Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಪ್ರೀತಿ ಪಾತ್ರರಿಗಾಗಿ ದೀಪಾವಳಿ ಉಡುಗೊರೆಯ ಆಯ್ಕೆಗಳು
ಬೆಳಕಿನ ಹಬ್ಬ ದೀಪಾವಳಿ ಬಂದೆ ಬಿಟ್ಟಿತು, ಇನ್ನು ಸಂಭ್ರಮ ಸಡಗರಗಳು ಈಗಾಗಲೇ ಆರಂಭವಾಗಿವೆ. ಬಹುತೇಕ ಜನರಿಗೆ ದೀಪಾವಳಿ ಎಂದರೆ ಕೇವಲ ಪಟಾಕಿ ಹೊಡೆಯುವ ಹಬ್ಬ. ಪಟಾಕಿ ಮತ್ತು ಕಜ್ಜಾಯಗಳ ಹೊರತಾಗಿ ಈ ಬೆಳಕಿನ ಹಬ್ಬದಲ್ಲಿ ಮಾಡಲು ಹಲವಾರು ಸಂಗತಿಗಳು ಇವೆ. ಹುಟ್ಟು ಹಬ್ಬ, ವಾರ್ಷಿಕೋತ್ಸವ ಮತ್ತು ಇನ್ನಿತರ ವಿಶೇಷ ದಿನಗಳ ಹೊರತಾಗಿ ದೀಪಾವಳಿಯಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಕಳುಹಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ತರಹೇವಾರಿ ಉಡುಗೊರೆಗಳು ನಿಮ್ಮ ಮನಸೂರೆಗೊಳ್ಳಲು ಕಾದು ಕುಳಿತಿರುತ್ತವೆ.
ಇವುಗಳಲ್ಲಿ ಕೆಲವೊಂದು ವಸ್ತುಗಳಿಂದ ನಿಮ್ಮ ಮನೆಯನ್ನು ಅಲಂಕರಿಸಿಕೊಳ್ಳಬಹುದು, ಇನ್ನು ಕೆಲವು ವಸ್ತುಗಳಿಂದ ದೀಪಾವಳಿಯಂದು ನೀವು ವಿಶೇಷವಾಗಿ ಕಾಣಬಹುದು. ದೀಪಾವಳಿಗೆ ಮತ್ತಷ್ಟು ರಂಗು ತರಲು ನಮಗಾಗಿ ಕೆತ್ತನೆ ಮಾಡಲಾದ ಮಣ್ಣಿನ ವಿಗ್ರಹಗಳಿಂದ ಹಿಡಿದು ಹೂದಾನಿಗಳವರೆಗೆ ಹಲವಾರು ಉಡುಗೊರೆಗಳು ಈಗ ದೊರೆಯುತ್ತವೆ. 2014ರ ಈ ದೀಪಾವಳಿಗೆಂದೆ ನಮ್ಮಲ್ಲಿ ಮತ್ತಷ್ಟು ಉಡುಗೊರೆಗಳ ಸಂಗ್ರಹವಿದೆ.
