Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಟಲಿಗೆ ಎಣ್ಣೆ ಹಾಕೋದ್ರಿಂದ ಹಿಡಿದು ದಿಂಬು ಕ್ಲೀನ್ ಮಾಡೋ ಈ ಟ್ರಿಕ್ಸ್ ಗೊತ್ತಾ?
ಮನೆಯ ಕೆಲಸ ಮಾಡುವಾಗ ನಮಗೆ ಒಂದಿಷ್ಟು ಟ್ರಿಕ್ಸ್‌ಗಳು ತಿಳಿದಿದ್ದರೆ ಆ ಕೆಲಸಗಳು ಸುಲಭವಾಗಿ ಕಡಿಮೆ ಸಮಯದಲ್ಲಿ ಮುಗಿದುಬಿಡುತ್ತವೆ. ಹಾಗೆ ಆ ಕೆಲಸದಿಂದ ಮತ್ತೊಂದು ಕೆಲಸ ಸೃಷ್ಟಿಯಾಗೋದಿಲ್ಲ. ಗೃಹಿಣಿಯರು ನಿತ್ಯವು ಕಲವೊಂದು ಕೆಲಸಗಳ ಮಾಡುವಾಗ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಕೆಲವೊಂದು ಟ್ರಿಕ್ಸ್ ಗಳು ಅವರ ಸಹಾಯಕ್ಕೆ ಬರಲಿದೆ.
ಅಂತಹ ಕೆಲವು ಟ್ರಿಕ್ಸ್‌ಗಳನ್ನು ತಿಳಿದುಕೊಂಡರೆ ಎಂತಹ ಕೆಲಸವನ್ನಾದರು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು. ಅದ್ರಲ್ಲೂ ನಾವಿಂದು ನಿತ್ಯ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಮಾಡಬಹುದಾದ ಕಷ್ಟಕರವಾದ ಕೆಲಸವನ್ನು ಕಡಿಮೆ ಮಾಡುವುದು ಹೇಗೆ? ಎಂಬ ಕುರಿತು ಇಲ್ಲಿ ತಿಳಿಸುವ ಪ್ರಯತ್ನ ಮಾಡಲಿದ್ದೇವೆ.

ಮೊದಲಿಗೆ ನಾವು ಅಡುಗೆ ಮನೆಯಲ್ಲಿ ಮಾಡುವ ಕೆಲವು ಕೆಲಸಗಳು ಸಮಯ ಹಾಳು ಮಾಡುತ್ತಿರುತ್ತವೆ. ಮತ್ತೆ ಕೆಲವು ಗಡಿಬಿಡಿಯಲ್ಲಿ ಮಾಡುವಾಗ ಮತ್ತೊಂದು ಕೆಲಸಕ್ಕೆ ದಾರಿಯಾಗುತ್ತದೆ. ಇಂತಹ ಕೆಲಸದಲ್ಲಿ ಒಂದು ಅಂದ್ರರೆ ಅದು ಬಾಟಲಿಗಳಿಗೆ ಎಣ್ಣೆ ಹಾಕುವುದು.
ಬಾಟಲಿಗೆ ಎಣ್ಣೆ ಹಾಕಲು ತೆಂಗಿನ ಚಿಪ್ಪು ಸಾಕು
ಮನೆಯಲ್ಲಿ ಬಳಸುವ ಹಲವು ರೀತಿಯ ಎಣ್ಣೆಗಳನ್ನು ಬಾಟಲಿಗಳಿಗೆ ಹಾಕುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಏಕೆಂದರೆ ಹೀಗೆ ಎಣ್ಣೆಯನ್ನು ಬಾಟಲಿಗಳಿಗೆ ತುಂಬಿಸುವಾಗ ಹನಿಯಾದರು ಕೆಳಗೆ ಬೀಳದೆ ಇರದು. ಹೀಗೆ ಕೆಳಗೆ ಬಿದ್ದ ಎಣ್ಣೆಯನ್ನು ಮತ್ತೆ ಒರೆಸಬೇಕಾಗುತ್ತದೆ. ಇದು ಕೂಡ ಒಂದು ಕೆಲಸವಾಗುತ್ತದೆ. ಆದ್ರೆ ಒಂದು ತೆಂಗಿನ ಚಿಪ್ಪು ನಿಮ್ಮ ಬಳಿ ಇದ್ದರೆ ಸುಲಭವಾಗಿ ಎಣ್ಣೆಯನ್ನ ಬಾಟಲಿಗೆ ಹಾಕಬಹುದು. ಅಡುಗೆಗೆ ಬಳಸಿರುವ ತೆಂಗಿನ ಚಿಪ್ಪನ್ನು ಮಧ್ಯದಲ್ಲಿ ಒಂದು ತೂತು ಮಾಡಿಟ್ಟು ಆ ತೂತಿನ ಮೂಲಕ ಎಣ್ಣೆಯನ್ನು ಎಷ್ಟು ಸಣ್ಣ ಬಾಟಲಿಗೆ ಬೇಕಾದರು ಸುಲಭವಾಗಿ ವರ್ಗಾಯಿಸಬಹುದು. ತೆಂಗಿನ ಚಿಪ್ಪನ್ನು ತೂತು ಮಾಡುವುದು ಕೂಡ ತುಂಬಾನೆ ಸುಲಭ. ಇಗಾಗಲೆ ಚಿಪ್ಪಿನಲ್ಲಿರುವ ಕಣ್ಣಿನ ಭಾಗಕ್ಕೆ ಕತ್ತಿಯಿಂದ ಹೊಡೆದರೆ ಸಣ್ಣದಾಗಿ ತೂತಾಗುತ್ತದೆ. ಸುಲಭವಾಗಿ ಇದನ್ನು ಬಳಸಿ ನೀವು ಎಣ್ಣೆಯನ್ನು ಬಾಟಲಿಗಳಿಗೆ ತುಂಬಿಸಬಹುದು.
