Latest Updates
-
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ!
ಭಾರತದಲ್ಲಿ ಮತ್ತೆ ಝಿಕಾ ವೈರಸ್ ದೃಢ..! ಏನಿದರ ಲಕ್ಷಣ? ಹರಡುವುದು ಹೇಗೆ?
ಝಿಕಾ ವೈರಲ್ ಬಹುಪಾಲು ಮಂದಿ ಈ ಹೆಸರು ಕೇಳಿರುತ್ತೀರಿ, ಅದ್ರಲ್ಲೂ ಭಾರತದಲ್ಲಿ ಒಮ್ಮೆ ಈ ವೈರಸ್ ಭಾರೀ ಆತಂಕ ಹಾಗೂ ಗ ಭೀತಿಗೆ ಕಾರಣವಾಗಿತ್ತು. ಏಕೆಂದರೆ ಕೊರೊನಾ ಸಮಯದಲ್ಲಿ ಝಿಕಾ ವೈರಸ್ ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ ಝಿಕಾ ವೈರಸ್ ಭೀತಿ ಇಂದಿಗೂ ಕಡಿಮೆಯಾಗದೆ ಉಳಿದಿದೆ.
ಆಫ್ರಿಕಾ ಮತ್ತು ಏಷಿಯಾದ ಕೆಲವು ಪ್ರದೇಶಗಳಲ್ಲಿ ಮಾರಣಾಂತಿಕವಾಗಿ ಪರಿಣಮಿಸಿದ್ದ ಈ ವೈರಸ್ ಈಗ ಭಾರತದಲ್ಲಿ ಮತ್ತೆಯಾಗಿದೆ. ಝಿಕಾ ವೈರಸ್ ಸೊಳ್ಳೆಗಳಿಂದ ಹರಡುವ ರೋಗವಾಗಿದೆ. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆ ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುವುದು. ಹಗಲಿನಲ್ಲಿ ಕಚ್ಚುವ ಸೊಳ್ಳೆ ಈ ರೋಗವನ್ನು ಹರಡುತ್ತದೆ.

1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ಝಿಕಾ ನಂತರ ಪ್ರಪಂಚದ ಅನೇಕ ಭಾಗಗಳಿಗೆ ಹರಡಿತು, ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಅಮೆರಿಕಗಳಲ್ಲಿ ಏಕಾಏಕಿ ಹರಡಿತು. ಪುಣೆಯಲ್ಲಿ ಇತ್ತೀಚಿನ ಝಿಕಾ ಪ್ರಕರಣ ವರದಿಯಾಗಿದ್ದು, ಜೂನ್ 21 ರಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ವರದಿಗಳಿಂದ ದೃಢೀಕರಿಸಲ್ಪಟ್ಟಿದೆ. ರೋಗಿಯು 46 ವರ್ಷದ ವೈದ್ಯರಾಗಿದ್ದು, ಆಕೆಯ ಮಗಳಿಗೂ ಪಾಸಿಟಿವ್ ವರದಿಯಾಗಿದೆ.
ಝಿಕಾ ವೈರಸ್ ಹರಡುವುದು ಹೇಗೆ?
ಝಿಕಾ ವೈರಸ್ ಸೋಂಕಿಗೆ ಪ್ರಾಥಮಿಕ ಕಾರಣವೆಂದರೆ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದು.
ತಾಯಿಯಿಂದ ಮಗುವಿಗೆ ಹರಡುವಿಕೆ
ಲೈಂಗಿಕ ಪ್ರಸರಣ
ರಕ್ತ ವರ್ಗಾವಣೆ
ರೋಗಲಕ್ಷಣಗಳು
ಕಡಿಮೆ ದರ್ಜೆಯ ಜ್ವರ, ಸಾಮಾನ್ಯವಾಗಿ ಮಂದವಾಗಿ ಮೈ ಬಿಸಿಯಾಗಿ ಜ್ವರ ಬರುವುದು ಮೊದಲ ಲಕ್ಷಣವಾಗಿದೆ. ಜೊತೆಗೆ ಮೈಮೇಲೆ ಕೆಂಪು ಕಲೆಗಳು ಮತ್ತು ಉಬ್ಬುಗಳು ಅಥವಾ ತುರಿಕೆ ಬರುವುದು ಆರಂಭದಲ್ಲಿ ಮುಖದ ಮೇಲೆ ಇದು ಉಂಟಾಗುತ್ತದೆ.
