Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಕ್ಕಳ ಓದುವಿಕೆಯನ್ನು ಆಸಕ್ತಿಕರವನ್ನಾಗಿಸಲು 5 ಸಲಹೆಗಳು
ನಿಮ್ಮ ಮನೆಯಲ್ಲಿ ಓದುವ ಕೋಣೆಯು ಸಹ ಅತ್ಯಂತ ಪ್ರಮುಖವಾದ ಕೋಣೆಗಳಲ್ಲಿ ಒಂದಲ್ಲವೇ? ಹಾಗಾಗಿ ನಿಮ್ಮ ಮನೆಯ ಪೀಠೋಪಕರಣಗಳನ್ನು ಸಜ್ಜುಗೊಳಿಸುವಾಗ ತಪ್ಪದೆ ಮಕ್ಕಳು ಓದಿಕೊಳ್ಳುವ ಕೋಣೆಯನ್ನು ಸಹ ಮುತುವರ್ಜಿಯಿಂದ ಅಲಂಕರಿಸುವುದು ಮುಖ್ಯ. ಈ ಅಂಕಣದಲ್ಲಿ ನಾವು ನಿಮ್ಮ ಮಕ್ಕಳ ಓದುವ ಕೋಣೆಯನ್ನು ಅಲಂಕರಿಸಲು ಅಗತ್ಯವಾಗಿ ಬೇಕಾದ ಸಲಹೆಗಳನ್ನು ನಿಮಗಾಗಿ ನೀಡುತ್ತಿದ್ದೇವೆ.
ಏಕೆಂದರೆ ನಿಮ್ಮ ಮಕ್ಕಳಿಗಲ್ಲದೆ ಇನ್ಯಾರಿಗೆ ತಾನೇ ನೀವು ಇದನ್ನು ಮಾಡಲು ಸಾಧ್ಯ. ಒಬ್ಬ ಪೋಷಕರಾಗಿ ನಿಮ್ಮ ಮಕ್ಕಳ ಓದುವ ಕೋಣೆಯು ಅನುಕೂಲಕರವಾಗಿದೆಯೇ, ಇಲ್ಲವೇ, ಎಂಬುದನ್ನು ತಿಳಿದುಕೊಳ್ಳಬೇಕಾದುದು ನಿಮ್ಮ ಕರ್ತವ್ಯ. ಹಾಗಾದರೆ ಬನ್ನಿ ನಿಮ್ಮ ಮಕ್ಕಳ ಓದುವ ಕೋಣೆಯ ಅಗತ್ಯಗಳತ್ತ ಒಂದು ನೋಟ ಹರಿಸೋಣ. ಮುಂದೆ ಓದಿ.....

ನಿಮ್ಮ ಮಕ್ಕಳಿಗೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳಿ
ಇದು ನಿಮ್ಮ ಮೊದಲ ಹೆಜ್ಜೆಯಾಗಿರಬೇಕು. ನಿಮ್ಮ ಮಕ್ಕಳಿಗೆ ಏನು ಬೇಕು ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಅವರನ್ನು ಓದಲು ಹಚ್ಚಬೇಕು. ಅದಕ್ಕಾಗಿ ನಿಮ್ಮ ಮಕ್ಕಳ ಜೊತೆ ಮಾತನಾಡಿ, ನಿಮ್ಮ ಮಗುವಿಗೆ ಏನು ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ಈ ಕಾರ್ಯದಲ್ಲಿ ಅವರನ್ನು ಸಹ ಸೇರಿಸಿಕೊಂಡರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಅಧ್ಯಯನಕ್ಕೆ ಸೂಕ್ತವಾಗಿರುವ ಮೇಜು
