Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ವಿದ್ಯುತ್ ಉಳಿಸುವ ಉಪಾಯ ಯಾವುದು?

ಮನೆಯಲ್ಲಿ ವಿದ್ಯುತ್ ಉಳಿತಾಯಕ್ಕೆ ಯಾವ ರೀತಿ ಲೈಟಿಂಗ್ ಇರಲಿ?
1. ಸಿಎಫ್ ಎಲ್ ಲೈಟ್ಸ್: ಫಿಲಿಪ್ಸ್ ನ ಈ ಫ್ಲೋರೆಸೆಂಟ್ ಲೈಟ್ ಮನೆಗೆ ಉತ್ತಮ ಆಯ್ಕೆ. ಟ್ಯೂಬ್ ಲೈಟ್ ನಷ್ಟು ಬೆಳಕು ಕೊಡುವ ಈ ಲೈಟ್ ಗಳು ಹಳೆಯ ಮಾದರಿಯ ಟ್ಯೂಬ್ ಲೈಟ್ ನಂತಿರದೆ ಚಿಕ್ಕ ಬಲ್ಬ್, ಕರ್ವ್ ಮತ್ತು ವೃತ್ತಾಕಾರವಾಗಿ ಲಭ್ಯವಿದೆ. ಇದು ಹೆಚ್ಚು ಬೆಳಕಿನೊಂದಿಗೆ ಕಡಿಮೆ ವಿದ್ಯುತ್ತನ್ನೂ ಉಪಯೋಗಿಸಿಕೊಳ್ಳುತ್ತದೆ. ಹೆಚ್ಚು ಬೆಲೆಯೂ ಅಲ್ಲದ ಈ ಸಿಎಫ್ ಎಲ್ ಲೈಟ್ ಗಳು ಪರಿಸರ ಸ್ನೇಹಿಯೂ ಹೌದು.
2. ಎಲ್ ಇಡಿ ಬಲ್ಬ್: ಈ ಹೊಸ ಮಾದರಿಯ ಲೈಟ್ ಗಳು ಮನೆಗೆ ಮೆರುಗು ನೀಡುತ್ತೆ. ಎಲ್ ಇಡಿ ಲೈಟ್ ಗಳನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಹಾಕಬಹುದು. ಈ ಹೊಳಪು ನೀಡುವ ಅಂದದ ಲೈಟ್ ಗಳು ಮನೆಯ ಅಲಂಕಾರಕ್ಕೆ ಹೇಳಿ ಮಾಡಿಸಿದಂತೆ. ಕಡಿಮೆ ವಿದ್ಯುತ್ ಬಳಸಿಕೊಳ್ಳುವ ಮತ್ತು ಅನೇಕ ಬಣ್ಣಗಳಲ್ಲಿ ಲಭ್ಯವಿರುವ ಈ ಲೈಟನ್ನು ನಿಮ್ಮ ಮನೆಯ ಗೋಡೆ ಬಣ್ಣಕ್ಕೆ ತಕ್ಕಂತೆ ಆಯ್ಕೆ ಮಾಡಿ ಮನೆಯ ಅಂದ ಹೆಚ್ಚಿಸಬಹುದು.
3. ನೈಸರ್ಗಿಕ ಬೆಳಕು: ಸಾಯಂಕಾಲ ಮತ್ತು ರಾತ್ರಿ ವೇಳೆ ಲೈಟ್ ಗಳ ಸಹಾಯ ಬೇಕೇ ಬೇಕು. ಆದರೆ ದಿನದ ಸಮಯದಲ್ಲಿ ಈ ಲೈಟ್ ಬೆಳಕಿನ ಹೊರತಾಗಿ ಸೂರ್ಯನಿಂದ ದೊರೆಯುವ ನೈಸರ್ಗಿಕ ಬೆಳಕನ್ನೇ ಬಳಸಿಕೊಂಡರೆ ಹೆಚ್ಚು ಉಪಯುಕ್ತ.
ಮನೆಗೆ ಗಾಳಿ ಬೆಳಕಿನ ಹರಿವು ಚೆನ್ನಾಗಿ ಬರುವಂತೆ ಕಿಟಕಿಗಳನ್ನು ಅಗಲವಾಗಿ ರೂಪಿಸಿಕೊಂಡರೆ ಈ ಲಾಭವನ್ನು ಪಡೆಯಬಹುದು. ಇದರಿಂದ ಮನೆ ಚೆನ್ನಾಗಿ ಕಾಣುವುದರೊಂದಿಗೆ ವಿದ್ಯುತ್ತನ್ನೂ ಉಳಿಸಬಹುದು. ಸೂರ್ಯನ ಕಿರಣ ಮನೆಯ ಒಳಗೆ ಬರುವಂತೆ ಮಾಡಿಕೊಂಡರೆ ಮನೆಯಲ್ಲಿ ಕ್ರಿಮಿ ಕೀಟಗಳೂ ಸಾಯಲು ಅನುವಾಗುತ್ತದೆ.
4. ವಿದ್ಯುತ್ ಉಳಿಸುವ ಸುಲಭ ಉಪಾಯ: ಮನೆಯ ಅಲಂಕಾರಕ್ಕೆ ಡಿಮ್ಮರ್ ಲೈಟ್ ಗಳನ್ನು ಬಳಸುತ್ತೀರ ಎಂದಾದರೆ ಈ ಆಂಬಿಯಂಟ್ ಲೈಟ್ ತುಂಬಾ ಉಪಯುಕ್ತ. ಮನೆಯ ರೂಂ ಗಳಿಗೆ ಇದು ಹೆಚ್ಚು ಸೂಕ್ತ. ಕೆಲವೊಮ್ಮೆ ರೂಂ ಹೆಚ್ಚು ಬೆಳಕಿನಿಂದ ತುಂಬಿರಬಾರದು ಎಂದು ಇಚ್ಛಿಸುವುದಾದರೆ ಈ ಆಂಬಿಯಂಟ್ ಲೈಟಂಗ್ ಸಹಕಾರಿ. ಇದು ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳತ್ತದೆ
5 ಕಡಿಮೆ ವಾಲ್ಟ್ ಮತ್ತು ತಿಳಿ ಬಣ್ಣದ ಬಲ್ಬ್: ಕಡಿಮೆ ವಾಲ್ಟ್ ಗಳನ್ನು ಹೊಂದಿರುವ ಲೈಟ್ ಗಳನ್ನು ಅಥವಾ ಅಗತ್ಯವಿದ್ದರೆ ಝೀರೊ ಕ್ಯಾಂಡಲ್ ಬಲ್ಬ್ ಗಳನ್ನೂ ಉಪಯೋಸಿಸಬಹುದು. ತಿಳಿ ಬಣ್ಣದ ಲೈಟ್ ಗಳನ್ನು ಕೊಂಡುಕೊಂಡರೆ ಹೆಚ್ಚು ಬೆಳಕನ್ನು ಕೊಡುತ್ತದೆ ಎಂಬುದನ್ನೂ ಮರೆಯಬಾರದು.



Click it and Unblock the Notifications