ಇದೊಂದೆ ಅಲ್ಲ ಗೃಹಿಣಿಯರಿಗೆ ಕಾಡುವ ಮತ್ತೊಂದು ಸಮಸ್ಯೆ ಅಂದ್ರೆ ಅದು ಮನೆಯಲ್ಲಿರುವ ದಿಂಬಿಗೆ ಹಾಕಿರುವ ಕವರ್ ಕೊಳೆಯಾಗಿರುವುದು. ಎಲ್ಲಾ ದಿಂಬುಗಳು ಸೋಫಾ ಮೇಲಿನ ಕವರ್‌ಗಳು ಕಲೆಯಾಗಿರುತ್ತೆ. ಹಾಗಾದಗ್ರೆ ಇದನ್ನು ಸ್ವಚ್ಛ ಮಾಡುವ ಟ್ರಿಕ್ಸ್ ಏನು ಗೊತ್ತಾ?
ದಿಂಬಿನ ಕವರ್ ಕ್ಲೀನ್ ಮಾಡಿ
ದಿಂಬುಗಳ ಕವರ್ ಮಾತ್ರವಲ್ಲ ದಿಂಬು ಕೂಡ ಮತ್ತೆಂದು ಬಳಸಲಾಗದಷ್ಟು ಕೊಳೆಯಾಗಿರುತ್ತದೆ. ಹಾಗೆ ಅದರ ಮೃದುತ್ವ ಹೊರಟು ಹೋಗಿ ಒರಟಾಗುವುದು ಕೂಡ ಒಂದು ಸಮಸ್ಯೆಯೇ ಆಗಿದೆ. ಹೀಗಿರುವಾಗ ನಾವು ಇದಕ್ಕೆ ಮನೆಯಲ್ಲೇ ಒಂದು ಸೀಕ್ರೆಟ್ ಕ್ಲೀನಿಂಗ್ ಲಿಕ್ವಿಡ್ ತಯಾರಿಸೋಣ. ಒಂದು ಬೌಲ್‌ಗೆ ಸ್ವಲ್ಪ ಟೂತ್ ಪೇಸ್ಟ್, ಒಂದು ಶಾಂಪೂ, ಸೋಡಾ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಬಿಟ್ಟುಬಿಡಿ. 5 ನಿಮಿಷ ಬಿಟ್ಟು ಈ ದ್ರಾವಣವನ್ನು ಒಂದು ಬಟ್ಟೆಗೆ ಅದ್ದಿಕೊಂಡು ದಿಂಬಿನ ಮೇಲೆ ಒರೆಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಅದರ ಮೇಲಿನ ಕಲೆಗಳು ದೂರಾಗುತ್ತದೆ. ನಂತರ ಈ ದಿಂಬುಗಳನ್ನು ಬಿಸಿಲಿನಲ್ಲಿ ಇಡಬೇಕು. ಇದು ಹತ್ತಿಗೆ ಮತ್ತೆ ಮೃದುತ್ವ ನೀಡುತ್ತದೆ.
ಇನ್ನು ಈ ದಿಂಬಿನ ಕವರ್‌ಗಳಂತೂ ಮತ್ತಷ್ಟು ಕಲೆಯಾಗಿರುತ್ತದೆ. ಇದನ್ನು ನೀವು ಸೋಪಿನ ಪೌಡರ್ ಹಾಕಿ ನೆನೆಸಿಟ್ಟು ತೊಳೆದರೆ ಕಲೆಗಳು ಬಿಡುತ್ತದೆ. ಆದ್ರೆ ಹಿಂದಿನ ದಿನ ರಾತ್ರಿ ಒಂದು ಟಬ್‌ನಿಗೆ ನೀರು, ಸೋಪಿನ ಪುಡಿ, ಸ್ವಲ್ಪ ಲಿಕ್ವಿಡ್ ಕ್ಲೀನರ್ ಹಾಕಿ ಬಿಟ್ಟರೆ ಬೆಳಗ್ಗೆ ಕಷ್ಟವೇ ಪಡದಂತೆ ತೊಳೆಯಬಹುದು, ಡ್ರೈ ಕ್ಲೀನ್‌ಗೆ ನೀಡಿದಂತೆ ಇದು ಕ್ಲೀನ್ ಆಗುತ್ತದೆ.



Click it and Unblock the Notifications