Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾಸ್ತು ಪ್ರಕಾರ ಬೆಡ್ ರೂಂನ ವಿನ್ಯಾಸ ಹೀಗಿರಬೇಕು!
ಮನೆ ಕಟ್ಟಿಸುವಾಗ ಹೆಚ್ಚಾಗಿ ವಾಸ್ತ ಶಾಸ್ತ್ರ ನೋಡಿ ಕಟ್ಟಿಸಲಾಗುವುದು. ವಾಸ್ತು ಪ್ರಕಾರ ಮನೆ ಕಟ್ಟಿಸದರೆ ಯಾವುದೇ ಸಮಸ್ಯೆಗಳು, ಕೌಟಂಬಿಕ ಕಲಹಗಳು ಕಂಡು ಬರುವುದಿಲ್ಲ ಎಂಬ ಅಚಲ ನಂಬಿಕೆ ನಮ್ಮಲ್ಲಿದೆ. ಮನೆಯ ಬೆಡ್ ರೂಂ ವಾಸ್ತು ಪ್ರಕಾರ ಇದ್ದರೆ ದಂಪತಿಗಳ ನಡುವೆ ಮಧುರ ಬಾಂಧವ್ಯ ಇರುತ್ತದೆ ಎಂದು ಹೇಳಲಾಗುತ್ತದೆ. ನೀವು ವಾಸ್ತುಶಾಸ್ತ್ರ ನಂಬುವವರಾದರೆ ವಾಸ್ತು ಪ್ರಕಾರ ಬೆಡ್ ರೂಂ ಹೇಗಿರಬೇಕೆಂದು ಇಲ್ಲಿ ಹೇಳಲಾಗಿದೆ ನೋಡಿ:
1. ವಾಸ್ತು ಶಾಸ್ತ್ರದ ಪ್ರಕಾರ ಬೆಡ್ ರೂಂ ಚೌಕಾಕಾರವಾಗಿ ಅಥವಾ ಆಯತಾಕಾರವಾಗಿ ಇರಬೇಕು. ಈ ರೀತಿ ಇದ್ದರೆ ದಂಪತಿಗಳ ನಡುವೆ ಉತ್ತಮವಾದ ಸಾಮರಸ್ಯ ಇರುತ್ತದೆ.

2. ವಸ್ತು ಪ್ರಕಾರ ಬೆಡ್ ರೂಂ ನ ಬಾಗಿಲು 90ಡಿಗ್ರಿ ಕೋನದಲ್ಲಿದಲ್ಲಿರಬೇಕು. ಇಲ್ಲದಿದ್ದರೆ ಅದೃಷ್ಟ ಕಡಿಮೆಯಾಗುವದು ಎಂದು ಹೇಳಲಾಗಿದೆ.
3. ಬೆಡ್ ರೂಂ ಗೆ ಬರುವಾಗ ಕಣ್ಣಿಗೆ ಬೀಳುವಾಗ ಆಕರ್ಷಕವಾದ ಚಿತ್ರಪಟ ಅಥವಾ ಆಕರ್ಷಕವಾದ ವಸ್ತು ಇರಬೇಕು. ಗಂಡ-ಹೆಂಡತಿಯ ಫೋಟೊ ಕೂಡ ಇಡಬಹುದು.
4. ಬೆಡ್ ರೂಂನಲ್ಲಿ ಮೀನಿನ ಅಕ್ವೇರಿಯಂ ಇಡಬಾರದು. ಮೀನಿನ ಅಕ್ವೇರಿಯಂ ಇಟ್ಟರೆ ವಸ್ತುಗಳ ನಷ್ಟ ಉಂಟಾಗುವುದು.
5. ಬೆಡ್ ರೂಂ ಗೋಡೆಯ ಬಣ್ಣ ಹಸಿರು, ನೀಲಿ ಅಥವಾ ಸ್ವಲ್ಪ ಬಿಳಿ ಬಣ್ಣ ಇರುತ್ತದೆ. ಪಿಂಕ್, ರೋಸ್, ಹಸಿರು, ಹಳದಿ ಈ ರೀತಿಯ ಬಣ್ಣ ನೋಡಲು ಆಕರ್ಷಕವಾಗಿ ಕಾಣುವುದರ ಜೊತೆಗೆ ಶಾಂತಿಯನ್ನು ತರುತ್ತದೆ.
6. ಬೆಡ್ ರೂಂನಲ್ಲಿ ಕನ್ನಡಿ ಇಡುವುದಾದರೆ ಬೆಡ್ ಕಾಣದ ಜಾಗದಲ್ಲಿ ಕನ್ನಡಿ ಇಡಬೇಕು. ರಾತ್ರಿ ಮಲಗುವ ಆ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಬೇಕು. ಕನ್ನಡಿಯನ್ನು ಕಾಲಿನ ದಿಕ್ಕಿನತ್ತ ಇಡಬಾರದು. ಏಕೆಂದರೆ ಈ ರೀತಿ ಇಟ್ಟರೆ ನಿದ್ದೆ ಹೇಳಲಾಗುತ್ತದೆ.
7. ಬೆಡ್ ರೂಂನಲ್ಲಿ ಟಿವಿ ಇಡಬಾರದು. ಒಂದುವೇಳೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಡುವುದಾದರೆ ದಕ್ಷಿಣ-ಪೂರ್ವದ ಕಡೆಗೆ ಇಡಬೇಕು.
8. ಮಂಚದ ಕೆಳಗೆ ವಸ್ತುಗಳನ್ನು ಇಡುವ ಬಾಕ್ಸ್ ಇರುವಂತಹ ಬೆಡ್ ಗಳನ್ನು ಬಳಸಬೆಡಿ. ಬಳಸುವುದಾದರೂ ಅದು ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಬೆಡ್ ಅನ್ನು ದಕ್ಷಿಣ-ಪಕ್ಷಿಮವಾಗಿ ಇಡಬೇಕು. ಬೆಡ್ ರೂಂ ಅನ್ನು ಮರದ ವಸ್ತಗಳಿಂದ ಅಲಂಕಾರ ಮಾಡುವುದು ಒಳ್ಳೆಯದು.



Click it and Unblock the Notifications
