Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆಯಲ್ಲಿರುವ ಹಲ್ಲಿಗಳು ನಿಜವಾಗಲೂ ವಿಷಕಾರಿಯೇ? ಆಹಾರಕ್ಕೆ ಬಿದ್ದಾಗ ಏನಾಗುತ್ತೆ?
ನಿಮ್ಮ ಮನೆಯಲ್ಲಿ ಗೋಡೆಯ ಮೇಲೆ ಹಲ್ಲಿಗಳು ಓಡಾಡುವುದನ್ನು ನೋಡಿರುತ್ತೀರಿ. ಅದ್ರಲ್ಲೂ ಅಡುಗೆ ಮನೆಯಲ್ಲಿ, ಫ್ರಿಡ್ಜ್ ಬಳಿ, ಕಿಟಕಿಗಳ ಹತ್ತಿರ, ಬಾಗಿಲ ಬಳಿ, ದೇವರ ಕೋಣೆ ಹೀಗೆ ಮನೆಯ ಪ್ರತಿಯೊಂದು ಮೂಲೆಯಲ್ಲೂ ಹಲ್ಲಿಗಳನ್ನು ನೋಡಬಹುದು. ಕೆಲವರು ಹಲ್ಲಿಗಳನ್ನು ಕಂಡರೆ ಹೆದರಿಕೊಳ್ಳುತ್ತಾರೆ, ಹಾಗೆ ಅವುಗಳನ್ನು ಮನೆಯಿಂದ ಹೊರಗೆ ಓಡಿಸಲು ಪ್ರಯತ್ನಿಸುತ್ತಿರುತ್ತಾರೆ.
ಹಲ್ಲಿಗಳಿಂದ ಅಪಾಯ ಎಷ್ಟಿದೆಯೋ ಅಷ್ಟೇ ಪ್ರಯೋಜನಗಳು ಸಹ ಇವೆ. ಅವು ಕೀಟಗಳಿಂದ ನಿಮ್ಮನ್ನು ರಕ್ಷಿಸಲಿವೆ. ಹೆಚ್ಛಾಗಾಗಿ ಅಪಾಯಕಾರಿ ಜೇಡಗಳು, ಮಿಡತೆ, ಇರುವೆ, ಸೊಳ್ಳೆಗಳಿಂದ ಕೂಡ ನಿಮ್ಮನ್ನು ರಕ್ಷಿಸುತ್ತವೆ. ಆದ್ರೆ ಹಲ್ಲಿಗಳು ಅಂದ್ರೆ ಎಂತವರು ಕೂಡ ಒಂದು ಸಹ ಭಯ ಬೀಳುತ್ತಾರೆ. ಅವುಗಳಿಂದ ದೂರ ಇರಲು ಪ್ರಯತ್ನಿಸುತ್ತಾರೆ.

ಇನ್ನು ಭಾರತದಲ್ಲಿ ಹಲ್ಲಿಗಳಿಗೆ ಮತ್ತೊಂದು ರೀತಿಯ ಪ್ರಾಮುಖ್ಯತೆ ಇದೆ. ಅವುಗಳನ್ನು ಶುಭ ಹಾಗೂ ಅಶುಭ ಸಂಕೇತಗಳಿಂದಲೂ ನೋಡಲಾಗುತ್ತದೆ. ಹಲ್ಲಿಗಳು ಮೈಮೇಲೆ ಬೀಳುವುದು ಅಶುಭವೆಂದು ಹಾಗೆ ಹಲವು ಸಮಯದಲ್ಲಿ ಹಲ್ಲಿ ಶಕುನವನ್ನು ಶುಭವೆಂದು ಹೇಳಲಾಗುತ್ತದೆ. ಇನ್ನು ಈ ಹಲ್ಲಿಗಳನ್ನು ವಿಷಕಾರಿ ಜೀವಿಗಳೆಂದು ಪರಿಗಣಿಸಲಾಗುತ್ತದೆ.
ಹಲ್ಲಿಗಳು ವಿಷಕಾರಿ ಎಂಬ ಕಾರಣಕ್ಕೆ ಅವುಗಳಿಂದ ದೂರ ಇರುವುದು ನೋಡಬಹುದು, ಹಾಗೆ ಅವು ಅಡುಗೆಯಲ್ಲಿ ಬಿದ್ದಾಗ ಅದು ವಿಷವಾಗುತ್ತದೆ ಎಂದು ಹೇಳಲಾಗಿದೆ. ಹಲ್ಲಿ ಬಿದ್ದ ಆಹಾರ ನಾವು ಸೇವಿಸಿದರೆ ಜೀವಕ್ಕೆ ಹಾನಿಯಾಗಲಿದೆ ಎಂಬ ವಾದವು ಇದೆ. ಆದ್ರೆ ನಿಜವಾಗಲು ಹಲ್ಲಿಗಳು ವಿಷಕಾರಿಯೇ? ಹಲ್ಲಿಗಳಲ್ಲಿ ವಿಷ ಇರುವುದು ನಿಜವೇ ಎಂಬುದು ನಿಮಗೆ ಗೊತ್ತಾ
ಭಾರತೀಯ ಮನೆಗಳಲ್ಲಿರುವ ಹಲ್ಲಿಗಳು ವಿಷಕಾರಿಯಲ್ಲ, ಹಾಗೆ ಅವು ಕಚ್ಚಿದರೂ ಕೂಡ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿದುಬರಲಿದೆ. ಆದ್ರೆ ಕಪ್ಪು ಬಣ್ಣದ ಹಲ್ಲಿಗಳು ಆಹಾರದಲ್ಲಿ ಬಿದ್ದಾಗ ಆ ಆಹಾರವು ಸೇವಿಸಲು ಯೋಗ್ಯವಾಗಿ ಉಳಿಯೋದಿಲ್ಲ. ಅದು ವಿಷಕಾರಿಯಾಗಿ ಬದಲಾಗಬಹುದು ಎಂದು ಹೇಳಲಾಗಿದೆ.
ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲ್ಲಿಗಳು, ಕಪ್ಪು, ಕಂದು ಅಥವಾ ಹಳದಿ ಬಣ್ಣದ್ದಾಗಿರಲಿ, ವಿಷಕಾರಿಯಲ್ಲ ಮತ್ತು ಸಾಮಾನ್ಯವಾಗಿ ಕಚ್ಚುವುದಿಲ್ಲ. ಭಾರತೀಯ ಮನೆ ಹಲ್ಲಿಗಳಿಂದ ಮಾನವ ಜೀವಕ್ಕೆ ಯಾವುದೇ ಅಪಾಯವಿಲ್ಲ ಮತ್ತು ಅವು ಹಾವುಗಳಂತೆ ವಿಷಕಾರಿಯಲ್ಲ. ಆದ್ರೆ ಆಹಾರದಲ್ಲಿ ಬಿದ್ದಾಗ ಅವು ವಿಷಕಾರಿಯಾಗಿ ಪರಿಣಮಿಸಬಹುದು. ಇದು ಮಕ್ಕಳಿಗೆ ಹಾನಿ ಮಾಡುವಷ್ಟು ವಿಷಕಾರಿಯಂತು ಹೌದು.
ಆದ್ರೆ ಹಲ್ಲಿಗಳು ನೆಲೆಸಿರುವ ಭೌಗೋಳಿಕ ಪ್ರದೇಶ, ಸ್ಥಳದ ಆಧಾರದ ಮೇಲೆ ಅವುಗಳು ಹೊಂದಿರುವ ಬ್ಯಾಕ್ಟೀರಿಯಾ ಸಂಯೋಜನೆಗಳ ಕಾರಣದಿಂದಾಗಿ ಅವುಗಳ ಚರ್ಮ ಹಾಗೂ ಅಂಗಗಳಿಂದ ಬಿಡುಗಡೆಯಾಗುವ ಅಂಶದಲ್ಲಿ ವಿಷಕಾರಿ ಅಂಶಗಳು ಇರಬಹುದು ಎಂದು ಕೂಡ ಹೇಳಲಾಗುತ್ತದೆ. ಆದ್ರೆ ಇದು ಮಾನವರಿಗೆ ಹಾನಿ ಉಂಟುಮಾಡುವಷ್ಟು ಪ್ರಭಾವಶಾಲಿಯಾಗಿಲ್ಲ ಎಂದು ಸಹ ತಿಳಿದುಬಂದಿದೆ.
ಹಲ್ಲಿಗಳಿಂದ ಆಗುವ ಅಪಾಯವೇನು?
ಇನ್ನು ಹಲ್ಲಿಗಳು ಆಹಾರದಲ್ಲಿ ಬಿದ್ದಾಗ ಅವುಗಳಿಂದ ಒಂದಿಷ್ಟು ಆರೋಗ್ಯಕಾರಿ ಸಮಸ್ಯೆಗಳ ಅನುಭವಿಸಬಹುದು. ಅದ್ರಲ್ಲೂ ಜ್ವರ, ವಾಂತಿ, ಅತಿಸಾರ, ತಲೆನೋವು, ಹೊಟ್ಟೆನೋವು, ಆಯಾಸ, ಅಲರ್ಜಿ ಸೇರಿ ಒಂದಿಷ್ಟು ಸಮಸ್ಯೆಗಳ ಎದುರಿಸಬಹುದು.
ಹಾಗಾದ್ರೆ ವಿಷಪೂರಿತ ಹಲ್ಲಿಗಳು ಯಾವುದು?
ಭಾರತೀಯ ಮನೆಗಳಲ್ಲಿ ಕಂಡುಬರುವ ಹಲ್ಲಿಗಳು ವಿಷಕಾರಿ ಅಲ್ಲ ಆದ್ರೆ ಹಲ್ಲಿಗಳ ಜಾತಿಯಲ್ಲೇ ವಿಷಕಾರಿ ಹಲ್ಲಿಗಳಿವೆ. ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಗಿಲಾ ಮಾನ್ಸ್ಟರ್ ಮತ್ತು ಮೆಕ್ಸಿಕೊದ ಮೆಕ್ಸಿಕನ್ ಮಣಿ ಹಲ್ಲಿಗಳು ಅತ್ಯಂತ ವಿಷಕಾರಿ ಹಲ್ಲಿಗಳು ಎಂದು ಪರಿಗಣಿಸಲಾಗುತ್ತದೆ. ಹಾಗೆ ಭಾರತದ ಮಳೆ ಕಾಡುಗಳಲ್ಲಿ ಕಂಡುಬರುವ ಹಲ್ಲಿಯ ಪ್ರಬೇಧವು ವಿಷ ಹೊಂದಿದೆ ಎಂದು ಸಹ ಹೇಳಲಾಗಿದೆ. ಆದರೂ ಹಲ್ಲಿಗಳು ಕಚ್ಚಿದಾಗ ಅಥವಾ ಹಲ್ಲಿ ಬಿದ್ದ ಆಹಾರ ಸೇವಿಸಿದಾಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.



Click it and Unblock the Notifications
