Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪೂಜಾ ಸಾಮಗ್ರಿ 1 ನಿಮಿಷದಲ್ಲಿ ಹೊಳೆಯುವಂತೆ ಮಾಡಿ..! ಇಲ್ಲಿದೆ ಸಿಂಪಲ್ ಟ್ರಿಕ್ಸ್!!
ದೀಪಾವಳಿ ಹಬ್ಬ ಆಗಮಿಸುತ್ತಿದೆ. ಹಬ್ಬದಲ್ಲಿ ನಿತ್ಯ ಪೂಜೆ, ಸಡಗರ, ಪಟಾಕಿ ಎಲ್ಲವೂ ಇದ್ದೇ ಇರುತ್ತೆ. ಹಬ್ಬ ಅಂದರೆ ಅಲ್ಲಿ ಪೂಜೆಗೆ ಮೊದಲ ಪ್ರಾಶಸ್ತ್ರ್ಯ ನೀಡಲಾಗಿರುತ್ತದೆ. ಪೂಜೆಯಲ್ಲಿ ಹಲವು ಸಂಪ್ರದಾಯಗಳು, ನಿಯಮಗಳನ್ನು ಅನುಸರಿಸುತ್ತಾರೆ. ಪೂಜೆಗೆ ಹಿಂದೂ ಧರ್ಮದಲ್ಲಿ ಅಷ್ಟೊಂದು ಮಹತ್ವವೂ ಇದೆ. ಹಾಗೆ ಮನೆಯಲ್ಲಿ ಹಬ್ಬವಿರಲಿ ಇಲ್ಲದೆ ಇರಲಿ ಪೂಜಾ ಕೊಠಡಿಯನ್ನ ಶುಚಿ ಮಾಡುವುದು ನಾವು ನೋಡಿರುತ್ತೇವೆ.
ಹಾಗೆ ಪೂಜೆಗೂ ಮುನ್ನ ಮನೆ ಸ್ವಚ್ಛ ಮಾಡುವುದು, ಪೂಜಾ ಕೊಠಡಿಯನ್ನು ಕ್ಲೀನ್ ಮಾಡುವುದು ಹಾಗೆ ಪೂಜಾ ವಸ್ತುಗಳನ್ನು ಕೂಡ ಸ್ವಚ್ಛ ಮಾಡುತ್ತಾರೆ. ಏಕೆಂದರೆ ಸುಚಿಯಾದ ವಸ್ತುಗಳು, ಕೊಠಡಿ, ಮನೆಯಲ್ಲಿ ಮಾತ್ರವೇ ಲಕ್ಷ್ಮಿ ದೇವಿ ನೆಲಸುತ್ತಾಳೆ ಎಂದು ನಂಬಲಾಗುತ್ತದೆ. ಆಧ್ರೆ ಪೂಜೆಯ ದಿನದಲ್ಲಿ ಎಷ್ಟು ಕೆಲಸ ಮಾಡಿದರೂ ಮುಗಿಯುವುದೇ ಇಲ್ಲ. ಆದ್ರೆ ಪೂಜಾ ಸಾಮಾಗ್ರಿಗಳನ್ನು ಕ್ಲೀನ್ ಮಾಡಲೇಬೇಕಿರುತ್ತದೆ.

ಹಾಗಾದ್ರೆ ನಾವಿಂದು ಸುಲಭವಾಗಿ ನಿಮಿಷದಲ್ಲಿ ಪೂಜಾ ಕೊಠಡಿಯ ಎಲ್ಲಾ ವಸ್ತುಗಳನ್ನು ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಅದ್ರಲ್ಲೂ ಹಿತ್ತಾಳೆ, ತಾಮ್ರದ ಪಾತ್ರೆಗಳು ಹೆಚ್ಚಾಗಿ ಪೂಜೆಗೆ ಬಳಸಲಾಗುತ್ತದೆ. ಈ ತಾಮ್ರದ ವಸ್ತುಗಳು ಬಹುಬೇಗ ಕಲೆಗಳಾಗಿ ಬದಲಾಗುತ್ತದೆ. ಏಕೆಂದರೆ ತಾಮ್ರದೊಂದಿಗೆ ಹಲವು ವಸ್ತುಗಳು ಬೆರೆತು ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಕಲೆಗಳಾಗುತ್ತವೆ.
