Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಜಾರಿ ಬೀಳುವ ಮುನ್ನ ಒಮ್ಮೆ ಯೋಚಿಸಿ

ಟೈಲ್ಸ್ ಆಯ್ಕೆ ಮಾಡಿಕೊಳ್ಳುವುದು ಕೊಂಚ ಯೋಚಿಸಲೇಬೇಕಾದ ವಿಷಯ. ಬಾತ್ ರೂಂ ಸಾಮಾನ್ಯವಾಗಿ ಯಾವಾಗಲೂ ತೇವವಾಗಿರುವುದರಿಂದ ಟೈಲ್ಸ್ ಗಳ ಆಯ್ಕೆಯಲ್ಲಿ ಜಾಗ್ರತೆಯಿಂದಿರಬೇಕು. ಇಲ್ಲವೆಂದರೆ ಒಂದಲ್ಲಾ ಒಂದು ದಿನ ನೀವು ಜಾರಿಬೀಳುವುದು ಗ್ಯಾರಂಟಿ.
ಬಾತ್ ರೂಂಗೆ ಯಾವ ರೀತಿಯ ಟೈಲ್ಸ್ ಸೂಕ್ತ ಎಂಬ ಬಗ್ಗೆ ಇಲ್ಲೊಂದಿಷ್ಟು ಸಲಹೆಗಳಿವೆ:
* ತುಂಬಾ ನುಣುಪಾದ ಟೈಲ್ಸ್ ಗಳು ಬಾತ್ ರೂಂ ನೆಲಕ್ಕೆ ಹಾಕದಿರಿ. ನಿಮ್ಮ ಕಾಲುಗಳು ಆರಾಮವಾಗಿ ಟೈಲ್ಸ್ ಮೇಲೆ ನಿಲ್ಲುವಷ್ಟು ಗಟ್ಟಿ ಯಿರಲಿ. ತುಂಬಾ ಜಾರುವಂತಿದ್ದರೆ ಕಷ್ಟ.. ಗೋಡೆಗಳಿಗೆ ಬೇಕಾದರೆ ಈ ಟೈಲ್ಸ್ ಗಳನ್ನು ಬಳಸಬಹುದು.
* ಬಾತ್ ರೂಂ ಗೋಡೆಗೆ ಯಾವ ಬಣ್ಣ ಇರುತ್ತದೋ ಅದಕ್ಕೆ ಹೊಂದಿಕೊಳ್ಳುವಂತೆ ಟೈಲ್ಸ್ ಬಣ್ಣದ ಆಯ್ಕೆ ಮಾಡಿ.
* ತೂತುಗಳಿರುವ ಟೈಲ್ಸ್ ಗಳನ್ನು ಹಾಕುವುದು ಈಗ ರೂಢಿಯಲ್ಲಿದೆ. ಆದರೆ ಇವುಗಳನ್ನು ಬಳಸದೇ ಇದ್ದರೆ ಉತ್ತಮ. ಏಕೆಂದರೆ ಈ ಚಿಕ್ಕ ತೂತುಗಳಲ್ಲಿ ಕೊಳೆ ತುಂಬಿಕೊಂಡರೆ ನೋಡಲು ಅಷ್ಟು ಚೆನ್ನಾಗಿ ಕಾಣುವುದಿಲ್ಲ.
* ಬಾತ್ ರೂಂ ಗೋಡೆಗಳಿಗೆ ಗ್ರಾನೈಟ್, ಸ್ಲೇಟ್ ಅಥವಾ ಸ್ಯಾಂಡ್ ಸ್ಟೋನ್ ಟೈಲ್ಸ್ ಗಳನ್ನು ಬಳಸಿದರೆ ನೋಡಲು ಆಕರ್ಷಕವಾಗಿರುತ್ತದೆ.
* ಗಾಢ ಬಣ್ಣದ ಟೈಲ್ಸ್ ಗಳು ಬಾತ್ ರೂಂ ಗೆ ಸೂಕ್ತ. ಬಾತ್ ರೂಂ ಕಳಾಹೀನವಾಗಿ ಕಾಣುವುದನ್ನು ಇದು ತಪ್ಪಿಸುತ್ತದೆ. ಕೊಳೆಯೂ ಎದ್ದು ಕಾಣುವುದಿಲ್ಲ.
* ಗೀರುಗಳು ಕಾಣದಂತಿರುವ ಮತ್ತು ಸ್ವಲ್ಪ ಗಡುಸಾದ ಟೈಲ್ ನಿಮ್ಮ ಬಾತ್ ರೂಂಗಿರಲಿ.
* ಗ್ಲಾಸ್ ಟೈಲ್ ಗಳು ಈಗಿನ ಫ್ಯಾಷನ್. ಆದರೆ ಇದನ್ನು ಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ತುಂಬಾ ಸೂಕ್ಷ್ಮ ಮತ್ತು ಅತಿ ಬೇಗನೆ ಒಡೆದುಹೋಗಬಹುದಾದ ಇದನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವಿದ್ದರೆ ಮಾತ್ರ ಕೊಂಡುಕೊಳ್ಳಿ.
* ಸೆರಾಮಿಕ್ ಟೈಲ್ ಗಳನ್ನು ಬಾತ್ ರೂಂಗೆ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಇದರಲ್ಲಿ ಧೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚು. ಒಮ್ಮೆ ಯೋಚಿಸಿ ಮುನ್ನಡೆದರೆ ಒಳಿತು.
ಮನೆ ಕಟ್ಟುವುದು ಒಂದು ಬಾರಿ. ಕಟ್ಟಿದ ಮೇಲೆ ಅದನ್ನು ಬದಲಾಯಿಸುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ಮೊದಲೇ ಆಯ್ಕೆಯಲ್ಲಿ ಎಚ್ಚರಿಕೆವಹಿಸಿ ಮುನ್ನಡೆದರೆ ಹಣವೂ ಉಳಿತಾಯ, ನೋಡಲೂ ಚೆಂದ ಮತ್ತು ದೀರ್ಘ ಬಾಳಿಕೆಯೂ ಇರುತ್ತದೆ.



Click it and Unblock the Notifications
