Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸ್ಟೈನ್‌ಲೆಸ್ ಸ್ಟೀಲ್ ಖರೀದಿಸುವಾಗ ಯಾವೆಲ್ಲಾ ವಿಚಾರ ತಿಳಿದಿರಬೇಕು..? ನಿಮಗೆ ಈ ವಿಚಾರ ಗೊತ್ತಾ?
ಮನೆಗೆ ನೀವು ವಸ್ತುಗಳ ಖರೀದಿಸುವಾಗ ಬಹಳ ಎಚ್ಚರಿಕೆ ವಹಿಸುತ್ತೀರಿ. ಅದರಲ್ಲೂ ನಿತ್ಯ ಬಳಕೆ ಆಗುವಂತಹ ವಸ್ತುಗಳ ಖರೀದಿ ಇದ್ದರಂತು ಅದರ ವಾರೆಂಟಿ, ಗ್ಯಾರಂಟಿ ಎಲ್ಲವನ್ನು ಪರೀಕ್ಷಿಸುತ್ತೀರಿ. ಈಗಂತು ಮಾರುಕಟ್ಟೆಯಲ್ಲಿ ಒಂದೇ ಉತ್ಪನ್ನ ನೀಡುವ ಹಲವು ಕಂಪನಿಗಳ ನಾವು ನೋಡಬಹುದು. ಹಾಗೆ ಗೃಹಬಳಕೆ ವಸ್ತುಗಳ ಖರೀದಿಸುವಾಗ ಮಹಿಳೆಯವರು ಹತ್ತು ಹಲವು ಬಾರಿ ಅದನ್ನು ಪರಿಶೀಲಿಸಿಯೇ ಖರೀದಿಸುತ್ತಾರೆ.
ಅದರಲ್ಲೂ ಅಡುಗೆ ಮನೆ ವಸ್ತುವಾಗಿರುವ ಸ್ಟೀಲ್ ಪಾತ್ರೆ ಖರೀದಿಸುವಾಗಲಂತು ವಿವಿಧ ರೀತಿಯಲ್ಲಿ ಅದನ್ನು ಪರೀಕ್ಷಿಸಿದ ಬಳಿಕವೇ ಖರೀದಿಸುತ್ತಾರೆ. ಕೆಲವೊಮ್ಮೆ ಕಡಿಮೆ ಬೆಲೆ ಅತ್ಯುತ್ತಮ ಉತ್ಪನ್ನ ನಿಮ್ಮ ಕೈ ಸೇರಬಹುದು. ಹಾಗೆ ಕೆಲವೊಮ್ಮೆ ಹೆಚ್ಚು ಬೆಲೆ ನೀಡಿದ್ರೂ ಕೂಡ ಕಳಪೆ ವಸ್ತು ಮನೆ ಸೇರಬಹುದು. ಹೀಗಾಗಿ ನಾವಿಂದು ಈ ಸ್ಟೀಲ್ ಪಾತ್ರೆ ಖರೀದಿಗೂ ಮುನ್ನ ಮಹಿಳೆಯರು ಗಮನಿಸಬೇಕಾದ ಕೆಲವೊಂದು ವಿಚಾರಗಳ ಕುರಿತು ತಿಳಿದುಕೊಳ್ಳೋಣ.

ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಖರೀದಿಸುವುದು ಬಹಳ ಕಾಲ ಬಾಳಿಕೆ ಬರುತ್ತದೆ ಎಂದು. ಹಾಗೆ ಮಾರುಕಟ್ಟೆಯಲ್ಲಿ ನೂರಾರು ಕಂಪನಿಗಳ ಒಂದೇ ರೀತಿಯ ಪಾತ್ರೆಗಳನ್ನು ನಾವು ನೋಡಬಹುದು. ಆದ್ರೆ ಯಾವುದನ್ನು ಖರೀದಿಸಬೇಕು. ಕಡಿಮೆ ಬೆಲೆಯದ್ದು ಖರೀದಿಸಬೇಕೆ ಅಥವಾ ದುಬಾರಿ ಬೆಲೆಯದ್ದು ಖರೀದಿಸಬೇಕು? ಎಂಬುದು ಗೊಂದಲಕ್ಕೆ ಕಾರಣವಾಗುತ್ತದೆ.