ಆದ್ರೆ ಈ ತಾಮ್ರದ ವಸ್ತುಗಳನ್ನು ಶುದ್ಧ ಮಾಡಲು ನಾವು ಹಲವು ವಸ್ತುಗಳ ಬಳಸುತ್ತೇವೆ. ಅದರಲ್ಲಿ ಹೆಚ್ಚಾಗಿ ಪೀತಾಂಬರ ಪುಡಿ ಬಳಸುವುದು ಹೆಚ್ಚು. ಆದ್ರೆ ನಾವಿಂದು ಹೊಸ ವಿಧಾನದಲ್ಲಿ ಕೆಲವೇ ನಿಮಿಷದಲ್ಲಿ ಪೂಜಾ ಸಾಮಗ್ರಿಗಳ ಸ್ವಚ್ಛ ಮಾಡುವ ಕುರಿತು ತಿಳಿಯೋಣ.
ಮೊದಲು ಒಂದು ಸಣ್ಣ ಬೌಲ್ ತೆಗೆದುಕೊಳ್ಳಿ. ಇದಕ್ಕೆ ಅಂಗಡಿಯಿಂದ ತಂದಿರುವ ಸೈಟ್ರಿಕ್ ಆಸಿಡ್ ಹಾಕಿಕೊಳ್ಳಿ. ಕಿರಾಣಿ ಅಂಗಡಿಗಳಲ್ಲಿ ಈ ಪುಡಿ ಸಿಗುತ್ತದೆ. ಇದರಲ್ಲಿ ನಿಂಬೆಯ ಅಂಶವಿರುತ್ತೆ. ಹೆಚ್ಚಿನದಾಗಿ ಪೂಜಾ ಸಾಮಗ್ರಿ ಕ್ಲೀನ್ ಮಾಡುವ ವಸ್ತುಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಪುಡಿ ಒಂದು ಸ್ಪೂನ್ ಹಾಕೊಕೊಂಡು ಅದಕ್ಕೆ ಅರ್ಧ ನಿಂಬೆ ರಸ ಹಿಂಡಿಕೊಳ್ಳಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈಗ ಸೈಟ್ರಿಕ್ ಆಸಿಡ್ ನಿಂಬೆ ರಸದೊಂದಿಗೆ ಬೆರೆತುಕೊಳ್ಳುತ್ತದೆ. ನಂತರ ಇದಕ್ಕೆ ಅರ್ಧ ಚಮಚ ಉಪ್ಪು, 3 ಚಮಚ ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಇಷ್ಟಾದರೆ ಮಿಶ್ರಣ ರೆಡಿಯಾಗುತ್ತದೆ.
ನಂತರ ಈ ಮಿಶ್ರಣವನ್ನು ನೀವು ಕ್ಲೀನ್ ಮಾಡಬೇಕಾದ ಪಾತ್ರೆಯ ಮೇಲೆ ಹಾಕಿಕೊಂಡು ಒಮ್ಮೆ ಉಜ್ಜಿದರೆ ಹೊಳಯುವಂತೆ ಆಗುತ್ತದೆ. ಕೈಯಿಂದಲೇ ಸ್ವಚ್ಛ ಮಾಡಬಹುದು. ನೀವು ಎಷ್ಟು ಪಾತ್ರೆಯನ್ನಾದರು ಈ ಮಿಶ್ರಣದಿಂದ ತೊಳೆದುಕೊಳ್ಳಬಹುದು. ಒಮ್ಮೆ ಈ ಮಿಶ್ರಣದಿಂದ ತೊಳೆದ ಬಳಿಕ ನಂತರದಲ್ಲಿ ಸಾಮಾನ್ಯ ಸೋಪಿನ ಪುಡಿಯಿಂದ ಒಮ್ಮೆ ತೊಳೆದುಕೊಳ್ಳಿ.
ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ. ತೊಳೆದ ನಂತರ ನೀರು ಒಣಗುವಂತೆ ಮಾಡಬೇಕು. ಯಾವುದಾದರು ಕಾಟನ್ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಹೊಳೆಯುವ ಪೂಜಾ ಸಾಮಗ್ರಿಗಳು ನಿಮ್ಮ ಮುಂದೆ ಇರುತ್ತವೆ. ಆದ್ರೆ ಈ ಮಿಶ್ರಣವನ್ನ ನೀವು ಇಟ್ಟು ಮುಂದೆ ಮತ್ತೆ ಬಳಸಬೇಡಿ, ಯಾವಾಗ ಪಾತ್ರೆ ಸ್ವಚ್ಚ ಮಾಡಲು ಮುಂದಾಗುತ್ತೀರೋ ಆಗಲೇ ಮಿಶ್ರಣ ರೆಡಿ ಮಾಡಿಕೊಳ್ಳಿ.



Click it and Unblock the Notifications
