Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
1 ರೂಪಾಯಿ ಖರ್ಚಿಲ್ಲದೆ ವಾಟರ್ ಪ್ರೂಫ್ ಕಾಜಲ್ ನೀವೆ ಮಾಡಿ..! ಇಲ್ಲಿದೆ ಟಿಪ್ಸ್!
ಮಳೆಗಾಲದಲ್ಲಿ ಯುವತಿಯರು ಹಾಗೆ ಮಹಿಳೆಯರು ಹೊರ ಹೋಗಬೇಕಾದರೆ ಮೇಕ್ ಅಪ್ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಮಳೆಗಾಲದ ಸಮಯದಲ್ಲಿ ಮೇಕ್ ಅಪ್ ಮೇಲೆ ಮಳೆ ನೀರು ಬಿದ್ದರೆ ಹಾಳಾಗುತ್ತದೆ. ಇಡೀ ಮುಖ ಕೆಡುತ್ತದೆ ಎಂಬ ಭಯ ಅವರಲ್ಲಿ ಇದ್ದೇ ಇರುತ್ತೆ. ಹೀಗಾಗಿ ಮೇಕ್ ಮಾಡಿದಾಗ ಆವರು ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಅಲ್ಲದೆ ಕಡಿಮೆ ಮೇಕ್‌ಅಪ್ ಮಾಡಿಕೊಳ್ಳಲು ಮುಂದಾಗುತ್ತಾರೆ.
ಹಾಗೆ ಈಗ ವಾಟರ್ ಪ್ರೂಫ್ ಮೇಕ್ ಅಪ್ ಕಿಟ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ. ನೀವು ದುಬಾರಿ ಬೆಲೆ ನೀಡಿ ಈ ಮೇಕ್ ಅಪ್ ಕಿಟ್‌ಗಳ ಖರೀದಿಸಿಬಹುದು. ಇದು ಮಳೆಯಿಂದ ನಿಮ್ಮ ಮುಖದ ಸೌಂದರ್ಯ ಕಾಪಾಡಲಿದೆ. ಇನ್ನು ಯುವತಿಯಲ್ಲಿ ಬಹಳಷ್ಟು ಭಯಕ್ಕೆ ಕಾರಣವಾಗುವುದು ಕಣ್ಣುಗಳಿಗೆ ಹಚ್ಚಿಕೊಳ್ಳು ಕಾಜಲ್. ಕಣ್ಣುಗಳ ಅಂದ ಹೆಚ್ಚಿಸಲೆಂದು ಅವರು ಕಾಜಲ್ ಹಚ್ಚಿಕೊಳ್ಳುತ್ತಾರೆ.

ಕಣ್ಣುಗಳು ಸುಂದರವಾಗಿಸಲು ಕಾಜಲ್ ಬಳಸುವುದು ನೋಡಬಹುದು. ಆದರೆ ನೀರಿನಿ ಹನಿ ಏನಾದರು ಕಣ್ಣುಗಳ ಮೇಲೆ ಬಿದ್ದರೆ ಆಗ ಇಡೀ ಮುಖದ ತುಂಬೆಲ್ಲಾ ಕಪ್ಪು ಹರಡುವುದು ನೋಡಬಹುದು. ಹೀಗಾಗು ಅವರು ಬಹಳ ಎಚ್ಚರಿಕೆಯಿಂದ ಹಚ್ಚುವುದು, ಹಾಗೆ ವಾಟರ್ ಪ್ರೂಫ್ ಕಾಜಲ್ ಬಳಸುವುದು ನೋಡಬಹುದು.
ಈಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕಾಜಲ್‌ಗಳು ಸಿಗುತ್ತವೆ. ಆದ್ರೆ ನಾವಿಂದು ಒಂದೂ ರೂಪಾಯಿ ಖರ್ಚಿಯಲ್ಲದೆ ಮನೆಯಲ್ಲೇ ನೀರಿಗೆ ಬಿದ್ದರೂ ಹಾಳಾಗದಂತಹ ರೀತಿಯಲ್ಲಿ ಕಾಜಲ್ ಮಾಡಿಕೊಳ್ಳುವ ಕುರಿತು ತಿಳಿದುಕೊಳ್ಳೋಣ. ಹೌದು ಈ ರೀತಿಯ ಒಂದು ವಿಧಾನದಲ್ಲಿ ತಯಾರಿಸಿದ ಕಾಜಲ್ ಎಷ್ಟು ನೀರು ಬಿದ್ದರೂ ಒಂಚೂರು ಹಾಳಾಗುವುದಿಲ್ಲ.