ಇವು ನಿಮ್ಮ ಮನೆಗೆ ಆಶೀರ್ವಾದಗಳನ್ನು ತರುತ್ತದೆಯಷ್ಟೆ. ಸ್ವಲ್ಪ ದೊಡ್ಡದಾದ, ಹೊಳೆಯುವ ಮತ್ತು ದೈವಿಕ ಸಾನ್ನಿಧ್ಯವನ್ನು ನೀಡುವ ಗಣಪತಿ ವಿಗ್ರಹಗಳು ಈ ದೀಪಾವಳಿಯ ವಿಶೇಷತೆಯಾಗಿವೆ. ಈ ಹಬ್ಬದಲ್ಲಿ ನಿಮ್ಮ ಪೂಜಾಗೃಹವನ್ನು ಸಿಂಗರಿಸಲು ಇವುಗಳನ್ನು ಕೊಳ್ಳಿರಿ. ಯಾವುದಕ್ಕಾಗಿ ಕಾಯುತ್ತಿರುವಿರಿ? ಈ ಸುಂದರವಾಗಿ ಕಾಣುವ, ಮನಮೋಹಕವಾದ ಮೋದಕ ಪ್ರಿಯನನ್ನು ಈ ದೀಪಾವಳಿಯ ಉಡುಗೊರೆಯಾಗಿ ಕೊಳ್ಳಿರಿ. ನಿಮಗಾಗಿ ಬೊಲ್ಡ್‌ಸ್ಕೈ ದೀಪಾವಳಿಯ ಈ ಉಡುಗೊರೆಗಳ ಬಗ್ಗೆ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ:

ಬೆಳ್ಳಿಯ ಪುಟ್ಟ ಮೂರ್ತಿ
ಈ ಬೆಳ್ಳಿಯ ಪುಟ್ಟ ಮೂರ್ತಿಯನ್ನು ನಿಮ್ಮ ಮನೆಯ ಮೇಜಿನ ನಡುವೆ ಇಡಿ. ಇದರ ಹೊಳೆಯುವ ಬೆಳಕು ಮತ್ತು ಹೊಳಪು ನಿಮ್ಮ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತದೆ.
ಬೆಳ್ಳಿಯ ಪುಟ್ಟ ಮೂರ್ತಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಜೇಡಿ ಮಣ್ಣಿನ ಗಣೇಶ
ಕುರ್ಚಿಯ ಮೇಲೆ ಕುಳಿತಿರುವ ಸಂತೋಷ ಮತ್ತು ಪ್ರೀತಿಯ ಮುಖಭಾವವನ್ನು ಹೊಂದಿರುವ ಈ ಗಣಪತಿಯು 2014ರ ಈ ದೀಪಾವಳಿಗೆ ನಿಮ್ಮ ಮನೆಗೆ ಮತ್ತಷ್ಟು ಸಂತೋಷವನ್ನು ತರುತ್ತಾನೆ.
ಜೇಡಿ ಮಣ್ಣಿನ ಗಣೇಶ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಏಕವರ್ಣದ ಅಲಂಕಾರಿಕ ಗಣೇಶ
ಏಕವರ್ಣದ ಅಲಂಕಾರಿಕ ಗಣೇಶ ಈಗ ಹೊಸ ಟ್ರೆಂಡ್ ಆಗಿದೆ. ಈ ಗಣಪತಿಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀವು ನೀಡಿದಲ್ಲಿ ಖುಷಿಯಿಂದ ಅವರು ಕುಣಿದು ಕುಪ್ಪಳಿಸುವುದರಲ್ಲಿ ಸಂಶಯವೇ ಇಲ್ಲ.
ಅಲಂಕಾರಿಕ ಗಣೇಶ ಮೂರ್ತಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರಥ ಓಡಿಸುತ್ತಿರುವ ಗಣೇಶ
ನಿಮ್ಮ ಪ್ರೀತಿ ಪಾತ್ರರಿಗೆ ಈ ರಥ ಓಡಿಸುತ್ತಿರುವ ಗಣಪತಿಯನ್ನು ಉಡುಗೊರೆಯಾಗಿ ನೀಡುವುದರಿಂದ, ಅವರಿಗೆ ಅದೃಷ್ಟವನ್ನು ತರಬಹುದು. ಇದನ್ನು ಒಂದು ಒಳ್ಳೆಯ ಗಿಫ್ಟ್ ಕವರ್ ಒಳಗೆ ಸುತ್ತಿ, ನಗುಮುಖದೊಂದಿಗೆ ನೀಡಿ. ಆ ನಗು ಅವರಲ್ಲಿಯೂ ಸಹ ಕಾಣಿ.
ಗಣೇಶನ ಮೂರ್ತಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮಣಿಗಳ ಜೊತೆಗೆ ಇರುವ ಗಣಪತಿ
2014ರ ದೀಪಾವಳಿಗೆ ಮಣಿಗಳ ಜೊತೆ ಇರುವ ಗಣಪತಿಯು ಸಹ ಟ್ರೆಂಡ್ ಆಗಿದೆ. ಇದನ್ನು ನೀವು ನಿಮ್ಮ ಕಾಫಿ ಟೇಬಲ್ ಅಥವಾ ಡೈನಿಂಗ್ ಟೇಬಲ್ ನಡುವೆ ಇರಿಸಬಹುದು.
