Latest Updates
-
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು
ವಾಸ್ತು ಪ್ರಕಾರ ಮನೆಯಲ್ಲಿ ಯಾವ ಚಿತ್ರ ಹಾಕಬೇಕು..? ಇದರ ಲಾಭವೇನು ಗೊತ್ತಾ?
ಮನೆಯಲ್ಲಿ ವಾಸ್ತು ಪ್ರಕಾರವಾಗಿ ನೀವು ಕೆಲವು ವಸ್ತುಗಳನ್ನು ಇಟ್ಟಿರುತ್ತೀರಿ. ಅಂದರೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದಾಗಲಿದೆ ಎಂಬ ನಂಬಿಕೆ ಇದೆ. ಹಾಗೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಅಥವಾ ಈ ಸ್ಥಳಗಳಲ್ಲಿ ಇಟ್ಟರೆ ವಾಸ್ತು ದೋಷ ಉಂಟಾಗಲಿದೆ ಅಂತಲೂ ನಂಬಲಾಗಿದೆ.
ವಾಸ್ತು ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತು ಮತ್ತು ಆ ವಸ್ತುಗಳ ಸ್ಥಳವು ಮನೆಯಲ್ಲಿ ಇರುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಪೊರಕೆ, ಚಿತ್ರಗಳು, ಔಷಧಗಳು ಅಥವಾ ಸಸ್ಯಗಳು, ಎಲ್ಲವೂ ಆ ಮನೆಯಲ್ಲಿ ದೊಡ್ಡ ಪ್ರಭಾವವನ್ನು ಉಂಟುಮಾಡಬಹುದು.
ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿದ್ದರೆ, ಆ ಮನೆಯ ನಿವಾಸಿಗಳು ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ ಮತ್ತು ಮನೆಯು ಸಮೃದ್ಧವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸುಂದರವಾಗಿ ಇಡಲು ಬಯಸುತ್ತಾರೆ. ಅದಕ್ಕಾಗಿ ವಿವಿಧ ವಸ್ತುಗಳನ್ನು ಖರೀದಿಸಿ ಮನೆಯನ್ನು ಅಲಂಕರಿಸುತ್ತೇವೆ.

ಅದೇ ಸಮಯದಲ್ಲಿ, ಕೆಲವರು ತಮ್ಮ ಮನೆಯನ್ನು ಸಸ್ಯಗಳಿಂದ ಅಲಂಕರಿಸಲು ಇಷ್ಟಪಡುತ್ತಾರೆ. ಕೆಲವರು ಪೇಂಟಿಂಗ್ ಮೂಲಕ ತಮ್ಮ ಮನೆಯನ್ನು ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ. ನೀವು ಅಂತಹ ಪೇಂಟಿಂಗ್‌ಗಳನ್ನು ಇಷ್ಟಪಡುತ್ತಿದ್ದರೆ ಅಥವಾ ಪೇಂಟಿಂಗ್‌ಗಳನ್ನು ಸಂಗ್ರಹಿಸುವವರಾಗಿದ್ದರೆ, ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ನಿಮ್ಮ ಮನೆಯಲ್ಲಿ ಯಾವ ರೀತಿಯ ಚಿತ್ರಗಳನ್ನು ಇಡಬೇಕು ಎಂಬ ಕುರಿತು ಮಾಹಿತಿ ಇಲ್ಲಿದೆ.
1. ಕುದುರೆ ವರ್ಣಚಿತ್ರಗಳು
ವಾಸ್ತು ಶಾಸ್ತ್ರದಲ್ಲಿ ಓಡುವ ಕುದುರೆಗಳ ಚಿತ್ರಗಳಿಗೆ ವಿಶೇಷ ಮಹತ್ವವಿದೆ. ಇದು ಅದೃಷ್ಟ, ವೃತ್ತಿ, ಮದುವೆ, ಸಂತೋಷ ಇತ್ಯಾದಿಗಳನ್ನು ಸೂಚಿಸುತ್ತದೆ. ಅಲ್ಲದೆ ಓಡುವ 7 ಕುದುರೆಗಳ ಪೇಂಟಿಂಗ್ ಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ಉತ್ತಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಅದರಲ್ಲಿ 8 ಓಡುವ ಕುದುರೆಗಳ ಪೇಂಟಿಂಗ್ ಕೂಡ ಇದ್ದರೆ ಆ ಮನೆಯ ವಾಸಿಗಳಿಗೆ ಅದೃಷ್ಟ ಒಲಿಯುತ್ತದೆ. ಮುಖ್ಯವಾಗಿ ಈ ವರ್ಣಚಿತ್ರಗಳನ್ನು ಮನೆಯ ಮಧ್ಯದ ಉತ್ರರ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಹಾಕಿದರೆ ಉತ್ತಮ ಎನ್ನಲಾಗಿದೆ.
