Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚೈನೀಸ್ ಭವಿಷ್ಯದ ಪ್ರಕಾರ ಮನೆಯಲ್ಲಿ ಏನಿರಬೇಕು?

ಮನೆಯ ಅಲಂಕಾರಕ್ಕೆ ಫೆಂಗ್ ಶ್ಯೂ ಸೂತ್ರ ಹೀಗಿದೆ:
1. ಫೋಟೋ ಫ್ರೇಂ: ನಿಮಗೆ ಬೇಸರವಾಗುವ ಸಂಗತಿಯನ್ನು ಮನೆಯಿಂದ ಹೊರಗೆ ಹಾಕಿದರೆ ಅದು ಮನಸ್ಸಿನಿಂದಲೂ ಹೊರಗೆ ಹೋಗುತ್ತದೆ ಎನ್ನುತ್ತದೆ ಫೆಂಗ್ ಶ್ಯೂ. ಆದ್ದರಿಂದ ಮನೆಗೆ, ಮನಕ್ಕೆ ಮುದ ನೀಡುವ ನಗು ತರುವ ಕೆಲವು ಫೋಟೋ ಫ್ರೇಂಗಳನ್ನು ಮನೆಯಲ್ಲಿ ತೂಗು ಹಾಕಿ. ಇದು ಅಲಂಕಾರಕ್ಕೂ ಚೆಂದ. ಮನಕ್ಕೂ ಶಾಂತಿ ನೀಡುತ್ತದೆ.
2. ಉಲ್ಲಾಸಕ್ಕಿರಲಿ ಈ ಬಣ್ಣ: ಕೆಲವು ಬಣ್ಣಗಳು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ ಫೆಂಗ್ ಶ್ಯೂ. ಆದ್ದರಿಂದ ಮನೆಗೆ ತಿಳಿ ನೀಲಿ ಅಥವಾ ತಿಳಿ ಹಸಿರು ಬಣ್ಣವನ್ನು ಬಳಸಿದರೆ ಅದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದಿದೆ.
3. 21/2 ಅಡಿ ಸ್ಥಳಾವಕಾಶ: ಹೆಚ್ಚು ಇಕ್ಕಟ್ಟಿದ್ದರೆ ಮನಸ್ಸೂ ಕೂಡ ಸಮಸ್ಯೆಯ ಗೂಡಾಗುತ್ತದೆ. ಆದ್ದರಿಂದ ಮನೆಯ ಪೀಠೋಪಕರಣಗಳ ನಡುವೆ 21/2 ಅಡಿ ಜಾಗವನ್ನು ಬಿಟ್ಟರೆ ಮನೆ ನೋಡಲೂ ಚೆಂದ, ಓಡಾಡಲೂ ಸರಾಗ, ಮನಸ್ಸೂ ವಿಶಾಲವಾಗುತ್ತದೆ ಎಂದು ತಿಳಿಸಿದೆ.
4. ಚೆಂದದ ಗಿಡ, ಹೂವು: ನೈಸರ್ಗಿಕ ಅಂಶವನ್ನು ಮನೆಯಲ್ಲಿಟ್ಟರೆ ಅದು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಆದ್ದರಿಂದ ಹೊಸ ಜೀವನ, ಬೆಳವಣಿಗೆ ಮತ್ತು ಜೀವಕುಲದ ಸಂಕೇತವಾಗಿರುವ ಗಿಡ, ಹೂವುಗಳನ್ನು ಮನೆಯಲ್ಲಿಟ್ಟರೆ ಮನೆ ಮನ ಹಸನಾಗಿರುತ್ತದೆ ಎಂದಿದೆ ಚೈನೀಸ್ ಭವಿಷ್ಯ.
5. ಗಾಜಿನ ವಸ್ತುಗಳು: ನಿಮ್ಮ ಮನೆಯಲ್ಲಿ ಗಾಜಿನ ವಸ್ತುಗಳು, ಸೋಫಾ ಇನ್ನಿತರ ಮೆತ್ತಗಿನ ವಸ್ತುಗಳನ್ನೂ ಇಡಿ. ಗಾಜಿನ ವಸ್ತುಗಳು ಮನಸ್ಸಿನ ಪಾರದರ್ಶಕತೆಯ ಸಂಕೇತ. ಮೆತ್ತಗಿನ ವಸ್ತುಗಳು ನಿಮ್ಮ ಮನಸ್ಸನ್ನೂ ಮೆತ್ತಗಿರುವಂತೆ ಮಾಡುತ್ತದೆ ಎಂದಿದೆ ಭವಿಷ್ಯ.
ಈ ಐದು ಅಂಶಗಳನ್ನು ಪಾಲಿಸಿದರೆ ಮನೆ, ಮನ ಹಸನಾಗಿ ಯಾವಾಗಲೂ ನಗುನಗುತ್ತಾ, ಆರೋಗ್ಯವಾಗಿ ಇರಲು ಸಾಧ್ಯ ಎಂದು ನುಡಿದಿದೆ ಫೆಂಗ್ ಶ್ಯೂ.



Click it and Unblock the Notifications
