Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯು ಮನೋಹರವಾಗಿರಲು ಸೀಲಿಂಗ್ ಮೆರಗು
ಮನೆ ಎಂಬುದು ಮನುಷ್ಯರು ವಾಸಿಸುವ ಜಾಗ ಮಾತ್ರವಲ್ಲ. ಇದು ನಮ್ಮ ಜೀವ-ಜೀವನಕ್ಕೆ ರಕ್ಷಣೆ, ಆಧಾರ, ನೆಮ್ಮದಿ ಹಾಗೂ ಕುಟುಂಬ ಸಂರಕ್ಷಣೆಯ ಸಾಧನವೂ ಹೌದು. ಇದನ್ನು ಜೇನುಗೂಡು ಎಂದರೆ ಅತಿಶಯೋಕ್ತಿ ಅಲ್ಲ. ಜೇನುಗೂಡಿನಲ್ಲಿ ತಯಾರಾಗುವುದು ಅಮೂಲ್ಯವಾದ, ಸಿಹಿಯಾದ ಜೇನುತುಪ್ಪ. ಹಾಗೇ, ಮನೆಯಲ್ಲಿ ಸಿಗುವುದು ಜೀವನಕ್ಕೆ ಭದ್ರತೆ ಹಾಗೂ ನೆಮ್ಮದಿ.
ಮನೆಯ ಸೌಂದರ್ಯವೂ ನೆಮ್ಮದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯ ಸೌಂದರ್ಯದ ಅವಿಭಾಜ್ಯ ಅಂಗವೆನಿಸಿದೆ ಸೀಲಿಂಗ್. ಮನೆಯ ಅಂದ-ಚೆಂದಕ್ಕಾಗಿ ಸೀಲಿಂಗ್ ಮೆರಗು ಹೀಗಿರಲಿ

ಪ್ರತೀ ಮನೆಯ ಅಂದ-ಚೆಂದವೂ ಭಿನ್ನವಾಗಿರುತ್ತದೆ. ಅವುಗಳ ಛಾವಣಿಯ ಒಳಮುಖ ಭಿನ್ನವಾಗಿರುವುದೂ ಇದಕ್ಕೆ ಪ್ರಮುಖ ಕಾರಣ. ಸೀಲಿಂಗ್ ವಿಶೇಷವಾಗಿ ಮಾಡಿದ್ದರೆ ಮನೆಯ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಈ ಸೀಲಿಂಗ್ ಡಿಸೈನ್ ಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ...
1. ಡೋಮ್ ಸೀಲಿಂಗ್:
ಶತಮಾನಗಳಷ್ಟು ಹಳೆಯದಾದ ಈ ವಿನ್ಯಾಸ ಎತ್ತರದ ಕಟ್ಟಡಗಳಿಗೆ ಸೂಕ್ತ. ದೊಡ್ಡ ಹೊಟೇಲುಗಳು, ವೈಭವೋಪೇತ ಕಟ್ಟಡ/ ಬಂಗಲೆಗಳಲ್ಲಿ ಇದು ಸಾಮಾನ್ಯವಾಗಿ ಕಾಣಸಿಗುತ್ತದೆ. ನೋಡುಗರನ್ನು ಕೆಲ ಕ್ಷಣವಾದರೂ ಮಂತ್ರಮುಗ್ಧಗೊಳಿಸಬಲ್ಲ ಲುಕ್ ಹೊಂದಿರುವ ಈ ವಿನ್ಯಾಸ ಅನನ್ಯವಾದ ಫೀಲ್ ನೀಡುತ್ತದೆ.