ಇಂತಹ ಗಣಪತಿ ಮೂರ್ತಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಚರ್ಮದ ಫೋಟೋ ಫ್ರೇಮ್
ಈ 2014ರ ದೀಪಾವಳಿಗೆ ಹೊಸದಾಗಿರುವುದನ್ನು ಯಾವುದಾದರು ಪ್ರಯತ್ನಿಸಿ. ಈ ದೀಪಾವಳಿಗೆ ನೀವು ಮದುವೆಯಾಗುವ ನಿರ್ಧಾರ ಮಾಡಿದ್ದಲ್ಲಿ, ನಿಮ್ಮ ಮತ್ತು ನಿಮ್ಮ ಬಾಳ ಸಂಗಾತಿಯಾಗುವವರ ಫೋಟೋವನ್ನು ಈ ಫ್ರೇಮಿನಲ್ಲಿ ಹಾಕಿ ಉಡುಗೊರೆ ನೀಡಿ. ಮದುವೆಯಾಗಿದ್ದವರು ನಿಮ್ಮ ಬಾಳಿನ ಮಧುರ ಕ್ಷಣದ ಚಿತ್ರವನ್ನು ಹಾಕಿ ಉಡುಗೊರೆ ವಿನಿಮಯ ಮಾಡಿಕೊಳ್ಳಿ.
ಚರ್ಮದ ಫೋಟೋ ಫ್ರೇಮ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕಂಚಿನ ಮಿಂಚು ಮನಮೋಹಕ
ಬಣ್ಣಗಳಲ್ಲಿ ಕಂಚಿಗೆ ಎಂದಿಗು ಆಧ್ಯತೆ ಇದ್ದೇ ಇರುತ್ತದೆ. ಇದನ್ನು ಈ ದೀಪಾವಳಿಗೆ ತರುವುದರಿಂದ ಮತ್ತಷ್ಟು ಮೆರಗನ್ನು ನಿಮ್ಮ ಮನೆಗೆ ನೀಡಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.
ಕಂಚಿನ ಪೆಟ್ಟಿಗೆಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನಿನ ಸ್ಪರ್ಶ
ಈ ಹಬ್ಬಕ್ಕೆ ರಾಜಸ್ಥಾನಿನ ಸ್ಪರ್ಶವನ್ನು ನೀಡಿ. ರಾಜಸ್ಥಾನಿನ ಸಾಂಪ್ರದಾಯಿಕ ಕಲೆಯಲ್ಲಿ ಅರಳಿದ ಮೂರ್ತಿಯು ನಿಮ್ಮ ಮನೆಯ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತದೆ.
ಇಂತಹ ಮೂರ್ತಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮಿನುಗು ಬೊಟ್ಟಿನ ಹೂದಾನಿ
ಹೂದಾನಿಗಳು ಯಾರಿಗೆ ಯಾವಾಗ ಬೇಕಾದರು ಉಡುಗೊರೆಯಾಗಿ ನೀಡಬಹುದು. ಇದನ್ನು ಅವರು ಆದರದಿಂದ ಸ್ವೀಕರಿಸುತ್ತಾರೆ ಸಹ. ಆದರೆ ಇದನ್ನು ನೀವು ಸ್ವಲ್ಪ ಸುಂದರವಾಗಿ ಕಾಣುವಂತಹ ಕವರಿನಲ್ಲಿ ಸುತಿ ನೀಡಬೇಕು. ಆಗ ಅದಕ್ಕೆ ನಿಜವಾದ ಉಡುಗೊರೆಯ ಕಳೆ ಬರುತ್ತದೆ, ಅಲ್ಲವೇ!
ಹೂದಾನಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬುಕ್ ರ‍್ಯಾಕ್
ಒಂದು ವೇಳೆ ನಿಮ್ಮ ಬಳಿಯಲ್ಲಿ ಟನ್‍ಗಟ್ಟಲೆ ಪುಸ್ತಕಗಳಿದ್ದಲ್ಲಿ, ನಿಮ್ಮ ಮನೆಗೆ ಒಪ್ಪುವ ಬುಕ್ ರ‍್ಯಾಕನ್ನು ಈ ದೀಪಾವಳಿಗೆ ನಿಮ್ಮ ಮನೆಗೆ ತನ್ನಿ. ಇದರಿಂದ ನಿಮಗು ಸಂತೋಷ, ಪುಸ್ತಕಗಳು ಸುರಕ್ಷಿತ.
ಬುಕ್ ರ‍್ಯಾಕ್ ಖರೀದಿಸಲು ಇಲ್ಲಿ ಮಾಡಿ

ವರ್ಣ ರಂಜಿತವಾದ ಫ್ರೇಮ್
ಇದಕ್ಕೆ ಸರಿಸಾಟಿಯಾದ ವಸ್ತು ಮತ್ತೊಂದಿಲ್ಲ. ನಿಮ್ಮ ಕುಟುಂಬದ ವರ್ಣರಂಜಿತವಾದ ಚಿತ್ರವನ್ನು ಈ ವರ್ಣರಂಜಿತವಾದ ಫ್ರೇಮಿನಲ್ಲಿ ಹಾಕಿ. ಇದು ನಿಮ್ಮ ಶ್ರೀಮತಿಯವರಿಗೆ ನೀವು ನೀಡಬಹುದಾದ ದೀಪಾವಳಿಯ ಅದ್ಭುತವಾದ ಉಡುಗೊರೆಯಾಗಿರುತ್ತದೆ.
ವರ್ಣ ರಂಜಿತವಾದ ಫ್ರೇಮ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸತ್ಯಮಣಿ ಶೋ ಪೀಸ್
ಸತ್ಯಮಣಿ ಶೋ ಪೀಸ್ ಈ ದೀಪಾವಳಿಗೆ ನೀಡಬಹುದಾದ ಒಂದು ಅದ್ಭುತವಾದ ಉಡುಗೊರೆಯಾಗಿದೆ. ಇದನ್ನು ತುಂಬಾ ಜಾಗರೂಕತೆಯಿಂದ ಒಂದು ಗಿಫ್ಟ್ ಕವರಿನಲ್ಲಿ ಸುತ್ತಿ, ನಿಮ್ಮ ಪ್ರೀತಿ ಪಾತ್ರರಾದ ವ್ಯಕ್ತಿಗೆ ಉಡುಗೊರೆಯಾಗಿ ನೀಡಿ.
ಸತ್ಯಮಣಿ ಶೋ ಪೀಸ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪವಿತ್ರವಾದ ಮೂರ್ತಿಗಳು
ಈ ಹಬ್ಬಕ್ಕೆ ಸುಂದರವಾದ ಪವಿತ್ರವಾದ ಮೂರ್ತಿಗಳನ್ನು ಕೊಂಡು ತನ್ನಿ. ಇವುಗಳಿಂದ ನಿಮ್ಮ ಪೂಜಾಗೃಹಕ್ಕೆ ಒಂದು ಅಲೌಕಿಕವಾದ ಕಳೆಯನ್ನು ತನ್ನಿ.
ಪವಿತ್ರವಾದ ಮೂರ್ತಿಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ವಜ್ರದ ಮೂರ್ತಿಯಂತೆ ಕಾಣುವ ಗಣಪತಿ
ವಜ್ರದ ಗಣಪತಿಯನ್ನು ದೀಪಾವಳಿಗೆ ತರಬಹುದು. ಇದನ್ನು ಉಡುಗೊರೆಯಾಗಿ ನೀಡಿದರೆ ಮೆಚ್ಚದೆ ಇರುವವರು ಯಾರು? ತಪ್ಪದೆ ತನ್ನಿ.
ಇಂತಹ ಗಣಪತಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications