Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳ ರೂಂ ಅಲಂಕಾರಕ್ಕೆ ಟಿಪ್ಸ್
ಮಕ್ಕಳ ಕೋಣೆಯನ್ನು ಪ್ಲೇನ್ ಆಗಿ ಇಡುವ ಬದಲು ಗೊಂಬೆಗಳಿಂದ ಹಾಗೂ ಬಣ್ಣ-ಬಣ್ಣದ ಚಿತ್ತಾರಗಳಿಂದ ಅಲಂಕರಿಸಿದರೆ ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಮಕ್ಕಳು ಬಣ್ಣದ ವಸ್ತುಗಳನ್ನು ತುಂಬಾ ಇಷ್ಟಪಡುತ್ತಾರೆ. ಮಕ್ಕಳ ಕೋಣೆಯನ್ನು ಈ ಕೆಳಗಿನಂತೆ ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು.
ಆಕರ್ಷಕವಾದ ಡೆಸ್ಕ್ ಟಾಪ್: ಅವರ ಡೆಸ್ಕ್ ಅನ್ನು ಸನ್ ಫ್ಲವರ್ ಅಥವಾ ಸೂಪರ್ ಹೀರೋಗಳ ಚಿತ್ರ, ಹೂವಿನ ಚಿತ್ರ ಈ ರೀತಿಯ ವಸ್ತುಗಳಿಂದ ಅಲಂಕರಿಸಿ. ಹೀಗೆ ಅಲಂಕರಿಸುವಾಗ ಡೆಸ್ಕ್ ಅನ್ನು ಯಾವ ರೀತಿಯ ಚಿತ್ರಗಳಿಂದ ಅಲಂಕರಿಸಬೇಕೆಂದು ಮಕ್ಕಳ ಹತ್ತಿರನೇ ಕೇಳಿ. ಅವರ ರೂಂ ಹೇಗಿರಬೇಕೆಂದು ನಮಗಿಂತ ಚೆನ್ನಾಗಿ ಅವರಿಗೆ ಐಡಿಯಾ ಇರುತ್ತದೆ.

ಗೋಡೆಯ ಬಣ್ಣ: ಗೋಡೆಗೆ ಒಂದೇ ಬಣ್ಣ ಹೊಡೆಯುವ ಬದಲು 2-3 ಬಣ್ಣದಿಂದ ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಪಿಂಕ್ ಕಲರ್ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ, ಗೋಡೆಗೆ ಹಚ್ಚಿದಂತಹ ಬಣ್ಣದ ಚೇರ್ ಗಳನ್ನೇ ತಂದಿಡಿ. ಈ ರೀತಿ ಅಲಂಕರಿಸಿದರೆ ಕೋಣೆ ತುಂಬಾ ಆಕರ್ಷಕವಾಗಿ ಕಾಣುವುದು.
ಗೊಂಬೆ: ಮಕ್ಕಳ ಕೋಣೆಯನ್ನು ಗೊಂಬೆಗಳಿಂದ ಅಲಂಕರಿಸಿ, ಟೇಬಲ್ ಮೇಲೆ ಪೆನ್ ಸ್ಟ್ಯಾಂಡ್ ಇಡಿ. ಬುಕ್ ಗಳನ್ನು ಜೋಡಿಸಲು ಕಬೋರ್ಡ್ ಇರಲಿ. ಸಾಧ್ಯವಾದರೆ ಒಂದು ಬ್ಯಾಕ್ ಬೋರ್ಡ್ ಇಡುವುದು ಒಳ್ಳೆಯದು. ಈ ರೀತಿ ಕೋಣೆ ತುಂಬಾ ಅಚ್ಚುಕಟ್ಟಾಗಿದ್ದರೆ ಮಕ್ಕಳಿಗೆ ಓದಲು ಸೂಕ್ತ ವಾತಾವರಣ ಒದಗಿಸಿಕೊಟ್ಟಂತೆ ಆಗುವುದು. ಮಕ್ಕಳ ರೂಂನಲ್ಲಿ ಗಾಳಿ, ಬೆಳಕು ಸರಿಯಾಗಿ ಬರುವಂತೆ ಇರಲಿ.



Click it and Unblock the Notifications