2. ಕೋಯಿ ಮೀನು
ಕೋಯಿ ಮೀನು ಅಂದರೆ ಮೈ ಮೇಲೆ ಬಿಳಿ ಮಚ್ಚೆಗಳಂತೆ ಕಾಣುವ ಕೇಸರಿ ಮಿಶ್ರಿತ ಮೀನುಗಳು, ಈ ಚಿತ್ರಕಲೆ ಸಮತೋಲನ ಮತ್ತು ಸಾಮರಸ್ಯವನ್ನು ಪ್ರತಿನಿಧಿಸುತ್ತದೆ. ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ ಇದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಪೇಂಟಿಂಗ್ ಅನ್ನು ಸಭಾಂಗಣದ ಪಶ್ಚಿಮ ದಿಕ್ಕಿನಲ್ಲಿ ನೇತುಹಾಕಿದರೆ, ಅದು ಗ್ರಹಗಳ ಸ್ಥಾನಗಳಿಗೆ ಅನುಕೂಲಕರವಾಗಿರುತ್ತದೆ ಮತ್ತು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ.
ಮತ್ತು ಈ ರೀತಿಯ ಚಿತ್ರಕಲೆ ಸಂಪತ್ತು ಮತ್ತು ಹೊಸ ಉತ್ತಮ ಅವಕಾಶಗಳನ್ನು ಪ್ರತಿನಿಧಿಸುತ್ತದೆ. ನಿರುದ್ಯೋಗಿಗಳಿಗೆ ಇದು ವರದಾನವಾಗಲಿದೆ ಅಥವಾ ಹಣದ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಫಿಶ್ ಪೇಂಟಿಂಗ್ ಅನ್ನು ಮನೆಯಲ್ಲಿ ನೇತುಹಾಕಿ. ಇದು ನಿಮಗೆ ಹೊಸ ಉದ್ಯೋಗಾವಕಾಶಗಳನ್ನು ತರುತ್ತದೆ.
3. ರಾಧಾ ಕೃಷ್ಣ ಚಿತ್ರಕಲೆ
ವಾಸ್ತು ಪ್ರಕಾರ, ರಾಧಾ ಕೃಷ್ಣ ವರ್ಣಚಿತ್ರಗಳನ್ನು ಮನೆಯ ಯಾವುದೇ ಕೋಣೆಯಲ್ಲಿ ನೇತು ಹಾಕಬಹುದು. ಆದರೆ ಆ ವರ್ಣಚಿತ್ರಗಳನ್ನು ಉತ್ತರ ಗೋಡೆಗೆ ನೇತು ಹಾಕಬೇಕು. ಇದು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಈ ರೀತಿಯ ಪೇಂಟಿಂಗ್ ಗಳನ್ನು ಮನೆಯ ಬೆಡ್ ರೂಮಿನಲ್ಲಿ ನೇತು ಹಾಕಿದರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಂಬಂಧಗಳಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
4. ಗೂಬೆ ಚಿತ್ರಕಲೆ
ವಾಸ್ತು ಮತ್ತು ಜ್ಯೋತಿಷ್ಯವನ್ನು ತೆಗೆದುಕೊಂಡರೆ, ಪ್ರತಿಯೊಂದು ಪ್ರಾಣಿಯು ತನ್ನ ಪ್ರಾಮುಖ್ಯತೆ ಹೊಂದಿದೆ. ಇವುಗಳಲ್ಲಿ ಕೆಲವು ಪ್ರಾಣಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲವನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ಅದರಲ್ಲಿ ಬಿಳಿ ಗೂಬೆ ಜೀವನದಲ್ಲಿ ಬದಲಾವಣೆಯನ್ನು ಪ್ರತಿನಿಧಿಸುತ್ತದೆ.
ನೀವು ಈ ಬಿಳಿ ಗೂಬೆ ವರ್ಣಚಿತ್ರವನ್ನು ಮನೆಯಲ್ಲಿ ಇರಿಸಿದರೆ, ಅದು ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಹಾಲ್, ಆಫೀಸ್ ಅಥವಾ ಮಕ್ಕಳ ಮಲಗುವ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ನೇತು ಹಾಕಬೇಕು. ಹೀಗೆ ಇಡುವುದರಿಂದ ಜೀವನದಲ್ಲಿ ಸಮೃದ್ಧಿ ಬರುತ್ತದೆ.
5. ಜಲಪಾತದ ಚಿತ್ರಕಲೆ
ಜಲಪಾತದ ವರ್ಣಚಿತ್ರಗಳು ಹೆಚ್ಚು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಮತ್ತು ಈ ರೀತಿಯ ಪೇಂಟಿಂಗ್ ಗಳನ್ನು ಮನೆಯ ಹಾಲ್ ನಲ್ಲಿ ಇಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಇದಲ್ಲದೆ, ಇದು ಅದೃಷ್ಟ, ಸಂಪತ್ತು, ಪ್ರಗತಿಗೆ ಅವಕಾಶಗಳು ಇತ್ಯಾದಿಗಳನ್ನು ತರುತ್ತದೆ. ಮತ್ತು ಈ ರೀತಿಯ ವರ್ಣಚಿತ್ರವನ್ನು ಸಭಾಂಗಣದ ಉತ್ತರ ಗೋಡೆಯ ಮೇಲೆ ತೂಗು ಹಾಕಬೇಕು. ಈ ಜಲಪಾತ ಚಿತ್ರವು ಸಂಪತ್ತಿನ ಹರಿವನ್ನು ಸೂಚಿಸುತ್ತದೆ.



Click it and Unblock the Notifications












