Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫ್ರಿಡ್ಜ್‌ನಲ್ಲಿ ಈ ಹಣ್ಣುಗಳಿಟ್ಟರೆ ವಿಷವಾಗಬಹುದು..! ಯಾವೆಲ್ಲಾ ಹಣ್ಣು ಇಡಬಾರದು ಗೊತ್ತಾ?
ನೀವು ಬೇಸಿಗೆಯಲ್ಲಿ ಬಹಳಷ್ಟು ಹಣ್ಣುಗಳ ಸವಿಯುವುದು ದೇಹಕ್ಕೆ ಉತ್ತಮ. ಏಕೆಂದರೆ ಹಣ್ಣುಗಳಿಂದ ನೀವು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು, ವಿಟಮಿನ್ ಸೇರಿದಂತೆ ದೇಹ ಬೇಸಿಗೆಯಲ್ಲಿ ಡಿಹೈಡ್ರೇಷನ್‌ಗೆ ಒಳಗಾಗುವುದನ್ನು ತಪ್ಪಿಸಲಿದೆ. ಹೆಚ್ಚಾಗಿ ಕಲ್ಲಂಗಡಿ, ಮಾವಿನ ಹಣ್ಣು, ಸೇಬು, ಬಾಳೆ ಹಣ್ಣನ್ನು ಬೇಸಿಗೆಯಲ್ಲಿ ಸವಿಯಬಹುದು. ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ತಂಪು ತರಿಸುವ ಹಣ್ಣುಗಳು ಬಹಳ ಉತ್ತಮ.
ಇನ್ನು ಬೇಸಿಗೆಯಾಗಿರುವ ಕಾರಣಕ್ಕೆ ಹಣ್ಣುಗಳು ಬಹುಬೇಗ ಹಾಳಾಗಲು ಆರಂಭಿಸುತ್ತವೆ. ಅದರಲ್ಲೂ ನಾವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಹಣ್ಣುಗಳು ಹಾಳಾಗುತ್ತವೆ. ಹೀಗಾಗಿ ನಾವು ಮಾರುಕಟ್ಟೆಯಿಂದ ತಂದ ತಕ್ಷಣ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿರುವ ಕಾರ್ಯ ಮಾಡುತ್ತೇವೆ. ಒಂದಿಷ್ಟು ದಿನಗಳ ಕಾಲ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಸವಿಯಬಹುದು.

ಹಾಗೆ ಫ್ರಿಡ್ಜ್‌ನಲ್ಲಿಟ್ಟ ಹಣ್ಣು ಸವಿಯಲು ತಾಜಾ ಅನಿಸದೆ ಇದ್ದರೂ ಹಾಳಾಗದೇ ಇರುವ ಕಾರಣದಿಂದ ನಾವು ಕೂಡ ಸವಿಯುತ್ತೇವೆ, ಆದ್ರೆ ಕೆಲವೊಂದು ಹಣ್ಣುಗಳನ್ನು ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿ ಇಡುವುದು ಅಪಾಯಕಾರಿಯಂತೆ. ಹೌದು ಕೆಲವೊಂದು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅಕ್ಷರಶಃ ಅದು ವಿಷವಾಗಿ ಬದಲಾಗುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಯಾವ ಹಣ್ಣನ್ನು ಫ್ರಿಡ್ಜ್‌ನಲ್ಲಿ ಹೆಚ್ಚು ದಿನಗಳ ಕಾಲ ಶೇಖರಿಸಿ ಇಡಬಾರದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಫ್ರಿಡ್ಜ್‌ನಲ್ಲಿಟ್ಟ ಹಲವು ಹಣ್ಣುಗಳು ಬಹುಬೇಗ ಹಾಳಾಗುವುದಿಲ್ಲ ಆದರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಬಹುದು. ಹಾಗೆ ದೇಹಕ್ಕೆ ಹಾನಿಕಾರವಾಗಬಹುದು.
ಬಾಳೆಹಣ್ಣು
ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು. ಬಾಳೆಹಣ್ಣುಗಳು ಫ್ರೀಜರ್‌ನಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದು ನೋಡಬಹುದು, ಇದು ವಿಷಕಾರಿಯಾಗಬಹುದು. ಹಾಗೆ ಈ ರೀತಿ ಕಪ್ಪಾಗುವುದರಿಂದ ಅವುಗಳ ರುಚಿಯಲ್ಲೂ ಬದಲಾವಣೆ ನೋಡಬಹುದು. ಇದು ಬ್ಯಾಕ್ಟೀರಿಯಾ ಉಂಟಾಗಿರುವುದರ ಲಕ್ಷಣವಾಗಿದೆ.
