Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಬ್ಯುಸಿನೆಸ್ ಐಡಿಯಾಗಳು: ಕಡಿಮೆ ಬಂಡವಾಳ ಸಾಕು!
ಇತ್ತೀಚಿಗೆ ಮನೆ ನಿರ್ವಹಣೆಗೆ ಎಷ್ಟು ಹಣ ದುಡಿದರು ಸಾಕಾಗುತ್ತಿಲ್ಲ ಎಂಬ ದೂರುಗಳು ಕೇಳುವುದು ಸಾಮಾನ್ಯ. ಮನೆ ಮಂದಿಯಲ್ಲರು ಹಣ ಗಳಿಸಿದರೂ ಸಹ ಮನೆ ನಿರ್ವಹಣೆ ಕಷ್ಟವಾಗುತ್ತದೆ. ಹಾಗೆ ಕೆಲಸದ ಜೊತೆಗೆ ಒಂದು ದೊಡ್ಡ ಆದಾಯದೊಂದಿಗೆ ಮತ್ತೊಂದು ಸಣ್ಣ ಆದಾಯವನ್ನು ಹುಡುಕುವುದು ಸಹ ನೋಡಬಹುದು. ಅದ್ರಲ್ಲೂ ಮನೆಯಲ್ಲಿಯೇ ಕುಳಿತು ಕೆಲವರು ಮನೆ ನಿರ್ವಹಣೆಗೆ ಹಣ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ.
ಮನೆ ನಿರ್ವಹಣೆಗಾಗಿ ಮಹಿಳೆಯರು ಹಲವು ರೀತಿಯ ವ್ಯವಹಾರಗಳ ನಡೆಸುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಮಾಡುವ ವ್ಯವಹಾರಗಳು ದೊಡ್ಡ ಲಾಭ ತರದೇ ಇದ್ದರೂ ಮನೆಯ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಹಾಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗುತ್ತದೆ. ಹಾಗೆ ಕೆಲವೊಂದು ಸುಲಭದ ಬ್ಯುಸಿನೆಸ್ ಐಡಿಯಾಗಳು ಅವರ ಬದುಕನ್ನೇ ಬದಲಾಯಿಸಬಹುದು.

ಹಾಗಾದ್ರೆ ನಾವಿಂದು ಮನೆಯಲ್ಲೇ ಕುಳಿತು ಮಹಿಳೆಯರು ಯಾವೆಲ್ಲಾ ವ್ಯವಹಾರ ನಡೆಸಬಹುದು. ಸ್ವಂತ ಉದ್ಯೋಗ ಕಟ್ಟಿಕೊಳ್ಳಬಹುದು, ಅದರಿಂದ ಒಂದಿಷ್ಟು ಹಣ ಸಂಪಾದನೆಯ ಮಾರ್ಗವೂ ತೆರೆದುಕೊಳ್ಳಲಿದೆ.
ಮೇಣದ ಬತ್ತಿ ತಯಾರಿಕೆ
ಮಹಿಳೆಯರು ಮನೆಯಲ್ಲಿ ಬಿಡುವಿನ ವೇಳೆ ಮೇಣದ ಬತ್ತಿ ತಯಾರಿಕೆಯಂತಹ ಕೆಲಸದಲ್ಲಿ ಭಾಗಿಯಾಗಬಹುದು. ಇದಕ್ಕೆ ಕಡಿಮೆ ಹಣ ಹೂಡಿಕೆ ಮಾಡಿದರೆ ಸಾಕಾಗುತ್ತದೆ. ಮಾರುಕಟ್ಟೆಯಿಂದ ಮೇಣದ ಅಚ್ಚು ಖರೀದಿಸಿದರೆ ಸಾಕಾಗುತ್ತದೆ. ಅದಕ್ಕೆ ಬೇಗಾಗುವ ಕಚ್ಚಾ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತದೆ. ಅದ್ರಲ್ಲೂ ಸೆಂಟೆಡ್ ಅಥವಾ ಸುಗಂಧ ಭರಿತ ಮೇಣದ ಬತ್ತಿಗೆ ಈಗ ಬಹಳಷ್ಟು ಬೇಡಿಕೆ ಇದೆ. ಈ ಕುರಿತಾಗಿ ಹಲವು ಕಡೆ ತರಬೇತಿ ಸಹ ನೀಡುತ್ತಾರೆ. ಅಷ್ಟೇ ಅಲ್ಲ ಯೂಟ್ಯೂಬ್ ನೋಡಿಯೂ ಸಹ ನೀವು ಈ ಹೊಸ ವ್ಯವಹಾರ ಆರಂಭಿಸಬಹುದು.
