Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಚಪಾತಿ, ರೊಟ್ಟಿಯನ್ನ ನೇರವಾಗಿ ಗ್ಯಾಸ್ ಉರಿಯಲ್ಲಿ ಬೇಯಿಸುತ್ತೀರಾ? ಅಪಾಯವೇನು ಗೊತ್ತಾ?
ಹಲವರು ಬೆಳಗ್ಗಿನ ತಿಂಡಿಗೆ ರೊಟ್ಟು ಇಲ್ಲವೆ ಚಪಾತಿ ಮಾಡುವುದು ಸಾಮಾನ್ಯ. ಆದ್ರೆ ಕೆಲವರ ಮನೆಯಲ್ಲಿ ನಾವು ರೊಟ್ಟಿ ಹಾಗೂ ಚಪಾತಿಯನ್ನ ಕಾವಲಿಯ ಮೇಲೆ ಬೇಯಿಸುವುದಿಲ್ಲ ಬದಲಿಗೆ ಅವರು ನೇರವಾಗಿ ಉರಿಯುತ್ತಿರುವ ಗ್ಯಾಸ್‌ನ ಬೆಂಕಿಯ ಮೇಲೆ ಹಿಡಿದು ಚೆನ್ನಾಗಿ ಕಾಯಿಸಿ ಬಳಿಕ ಸವಿಯುತ್ತಾರೆ. ಗ್ಯಾಸ್‌ನಲ್ಲಿ ಬೇಯಿಸಲೆಂದೇ ಚಿಕ್ಕದಾದ ಒಂದು ಜರಡಿ ರೀತಿಯ ವಸ್ತು ಸಹ ಸಿಗುತ್ತದೆ. ಅದರ ಮೇಲೆ ಇಟ್ಟು ನೇರವಾಗಿ ಗ್ಯಾಸ್‌ನಿಂದ ಬೇಯಿಸಲಾಗುತ್ತದೆ.
ಕೆಲವರು ಇದು ಸುಲಭದ ವಿಧಾನವೆಂದು ಮತ್ತೆ ಕೆಲವರು ಬೇಗ ಬೇಯಿಸಬಹುದು ಅಂತಲೂ ಈ ಕಾರ್ಯಕ್ಕೆ ಮುಂದಾಗುತ್ತಾರೆ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸವೇ? ಅಥವಾ ಕೆಟ್ಟ ಅಭ್ಯಾಸವೇ? ಹೀಗೆ ಮಾಡುವುದರಿಂದ ನಮ್ಮ ದೇಹದ ಮೇಲೆ ಏನಾದರು ಪರಿಣಾಮ ಬೀರಲಿದೆಯೇ ಎಂಬಿತ್ಯಾದಿ ಅಂಶವನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.

ನೇರವಾಗಿ ಗ್ಯಾಸ್‌ನ ಬೆಂಕಿಯಲ್ಲಿ ರೊಟ್ಟಿ, ಚಪಾತಿಯನ್ನು ಬೇಯಿಸುವುದು ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ಸಂಯುಕ್ತಗಳನ್ನು ಉತ್ಪಾದಿಸುತ್ತದೆ ಎಂಬ ಆತಂಕವಿದೆ. ರೊಟ್ಟಿಯು ಹೆಚ್ಚಿನ ತಾಪಮಾನಕ್ಕೆ ಒಳಪಟ್ಟಾಗ ಮತ್ತು ಪೈರೋಲಿಸಿಸ್ ಎಂಬ ಪ್ರಕ್ರಿಯೆಗೆ ಒಳಗಾದಾಗ ಈ ರಾಸಾಯನಿಕ ಸಂಯುಕ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಇದು ನಿಜವಾಗಿಯೂ ಕ್ಯಾನ್ಸರ್‌ಗೆ ಕಾರಣವಾಗಲಿದ್ಯಾ? ಎಂಬುದೇ ಪ್ರಶ್ನೆಯಾಗಿದೆ.
