳನ್ನು ನೆಡಿ. ಪರಿಮಳಯುಕ್ತ ದೀಪ ಮತ್ತು ಕ್ಯಾಂಡಲ್‌ಗಳನ್ನು ಮನೆಯ ಎಲ್ಲಾ ಕಡೆಗಳಲ್ಲಿ ಅಲಂಕರಿಸಿ.ಇದರ ಜೊತೆಗೆ ಹೂವುಗಳನ್ನೂ ಕೂಡ ಅಲಂಕಾರಕ್ಕೆ ಬಳಸಿ.

ಮನೆಯಲ್ಲಿ ಅಡುಗೆ ತಯಾರಿಸಿ
ಇದುವರೆಗೆ ನೀವು ತಯಾರಿಸಿರದ ಅಡುಗೆಗಳನ್ನು ಮಾಡಿ ಸಂಗಾತಿ ಅಥವಾ ಇತರರೊಂದಿಗೆ ಹಂಚಿ ತಿನ್ನಿ. ಅಡುಗೆ ಮನೆಯಲ್ಲಿ ಹೊಸ ಅಡುಗೆಯನ್ನು ಮಾಡಲು ಹೊಸ ಪಾತ್ರೆಗಳನ್ನು ತಂದು ಬಳಸಿ ನೋಡಿ. ಡೈನಿಂಗ್ ಟೇಬಲ್ ಅನ್ನು ಮೇಣದಬತ್ತಿ ಮತ್ತು ಹೊಸ ಮ್ಯಾಟ್ ಬಳಸಿ ಅಲಂಕರಿಸಿ. ಇದಕ್ಕೂ ಚಂದವೆಂದರೆ ಮ್ಯಾಟ್ ತೆಗೆದುಕೊಂಡು ನೀವು ಮಾಡಿದ ಅಡುಗೆಯನ್ನು ಟೆರಾಸ್ ಅಥವಾ ಹೂತೋಟಕ್ಕೆ ತೆಗೆದುಕೊಂಡು ಹೋಗಿ ಕುಟುಂಬದವರೊಂದಿಗೆ ಕುಳಿತು ತಿನ್ನುವುದು.
ಮೇಕಪ್ ಓವರ್ ಮಾಡಿಕೊಳ್ಳಿ ದೀಪಾವಳಿ ಬಳಿಕವೂ ಮನೆ ಸ್ವಚ್ಛವಾಗಿರಲಿ
ನಿಮ್ಮ ಇಷ್ಟದ ಸೆಲೆಬ್ರಿಟಿಗಳ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ನೋಡಿ ಅವರಂತೆಯೇ ಹೇರ್ ಕಟ್ ಮಾಡಿಸಿಕೊಂಡು, ಕೂದಲಿಗೆ ಬಣ್ಣ ಹಚ್ಚಿ ಅಲಂಕರಿಸಿಕೊಳ್ಳಿ. ಸ್ಪಾ ಮತ್ತು ಮಸಾಜ್ ಮಾಡಿಸಿಕೊಂಡು ಆನಂದಿಸಿ. ಸ್ನೇಹಿತರೊಂದಿಗೆ ಸೇರಿ ಹೊಸ ಬಟ್ಟೆಗಳನ್ನು ತೆಗೆದುಕೊಳ್ಳಲು ಶಾಪಿಂಗ್‌ಗೆ ಹೋಗಿ ಇದರಿಂದ ನೀವು ದೀಪಾವಳಿ ಫೋಟೋ ತೆಗೆದುಕೊಂಡಾಗ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು.
ನಿಮ್ಮ ಸಿಟಿಯನ್ನು ಸುತ್ತಾಡಿ
ನಿಮ್ಮ ಕುಟುಂಬದವರೊಂದಿಗೆ ಹೊರಗೆ ಹೋಗದಿದ್ದರೇನಂತೆ? ಮೂಲೆಯಲ್ಲಿ ಬಿದ್ದ ನಿಮ್ಮ ಸೈಕಲ್ ತೆಗೆದುಕೊಂಡು ಸಿಟಿಯನ್ನು ಸುತ್ತಾಡಿ. ಟ್ರಾಫಿಕ್ ಮತ್ತು ಜನಜಂಗುಳಿಯಿಂದ ದೂರ ಹೋಗಿ ಆನಂದಿಸಿ.
ಸ್ನೇಹಿತರೊಂದಿಗೆ ಗೆಟ್ ಟುಗೆದರ್
ಸ್ನೇಹಿತರನ್ನು ಆಹ್ವಾನಿಸಿ ಗೆಟ್ ಟುಗೆದರ್ ಮಾಡಿ. ಮ್ಯೂಸಿಕ್ ಹಾಕಿಕೊಂಡು ಬೋರ್ಡ್ ಗೇಮ್ ಆಡುತ್ತಾ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.
ಸಿನಿಮಾ ನೋಡಿ
ನೀವು ನೋಡಲು ಮಿಸ್ ಮಾಡಿಕೊಂಡಿರುವ ಸಾಕಷ್ಟು ಸಿನಿಮಾಗಳನ್ನು ಈ ಕುಟುಂಬದವರೊಂದಿಗೆ ಕುಳಿತು ನೋಡುವ ಪ್ಲಾನ್ ಮಾಡಿ. ಪಾಪ್ಕಾರ್ನ್ ,ಐಸ್ ಟೀ ಇವುಗಳನ್ನು ಮಾಡಿಟ್ಟುಕೊಂಡು ಒಂದಾದ ನಂತರ ಒಂದು ಸಿನಿಮಾ ನೋಡಬಹುದು.
ಸೃಜನಾತ್ಮಕವಾಗಿರಿ
ಆನ್‌ಲೈನ್ ವಿಡಿಯೋ ಮತ್ತು ಆರ್ಟಿಕಲ್ ಓದುವುದರ ಮೂಲಕ ಸೃಜನಾತ್ಮಕ ಕಲೆಗಳನ್ನು ನೀವೂ ಕಲಿಯಬಹುದು. ಪಾಟ್ ಪೇಂಟಿಂಗ್, ಪರಿಮಳಯುಕ್ತ ಕ್ಯಾಂಡಲ್ ಮಾಡುವುದು, ಇನ್ನಿತರ ಮನೆ ಅಲಂಕಾರ ಮಾಡುವ ವಿಧಾನಗಳನ್ನು ನೀವು ಕಲಿತುಕೊಳ್ಳಬಹುದು.



Click it and Unblock the Notifications
