Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಈ ಮೂರು ವಿಡಿಯೋ ನೋಡಿದ್ರೆ ಅಡುಗೆ ಮಾಡೋದು ಸುಲಭ..!
ಮನೆಯಲ್ಲಿ ಅಡುಗೆ ಮಾಡೋದು ಒಂದು ದಿನದ ಕೆಲಸವಿದ್ದಂತೆ. ಹೀಗಾಗಿ ಗೃಹಿಣಿಯರಿಗೆ ಅಡುಗೆ ಮನೆ ಎಂದರೆ ಪ್ರಾಣ, ದಿನದ ಬಹುತೇಕ ಸಮಯ ಅವರು ಅಡುಗೆ ಮನೆಯಲ್ಲಿ ಕಳೆಯುತ್ತಾರೆ, ಹೀಗಾಗಿ ಅವರು ಅಡುಗೆ ಮನೆಯ ಯಜಮಾನರು. ಅಡುಗೆ ಮನೆಯಲ್ಲಿ ಬೇರೆ ಯಾರಿಗೂ ಸಿಗದ ವಸ್ತುಗಳು ಅವರಿಗೆ ಮಾತ್ರ ಸಿಗುತ್ತವೆ. ಹೀಗಾಗಿ ಅಡುಗೆ ಮನೆಗೆ ಅವರೇ ರಾಣಿಯರು.
ಆದ್ರೆ ಕೆಲವು ಬಾರಿ ಗಡಿಬಿಡಿಯ ಸಮಯದಲ್ಲಿ ಅಡುಗೆ ಮನೆ ಜೀವ ತಿನ್ನುವ ಬಲೆಯಾಗಿ ಕಾಣಿಸುತ್ತವೆ. ಯಾಕಂದ್ರೆ ಕೆಲವರಿಗೆ ಅಡುಗೆ ಮನೆಯಲ್ಲಿ ಇಡೀ ದಿನ ಕಳೆಯಬೇಕಾದ ಅನಿವಾರ್ಯತೆ ಎದುರಾಗುತ್ತೆ. ಸರಿಯಾದ ತಯಾರಿ ಇಲ್ಲದಿದ್ದರೆ ನಮ್ಮ ಮನೆಯ ಅಡುಗೆ ಮನೆಯೇ ಹೊಸ ಜಾಗದಂತೆ ಭಾಸವಾಗುತ್ತೆ.

ಅಡುಗೆ ಮಾಡೋದು ಅಂದ್ರೆ ಕೆಲವರಿಗೆ ಸಂತೋಷದಾಯಕ ಕೆಲಸ, ಆದ್ರೆ ಅಡುಗೆಗೆ ಬೇಕಾದ ವಸ್ತುಗಳು ತಕ್ಷಣಕ್ಕೆ ಸಿಗದಿದ್ದರೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳು ಇಲ್ಲದಿದ್ದರೆ ಅದು ಜಟಿಲವಾಗುತ್ತದೆ. ಸಿಟ್ಟು, ಕೋಪ ತರಿಸುತ್ತದೆ. ನೀವು ಯಾವಾಗಲೂ ಅಡುಗೆ ಸಮಯವನ್ನು ಉಳಿಸುವ ಮಾರ್ಗಗಳಿಗಾಗಿ ಮತ್ತು ಅದರ ಹಿಂದಿನ ಎಲ್ಲಾ ಪೂರ್ವಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದರೆ ಇಂದು ನಾವು ಇಂತಹ ಕೆಲವು ಟ್ರಿಕ್ಸ್ ನಿಮಗೆ ಹೇಳಲಿದ್ದೇವೆ.