ಗ್ಯಾಸ್ ಮೇಲೆ ನೇರವಾಗಿ ರೊಟ್ಟಿ ಅಥವಾ ಚಪಾತಿಯನ್ನು ಬೇಯಿಸುವುದು ಕೆಲವು ರಾಸಾಯನಿಕಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗಬಹುದು. ಕ್ಯಾನ್ಸರ್ ಸಂಶೋಧನೆಗಾಗಿ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ (IARC) ಸಂಭಾವ್ಯ ಮಾನವ ಕಾರ್ಸಿನೋಜೆನ್ ಎಂದು ಗೊತ್ತುಪಡಿಸಿದ ರಾಸಾಯನಿಕ ಅಣು. ಅಕ್ರಿಲಾಮೈಡ್ ಹೆಚ್ಚಾಗಿ ಗೋಧಿಯಲ್ಲಿ ಕಂಡುಬರುತ್ತದೆ. ಈ ಗೋಧಿಯಲ್ಲಿ ನಾವು ರೊಟ್ಟಿ, ಚಪಾತಿ ಮಾಡುತ್ತೇವೆ. ಇದು ಕ್ಯಾನ್ಸರ್ ಕೋಶಗಳ ಅಭಿವೃದ್ಧಿಗೆ ಕಾರಣವಾಗುವ ಡಿಎನ್‌ಎ ಬದಲಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸುವುದು ಅಕ್ರಿಲಾಮೈಡ್ ಜೊತೆಗೆ ಹೆಟೆರೋಸೈಕ್ಲಿಕ್ ಅಮೈನ್‌ಗಳು (HCAs) ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳನ್ನು (PAHs) ಉತ್ಪಾದಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೇರವಾಗಿ ಬೆಂಕಿಯಿಂದ ಯಾವುದಾದರು ಆಹಾರವನ್ನು ಬಿಸಿ ಮಾಡಿದಾಗ ಈ ರೀತಿಯ ರಾಸಾಯನಿಕ ಪ್ರಕ್ರಿಯೆ ಬದಲಾವಣೆಗೆ ಕಾರಣವಾಗುತ್ತದೆ.
PAH ಗಳು ಮತ್ತು HCA ಗಳು ಎರಡೂ ಮ್ಯುಟಾಜೆನಿಕ್ ಎಂದು ಸಾಬೀತಾಗಿದೆ, ಅಂದರೆ ಅವರು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರೀತಿಯಲ್ಲಿ DNA ಯನ್ನು ಬದಲಾಯಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇರಲಿದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?
ಸಣ್ಣ ಉರಿಯಲ್ಲಿ ಬೇಯಿಸುವುದು: ರೊಟ್ಟಿ, ಚಪಾತಿಯನ್ನು ಮಧ್ಯಮ ಉರಿಗಿಂತಲೂ ಕಡಿಮೆ ಉರಿಯಲ್ಲಿ ಬೇಯಿಸಿದರೆ ಈ ಅಪಾಯ ಕಡಿಮೆ ಮಾಡಬಹುದು. ಅದರಲ್ಲೂ ಒಂದೇ ಕಡೆ ಕಾಯಿಸಿ ಕರಿಯುವಂತೆ ಮಾಡಬರದು. ಇದಕ್ಕಿಂತ ಕಾವಲಿಯಲ್ಲಿ ಹಾಕಿ ಬೇಯಿಸುವುದು ಉತ್ತಮ ಅಭ್ಯಾಸವಾಗಿದೆ.
ಬೇಯಿಸದೆ ಸವಿಯಬಹುಯದಾದ ಹಣ್ಣುಗಳು, ಪಾತ್ರೆಗಳ ಮೂಲಕ ಅಥವಾ ಹಬೆಯಲ್ಲಿ ಬೇಯಿಸಿದ ಆಹಾರ ಸೇವನೆ ಮಾಡುವುದು ಬಹಳ ಉತ್ತಮ. ಹಾಗೆ ಬೇಯಿಸಿ ಸವಿಯುವ ಆಹಾರಗಳು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ.



Click it and Unblock the Notifications