Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಡಿಮೆ ಖರ್ಚಲ್ಲಿ ಮನೆಯಲ್ಲೇ ಮಾಡಿ ಹೊಸ ಬ್ಯುಸಿನೆಸ್: ಗೃಹಿಣಿಯರಿಗೆ ಬಂಪರ್ ಆಫರ್!
ನೀವು ಮನೆಯ ನಿರ್ವಹಣೆಗೆ ಕೈ ಜೋಡಿಸಬೇಕು ಎಂಬ ಹಂಬಲ ನಿಮಗೂ ಇರಬಹುದು. ಅದ್ರಲ್ಲೂ ಗೃಹಿಣಿಯರು ಇಂದು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ದುಡಿಮೆ ಮಾಡೋದು ನೋಡಬಹುದು. ಯಾಕಂದ್ರೆ ಇತ್ತಿಚಿಗೆ ಸಣ್ಣ ಪುಟ್ಟ ಆದಾಯದ ಮೂಲಕ ಮನೆ ನಿರ್ವಹಣೆಯನ್ನು ಮಾಡುವುದು ನೋಡಬಹುದು. ಗೃಹಿಣಿಯರು ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಕಾರಣ ಮನೆಯಲ್ಲಿ ಯಾವುದಾದರು ಉದ್ಯಮ ಅಥವಾ ಹಣ ಬರುವಂತಹ ಸಣ್ಣ ಕೆಲಸ ಮಾಡೋದು ನೋಡಬಹುದು.
ಆದ್ರೆ ಸಣ್ಣ ಪುಟ್ಟ ಆದಾಯ ಗಳಿಸಲು ಯಾವ ವ್ಯವಹಾರಕ್ಕೆ ಇಳಿಯಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿರುತ್ತೆ. ಕೆಲವರು ಮನೆಯಲ್ಲಿ ಟೈಲರಿಂಗ್ ಮಾಡುತ್ತಾರೆ, ಹಾಗೆ ಕ್ಯಾಟರಿಂಗ್, ನರ್ಸರಿ, ಕರಕುಶಲ ವಸ್ತುಗಳು, ಗೃಹಪಯೋಗಿ ವಸ್ತುಗಳ ರೆಡಿ ಮಾಡುವುದು ನೋಡಬಹುದು. ಹಾಗೆ ಹಲವರ ಇಂತಹ ಸಣ್ಣ ಪುಟ್ಟ ಉದ್ಯಮ ಕಟ್ಟಿ ನಂತರ ದೊಡ್ಡ ಲಾಭ ಮಾಡಿದ ಉದಾಹರಣೆ ಕೂಡ ಇದೆ.

ಆದರೆ ಮನೆಯಲ್ಲಿ ನಾವಿಂದು ಕಡಿಮೆ ಖರ್ಚಿನ ಮೂಲಕ ದೊಡ್ಡ ಹಣ ಸಂಪಾದನೆ ಮಾಡುವಂತಹ ಐಡಿಯಾ ಕುರಿತು ಹೇಳಲಿದ್ದೇವೆ. ಹೌದು ನೀವು ಕೂಡ ಮನೆಯಲ್ಲಿ ಕುಳಿತು ಮಸಾಲ ಖಾರದ ಪುಡಿ ರೆಡಿ ಮಾಡಿ ಮಾರಾಟ ಮಾಡುವ ಮೂಲಕ ಮನೆ ನಿರ್ವಹಣೆಯ ಅಖಾಡಕ್ಕೆ ಇಳಿಯಬಹುದು. ಈ ಮಸಾಲ ಖಾರದ ಪುಡಿಯನ್ನು ಪ್ರತಿಯೊಬ್ಬರು ನಿತ್ಯ ಬಳಸಬಹುದು. ಸಾಂಬಾರ್‌ನಿಂದ ಹಿಡಿದು ಹಲವು ರೀತಿಯ ಖಾದ್ಯಗಳಿಗೆ ಈ ಮಸಾಲ ಖಾರದ ಪುಡಿ ಬೇಕೆ ಬೇಕು.
