Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಅಕ್ವೇರಿಯಂನಲ್ಲಿ ಸಾಕಬಹುದಾದ 7 ಬಗೆಯ ಶಾರ್ಕ್ !
ಅಕ್ವೇರಿಯಂನಲ್ಲಿ ಮೀನು ಸಾಕುವ ಹವ್ಯಾಸ ಹೆಚ್ಚಿನವರಲ್ಲಿರುತ್ತದೆ. ಫಿಶ್ ಅಕ್ವೇರಿಯಂ ಕೇವಲ ಅಲಂಕಾರಿಕ ವಸ್ತುವಲ್ಲ. ತುಂಬಾ ಬೇಜಾರಾದಾಗ, ಒಂಟಿಯಾಗಿ ಕುಳಿತಾಗ ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಮುದ ಸಿಗುತ್ತದೆ.
ಅಕ್ವೇರಿಯಂನಲ್ಲಿ ಅನೇಕ ಜಾತಿಯ ಬಣ್ಣದ ಮೀನುಗಳನ್ನು ಬೆಳೆಯಬಹುದು. ಅಕ್ವೇರಿಯಂಗೆ ಒಂದೇ ಬಗೆಯ ಮೀನುಗಳನ್ನು ಹಾಕಿದರೆ ತೊಂದರೆಯಿಲ್ಲ. ಆದರೆ ಬೇರೆ-ಬೇರೆ ಜಾತಿಯ ಮೀನುಗಳನ್ನು ಹಾಕುವುದಾದರೆ ಆ ಮೀನುಗಳು ಪರಸ್ಪರ ಹೊಂದಿಕೊಂಡು ಬಾಳಬಹುದೇ ಅನ್ನುವುದನ್ನು ತಿಳಿದುಕೊಂಡು ಹಾಕಿ.
ಅಕ್ವೇರಿಯಂನಲ್ಲಿ ಶಾರ್ಕ್ ಮೀನುಗಳನ್ನು ಸಾಕಲು ಸಾಧ್ಯವಿಲ್ಲ, ಆ ಮೀನುಗಳು ಇತರ ಮೀನುಗಳ ಜೊತೆ ಹೊಂದಿಕೊಂಡು ಹೋಗುವುದಿಲ್ಲ ಎಂಬ ಅನೇಕ ತಪ್ಪು ಕಲ್ಪನೆಗಳಿವೆ. ಆದರೆ ಚಿಕ್ಕ ಗಾತ್ರದ ಶಾರ್ಕ್ ಮೀನುಗಳನ್ನು ಅಕ್ವೇರಿಯಂನಲ್ಲಿ ಸಾಕಬಹುದು.
ಅದರಲ್ಲೂ ಈ ಕೆಳಗಿನ ಶಾರ್ಕ್ ಗಳು ಅಕ್ವೀರಿಯಂನಲ್ಲಿ ಸಾಕಲು ಬೆಸ್ಟ್:

ಕೆಂಪು ಬಾಲದ ಶಾರ್ಕ್
ಈ ಶಾರ್ಕ್ ಅಕ್ವೇರಿಯಂನಲ್ಲಿ ಸಾಕಲು ಸೂಕ್ತವಾಗಿದೆ. ಕೆಂಪು ಬಣ್ಣದ ಈ ಮೀನಿಗೆ ಕಿತ್ತಳೆ ಕೆಂಪು ಬಣ್ಣದ ಬಾಲವಿದ್ದು ನೋಡಲು ಆಕರ್ಷಕವಾಗಿದೆ.

ಬಲ ಶಾರ್ಕ್
ಇದು 3 ಬಣ್ಣ ಮಿಶ್ರವಾದ ಮೀನು ಆಗಿದೆ. ಬೆಳ್ಳಿ, ಬಿಳಿ, ಕಪ್ಪು ಬಣ್ಣದ ಈ ಮೀನು ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

ಬ್ಯಾಂಬೂ ಶಾರ್ಕ್
ಈ ಶಾರ್ಕ್ ಮೀನು ತುಂಬಾ ದೊಡ್ಡದಾಗಿ ಬೆಳೆಯುವುದಿಲ್ಲ, ನೋಡಲು ಆಕರ್ಷಕವಾಗಿ ಕಾಣುತ್ತದೆ.

ರೈನ್ ಬೋ ಶಾರ್ಕ್
ಇದರ ಬಾಲ ಕೆಂಪು ಬಣ್ಣದಲ್ಲಿರುತ್ತದೆ. ಈ ಮೀನಿಗೆ ಸ್ವಲ್ಪ ದೊಡ್ಡ ಅಕ್ವೇರಿಯಂ ಬೇಕು. ಈ ಮೀನಿಗೆ ಸ್ಥಳಾವಕಾಶ ಸಾಕಾಗದಿದ್ದರೆ ಅಕ್ವೇರಿಯಂನಲ್ಲಿರುವ ಇತರ ಮೀನುಗಳ ಮೇಲೆ ದಾಳಿ ಮಾಡುತ್ತದೆ.

ಕೋರೆಲ್ ಕ್ಯಾಟ್ ಶಾರ್ಕ್
ಈ ಮೀನನ್ನು ಸಾಕಲು ಅಕ್ವೇರಿಯಂನಲ್ಲಿ ಗಿಡಗಳು ಇರಬೇಕು. ಇವು ಚಿಕ್ಕ ಮೀನು ಆಗಿದ್ದು ಅಡಗಿಕೊಳ್ಳಲು ಸ್ಥಳಬೇಕು.

ಚೈನೀಸ್ ಹೈ ಫಿನ್ ಬ್ಯಾಂಡೆಡ್ಡ್ ಶಾರ್ಕ್
ಈ ಮೀನು ಇರುವ ಅಕ್ವೇರಿಯಂ ತುಂಬಾ ಶುದ್ಧವಾಗಿರಬೇಕು. ಇದು ತುಂಬಾ ತಣ್ಣಗಿನ ನೀರಿನಲ್ಲಿ ಮಾತ್ರ ಬದುಕುತ್ತದೆ.

ಚೈನಾ ಕ್ಯಾಟ್ ಶಾರ್ಕ್
ಚೈನಾ ಕ್ಯಾಟ್ ಶಾರ್ಕ್ ಇರುವ ಅಕ್ವೇರಿಯಂ ನೋಡಲು ತುಂಬಾ ಸುಂದರವಾಗಿರುತ್ತದೆ. ಇದು ತುಂಬಾ ಶಾಂತ ಸ್ವಭಾವದ ಮೀನಾಗಿದೆ.



Click it and Unblock the Notifications
