Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬಾಳೆಹಣ್ಣಿನ ಸಿಪ್ಪೆಯ ಈ 7 ಉಪಯೋಗ ಗೊತ್ತಾದರೆ ಇನ್ನೆಂದು ಕಸದ ಬುಟ್ಟಿಗೆ ಹಾಕಲ್ಲ..!!
ಬಾಳೆಹಣ್ಣು ನಮ್ಮ ದೇಹಕ್ಕೆ ಎಷ್ಟೊಂದು ಮುಖ್ಯ ಎಂಬುದನ್ನು ನಿಮಗೆಲ್ಲಾ ತಿಳಿದಿರಬಹುದು. ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳೊಂದಿಗೆ ಫೈಬರ್ ತುಂಬಿರುವ ಹಣ್ಣು ಇದಾಗಿದೆ. ಕಡಿಮೆ ಬೆಲೆಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ನೀಡುವ ಹಣ್ಣ ಇದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಅತೀ ಹೆಚ್ಚಾಗಿ ಸಿಗುತ್ತದೆ. ಹಾಗೆ ಬಾಳೆಹಣ್ಣಿನ ಸಿಪ್ಪೆಯಿಂದಲೂ ಹಲವು ರೀತಿಯ ಉಪಯೋಗವಿದೆ ಎಂಬುದು ನಿಮಗೆ ಗೊತ್ತಿದ್ಯಾ?
ಹೌದು ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಹಲವು ರೀತಿಯ ಉಪಯೋಗವಿದೆ. ಒಮ್ಮೆ ನೀವು ಬಾಳೆಹಣ್ಣಿನಿಂದ ಆಗುವ ಉಪಯೋಗ ತಿಳಿದರೆ ಮತ್ತೆಂದು ಕಸದ ಬುಟ್ಟಿಗೆ ಬಾಳೆಹಣ್ಣಿನ ಸಿಪ್ಪೆ ಎಸೆಯೋದಿಲ್ಲ. ಹಾಗಾದ್ರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಪ್ರಯೋಜನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಶೈನಿಂಗ್ ನೀಡುವ ವಸ್ತು
ಬಾಳೆಹಣ್ಣಿನ ಸಿಪ್ಪೆಯು ಶೈನಿಂಗ್ ನೀಡುವಂತಹ ವಸ್ತು ಆಗಿದೆ. ವಿಶೇಷವಾಗಿ ನಿಮ್ಮ ಮನೆಯಲ್ಲಿ ಬೆಳ್ಳಿ ಸಾಮಾಗ್ರಿಗಳಿಗೆ ಕಪ್ಪಿ ಕಲೆ ಹಿಡಿದಿದ್ದರೆ ಈ ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ಉಜ್ಜುವುದರಿಂದ ಹಾಗೆ ನಿಮ್ಮ ಶೂ ಮೇಲೆ ಒಮ್ಮೆ ಉಜ್ಜಿ ಮತ್ತೆ ಶುದ್ಧ ಬಟ್ಟೆಯಲ್ಲಿ ಒರೆಸಿದರೆ ಪಾಲಿಶಿಂಗ್ ಆಗುತ್ತದೆ. ಬೆಳ್ಳಿ ವಸ್ತುಗಳು ಕಪ್ಪಾದರೆ ಬಾಳೆಹಣ್ಣಿನ ಸಿಪ್ಪೆ ಸುಲಭದವಾಗಿ ಆ ಕಲೆಗಳ ನಿವಾರಣೆ ಮಾಡಲಿದೆ.
ಬಾಳೆಹಣ್ಣಿನ ಸಿಪ್ಪೆಯಿಂದ ಸ್ಮೂಥಿಗಳು
ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸ್ಮೂಥಿಗಳಾಗಿ ಮಾಡಿ ಸವಿಯಬಹುದು ಎಂಬುದು ತಿಳಿದಿದ್ಯಾ? ಹೌದು ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದರ ಜೊತೆಗೆ ಸೇಬು ಹಣ್ಣಿನ ಜೊತೆಗೆ ಮಿಕ್ಸರ್‌ಗೆ ಹಾಕಿ ನೀರು ಹಾಕಿ ಸಕ್ಕರೆ ಹಾಕದೆಯೇ ಇದನ್ನು ಸವಿಯಬಹುದು. ಈ ಸಿಪ್ಪೆಯಲ್ಲಿ ಅತ್ಯಧಿಕ ಫೈಬರ್ ಅಂಶ ಇರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತಮವಾಗಿದೆ.
