ಕ್ಯಾಂಡಲ್‌ ಪ್ರದರ್ಶನದ ವಿಧಾನಗಳು

ಕ್ಯಾಂಡಲ್‌ಗಳನ್ನು ರಾತ್ರಿ ಊಟಕ್ಕೆ, ಮದುವೆಗೆ, ಧಾರ್ಮಿಕ ಸಮಾರಂಭಗಳಿಗೆ ಹಾಗೂ ಒತ್ತಡದ ಕೆಲಸ ಮುಗಿದ ನಂತರದಲ್ಲಿ ಬಬಲ್‌ಬಾತ್‌ಗೆ ಉಪಯೋಗಿಸಲಾಗುತ್ತದೆ. ಸಣ್ಣದಾದ ಕ್ಯಾಂಡಲ್‌ ಒಂದನ್ನು ಟೇಬಲ್‌ ಮಧ್ಯೆ ಹಚ್ಚಿಡುವುದು ಸೌಂದರ್ಯಕ್ಕೆ ಕೊಂಬು ನೀಡಿದಂತೆ, ಬೆಳಕಿನ ಕಿರಣವು ಹಲವು ಆಸಕ್ತಿಕರ ವಿಚಾರಧಾರೆಗೆ ಅವಕಾಶ ಮಾಡಿಕೊಡುತ್ತದೆ.

ಕ್ರಿಸ್‌ಮಸ್‌ ಆಭರಣಗಳು

ದೊಡ್ಡದಾದ, ಬಣ್ಣಬಣ್ಣದ ಕ್ರಿಸ್‌ಮಸ್‌ ಬಾಲ್‌ಗಳನ್ನು ಡಿಸೆಂಬರಿನ ತನಕ ಧೂಳು ತುಂಬಿರಲು ಬಿಡಬಾರದು. ಬದಲಾಗಿ ಈ ಬಾಲ್‌ಗಳ ಮಧ್ಯೆ ಕ್ಯಾಂಡಲ್‌ ಹಚ್ಚಿ ಬೆಳಗಲು ಬಿಡಿ. ನೈಸರ್ಗಿಕವಾಗಿಯೇ ಬೆಳಗಿದಂತೆ ಭಾಸವಾಗಲು ಸೂಕ್ತವಾದ ಹೊಂದಾಣಿಕೆಯನ್ನು ಮಾಡಿ. ಉದಾಹರಣೆಗೆ ಸೌತ್‌ವೆಸ್ಟ್‌ ಶೈಲಿಯ ಮನೆಗೆ ತಾಮ್ರದ ಮತ್ತು ಪ್ಲಮ್‌ ಆಭರಣಗಳನ್ನು ಬಳಸಿ. ಆ ಆಭರಣವನ್ನು ದೊಡ್ಡ ಗ್ಲಾಸ್ ಬೋಲ್‌ನಲ್ಲಿ ಅಥವಾ ಶಾಲ್ಲೋನಲ್ಲಿ ಇಡಿ. ಸಣ್ಣ ಕ್ಯಾಂಡಲ್‌ಗಳನ್ನು ಬೋಲ್‌ನ ಮೇಲೆ ಇಡಿ ಅಥವಾ ಬೋಲ್‌ನ ಕೆಳಗೆ ದೊಡ್ಡ ಪಿಲ್ಲರ‍್ ಕ್ಯಾಂಡಲ್‌ನ್ನು ಇಡಿ. ಇದರ ಸುತ್ತ ಇತರ ಸಾಮಗ್ರಿಗಳನ್ನು ಇಡಿ.