2. ಕ್ಯಾಥೆಡ್ರಲ್ ಸೀಲಿಂಗ್:
ಪಾಶ್ಚಿಮಾತ್ಯ ದೇಶಗಳಲ್ಲಿ ಕೇವಲ ಚರ್ಚ್ ಗಳಲ್ಲಿ ಮಾತ್ರ ಕಾಣಸಿಗುವ ಈ ವಿನ್ಯಾಸ ಭಾರತದ ಕೆಲ ಕರಾವಳಿ ಪ್ರದೇಶದ ಹಳೆಯ ಮನೆಗಳಲ್ಲಿ ಕೂಡ ಕಾಣಸಿಗುತ್ತದೆ. ಈ ವಿನ್ಯಾಸವೂ ಎತ್ತರದ ಕಟ್ಟಡಗಳಿಗೇ ಹೆಚ್ಚು ಸೂಕ್ತ. ಹಳೆಯ-ಹೊಸ ವಾಸ್ತುಶಿಲ್ಪದ ಸಮ್ಮಿಶ್ರಣದಿಂದ ನಿರ್ಮಿಸಲಾಗಿರುವ ಕಟ್ಟಡಗಳಲ್ಲೂ ಇದರ ಬಳಕೆಯನ್ನು ಕಾಣಬಹುದು.
3. ಶೆಡ್ ಸೀಲಿಂಗ್:
ಇದು ಕ್ಯಾಥೆಡ್ರಲ್ ಸೀಲಿಂಗ್ ಮಾದರಿಯನ್ನು ಸಾಕಷ್ಟು ಹೋಲುತ್ತದೆಯಾದರೂ ಅದಕ್ಕಿಂತ ಸಾಕಷ್ಟು ವಿಭಿನ್ನ. ಒಂದು ಎತ್ತರದ ಹಾಗೂ ಇನ್ನೊಂದು ಗಿಡ್ಡ ಗೋಡೆಗಳ ಮಧ್ಯೆ ಈ ರೀತಿಯ ಛಾವಣಿ ಹರಡಿಕೊಳ್ಳುವುದರಿಂದ ಇದು ಇಳಿಜಾರು ಸ್ವರೂಪ ಪಡೆಯುತ್ತದೆ. ಅಟ್ಟಗಳನ್ನು ಕೋಣೆಗಳನ್ನಾಗಿ ಮಾಡುವಾಗ ಈ ಸೀಲಿಂಗ್ ಬಳಕೆ ವಿಶೇಷ ಲುಕ್ ಕೊಡುತ್ತದೆ.
4. ಟ್ರೇ ಸೀಲಿಂಗ್:
ಈ ಸೀಲಿಂಗ್ ವಿನ್ಯಾಸ ಇತ್ತೀಚಿನ ಮಧ್ಯಮವರ್ಗದ ಮನೆಗಳಲ್ಲಿ ಕಾಣಬಹುದು. ಚಹಾ, ಕಾಫಿ ವಿತರಿಸುವ ಟ್ರೇಗಳನ್ನು ತಲೆಕೆಳಗೆ ಮಾಡಿ ನೋಡಿದಾಗ ಕಾಣುವಂತೆ ಇರುವ ಈ ವಿನ್ಯಾಸವನ್ನು ಅದಕ್ಕಾಗಿಯೇ "ಟ್ರೇ ಸೀಲಿಂಗ್" ಎನ್ನುತ್ತಾರೆ. ಇದರ ಸುತ್ತಲಿನ ಚೌಕಟ್ಟನ್ನು 1 ರಿಂದ 3 ಹಂತಗಳಲ್ಲಿ ಮಾಡುತ್ತಾರೆ.
5. ಕಂನ್ವೆನ್ಷನಲ್ ಸೀಲಿಂಗ್:
ಇದು ಇತ್ತೀಚಿನ 'ಸ್ಟ್ಯಾಂಡರ್ಡ್' ವಿನ್ಯಾಸ ಎಂದೇ ಹೇಳಬಹುದು. ಮಧ್ಯಮ ವರ್ಗದ ಶೇ. 90 ರಷ್ಟು ಮನೆಗಳಲ್ಲಿ ಈಗ ಇದನ್ನು ಕಾಣಬಹುದು. ಇತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಇದು 8 ರಿಂದ 10 ಅಡಿ ಗೋಡೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಎತ್ತರ ಹೆಚ್ಚಿದ್ದರೂ ತೊಂದರೆಯೇನಿಲ್ಲ. 3 ರಿಂದ 5 ವರ್ಷಗಳ ಅವಧಿಯಲ್ಲಿ ಪೇಂಟಿಂಗ್ ಮಾಡಿಸಿದರೂ ಓಕೆ ಎನ್ನುವಂತಿರುವುದರಿಂದ ಇದು ಎಲ್ಲರಿಗೂ ಅಚ್ಚು-ಮೆಚ್ಚು.
