Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ನಿಮ್ಮ ಒಬ್ಬಂಟಿ ಜೀವನವನ್ನು ವರ್ಣಮಯಗೊಳಿಸಲು ಸರಳ ಸಲಹೆಗಳು
ಬ್ಯಾಚುಲರ್ ರೂಮಿನಲ್ಲಿ ವಾಸಿಸುವುದು ಎಂದರೆ ಗಲೀಜು-ಗೊಂದಲಗಳ ನಡುವೆ ಜೀವಿಸುವುದು ಎಂದರ್ಥವಲ್ಲ. ನಿಮ್ಮ ಬ್ಯಾಚುಲರ್ ಮನೆಯನ್ನು ನಿಮಗೆ ಬೇಕಾದಂತೆ ಸರಳವಾಗಿ ಶೃಂಗರಿಸಿಕೊಳ್ಳಬಹುದು. ಅದರಲ್ಲಿಯೂ ನಿಮ್ಮ ಕೈಗೆಟುಕುವ ಬಜೆಟಿನಲ್ಲಿಯೇ ಇದನ್ನು ಮಾಡಿ ಮುಗಿಸಬಹುದು.
ಬ್ಯಾಚುಲರ್ ಮನೆಯೆಂದರೆ ಎಲ್ಲೆಂದರಲ್ಲಿ ಬಿದ್ದ ಬಟ್ಟೆಗಳು, ಕಸ-ಕಡ್ಡಿಗಳ ನಡುವೆ ನೈರ್ಮಲ್ಯರಹಿತ ವಾತಾವರಣದಲ್ಲಿ ಬದುಕುವುದು ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಇದರಲ್ಲಿ ಸ್ವಲ್ಪ ಖುಷಿ,ವಿನೋದ ಎಲ್ಲವೂ ಅಡಗಿರುತ್ತದೆ. ಆದರೆ ನಿಮ್ಮ ಬ್ಯಾಚುಲರ್ ರೂಮನ್ನು ನೀವು ಸರಳ ಮಾರ್ಗಗಳಿಂದ ಅಲಂಕರಿಸಿಕೊಂಡು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಗರ್ಲ್ ಫ್ರೆಂಡನ್ನು ಸಹ ನೀವು ಅಚ್ಚರಿಗೊಳಪಡಿಸಬಹುದು.

ಈ ಮಾರ್ಗಗಳು ನಿಮ್ಮ ಮನೆಗೆ ಲುಕ್ ನೀಡುವುದರ ಜೊತೆಗೆ, ನಿಮ್ಮ ಬಜೆಟಿಗೆ ಯಾವುದೇ ಹೊಡೆತವನ್ನು ಸಹ ನೀಡುವುದಿಲ್ಲ. ಹಾಗಾದರೆ ಬನ್ನಿ ಅಂತಹ ಮಾರ್ಗಗಳು ಹೇಗೆ ಕಾರ್ಯಗತವಾಗುತ್ತವೆ ಎಂಬುದನ್ನು ಮೊದಲು ನೋಡೋಣ. ಮುಂದೆ ಓದಿ..
