Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗಗನಕ್ಕೇರಿದ ಮೆಣಸಿನ ಬೆಲೆ: ಮೆಣಸಿಗೆ ಬದಲು ಈ ವಸ್ತುಗಳನ್ನು ಬಳಸಿ ಖಾರ ಖಾರವಾಗಿ ಅಡುಗೆ ಮಾಡ್ಬಹುದು!
ಮಳೆಗಾಲ ಶುರುವಾಗಿದ್ದೇ ತಡ ಮೆಣಸಿನ ಬೆಲೆ ಗಗನಕ್ಕೇರಿದೆ. ಮೆಣಸು ಕೊಳ್ಳೋ ದುಡ್ಡಲ್ಲಿ ಮನೆಗೆ ಅದೆಷ್ಟೋ ಆಹಾರ ಸಾಮಾಗ್ರಿಗಳನ್ನು ತರಬಹುದು ಅಷ್ಟೊಂದು ಕ್ಲಾಸ್ಲಿ ಆಗ್ಬಿಟ್ಟಿದೆ ಮೆಣಸು. ನಮ್ಮಲ್ಲಿ ಖಾರ ತಿನ್ನುವವರು ಹೆಚ್ಚು. ಊಟ ಸಪ್ಪೆಯಾಗಿದ್ರೆ ಯಾರು ಕೂಡ ಮುಟ್ಟೋದಿಲ್ಲ. ಹೀಗಾಗಿ ಪ್ರತಿಯೊಂದು ಆಹಾರ ಪದಾರ್ಥಗಳನ್ನು ತಯಾರು ಮಾಡುವಾಗ ಮೆಣಸು ಬಳಸಲೇಬೇಕು.
ಇನ್ನೇನು ಮೆಣಸಿಗೆ ಬೆಲೆ ಜಾಸ್ತಿ ಆಯ್ತು ಅಂತ ಮೆಣಸು ತಿನ್ನೋದನ್ನು ಬಿಡೋದಿಕ್ಕಾಗೋದಿಲ್ಲ. ಆದ್ರೆ ಇತ್ತ ಬೆಲೆ ಏರಿಕೆಯ ಬಿಸಿ ಕೂಡ ಜನರನ್ನು ಸರಿಯಾಗಿ ತಟ್ಟಿದೆ. ಇಂತಹ ಸಂದರ್ಭದಲ್ಲಿ ಮೆಣಸಿಗೆ ಬದಲಾಗಿ ಕೆಲವೊಂದು ವಸ್ತುಗಳನ್ನು ಬಳಕೆ ಮಾಡ್ಬಹುದು. ಇದು ಖಂಡಿತ ನಿಮ್ಮ ಖಾರ ತಿನ್ನೋ ಬಯಕೆಯನ್ನು ಈಡೇರಿಸುತ್ತದೆ. ಅಷ್ಟಕ್ಕು ಆ ವಸ್ತುಗಳು ಯಾವುದು ಅನ್ನೋದನ್ನು ನೋಡೋಣ.

1. ಮೆಣಸಿನ ಕಾಯಿ
ಮೆಣಸಿನ ಬೆಲೆ ಜಾಸ್ತಿ ಆಗಿರೋದ್ರಿಂದ ಆಹಾರ ಪದಾರ್ಥಗಳನ್ನು ತಯಾರು ಮಾಡುವಾಗ ಮೆಣಸಿನ ಪುಡಿಯನ್ನು ಬಳಕೆ ಮಾಡಬಹುದು. ಕೆಲವೊಂದು ಬಾರಿ ಬರೀ ಮೆಣಸಿನ ಪುಡಿ ಹಾಕಿದ್ರೆ ಅಷ್ಟೊಂದು ಟೇಸ್ಟಿ ಆಗೋದಿಲ್ಲ. ಹೀಗಾಗಿ ಅದಕ್ಕೆ ಕೊತ್ತಂಬರಿ, ಜೀರಿಗೆ ಹೀಗೆ ಏನೆಲ್ಲಾ ಅಗತ್ಯ ವಸ್ತುಗಳು ಬೇಕಾಗಿದ್ಯೋ ಅದೆನ್ನೆಲ್ಲಾ ಸೇರಿಸಿ ಸಾಂಬಾರು ಮಾಡಿದ್ರೆ ತಿನ್ನೋದಕ್ಕೆ ರುಚಿಯಾಗಿರುತ್ತೆ.