ಸೆಕೆಂಡ್‌ನಲ್ಲಿ ಈರುಳ್ಳಿ ಕತ್ತರಿಸೋದು
ನಿತ್ಯದ ಅಡುಗೆಗೆ ಈರುಳ್ಳಿ ಬಹಳ ಮುಖ್ಯ ವಸ್ತು, ಆದ್ರೆ ಕೆಲವರು ಈರುಳ್ಳಿ ಕತ್ತರಿಸೋಕೆ ನಿಮಿಷಗಳ ಕಾಲ ಸಮಯ ತೆಗೆದುಕೊಳ್ಳುತ್ತಾರೆ. ಅಡುಗೆಮನೆಯಲ್ಲಿ ಅತ್ಯಂತ ತೊಡಕಿನ ಕೆಲಸಗಳಲ್ಲಿ ಇದು ಸಹ ಒಂದಾಗಿದೆ.ಮೆಲಾನಿ ಲಿಯೊನೆಲ್ಲೊ ತನ್ನ ಇನ್ಸ್‌ಸ್ಟಾಗ್ರಾಮ್ ಹ್ಯಾಂಡಲ್ @frommylittlekitchen ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಆಕೆ ಸೆಕೆಂಡ್‌ನಲ್ಲಿ ಸಿಪ್ಪೆ ತೆಗೆದು ಈರುಳ್ಳಿ ಕತ್ತರಿಸುವುದು ಹೇಘೆ ಎಂಬುದನ್ನು ವಿವರಿಸಿದ್ದಾಳೆ. ಈ ವಿಡಿಯೋ ಕೆಳಗೆ ನೀಡಲಾಗಿದೆ ನೋಡಿ.
ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸೋದು
ಬೆಳ್ಳುಳ್ಳಿ ಸಿಪ್ಪೆ ಬಿಡಿಸೋದು ಅಡುಗೆ ಮಾಡುವಾಗ ಸಮಯ ಬಹಳ ಬೇಕು ಎನ್ನುವುದು ಹಲವರ ದೂರು. ಆದ್ರೆ ಈ ರೀತಿ ಮಾಡಿದರೆ ತಕ್ಷಣವೇ ಬೆಳ್ಳುಳ್ಳಿ ಸಿಪ್ಪೆ ಸುಲಿಯಬಹುದು. ಕೆಲವೇ ಸೆಕೆಂಡುಗಳಲ್ಲಿ ಇಡೀ ಬೆಳ್ಳುಳ್ಳಿ ಬಲ್ಬ್ ಅನ್ನು ಸಲೀಸಾಗಿ ಸಿಪ್ಪೆ ತೆಗೆಯುವ ಹ್ಯಾಕ್ ಮಾಡೋದು ಹೇಗೆ? ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಗ್ರೈಂಡ್ ಮಾಡಿದರೆ ಸಾಕು. ಬಳಿಕ ಒಂದು ಪ್ಲಾಸ್ಟಿಕ್ ಕವರ್ ಒಳಗೆ ಹಾಕಿ ಕೈಯಿಂದ ಪುಡಿ ಮಾಡಿದರೆ ಬೆಳ್ಳುಳ್ಳಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಇದರ ವಿಡಿಯೋ ಇಲ್ಲಿದೆ ನೋಡಿ.
ದಾಳಿಂಬೆ ಸುಲಭವಾಗಿ ಬಿಡಿಸುವುದು ಹೇಗೆ?
ದಾಳಿಂಬೆಯನ್ನು ಕತ್ತರಿಸುವ ಆಲೋಚನೆಯು ನಮಗೆ ಕೆಲವೊಮ್ಮೆ ಸಿಟ್ಟು ತರಿಸಬಹುದು. ಬೀಜಗಳನ್ನು ಹೊರತೆಗೆಯಲು ಸಮಯ ಮತ್ತು ಶ್ರಮವು ತುಂಬಾ ಕಷ್ಟವಾಗುತ್ತದೆ. ಕೆಲವೊಮ್ಮೆ ಈ ಪ್ರಕ್ರಿಯೆಯಲ್ಲಿ ರಸವೆಲ್ಲಾ ಕೆಳಗೆ ಚೆಲ್ಲಿ ಹಣ್ಣು ಹಾಳಾಗುತ್ತದೆ. ಆದರೆ 1 ನಿಮಿಷದ ಒಳಗೆ ದಾಳಿಂಬೆ ಬಿಡಿಸುವುದು ಹೇಗೆ ಎಂಬುದನ್ನು ಈ ಕೆಳಗಿನ ವಿಡಿಯೋ ನೋಡಿ.



Click it and Unblock the Notifications