ಈ ಕಾಜಲ್ ಮಾಡಲು ಕಹಿ ಬೇವು ಅಥವಾ ಕರಿಬೇವಿನ ಎಲೆಗಳು, ಹತ್ತಿ ಇದ್ದರೆ ಸಾಕಾಗುತ್ತದೆ. ಹಾಗಾದ್ರೆ ಈ ವಾಟರ್ ಪ್ರೂಫ್, ನೈಸರ್ಗಿಕ ಕಾಜಲ್ ಅನ್ನು ಮನೆಯಲ್ಲಿ ಮಾಡುವುದು ಹೇಗೆ? ಯಾವ ವಿಧಾನದಲ್ಲಿ ತಯಾರಿಸಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೊದಲಿಗೆ ಒಂದು ಹತ್ತಿಯ ಉಂಡೆ ತೆಗೆದುಕೊಂಡು ಅದನ್ನು ಅಗಲವಾಗಿ ಹರಡಿಕೊಳ್ಳಿ. ನಂತರ ಒಂದು ಸಣ್ಣ ಬಟ್ಟೆ ಪೀಸ್‌ನ ಮೇಲೆ ಹತ್ತಿಯನ್ನು ಇಟ್ಟು ಅದಕ್ಕೆ ಕರಿಬೇವು, ಕಹಿ ಬೇವಿನ 4ರಿಂದ 5 ಎಲೆಗಳನ್ನು ಮಧ್ಯದಲ್ಲಿ ಇಟ್ಟು ಅದನ್ನು ಸುತ್ತಿಕೊಳ್ಳಿ. ನಂತರ ಈಗ ಈ ಬಟ್ಟೆಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಇಲ್ಲವೆ ಇದೇ ರೀತಿಯಾಗಿ ಇನ್ನು 3ರಿಂದ 4 ಭತ್ತಿಯನ್ನು ಮಾಡಿಕೊಳ್ಳಿ.
ಈಗ ನಾಲ್ಕು ಭತ್ತಿಗಳನ್ನು 1 ದೀಪದಲ್ಲಿ ಇರಿಸಿ ಕೊಬ್ಬರಿ ಎಣ್ಣೆ ಇದ್ದರೆ ಬಳಸಿ ಇಲ್ಲವೆ ಶೇಂಗಾ ಎಣ್ಣೆ ಅಥವಾ ಸಾಮಾನ್ಯ ದೀಪದ ಎಣ್ಣೆಯನ್ನು ಈ ಭತ್ತಿಗಳಿಗೆ ಹಾಕಿಕೊಂಡು ಅದರ ಮಧ್ಯದಲ್ಲಿ ತಟ್ಟೆಯೊಂದನ್ನು ಇಡಲು ಸಹಾಯವಾಗುವಂತೆ ಸುತ್ತಲು ದೊಡ್ಡ ಲೋಟ ಇಟ್ಟು ದೀಪ ಹತ್ತಿಸಿ. ಈ ದೀಪ ಉರಿದು ಅದರ ಕರಿಯು ತಟ್ಟೆಗೆ ಹಿಡಿಯಬೇಕು ಸಂಪೂರ್ಣ ಉರಿದು ಕರಿ ತಟ್ಟೆಗೆ ಹಿಡಿಯುವವರೆಗೂ ಹಾಗೆಯೆ ಬಿಡಿ.
ಈಗ ತಟ್ಟೆಯನ್ನು ತೆಗೆದು ಅದರ ಮಧ್ಯದಲ್ಲಿ ಅಂಟಿಕೊಂಡಿರುವ ಕರಿಯನ್ನು ಒಟ್ಟು ಮಾಡಿಕೊಳ್ಳಿ. ನಂತರ ಈ ಕರಿಗೆ ಚಿಟಿಕೆಯಲ್ಲಿ ಚೂರು ವ್ಯಾಸಲಿನ್ ಅಥವಾ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಒಂದು ಸಣ್ಣ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಈ ರೀತಿ ಮಾಡಿದ ಕಾಜಲ್ ಎಂದಿಗೂ ಹಾಳಾಗುವುದಿಲ್ಲ. ನೀರಿಗೆ ತಾಕಿದರು ಕೂಡ ಒಂಚೂರು ಹಾಳಾಗುವುದಿಲ್ಲ. ನೀವು ಕೂಡ ಮನೆಯಲ್ಲಿ ಈ ರೀತಿ ನೈಸರ್ಗಿಕವಾಗಿ ಈ ಕಾಜಲ್ ರೆಡಿ ಮಾಡಿ ನೋಡಿ.



Click it and Unblock the Notifications