ಮರುಬಳಕೆ ಬ್ಯಾಗ್
ಮಾರುಕಟ್ಟೆಯಲ್ಲಿ ಈಗ ಈ ಮರುಬಳಕೆ ಬ್ಯಾಗ್‌ಗಳ ಟ್ರೆಂಡ್ ಸೃಷ್ಟಿಯಾಗಿದೆ. ಪರಿಸರ ದೃಷ್ಟಿಯಿಂದಲೂ ಈ ಮರಬಳಿಕೆ ಬ್ಯಾಗ್ ಡ್ರೆಂಡ್ ಹೆಚ್ಚಾಗುತ್ತಿದೆ. ಇದನ್ನು ನೀವು ಮನೆಯಲ್ಲಿಯೇ ಮಾಡಬಹುದು. ಕಡಿಮೆ ಬಂಡವಾಳ ಹೂಡಿಕೆ ಹಾಗೆ ಅದನ್ನು ತಯಾರಿಸಲು ಬೇಕಾದ ಕರಕುಶಲ ಕೆಲಸ ತಿಳಿದಿದ್ದರೆ ಸಾಕಾಗುತ್ತದೆ. ಹಾಗೆ ಮಾರುಕಟ್ಟೆಯಲ್ಲಿ ಅದನ್ನು ಯಾರಿಗೆ ಮಾರಾಟ ಮಾಡಬಹುದು ಎಂಬುದನ್ನು ತಿಳಿದುಕೊಂಡರೆ ನಿಮ್ಮ ಹಣಗಿಸುವ ದಾರಿ ಸುಲಭವಾಗುತ್ತದೆ.
ನರ್ಸರಿ
ಮನೆಯಲ್ಲಿ ಪುಟ್ಟದಗಿ ನರ್ಸರಿ ಕೂಡ ತೆರೆಯಬಹುದು. ಸಣ್ಣ ಗಿಡಗಳನ್ನು ಮಾರಾಟದ ದೃಷ್ಟಿಯಿಂದ ಮನೆಯಲ್ಲಿ ಬೆಳೆಸಬಹುದು. ಆರಂಬದಲ್ಲಿ 50 ಪಾಟ್‌ಗಳಲ್ಲಿ ಗಿಡಗಳ ಬೆಳೆಸಿ ಅವುಗಳನ್ನು ಆನ್‌ಲೈನ್ ಮಾಧ್ಯಮಗಳ ಮೂಲಕ ಸಣ್ಣದಾಗಿ ಜನರಿಗೆ ಪರಿಚಯಿಸುವ ಕೆಲಸ ಮಾಡಿದರೆ ಬರು ಬರುತ್ತಾ ವ್ಯಾಪಾರ ವೃದ್ಧಿಯಾಗಲಿದೆ.
ಪ್ಯಾಕ್ ಮಾಡಲಾದ ಫುಡ್
ಮನೆಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಿಗೆ ಬಹ ಬೇಡಿಕೆ ಇದೆ. ಅದ್ರಲ್ಲೂ ಮಸಾಲ ಪದಾರ್ಥಗಳಾದ ಖಾರದ ಪುಡಿ, ಪುಳಿಯೋರೆ ಪುಡಿ, ಸಾಂಬಾರ್ ಪುಡಿ ಸೇರಿ ಹಲವು ಮಸಾಲೆಗಳ ತಯಾರಿಸಬಹುದು. ಇದಕ್ಕೂ ಸಹ ಕಡಿೆ ಬಂಡವಾಳ ಹೂಡಿಕೆ ಸಾಕಾಗುತ್ತದೆ. ಹಾಗೆ ಉಪ್ಪಿನಕಾಯಿ, ಹಪ್ಪಳ, ಕರಿದ ತಿಂಡಿಗಳನ್ನು ಮನೆಯಿಂದಲೇ ಮಾಡಿ ಮಾರಾಟ ಮಾಡುವುದು ಸುಲಭದ ಬ್ಯುಸಿನೆಸ್ ಐಡಯಾ ಆಗಿವೆ.
ಬಟ್ಟೆ ವ್ಯವಹಾರ
ನೀವು ಟೈಲಂರಿಂಗ್ ತಿಳಿದಿದ್ದರೆ ಸುಲಭವಾಗಿ ಮನೆಯಲ್ಲಿ ಹೊಲಿಗೆ ಮಾಡಬಹುದು. ಇದರ ಜೊತೆಗೆ ನೀವು ಮಾರುಕಟ್ಟಯಲ್ಲಿ ಅಥವಾ ಹೋಲ್‌ಸೆಲ್‌ನಲ್ಲಿ ಬಟ್ಟೆಗಳನ್ನು ತಂದು ಆನ್‌ಲೈನ್ ಮಾರಾಟ ಮಾಡಬಹುದು. ಕಡಿಮೆ ಬೆಲೆಗೆ ಸಿಗುವ ಬಟ್ಟೆಯನ್ನು ನೀವು ದುಬಾರಿಗೆ ಮಾರಾಟ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಮಾರ್ಕೆಟಿಂಗ್ ಮಾಡಬೇಕಾಗುತ್ತದೆ. ಹಾಗೆ ಬಟ್ಟೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗಿರಲಿದೆ.



Click it and Unblock the Notifications