Candle Display Ideas

ಪುಸ್ತಕಗಳು

ಒಂದು ಕ್ಯಾಂಡಲ್ ಇಡುವ ಪ್ರಕ್ರಿಯೆಯು ವೆಚ್ಚದಾಯಕ ಅಥವಾ ಸಂಕೀರ್ಣವಾಗಬಾರದು. ಸಾಹಿತ್ಯ ಶೈಲಿಯದ್ದಾದರೆ ಪುಸ್ತಕದ ಮೇಲೊಂದು ಸರಳ ಕ್ಯಾಂಡಲ್‌ ಇಟ್ಟರೆ ಸಾಕು. ನಿಮ್ಮ ಶೈಲಿ ಮತ್ತು ಆಸಕ್ತಿಯನ್ನು ಈ ಕ್ಯಾಂಡಲ್‌ ಪ್ರತಿಬಿಂಬಿಸುತ್ತಿರಬೇಕು. ಇತರ ಮೂರು ಕಡೆಗೆ ಪುಸ್ತಕಗಳನ್ನು ಪೇರಿಸಿ. ನಂತರ ಈ ಮೂರು ಪುಸ್ತಕಗಳ ಮೇಲೆ ಪಿಲ್ಲರ‍್ ಕ್ಯಾಂಡಲ್‌ನ್ನು ಇಡಿ. ಪುಸ್ತಕದ ಥೀಮ್‌ಗೆ ಸೂಕ್ತವಾಗುವಂಥ ಬಣ್ಣವನ್ನು ಕ್ಯಾಂಡಲ್‌ ಆಯ್ಕೆಯಲ್ಲಿ ಅನುಸರಿಸಿ. ಉದಾಹರಣೆಗೆ ಕೆಂಪು ಕ್ಯಾಂಡಲ್‌ನ್ನು ಆಯ್ಕೆ ಮಾಡಿಕೊಂಡು ಇದನ್ನು ಕೆಂಪು ರಿಬ್ಬನ್‌ನಿಂದ ಕಟ್ಟಿ. ಕಾಫಿ ಟೇಬಲ್‌ ಮೇಲೆ, ಬುಕ್‌ ಶೆಲ್ವ್‌ಗಳ ಮೇಲೆ ಅಥವಾ ಟೇಬಲ್‌ನ ಕೊನೆಗೆ ಇದನ್ನು ಇಡಿ.

ತೇಲುವ ಕ್ಯಾಂಡಲ್‌ ಉದ್ಯಾನ

ಕ್ಯಾಂಡಲ್‌ ಉದ್ಯಾನವು ಸುತ್ತಲೂ ನೀರು ಇರುವ ಪ್ರದೇಶಕ್ಕೆ ಸೂಕ್ತ. ಅಂದರೆ ಬಾತ್‌ರೂಮ್‌ ಅಥವಾ ಕಿಚನ್‌ ಸಿಂಕ್‌ನ ಪಕ್ಕದಲ್ಲಿ. ಕ್ಯಾಂಡಲ್‌ ಉದ್ಯಾನ ನಿರ್ಮಿಸಲು ಗ್ಲಾಸ್‌ ಬೋಲ್‌, ತೇಲುವ ಕ್ಯಾಂಡಲ್‌, ಕಲ್ಲುಗಳು, ಕೃತಕ ಹೂವುಗಳು ಮತ್ತು ಇತರ ಅಲಂಕಾರಿಕ ಸಾಮಗ್ರಿಗಳ ಅಗತ್ಯವಿರುತ್ತದೆ. ವಿವಿಧ ಗಾತ್ರದ ಒಂದಕ್ಕಿಂತ ಹೆಚ್ಚು ಬೋಲ್‌ಗಳನ್ನು ನೀರಿನಿಂದ ತುಂಬಿ. ಕಲ್ಲುಗಳನ್ನು ಬೋಲ್‌ನಲ್ಲಿ ಹಾಕಿ. ದೊಡ್ಡ, ಮೆತ್ತನೆಯ ಕಪ್ಪು ಕಲ್ಲುಗಳು ಅಥವಾ ಸಣ್ಣ, ಬಣ್ಣದ ಗ್ಲಾಸ್‌ಗಳನ್ನು ಉಪಯೋಗಿಸಿ. ಕೃತಕ ಹೂವುಗಳನ್ನು ನೀರಿನಲ್ಲಿಡಿ ಮತ್ತು ಇದರ ಮೇಲೆ ತೇಲುವ ಕ್ಯಾಂಡಲ್‌ನ್ನು ಇಡಿ.