2. ಚಿಲ್ಲಿ ಫ್ಲೇಕ್ಸ್
ಮೆಣಸಿಗೆ ಬದಲಾಗಿ ಚಿಲ್ಲಿ ಫ್ಲೇಕ್ಸ್ ಕೂಡ ಬಳಕೆ ಮಾಡಬಹುದು. ಇದನ್ನು ಕೂಡ ಮೆಣಸಿನಿಂದ ಮಾಡಲಾಗಿದ್ದು, ಹುರಿದ ಅಥವಾ ಒಣಗಿಸಿದ ಮೆಣಸನ್ನು ತರಿ ತರಿಯಾಗಿ ಪುಡಿ ಮಾಡಿ ಈ ಚಿಲ್ಲಿ ಫ್ಲೇಕ್ಸ್ ಅನ್ನು ತಯಾರು ಮಾಡಲಾಗುತ್ತದೆ. ಹೀಗಾಗಿ ರುಚಿಯಲ್ಲಿ ನಿಮಗೆ ಯಾವುದೇ ರೀತಿ ವ್ಯತ್ಯಾಸ ಆಗೋದಿಲ್ಲ.
3. ಹಾಟ್ ಸಾಸ್(Hot sauce)
ಹಾಟ್ ಸಾಸ್ ಅನ್ನು ಮೆಣಸು, ವಿನೇಗರ್ ಮತ್ತು ಉಪ್ಪುನ್ನು ಸೇರಿಸಿ ತಯಾರು ಮಾಡಲಾಗುತ್ತದೆ. ಹಾಟ್ ಸಾಸ್ ಕೂಡ ಮೆಣಸನ್ನು ಹೋಲುತ್ತದೆ. ಇದು ತುಂಬಾನೇ ಖಾರವಾಗಿದೆ. ಈ ಸಾಸ್ ಮೆಣಸಿಗಿಂತ ಹೆಚ್ಚಾಗಿ ವಿನೇಗರ್ ನ ಪರಿಮಳವನ್ನು ಹೊಂದಿರುತ್ತಂತೆ. ಖಾರ ತಿನ್ನಬೇಕು ಎನ್ನುವವರು ಕೆಲವೊಂದು ಪದಾರ್ಥಗಳಿಗೆ ಹಾಟ್ ಸಾಸ್ ಕೂಡ ಬಳಕೆ ಮಾಡಬಹುದು.
4. ಮೆಣಸಿನ ಪೇಸ್ಟ್
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ತರಹ ನಮಗೆ ಮೆಣಸಿನ ಪೇಸ್ಟ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಕೂಡ ಆರಾಮಾಗಿ ಅಡುಗೆಗೆ ಬಳಸಿಕೊಳ್ಳಬಹುದು. ಇದು ತಿನ್ನೋದಕ್ಕೆ ತುಂಬಾನೇ ಖಾರ ಖಾರವಾಗಿರುತ್ತೆ. ಹೀಗಾಗಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಇದನ್ನು ಬಳಕೆ ಮಾಡಿದರೆ ಉತ್ತಮ.