ಸೌತೆಕಾಯಿಗಳು
ಸೌತೆಕಾಯಿಗಳು ನೈಸರ್ಗಿಕ ತಂಪು ಕಾರಕಗಳು, ಆದ್ರೆ ಅವು ಬೇಸಿಗೆಯಲ್ಲಿ ಬಹುಬೇಗ ಬಾಡಿಕೊಳ್ಳುತ್ತವೆ. ಹೀಗಾಗಿ ಸೌತೆಕಾಯಿಗಳನ್ನು ಆದಷ್ಟು ಫ್ರೀಜರ್‌ನಲ್ಲಿ ಇಡಲು ಮುಂದಾಗುತ್ತಾರೆ. ಇದು ಸೌತೆಕಾಯಿಯ ರುಚಿ ಹಾಗೂ ಅದರ ನೈಸರ್ಗಿಕ ಗುಣಗಳನ್ನು ಹಾಳು ಮಾಡುತ್ತವೆ.
ಪಪ್ಪಾಯಿ
ಪಪ್ಪಾಯಿಗಳನ್ನು ಫ್ರಿಜ್‌ನಲ್ಲಿ ಇಡಬಾರದು. ಮೃದುವಾದ ಹಣ್ಣಾಗಿರುವುದರಿಂದ ಬಹಳ ಬೇಗ ಫ್ರೀಜರ್‌ನಲ್ಲಿ ಗಟ್ಟಿಯಾಗುತ್ತದೆ. ಇದು ರುಚಿ ಹಾಗೂ ಅದರ ನೈಸರ್ಗಿಕ ಗುಣಗಳ ಹಾಳು ಮಾಡುತ್ತದೆ. ಹಾಗೆ ಬಹಳ ದಿನ ಫ್ರೀಜರ್‌ನಲ್ಲಿದ್ದರೆ ಇದರಲ್ಲೂ ಹರಳಿನ ಆಕಾರದಲ್ಲಿ ಹಣ್ಣಿನ ಮೇಲೆ ರಚನೆಗಳ ನೋಡಬಹುದು. ಇದು ಹಾನಿಕಾರಕವಾಗಬಹುದು.
ಟೊಮ್ಯಾಟೋ ಹಣ್ಣು
ಟೊಮ್ಯಾಟೋಗಳು ಬಹುಬೇಗ ಹಾಳಾಗುತ್ತವೆ ಎಂದು ಎಲ್ಲರು ಫ್ರೀಜರ್‌ನಲ್ಲಿ ಇಡುವುದು ನೋಡಬಹುದು. ಆದಷ್ಟು ತಣ್ಣಗಿರುವ ಜಾಗದಲ್ಲಿ ಅಥವಾ ಕೋಣೆಯಲ್ಲಿಯೇ ಟೊಮೆಟೋಗಳನ್ನು ಸಂಗ್ರಹಿಸಬೇಕು. ಫ್ರೀಜರ್‌ನಲ್ಲಿ ಟೊಮೆಟೋಗಳ ಇರಿಸಿದರೆ ಅದು ವಿಷಕಾರಿ ಅಂಶವನ್ನು ಹೊರಹಾಕಬಹುದು. ಇದನ್ನು ಸೇವಿಸುವುದು ಬಹಳ ಅಪಾಯಕಾರಿಯಾಗಲಿದೆ.
ಪೀಚ್‌ಗಳು
ಫ್ರಿಜ್‌ನಲ್ಲಿ ಪೀಚ್‌ಗಳನ್ನು ಸಂಗ್ರಹಿಸುವುದರಿಂದ ಅವುಗಳ ಮೃದುತ್ವ ಮತ್ತು ರುಚಿಯನ್ನು ಹಾಳು ಮಾಡಲಿದೆ. ಪೀಚ್ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ. ಇದು ಫ್ರೀಜರ್‌ನಲ್ಲಿ ಗಟ್ಟಿಯಾಗುತ್ತದೆ. ಇದರಲ್ಲಿ ಹರಳಿನ ಆಕಾರದ ವಸ್ತುಗಳು ರಚನೆಯಾಗುವುದು ನೋಡಬಹುದು. ಹೀಗಾಗಿ ಪೀಚ್‌ಗಳನ್ನು ಫ್ರಿಜರ್‌ನಲ್ಲಿ ಇಡಬೇಡಿ.
ಸಿಟ್ರಸ್ ಆಮ್ಲ ಹೊಂದಿರುವ ಹಣ್ಣುಗಳು
ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಆಮ್ಲ ಹೆಚ್ಚಾಗಿರುವ ಹಣ್ಣುಗಳನ್ನು ಫ್ರಿಜರ್‌ನಲ್ಲಿ ಇಡಬೇಡಿ. ಸಿಟ್ರಸ್ ಆಮ್ಲದ ಕಾರಣದಿಂದಾಗಿ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಇದರಿಂದ ಬಹುಬೇಗ ಹಾಳಾಗಬಹುದು. ಅಥವಾ ಈ ಹಣ್ಣುಗಳು ಬೇರೆ ತರಕಾರಿಗಳ ಜೊತೆಗೆ ಅಥವಾ ಬೇರೆ ಹಣ್ಣುಗಳ ಜೊತೆ ಸೇರಿ ರಾಸಾಯನಿಕ ಕ್ರಿಯೆಗೆ ಒಳಗಾಗಬಹುದು.



Click it and Unblock the Notifications