ಅಧ್ಯಯನಕ್ಕೆ ಸೂಕ್ತವಾಗಿರುವ ಮೇಜು ರೂಮಿನ ಅವಿಭಾಜ್ಯ ಅಂಗ. ನಿಮ್ಮ ಮಗುವಿನ ಎತ್ತರ ಮತ್ತು ಅಗತ್ಯಕ್ಕೆ ತಕ್ಕಂತಹ ಮೇಜು ಅನ್ನು ಖರೀದಿಸಿ. ಈ ಟೇಬಲ್ ಅಥವಾ ಮೇಜು ನಿಮ್ಮ ಮಗುವಿಗೆ ಉತ್ಸಾಹ ತುಂಬುವಂತಿರಬೇಕು. ಅದರ ಮೇಲೆ ಕುಳಿತು ಓದಲು ಪ್ರೇರೇಪಿಸುವಂತಹ ಟೇಬಲ್ ಆದರೆ ಒಳ್ಳೆಯದು. ನಿಮ್ಮ ಮನೆಯ ಅಂದಕ್ಕೆ ಈರುಳ್ಳಿಯ ಅದ್ಭುತ ಕೊಡುಗೆಗಳು
ಗೋಡೆಗಳಿಗೆ ಬಣ್ಣ
ರೂಮಿನ ಗೋಡೆಗಳಿಗೆ ಬಣ್ಣಗಳನ್ನು ಆರಿಸುವಾಗ ಆಹ್ಲಾದಕರವಾದ ಬಣ್ಣಗಳಿಗೆ ಆಧ್ಯತೆ ನೀಡಿ. ಆ ಬಣ್ಣಗಳು ನಿಮ್ಮ ಮಗುವಿನ ಮನಸ್ಸಿಗೆ ಮುದ ನೀಡುವಂತಿರಬೇಕು. ಕಿತ್ತಳೆ, ಹಳದಿ ಅಥವಾ ಕೆಂಪು ಬಣ್ಣಗಳಾಗಿದ್ದಲ್ಲಿ ಮನೆಯ ಕೋಣೆ ಇನ್ನಷ್ಟು ಚಂದ ಕಾಣುತ್ತವೆ. ನೆನಪಿಡಿ, ಮಕ್ಕಳ ಮೂಡ್ ಸರಿಯಾಗಿ ರೂಪಿಸುವಲ್ಲಿ ಗೋಡೆಗಳ ಬಣ್ಣಗಳು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಅದು ಯಾವುದೇ ರೂಮ್ ಆಗಿದ್ದರು ಸರಿ, ಅದಕ್ಕೆ ಅಧ್ಯಯನದ ಕೋಣೆಯು ಹೊರತಲ್ಲ.
ಸೃಜನಶೀಲತೆ
ನಿಮ್ಮ ಮಗುವಿನಲ್ಲಿ ಸೃಜನಶೀಲತೆಯನ್ನು ಹೊರತರಲು ನಿಮಗೆ ಇದೊಂದು ಅಪೂರ್ವವಾದ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಮಗುವಿಗೆ ಇಷ್ಟವಾಗುವ ಕೆಲವೊಂದು ವಿನ್ಯಾಸಗಳನ್ನು ಕೇಳಿ, ಆ ಕೋಣೆಯಲ್ಲಿ ನಿಮ್ಮ ಮಗು ಸೂಚಿಸಿದ ವಿನ್ಯಾಸಗಳನ್ನು ಮತ್ತು ಅಲಂಕಾರಗಳನ್ನು ಮಾಡಿ. ಇದರಿಂದ ಮಗುವಿಗು ಸಹ ತನ್ನ ಸೃಜನಶೀಲತೆಯ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ.
ದೀಪಾಲಂಕಾರ
ಕೊಠಡಿಯ ದೀಪಾಲಂಕಾರ ಹೇಗಿರಬೇಕು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಕಣ್ಣಿಗೆ ಆಯಾಸ ನೀಡದಂತಹ ಸಿಎಫ್‍ಎಲ್ ಬಲ್ಬ್ ಮತ್ತು ರೀಡಿಂಗ್ ಲ್ಯಾಂಪ್ ತಪ್ಪದೆ ಇರುವಂತೆ ನೋಡಿಕೊಳ್ಳಿ. ಅಲಂಕಾರಿಕವಾಗಿ ಕಾಣುವಂತಿರಬೇಕು ಎಂಬುದನ್ನು ಮರೆಯಬೇಡಿ.



Click it and Unblock the Notifications