ಬಾಳಿಕೆಯನ್ನು ನಿರ್ಧರಿಸಿ
ನಿಮ್ಮ ಆಪಾರ್ಟ್‍ಮೆಂಟಿಗೆ ಏನು ಅಗತ್ಯವಿದೆ ಎಂಬುದನ್ನು ಮೊದಲು ನಿರ್ಧರಿಸಿ. ಅದು ನಿಮಗೆ ಮನೋರಂಜನೆಯನ್ನು ಒದಗಿಸಬೇಕೇ ಅಥವಾ ಸ್ನೇಹಿತರ ಜೊತೆ ಹ್ಯಾಂಗ್‍ಔಟ್/ ಚಿಲ್‍ಔಟ್ ಮಾಡಲು ಬೇಕೆ. ಅದರ ಪ್ರಕಾರ ಮುಂದುವರಿಯಿರಿ. ಮನೆಯನ್ನು ಮಿತವ್ಯಯದಲ್ಲಿ ಅಲಂಕರಿಸಲು ಬ್ಯಾಚುಲರ್ಸ್‌ಗೆ ಸಲಹೆಗಳು
ಲೈಟ್ ಮತ್ತು ಲ್ಯಾಂಪ್
ಟಂಗ್ ಸ್ಟನ್ ಲ್ಯಾಂಪ್‍ಗಳು ಈಗ ಹಳೆಯ ಕಾಲದ ವಸ್ತುವಾಗಿದೆ, ಫ್ಲೋರೊಸೆಂಟ್ ದೀಪಗಳು ಸಹ ಔಟ್ ಆಫ್ ಫ್ಯಾಷನ್ ಆಗಿವೆ. ಆದ್ದರಿಂದ ನಿಮ್ಮ ರೂಮಿಗೆ ಕಲರ್ ಪುಲ್ ಆಗಿರುವ ದೀಪಗಳನ್ನು ಬಳಸುವ ಪ್ರಯೋಗವನ್ನು ಮಾಡಿ. ನಿಮ್ಮ ಬ್ಯಾಚುಲರ್ ರೂಮಿನ "ವಾತಾವರಣ"ದ ಮೇಲೆ ಪರಿಣಾಮ ಬೀರುವಂತಹ ಲೈಟ್‍ಗಳನ್ನು ಬಳಸಿ. ಆದರೆ ಒಂದು ವಿಚಾರ ನೆನಪಿಡಿ, ಒಂದು ಮೈನ್ ಲೈಟ್ ನಿಮ್ಮ ಅಗತ್ಯಕ್ಕೆ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಿ.
ಬದಲಾಯಿಸಿ ಮತ್ತು ನವೀಕರಿಸಿ
ನಮಗೆಲ್ಲ ಗೊತ್ತಿರುವಂತೆ ಬಟ್ಟೆಗಳನ್ನು ಒಗೆಯುವುದು ಮತ್ತು ಲಾಂಡ್ರಿಗೆ ಹಾಕುವುದು ಗಂಡಸರಿಗೆ ಹಿಡಿಸದ ವಿಚಾರ. ಆದ್ದರಿಂದ ಕೆಲವು ಜೊತೆ ಬೆಡ್‍ಶೀಟ್‍ಗಳನ್ನು ಇರಿಸಿಕೊಂಡು ಅವುಗಳನ್ನೆ ಬದಲಾಯಿಸಿ. ಅವುಗಳನ್ನು ಬದಲಾಯಿಸುವಾಗ ನಿಮಗೆ ಲಾಂಡ್ರಿಗೆ ಯಾವಾಗ ಹಾಕಬಹುದು ಎಂಬುದು ಅರಿವಿಗೆ ಬರುತ್ತದೆ. ತೆಳು ಬಣ್ಣದ ಅಥವಾ ಬಿಳಿ ಬಣ್ಣದ ಯಾವುದೇ ಬೆಡ್‍ಶೀಟ್‍ಗಳು ನಿಮ್ಮ ಅಪಾರ್ಟ್‍ಮೆಂಟಿಗೆ ಸೂಕ್ತವಾಗುತ್ತವೆ. ಇದೇ ನೀತಿಯು ಟವೆಲ್‍ಗಳಿಗೆ ಮತ್ತು ನ್ಯಾಪ್‍ಕಿನ್‍ಗಳಿಗೆ ಅನ್ವಯವಾಗುತ್ತವೆ. ಇದರ ಜೊತೆಗೆ ಸ್ವಲ್ಪ ಡಾರ್ಕರ್ ಶೇಡ್ ಇರುವಂತಹವು ಸಹ ನಿಮ್ಮ ಅನುಕೂಲಕ್ಕೆ ಬರುತ್ತವೆ.
ಸ್ವಲ್ಪ "ಸೌಂಡ್" ಆಗಿರುವಂತಹದನ್ನು ಖರೀದಿಸಿ
"ಸೌಂಡ್ ಸಿಸ್ಟೆಂ" ಕೊಳ್ಳುವಾಗ ಸ್ವಲ್ಪ ಜಾಣತನ ವಹಿಸಿದರೆ ಅದು ಎಲ್ಲಾ ಕಾಲಕ್ಕು ಕೆಲಸಕ್ಕೆ ಬರುತ್ತದೆ. ಅದು ಪಾರ್ಟಿಯಾಗಿರಲಿ, ವಿಶ್ರಾಂತಿ ಪಡೆಯುವುದಾಗಿರಲಿ ಒಂದು ಒಳ್ಳೆಯ ಸೌಂಡ್ ಸಿಸ್ಟಂ ಬ್ಯಾಚುಲರ್ ರೂಮಿಗೆ ಅತ್ಯಗತ್ಯವಾಗಿ ಬೇಕಾಗುತ್ತದೆ.
ಗ್ಲಾಸ್‍ಗಳ ಮೇಲೆ ಬಂಡವಾಳವನ್ನು ಹೂಡಿ
ನಾವು ಇಲ್ಲಿ ಕೇವಲ ಕನ್ನಡಿಗಳ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ನಿಮ್ಮ ರೂಮಿನಲ್ಲಿ ಫಳ ಹೊಳೆಯುವಂತಹ ಗಾಜಿನ ವಸ್ತುಗಳು ಇದ್ದಲ್ಲಿ, ತೊಳೆಯುವುದು ಸುಲಭ ಮತ್ತು ಅದು ನಿಮ್ಮ ಮನೆಗೆ ಅಂದವನ್ನು ಸಹ ನೀಡುತ್ತದೆ. ಪಾರ್ಟಿ ಮಾಡುವಾಗ ಬೊರೊಸಿಲ್ ಗ್ಲಾಸುಗಳಿದ್ದರೆ ಅದರ ಮೆರಗನ್ನು ವರ್ಣಿಸಿ ಹೇಳಬೇಕೆ.
ಹೆಚ್ಚುವರಿ ವಸ್ತುಗಳು
ನಿಮ್ಮ ಲಿವಿಂಗ್ ರೂಮಿಗೆ ಒಂದಷ್ಟು ಕರ್ಟನ್‍ಗಳನ್ನು ಖರೀದಿಸಿ. ಕೆಲವೊಂದು ಪೈಂಟಿಂಗ್‍ಗಳನ್ನು ಖರೀದಿಸಿ ಮತ್ತು ಇವು ನಕಲಿಯಾಗಿದ್ದರು ಚಿಂತೆ ಮಾಡಬೇಡಿ. ಆಗಾಗ ನಿಮ್ಮ ಡಸ್ಟ್ ಬಿನ್ ಸ್ವಚ್ಛಗೊಳಿಸಿ. ಒಂದು ಬುಕ್ ಶೆಲ್ಫ್ ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ವೇಳೆ ನೀವು ಪ್ರಯೋಗಶೀಲರಾಗಿದ್ದಲ್ಲಿ, ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುವಂತಹ ಬಣ್ಣವನ್ನು ನೀವೆ ಬಳಿಯಿರಿ. ಕೆಂಪು ಮತ್ತು ಕಿತ್ತಳೆ ಬಣ್ಣಗಳು ನಿಮ್ಮ ರೂಮಿಗೆ ಒಳ್ಳೆಯ ಶೇಡುಗಳಾಗಿರುತ್ತವೆ. ಇದರಿಂದ ನೀವು ಆಕರ್ಷಕ ವ್ಯಕ್ತಿ ಎಂಬ ಭಾವನೆ ಇತರರಲ್ಲಿ ಮೂಡುತ್ತದೆ.



Click it and Unblock the Notifications