ನಿಮ್ಮ ಮೂಡ್ ಬೂಸ್ಟ್ ಮಾಡಲಿದೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಟ್ರಿಪ್ಟೊಫಾನ್ ಮತ್ತು ವಿಟಮಿನ್ ಬಿ 6 ಎಂಬ ಪ್ರೋಟೀನ್ ಅನ್ನು ಹೊಂದಿದೆ. ಟ್ರಿಪ್ಟೊಫಾನ್ ಜೀರ್ಣವಾಗುತ್ತಿದ್ದಂತೆ ಸಿರೊಟೋನಿನ್ ಆಗಿ ಬದಲಾಗುತ್ತದೆ. ಇದರಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಸುಧಾರಿಸುತ್ತದೆ. ಇದರಲ್ಲಿನ ಬಿ 6 ನಿದ್ರೆಗೆ ಸಹಾಯ ಮಾಡುವ ಅಂಶಗಳನ್ನು ಹೊಂದಿದ್ದು, ನಿಮ್ಮ ಒತ್ತಡ ನಿವಾರಣೆಗೂ ಇದು ಸಹಕಾರಿಯಾಗಿದೆ.
ಗಿಡಗಳಿಗೆ ಗೊಬ್ಬರವಾಗಲಿದೆ
ಬಾಳೆಹಣ್ಣಿನ ಸಿಪ್ಪೆಗಳು ಜೈವಿಕ ವಿಘಟನೀಯ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿವೆ, ಆದ್ದರಿಂದ ಈ ಸಿಪ್ಪೆಗಳನ್ನು ನೀವು ಕಸದ ಬುಟ್ಟಿಗೆ ಎಸೆಯುವ ಬದಲಾಗಿ ಅವುಗಳನ್ನು ಗಿಡದ ಬುಡಕ್ಕೆ ಹಾಕಬಹುದು ಇದರಿಂದ ಗಿಡಕ್ಕೆ ಬೇಕಾದ ಅಗತ್ಯ ಅಂಶ ನೀಡಲು ನೆರವಾಗುತ್ತೆ, ಹೀಗಾಗಿ ಎಸೆಯುವ ಬದಲು ನಾವು ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು.
ತುರಿಕೆಗೆ ಪರಿಹಾರ
ಆಂಟಿಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳಿದ್ದರೆ ಬಾಳೆಹಣ್ಣಿನ ಸಿಪ್ಪೆ ಪರಿಹಾರವಂತೆ. ನಿಮಗೆ ಇರುವೆ, ಕೀಟ ಅಥವಾ ವಿಷಕಾರಿ ಅಂಶ ತಗುಲಿ ತುರಿಕೆ ಉಂಟಾದರೆ ಈ ಬಾಳೆಹಣ್ಣಿನ ಸಿಪ್ಪೆಯನ್ನು ಆ ಜಾಗದ ಮೇಲೆ ನಿಧಾನವಾಗಿ ಮಸಾಜ್ ಮಾಡಬೇಕಂತೆ.
ಚರ್ಮದ ಆರೈಕೆ
ನಿಮ್ಮ ಚರ್ಮದ ಆರೈಕೆಗೂ ಬಾಳೆಹಣ್ಣಿನ ಸಿಪ್ಪೆ ಅತ್ಯುತ್ತಮ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ಅಥವಾ ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ನಿಧಾನವಾಗಿ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗಲಿದೆ. ವಾರದಲ್ಲಿ ಎರಡು ಬಾರಿ ಬಾಳೆಹಣ್ಣಿ ಸಿಪ್ಪೆಯನ್ನು ಮುಖಕ್ಕೆ ಮಸಾಜ್ ಮಾಡಿದರೆ ಸುಕ್ಕುಗಟ್ಟುವುದು, ಕೆಲೆಗಳು ಉಳಿಯದಂತೆ ಮಾಡಲಿದೆ.
ಹಲ್ಲುಗಳ ಕ್ಲೀನ್ ಮಾಡಲಿದೆ
ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಜಿಂಗೈವಿಟಿಸ್ ಅಂಶಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಹುದು. ನಿಮ್ಮ ಹಲ್ಲುಗಳು ಹಳದಿಯಾಗಿದ್ದರೆ ನೀವು ಬಾಳೆಹಣ್ಣಿನ ಸಿಪ್ಪೆಯಲ್ಲಿ ಹಲ್ಲು ಉಜ್ಜಿಕೊಂಡರೆ ಬಿಳಿಯಾಗಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ರೀತಿ ಮಾಡಿದ್ರೆ ಹಳದಿ ಹಲ್ಲಿನ ಸಮಸ್ಯೆ ದೂರ ಮಾಡಬಹುದು. ಹಾಗೆ ಇದರಿಂದ ಉಜ್ಜಿದ ಬಳಿಕ ಪೇಸ್ಟ್‌ನಿಂದ ಹಲ್ಲುಜ್ಜುವುದನ್ನು ಮರೆಯಬೇಡಿ.



Click it and Unblock the Notifications
