Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಕಡಿಮೆ ಖರ್ಚಿನಲ್ಲಿ ನೀಡಿ ಮನೆಗೆ ಐಷಾರಾಮಿ ಲುಕ್
ದುಬಾರಿ ಮನೆಯನ್ನು ಹೊಂದುವುದು ಎಲ್ಲರಿಂದ ಸಾಧ್ಯವಿಲ್ಲ. ಆದರೆ ಇರುವ ಮನೆಯನ್ನು ಸುಂದರವಾಗಿ, ಐಶ್ವರ್ಯವಾಗಿ ಇಟ್ಟುಕೊಳ್ಳಲು ಎಲ್ಲರಿಗೆ ಸಾಧ್ಯ. ಅದಕ್ಕಾಗಿ ಖರ್ಚು ಮಾಡಬೇಕಾದದು ಸ್ವಲ್ಪ ಹಣ, ಹೆಚ್ಚು ಬುದ್ಧಿವಂತಿಕೆ.
ಮನೆಯ ಲುಕ್ ಮನೆಯ ಪೇಯಿಂಟ್ ಬಣ್ಣ, ಮನೆಯಲ್ಲಿರುವ ಪೀಠೋಪಕರಣಗಳ ವಿನ್ಯಾಸವನ್ನು ಅವಲಂಭಿಸಿರುತ್ತದೆ. ಇಲ್ಲಿ ನಾವು ಕೆಲವೊಂದು ಐಡಿಯಾ ನೀಡಿದ್ದೇವೆ. ಅವುಗಳಂತೆ ಮಾಡಿದರೆ ನಿಮ್ಮ ಮನೆಯ ಲುಕ್ ಬದಲಾಗಿ, ನೋಡುಗರಿಗೆ ನಿಮ್ಮ ಮನೆ ತುಂಬಾ ಐಷಾರಾಮಿಯಾಗಿ ಕಾಣುವುದು.

ಹಾಲ್
ನೋಡುಗರಿಗೆ ಮೊದಲು ಕಾಣಸಿಗುವುದು ಹಾಲ್. ಹಾಲ್ ನಲ್ಲಿ ಆಕರ್ಷಕವಾದ ನೋಡಲು ಸ್ವಲ್ಪ ದುಬಾರಿ ಅನಿಸುವಂತಹ ವಸ್ತುಗಳಿಂದ ಅಲಂಕರಿಸಿ.
ಕರ್ಟನ್
ನೀವು ತೆಗೆಯುವ ಕರ್ಟನ್ ದುಬಾರಿಯಾಗಿರಬೇಕಾಗಿಲ್ಲ, ಕಮ್ಮಿ ಬೆಲೆಗೆ ಆಕರ್ಷಕವಾದ ಕರ್ಟನ್ ದೊರೆಯುತ್ತದೆ. ಅವುಗಳಿಂದ ಅಲಂಕರಿಸಿ. ಫ್ಯಾಬ್ರಿಕ್ ಕರ್ಟನ್ ತುಂಬಾ ಆಕರ್ಷಕವಾಗಿ ಕಾಣುವುದು.
ಪೇಯಿಂಟ್
ಮನೆಗೆ ಬಣ್ಣ ಹಚ್ಚುವಾಗ ಆಕರ್ಷಕ ಬಣ್ಣದ ಪೇಯಿಂಟ್ ಹೊಡೆಸಿ. ಮನೆಯ ಪ್ರಮುಖ ಆಕರ್ಷಣೆ ಅದರ ಪೇಯಿಂಟ್. ಎಷ್ಟೋ ಮನೆಗಳು ವಿನ್ಯಾಸದಿಂದ ಸುಂದರವಾಗಿದ್ದರೂ ಆಕರ್ಷಕವಾದ ಪೇಯಿಂಟ್ ಇಲ್ಲವೆಂದರೆ ನಮಗೆ ಆಕರ್ಷಕ ಅನಿಸುವುದೇ ಇಲ್ಲ. ಆದ್ದರಿಂದ ನಿಮಗೆ ಇಷ್ಟವಾದ 2-3 ಬಣ್ಣದ ಪೇಯಿಂಟ್ ಬಳಸಿ. ಹಾಲ್ ಗೆ ಬೇರೆ. ಮನೆಯ ಹೊರಗಡೆಗೆ ಬೇರೆ. ಬೆಡ್ ರೂಂ ಗೆ ಬೇರೆ ಬಣ್ಣ (ಬೆಡ್ ರೂಂ ಕನಿಷ್ಠ ಎರಡು ಇದ್ದರೆ ಬೇರೆ ಬಣ್ಣದ ಪೇಯಿಂಟ್ ಹಚ್ಚಿ, ಇಲ್ಲದಿದ್ದರೆ ಹಾಲ್ ನ ಬಣ್ಣದ್ದೇ ಪೇಯಿಂಟ್ ಮಾಡಿಸಿ) ಪೇಯಿಂಟ್ ಮಾಡಿಸಿ. ಈ ರೀತಿ ಮಾಡಿದರೆ ಮನೆ ನೋಡಲು ಆಕರ್ಷಕವಾಗಿ ಐಷಾರಾಮಿಯಾಗಿ ಕಾಣುವುದು.
ವಾಲ್ ಗ್ರಾಫಿಕ್ಸ್
ಪೇಯಿಂಟಿಂಗ್, ಆಕರ್ಷಕವಾದ ವಾಲ್ ಗ್ರಾಫಿಕ್ಸ್ ಮನೆಯ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಗ್ಲಾಸ್ ಹ್ಯಾಂಗರ್ಸ್
ಗ್ಲಾಸ್ ಹ್ಯಾಂಗರ್ ಗೆ ಕೆಲವು ಶೋ ಪೀಸ್ ನೇತು ಹಾಕಿ, ಮನೆಯ ಚೆಲುವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.



Click it and Unblock the Notifications