ಹೀಗಾಗಿ ನಾವಿಂದು ಮನೆಯಲ್ಲಿ ಈ ಖಾರದ ಪುಡಿ ಮಾಡುವ ಕುರಿತು ತಿಳಿದುಕೊಳ್ಳೋಣ. ಮಸಾಲ ಖಾರದ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು, ಎಷ್ಟು ಸಮಯ ಹಿಡಿಯಲಿದೆ? ಪ್ಯಾಕಿಂಗ್ ಹಾಗೆ ಮಾರ್ಕೆಟಿಂಗ್ ಹೇಗೆ ಮಾಡಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ನಾವು 5 ಕೆ.ಜಿ ಖಾರದ
ಮಸಾಲ ಖಾರದ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಒಣ ಮೆಣಸು
ಉಪ್ಪು
ಮಸಾಲ ಖಾರದ ಪುಡಿ ಮಾಡುವುದು ಹೇಗೆ?
ಒಣ ಮೆಣಸನ್ನು ನೀವು ಬಿಸಿಲಿನಲ್ಲಿ ಒಣಗಿಸಬೇಕು ಹಾಗೆ ಸ್ವಚ್ಛ ಮಾಡಿರಬೇಕು. ಈಗ ಪಾತ್ರೆಗೆ ಒಣ ಮೆಣಸು ಹಾಕಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ಈ ಒಣ ಮೆಣಸು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಲ್ಲಾ ಮೆಣಸನ್ನು ಕೂಡ ಹಾಕಿ ರುಬ್ಬಿ ಪುಡಿ ಮಾಡಿಕೊಳ್ಳಿ. ನಂತರ ಜರಡಿ ಹಿಡಿದು ಕೇವಲ ನುಣ್ಣಗಿರುವ ಪುಡಿಯನ್ನು ಮಾತ್ರ ಬೇರೆ ಮಾಡಿಕೊಳ್ಳಿ.
ಈಗ ಪುಡಿ ಮಾಡಿಕೊಂಡ ಪುಡಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಮತ್ತೆ ಎಲ್ಲಾ ಪುಡಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ಇಲ್ಲದಿದ್ದರೆ ಮೊದಲೆ ಮೆಣಸು ಹಾಕಿಕೊಂಡ ಬಳಿಕ ಉಪ್ಪು ಹಾಕಿ ರುಬ್ಬಿಕೊಳ್ಳಬಹುದು. ಈ ಖಾರದ ಪುಡಿಯನ್ನು ನೀವು ಮನೆಯ ಬಳಕೆಗೂ ಬಳಸಬಹುದು. ಹಾಗೆ ಸಣ್ಣ ಪ್ಯಾಕೆಟ್ ಮೂಲಕ ಮನೆಯಿಂದಲೇ ಬ್ಯುಸಿನೆಸ್ ಕೂಡ ಆರಂಭಿಸಬಹುದು.
ಸಣ್ಣ ಪ್ಯಾಕೆಟ್‌ನಲ್ಲಿ 100, 250, 500, 1000 ಗ್ರಾಮ್‌ನ ಪ್ಯಾಕೆಟ್ ಮಾಡಿ ಮಾರಾಟ ಮಾಡಬಹುದು, ಮಾರಾಟಕ್ಕೆ ನೀವು ಆನ್‌ಲೈನ್ ಮಾಧ್ಯಮಗಳ ಬಳಸಬಹುದು. ಅಥವಾ ಮಾರ್ಕೆಟಿಂಗ್ ಜ್ಞಾನ ಇದ್ದವರು ಸುಲಭವಾಗಿ ಮಾರುಕಟ್ಟೆಗೂ ತರಬಹುದು. ಕಡಿಮೆ ಬಂಡವಾಳದಲ್ಲಿ ನೀವು ಇದನ್ನು ಮಾಡಬಹುದು. ಹಾಗೆ ಕೆಲ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿಯೂ ಆರಂಭಿಸಬಹುದು.



Click it and Unblock the Notifications
