Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ನಿಮ್ಮ ಬೆಡ್ ರೂಂ ರೊಮ್ಯಾಂಟಿಕ್ ಆಗಿರಬೇಕಾ?

ಲೈಟ್ ಫಿಕ್ಸ್ಚರ್: ನಿಮ್ಮ ಬೆಡ್ ರೂಮನ್ನು ಸುಂದರವಾಗಿ ಮಾಡಬೇಕೆಂದರೆ ರೂಂಗೆ ಹಾಕುವ ಲೈಟಿಂಗ್ಸ್ ಮೇಲೆ ಮೊದಲು ಗಮನವಿಡಿ. ಬೆಡ್ ರೂಂಗೆ ಕಣ್ಣು ಚುಚ್ಚುವಂತಹ ಲೈಟ್ ಅವಶ್ಯಕತೆಯಿಲ್ಲ. ಹೆಚ್ಚು ಗಾಢವಲ್ಲದ, ಸರಳ ಲೈಟಿಂಗ್ ಅಳವಡಿಸಿ.
ಬೆಡ್ಡಿಂಗ್: ಬೆಡ್ ರೂಂಗೆ ಬೆಡ್ ಚೆನ್ನಾಗಿರಲಿಲ್ಲ ಅಂದ್ರೆ ಹೇಗೆ? ತುಂಬಾ ಮೃದುವಾದ ಬೆಡ್ ಮತ್ತು ಅಗಲವಾದ ಮಂಚ ರೂಂಗಿರಲಿ. ಕೆಂಪು, ರೋಸ್ ಕಲರ್, ಮರೂನ್ ಬೆಡ್ ರೂಂಗೆ ಸಖತ್ ಲುಕ್. ಕರ್ಟೇನ್, ಬೆಡ್ ಸ್ಪ್ರೆಡ್, ಇನ್ನಿತರ ಬಣ್ಣದ ಬಟ್ಟೆಯನ್ನು ಬೆಡ್ ರೂಂ ನಲ್ಲಿ ಬಳಸಬಹುದು. ಆದರೆ ತಿಳಿ ಬಣ್ಣ ಇಷ್ಟ ಪಡುವವರು ತಿಳಿ ಬಣ್ಣವನ್ನೂ ಆರಿಸಿಕೊಳ್ಳಬಹುದು.
ಹೃದಯಾಕಾರ: ಬೆಡ್ ಮೇಲೆ ಹೃದಯದ ಆಕಾರವಿರುವ ಬೆಡ್ ಶೀಟ್ ಹಾಸಿದರೆ ರೊಮ್ಯಾಂಟಿಕ್ ಆಗಿರುತ್ತೆ. ಹೃದಯಾಕಾರದ ದಿಂಬುಗಳನ್ನೂ ಬೆಡ್ ಗಳ ಮೇಲಿಟ್ಟರೆ ನೋಡಲೂ ಚೆಂದ.
ಕರ್ಟೇನ್: ಬೆಡ್ ರೂಂ ಅಲಂಕಾರ ಮಾಡುವಲ್ಲಿ ಕರ್ಟೇನ್ ಪ್ರಮುಖ. ಕರ್ಟೇನ್ ಬಣ್ಣ ನಿಮ್ಮ ಅಭಿರುಚಿಗೆ ತಕ್ಕಂತಿರಲಿ. ಕರ್ಟೇನ್ ಜೊತೆಗೆ, ಈಗ ಲಭ್ಯವಿರುವ ಮಣಿಯ ದಾರಗಳನ್ನೂ ಸಹ ಬಳಸಬಹುದು. ಗೋಡೆಯ ಬಣ್ಣಕ್ಕೂ ಹಾಸಿಗೆಯ ಬಣ್ಣಕ್ಕೂ ಕರ್ಟೇನ್ ಹೊಂದಿಕೊಳ್ಳುವಂತಿದ್ದರೆ ನೋಡಲು ಚೆಂದ.
ಸುಗಂಧ: ಬೆಡ್ ರೂಂಗೆ ಸುಗಂಧಪೂರಿತ ಕ್ಯಾಂಡಲ್ ಮತ್ತು ಎಲೆಕ್ಟ್ರಿಕ್ ಸುಗಂಧ ದ್ರವ್ಯಗಳನ್ನೂ ಸಹ ಬಳಸಬಹುದು. ಲ್ಯಾವೆಂಡರ್, ರೋಸ್ ಮುಂತಾದ ಫ್ಲೇವರ್ ಗಳಲ್ಲಿ ಲಭ್ಯವಿರುವ ಸುಗಂಧವನ್ನು ಉಪಯೋಗಿಸಬಹುದು.
ಹೂ ಕುಂಡ: ಹೂ ಕುಂಡಗಳು ಬೆಡ್ ರೂಂಗೆ ತುಂಬಾ ಒಪ್ಪುತ್ತದೆ. ಪ್ಲಾಸ್ಟಿಕ್ ಹೂವುಗಳನ್ನು ಬಳಸುವುದಾದರೆ ಕರ್ಟೇನ್ , ಹಾಸಿಗೆ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಹೂವಿನ ಬಣ್ಣವನ್ನು ಆಯ್ಕೆ ಮಾಡಿ.
ಪೇಂಟಿಂಗ್: ನಿಮ್ಮ ಬೆಡ್ ರೂಂ ನಲ್ಲಿ ದೊಡ್ಡದಾದ ಪೇಂಟಿಂಗ್ ಇರಲಿ. ನಿಮ್ಮ ಕುಟುಂಬದ ಅಥವಾ ಮದುವೆ ಸಮಯದಲ್ಲಿ ತೆಗೆಸಿಕೊಂಡ ಫೋಟೋವನ್ನೂ ಇನ್ನೊಂದು ಬದಿಗೆ ತೂಗು ಹಾಕಿ. ಇದು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.



Click it and Unblock the Notifications