ಹಾಗೆ ಈ ಸ್ಟೈನ್‌ಲೆಸ್ ಸ್ಟೀಲ್ ಖರೀದಿಸುವಾಗ ಈ ಪಾತ್ರೆಯ ಗುಣಮಟ್ಟ, ಅದು ಯಾವ ರೀತಿ ತಳ ಹೊಂದಿದೆ, ದಪ್ಪ ಇದೆಯಾ ಹೀಗೆ ಹತ್ತಾರು ವಿಚಾರಗಳ ಕುರಿತು ಗಮನವಿಡುತ್ತೇವೆ. ಆದ್ರೆ ನಾವು ಈ ಸ್ಟೀಲ್ ಪಾತ್ರೆ ಖರೀದಿಗೂ ಮುನ್ನ ಯಾವೆಲ್ಲಾ ವಿಚಾರಗಳ ಕುರಿತು ಗಮನವಿಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಸ್ಟೇನ್‌ಲೆಸ್ ಸ್ಟೀಲ್‌ನ ದರ್ಜೆ ಯಾವುದು ನೋಡಬೇಕು
ಸ್ಟೈನ್‌ಲೆಸ್ ಸ್ಟೀಲ್ ಖರೀದಿಗೂ ಮುನ್ನ ಅದು ಯಾವ ಗ್ರೇಡ್‌ನ ಸ್ಟೀಲ್ ಅನ್ನೋದನ್ನು ನೋಡಬೇಕು. ಏಕೆಂದರೆ ಎಲ್ಲಾ ಸ್ಟೀಲ್ ಪಾತ್ರೆಗಳು ಒಂದೇ ರೀತಿಯ ಗ್ರೇಡ್ ಹೊಂದಿರುವುದಿಲ್ಲ. ಕೆಲವೊಂದು ಕರೆಂಟ್ ಒಲೆಯಲ್ಲಿ ಅಡುಗೆ ಮಾಡಲು ಯೋಗ್ಯವಲ್ಲ. ಉತ್ತಮ ಗುಣಮಟ್ಟದ ಸ್ಟೀಲ್ 18/8 ಅಥವಾ 18/10 ಗ್ರೇಡ್ ಪಡೆದಿರುತ್ತವೆ. ಇವು ಹೆಚ್ಚು ಶಾಖ ತಡೆದುಕೊಳ್ಳುತ್ತವೆ. ಹೀಗಾಗಿ ಅಂಗಡಿಯವರ ಬಳಿ ಅಥವಾ ಸ್ಟೀಲ್‌ನ ಮೇಲೆಯೇ ಈ ಗ್ರೇಡ್‌ಗಳ ಕುರಿತು ಮಾಹಿತಿ ಹಾಕಿರಲಾಗುತ್ತದೆ. ಆದ್ರೆ ಕಳಪೆ ಸ್ಟೀಲ್‌ನಲ್ಲಿ ಈ ಕುರಿತ ಮಾಹಿತಿಯೇ ಇರುವುದಿಲ್ಲ.
ಹ್ಯಾಂಡಲ್ ಹಾಗೂ ಮುಚ್ಚಳ ಬಹಳ ಮುಖ್ಯ
ನೀವು ಖರೀದಿಸಲು ಹೊರಟಿರುವ ಸ್ಟೀಲ್ ಪಾತ್ರೆಯ ಹ್ಯಾಂಡಲ್‌ಗಳು ಹೇಗಿವೆ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಹಾಗೆ ಅವುಗಳ ಮುಚ್ಚಳಗಳು ಕೂಡ ಬಳ ಮುಖ್ಯವಾಗುತ್ತೆ. ಆದ್ರೆ ಹಲವರು ಈ ಕುರಿತು ಹೆಚ್ಚು ಗಮನ ನೀಡುವುದಿಲ್ಲ. ಕೆಲವು ಪಾತ್ರೆಗಳು ಚೆನ್ನಾಗಿರುವ ಮುಖ್ಯ ಭಾಗ ಹೊಂದಿರುತ್ತವೆ ಆದ್ರೆ ಹ್ಯಾಂಡಲ್ ಹಾಗೂ ಮುಚ್ಚಳ ಬಹಳ ಕಳಪೆ ಮಟ್ಟದಲ್ಲಿರುತ್ತವೆ.
ಹಗುರವಾದ ಪಾತ್ರೆಗಳ ಖರೀದಿಸಬೇಡಿ
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಟೈನ್‌ಲೆಸ್ ಸ್ಟೀಲ್ ಸಿಗುತ್ತವೆ. ಆದ್ರೆ ಎಂದಿಗೂ ಕಡಿಮೆ ಬಾರವಿರುವ ಪಾತ್ರೆ ಖರೀದಿಸಬೇಡಿ. ಇವು ಕಳಪೆಯಾಗಿರಬಹುದು. ಹಾಗೆ ಇವು ಹೆಚ್ಚು ಶಾಖವನ್ನು ತಡೆಯಲು ಆಗದೆ ಇರಬಹುದು.



Click it and Unblock the Notifications