5. ಹಸಿ ಮೆಣಸಿನಕಾಯಿ
ಮೆಣಸಿನ ಬೆಲೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಹಸಿ ಮೆಣಸಿನಕಾಯಿಯನ್ನು ಕೂಡ ಬಳಕೆ ಮಾಡಬಹುದು. ಯಾಕಂದ್ರೆ ಹಸಿ ಮೆಣಸಿನಕಾಯಿ ನಮಗೆ ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನೂ ಹಸಿ ಮೆಣಸಿನ ಕಾಯಿಯಲ್ಲಿಯೂ ಕೂಡ ಕೆಲವೊಂದು ವಿಧಗಳಿದ್ದು, ಕೆಲವು ಮೆಣಸಿನಕಾಯಿ ತುಂಬಾನೇ ಖಾರವಾಗಿದ್ರೆ, ಇನ್ನೂ ಕೆಲವು ಮೆಣಸಿನ ಕಾಯಿಗಳು ಅಷ್ಟೊಂದು ಖಾರವಾಗಿ ಇರೋದಿಲ್ಲ. ಇನ್ನೂ ಹಸಿಮೆಣಸಿಕಾಯಿ ಸಾಂಬಾರ್ ಗೆ ಬೇರೆಯದ್ದೇ ಟೇಸ್ಟ್ ನೀಡುತ್ತೆ.
6. ಕರಿ ಮೆಣಸು
ಕರಿ ಮೆಣಸನ್ನು ಕೂಡ ನೀವು ಮೆಣಸಿನ ಬದಲಿಗೆ ಬಳಕೆ ಮಾಡಬಹುದು. ಆದರೆ ಕರಿ ಮೆಣಸು ಬಳಕೆ ಮಾಡುವಾಗ ತುಂಬಾನೇ ಹುಷಾರಾಗಿ ಇರಬೇಕು. ಯಾಕಂದ್ರೆ ಇದು ತುಂಬಾನೇ ಖಾರವಾಗಿದ್ದು, ಅಗತ್ಯಕ್ಕಿಂತ ಹೆಚ್ಚಾದ್ರೆ ಆ ಆಹಾರವನ್ನು ತಿನ್ನೋದಕ್ಕೆ ಸಾಧ್ಯವಿಲ್ಲ. ಕರಿ ಮೆಣಸು ನಿಮಗೆ ಮೆಣಸಿನ ಖಾರ ಕೊಟ್ರು ಕೂಡ ಅದರ ಬಣ್ಣ ಇರೋದಿಲ್ಲ ಅಷ್ಟೇ ವ್ಯತ್ಯಾಸ.
7. ಗಾಂಧಾರಿ ಮೆಣಸು
ಗಾಂಧಾರಿ ಮೆಣಸು ಸಾಮಾನ್ಯವಾಗಿ ತೋಟಗಳಲ್ಲಿ ಬೆಳೆಯುತ್ತದೆ. ಮೆಣಸಿಗೆ ಹೋಲಿಸಿದ್ರೆ ಇದು ಮೂರು ಪಟ್ಟು ಖಾರ ಇರುತ್ತೆ. ನೋಡೋದಕ್ಕೆ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇದರ ಘಾಟು ಹಾಗೂ ಖಾರಕ್ಕೆ ಸರಿ ಸಾಟಿ ಮತ್ತೊಂದಿಲ್ಲ. ಹೆಚ್ಚು ಪ್ರಮಾಣದ ಆಹಾರಕ್ಕೆ ಸ್ವಲ್ಪವೇ ಸ್ವಲ್ಪ ಗಾಂಧಾರಿ ಮೆಣಸು ಹಾಕಿದ್ರೆ ಸಾಕು. ಗಾಂಧಾರಿ ಮೆಣಸು ಎಷ್ಟು ಖಾರ ಅಂದ್ರೆ ಅದನ್ನು ಕೈಯಲ್ಲಿ ಮುರಿದ್ರೆ ಅದರ ಖಾರ ಕೈಗೂ ಅಂಟಿಕೊಳ್ಳುತ್ತೆ.
ಮೆಣಸಿಗೆ ಬೆಲೆ ಹೆಚ್ಚಾಗಿರೋದ್ರಿಂದ ಈ ಮೇಲಿನ ವಸ್ತುಗಳನ್ನು ಬಳಸಿ ನಿಮಗೆ ಇಷ್ಟವಾದ ಸ್ಪೈಸಿ ಆಹಾರಗಳನ್ನು ಸಿದ್ಧ ಪಡಿಸಿಕೊಳ್ಳಬಹುದು.



Click it and Unblock the Notifications