6. ಟಂಗ್ & ಗ್ರೂವ್ ಸೀಲಿಂಗ್:
ಮರಗಳ ಛಾವಣಿಗೆ ಹೊಂದುವ ಈ ವಿನ್ಯಾಸ ಹಳೆ ಮನೆಗಳಲ್ಲಿ ಕಾಣಸಿಗುತ್ತದೆ. ಮರ ಅಥವಾ ಪ್ಲೈವುಡ್ ಉಪಯೋಗಿಸಿ ಕಟ್ಟಲಾಗುವ ಮನೆಗಳಲ್ಲಿ ಈ ವಿನ್ಯಾಸ ಅಳವಡಿಕೆ ಮಾಡಲಾಗುತ್ತದೆ.
7. ಸಸ್ಪೆಂಡೆಡ್ ಟೈಲ್ ಸೀಲಿಂಗ್
ಡ್ರಾಪ್ಡ್ ಅಥವಾ ಫಾಲ್ಸ್ ಸೀಲಿಂಗ್ ಎಂದೂ ಕರೆಯಲ್ಪಡುವ ಇದು ರಿಚ್ ಲುಕ್ ಹೊಂದಿದೆ. ಯಾವುದೇ ಸೀಲಿಂಗ್ ಡಿಸೈನ್ ಇಲ್ಲದಿದ್ದರೂ ಛಾವಣಿಗೆ ಹೊಂದಿಕೊಳ್ಳವ ಸಾಮರ್ಥ್ಯ ಇದಕ್ಕಿದೆ. ಹಳೆಮನೆಗಳಿಗೂ, ವೈರಿಂಗ್ ಗಳನ್ನು ಅಡಗಿಸುವ ಸಲುವಾಗಿಯೂ ಇದನ್ನು ಬಳಕೆ ಮಾಡಬಹುದು. ಹಿಡನ್ ಲೈಟ್ ಗಳನ್ನು ಅಳವಡಿಸಿದರೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.
8. ಕೋವ್ ಸೀಲಿಂಗ್
ಕಂನ್ವೆನ್ಷನಲ್ ಹಾಗೂ ಟ್ರೇ ಸೀಲಿಂಗ್ ಗಳ ಮಿಶ್ರಣವಾಗಿರುವ ಇದು ಎಲ್ಲಾ ರೀತಿ ಕೊಠಡಿ, ಕಡಿಮೆ ಎತ್ತರದ ಗೋಡೆಗಳಿಗೂ ಹೊಂದಿಕೊಳ್ಳುತ್ತದೆ. ಈ ವಿನ್ಯಾಸದಲ್ಲಿ ಒಮ್ಮೆ ಮಾಡಿದ್ದನ್ನು ಬದಲಾಯಿಸಲೂ ಅವಕಾಶ ಇದೆ. ಮನೆ ಎಂದರೆ ಕೇವಲ ನಾಲ್ಕು ಗೋಡೆ, ಮೇಲೊಂದು ಛಾವಣಿ ಅಲ್ಲ. ಹೊರ ನೋಟದಷ್ಟೇ ಒಳ ನೋಟವೂ ಮುಖ್ಯ. ಮನುಷ್ಯರು ವಾಸಿಸುವುದರಿಂದ ಮನೆ ಮನಸ್ಸಿಗೂ ಹಿತವೆನಿಸಬೇಕು. ಆಕಾರ, ಬಣ್ಣಗಳ ಜೊತೆಗೆ ಕಲಾತ್ಮಕ ಸ್ಪರ್ಶವೂ ಇದ್ದರೇನೇ ಚೆಂದ.



Click it and Unblock the Notifications
