Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಟೇಬಲ್ ಅಂದವಾಗಿದ್ದರೆ ಮನೆ ನೋಡಲು ಚೆಂದ
ಡೈನಿಂಗ್ ಟೇಬಲ್ ಹಾಗೂ ಟೀಪಾಯಿಯು ಆಕರ್ಷಕವಾಗಿದ್ದರೆ ಮನೆ ಅಂದ ಹೆಚ್ಚುವುದು. ಟೇಬಲ್ ತುಂಬಾ ಬೆಲೆ ಬಾಳುವಂತದ್ದು ಆಗಿರಬೇಕೆಂದಿಲ್ಲ, ಇರುವ ಡೈನಿಂಗ್ ಟೀಬಲ್ ಅನ್ನೇ ಅಲಂಕರಿಸಿ ಬೆಲೆ ಬಾಳುವ ಟೇಬಲ್ ಲುಕ್ ಕೊಡಬಹುದು. ಮನೆಯನ್ನು ಹೇಗೆ ಇಟ್ಟಿದ್ದೇವೆ ಅನ್ನುವುದು ಮನೆಯ ಡೈನಿಂಗ್ ಟೇಬಲ್ ನೋಡಿದರೆ ಅರ್ಥವಾಗುತ್ತದೆ. ಈ ಕೆಳಗಿನ ಸಲಹೆಗಳು ಟೇಬಲ್ ಮತ್ತು ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಕಾಟನ್: ಫ್ಯಾಬ್ರಿಕ್ ಅಥವಾ ಕಾಟನ್ ಬಟ್ಟೆಗಳನ್ನು ಟೇಬಲ್ ಮೇಲೆ ಹಾಸಲು ಬಳಸಬಹುದು. ಇಂತಹ ಬಟ್ಟೆಗಳ ಮೇಲೆ ವಿನ್ಯಾಸವಿದ್ದರೆ ಟೇಬಲ್ ಮತ್ತಷ್ಟು ಆಕರ್ಷಕವಾಗಿ ಕಾಣುವುದು.
ಲೈನಿನ್: ಮರದ ಟೈನಿಂಗ್ ಟೇಬಲ್ ಅನ್ನು ಅಲಂಕಾರ ಮಾಡಲು ಲೈನಿನ್ ಟೇಬಲ್ ಬಟ್ಟೆಯನ್ನು ಉಪಯೋಗಿಸಬಹುದು. ತೆಳು ಬಣ್ಣದ ಟೇಬಲ್ ಬಟ್ಟೆಯ ಮೇಲೆ ಗಾಢ ಬಣ್ಣದ ಟೇಬಲ್ ರನ್ನರ್ ಹಾಕಿದರೆ ಟೇಬಲ್ ನೋಡಲು ಮತ್ತಷ್ಟು ಆಕರ್ಷಕವಾಗಿ ಕಾಣುವುದು.
ಸಿಲ್ಕ್: ಮನೆಯಲ್ಲಿ ಪಾರ್ಟಿಯಿದ್ದರೆ ಸಿಲ್ಕ್ ಟೇಬಲ್ ರನ್ನರ್‌ನಿಂದ ಅಲಂಕಾರ ಮಾಡಿದರೆ ಮನೆ ಮತ್ತಷ್ಟು ಪಾರ್ಟಿ ಕಳೆ ಬರುತ್ತದೆ.
ಟೇಬಲ್ ರನ್ನರ್ ಗಳಲ್ಲಿ ಈ ಕೆಳಗಿನವುಗಳು ಟೇಬಲ್ ಅಲಂಕಾರ ಹೆಚ್ಚುವಂತೆ ಮಾಡುತ್ತದೆ.
ವಿನ್ಯಾಸವಿಲ್ಲದ ಟೇಬಲ್ ರನ್ನರ್: ಈ ರನ್ನರ್ ಅನ್ನು ಯಾವುದೇ ಬಣ್ಣದ ರೂಂನಲ್ಲಿರುವ ಟೇಬಲ್ ಮೇಲೆ ಹಾಕಬಹುದು. ಈ ರನ್ನರ್ ಹಾಕಿದರೆ ಟೇಬಲ್ ಎದ್ದು ಕಾಣುವುದು. ಆದರೆ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಈ ರೀತಿಯ ರನ್ನರ್ ಬಳಸದಿರುವುದು ಸೂಕ್ತ, ಏಕೆಂದರೆ ಕೊಳೆಯಾದರೆ ಬೇಗನೆ ಎದ್ದು ಕಾಣುವುದು.
ಪ್ರಾಣಿಗಳ ಚಿತ್ರವಿರುವ ಟೇಬಲ್ ರನ್ನರ್: ಇವುಗಳನ್ನು ಟೇಬಲ್ ಮೇಲೆ ಹಾಸಿದಾಗ ತುಂಬಾ ಚೆನ್ನಾಗಿರುತ್ತದೆ. ಅದರಲ್ಲೂ
ಚಿರತೆ, ಹುಲಿ ಚಿತ್ರವಿರುವ ರನ್ನರ್ ಬಳಸಬಹುದು.
ಹೂವಿನ ಅಲಕಾರವಿರುವ ರನ್ನರ್: ಹೂವಿನ ವಿನ್ಯಾಸವಿರುವ ಕರ್ಟನ್, ಕುಶನ್ ಬಳಸಿ, ಹೂವಿನ ವಿನ್ಯಾಸ ಟೇಬಲ್ ರನ್ನರ್ ಬಳಸಿದರೆ ಮನೆ ಸುಂದರವಾದ ಹೂತೋಟದಂತೆ ಕಾಣುವುದು.



Click it and Unblock the Notifications