ಮಂಜನಿತಾ ಮರ

ಮಂಜನಿತಾ ರೆಂಬೆಗಳು ಮನೆಯಲ್ಲಿ ಸುಂದರ ಕ್ಯಾಂಡಲ್‌ ಅರೇಂಜ್‌ಮೆಂಟ್‌ಗೆ ಸೂಕ್ತ. ಮರದ ಹಲಗೆಯ ಮೇಲೆ ದೊಡ್ಡ ಮಂಜನಿತಾ ರೆಂಬೆಯನ್ನು ಅಂಟಿಸಿ. ಮರದ ಹಲಗೆಗೆ ಕಲ್ಲಿನಿಂದ ಗೆರೆ ಹಾಕಿ. ಸಣ್ಣ ಟೀ ಕ್ಯಾಂಡಲ್‌ಗಳನ್ನು ಉದ್ದದ ತೂಗುವ ಕ್ಯಾಂಡಲ್‌ ಹೋಲ್ಡರಿನ ಒಳಗೆ ಇಡಿ. ನಂತರದಲ್ಲಿ ಮರದ ರೆಂಬೆಯಲ್ಲಿ ಕ್ಯಾಂಡಲ್‌ನ್ನು ತೂಗುಹಾಕಿ. ರೆಂಬೆಗೆ ಬೆಂಕಿ ತಾಗದಷ್ಟು ಕ್ಯಾಂಡಲ್‌ ಹೋಲ್ಡರುಗಳು ಉದ್ದವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಗ್ಲಾಸ್‌ ಜಾರ್‌ಗಳು

ಕ್ಯಾಂಡಲ್‌ ಹೋಲ್ಡರುಗಳಿಗೆ ಖಾಲಿ ಬಾಟಲ್‌ಗಳನ್ನು ಉಪಯೋಗಿಸುವುದು. ವಿವಿಧ ಗಾತ್ರ, ಬಣ್ಣ ಮತ್ತು ಆಕಾರದ ಜಾರುಗಳಿಗಾಗಿ ಹಳೆಯ ಅಂಗಡಿಗೆ ಅಥವಾ ರೀಟೇಲ್‌ ಔಟ್‌ಲೆಟ್‌ನಲ್ಲಿ ಹುಡುಕಿ. ಕೆಲವು ಬಾಟಲ್‌ಗಳನ್ನು ಗಿಡಮೂಲಿಕೆಗಳಿಂದ, ಹೂವುಗಳಿಂದ ಅಥವಾ ಸೀ ಗ್ಲಾಸ್‌ಗಳಿಂದ ತುಂಬಿ. ಉಳಿದವನ್ನು ಕ್ಯಾಂಡಲ್‌ ಸ್ಟಿಕ್‌ನಲ್ಲಿ ಹಾಕಿ. ಎಲ್ಲಾ ಬಾಟಲ್‌ಗಳನ್ನು ಡೆಕೋರೇಟಿವ್‌ ಟೈಲ್‌ನಲ್ಲಿ, ಹಳೆಯ ಟ್ರೇನಲ್ಲಿ ಅಥವಾ ಪಾತ್ರೆಯೊಂದರಲ್ಲಿ ಇಡಿ. ಸಂಬಂಧಿತ ಸಾಮಗ್ರಿಯನ್ನು ಪ್ಲೇಟ್‌ನಲ್ಲಿ ಇಡಿ.

ಈ ರೀತಿ ಕ್ಯಾಂಡಲ್ ನಿಂದ ಅಲಂಕಾರ ಮಾಡಬಹುದು.

Story first published: Friday, December 21, 2012, 17:20 [IST]
X
Desktop Bottom Promotion