ನೋವು ಮತ್ತು ಊತ, ಪ್ರಾಥಮಿಕವಾಗಿ ಕೈ ಮತ್ತು ಕಾಲುಗಳ ಸಣ್ಣ ಕೀಲುಗಳಲ್ಲಿ, ಕೆಲವೊಮ್ಮೆ ಸ್ನಾಯು ನೋವಿನೊಂದಿಗೆ ಇರುತ್ತದೆ. ಕಣ್ಣು ಕೆಂಪಗಾಗುವುದು, ಮೂಳೆ ನೋವು, ನಡೆಯಲಾಗದೆ ಇರುವುದು.
ಕೆಲವು ಪ್ರಕರಣದಲ್ಲಿ ಹೊಟ್ಟೆ ನೋವು, ವಾಂತಿಯಾಗುವುದು, ಸ್ನಾಯು ಸೆಳೆತ, ಆಯಾಸವಾಗುವ ಲಕ್ಷಣವೂ ಗೋಚರವಾಗಲ್ಲ.
ಚಿಕಿತ್ಸೆ ಏನು?
ಪ್ರಸ್ತುತ, ಝಿಕಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ನಿಮ್ಮ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡಲು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣವನ್ನು ತಡೆಗಟ್ಟಲು ನೀರು, ಜ್ಯೂಸ್ ಕುಡಿಯಿರಿ, ವಿಶೇಷವಾಗಿ ವಾಂತಿ ಅಥವಾ ಅತಿಸಾರವನ್ನು ಅನುಭವಿಸಿದರೆ. ಹೆಚ್ಚು ನೀರು ಕುಡಿಯಬೇಕು.
ಮನೆಯೊಳಗೆ ಇರಿ, ಕೀಟ ನಿವಾರಕವನ್ನು ಬಳಸಿ, ಉದ್ದನೆಯ ತೋಳು ಇರುವ ಬಟ್ಟೆ ಮತ್ತು ಪ್ಯಾಂಟ್‌ಗಳನ್ನು ಧರಿಸುವುದು. ರೋಗ ನಿರೋಧಕ ಶಕ್ತಿ ಹೆಚ್ಚುವಂತಹ ಆಹಾರ, ಹಣ್ಣು ಸೇವಿಸುವುದು.
ಝಿಕಾ ವೈರಸ್ ತಡೆಗಟ್ಟುವುದು ಹೇಗೆ?
ಝಿಕಾ ವೈರಸ್ ಪತ್ತೆಯಾದ ಕಡೆ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ, ಅಂದ್ರೆ ತುಂಬು ತೋಳಿನ ಬಟ್ಟೆ ಧರಿಸಿ. ಇಲ್ಲವೆ ಮನೆಯ ಬಳಿ ಸ್ವಚ್ಛ ಮಾಡಿ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿ. ಸೊಳ್ಳೆ ಪರದೆ ಹಾಕಿಕೊಳ್ಳುವುದು ಉತ್ತಮ. ಮನೆಯ ಸುತ್ತ ನೀರು ನಿಲ್ಲಲು ಬಿಡಬೇಡಿ, ಬಾಗಿಲು, ಕಿಟಲಿಗಳಿಗೆ ಸೊಳ್ಳೆ ಪರದೆ ಹಾಕಿ. ಬೆಡ್‌ಗೆ ಸೊಳ್ಳೆ ಪರದೆ ಬಳಸಿ. ಸೊಳ್ಳೆ ನಿವಾರಕ ಔಷಧಿಗಳನ್ನು ಮನೆಯ ಸುತ್ತ ಸಿಂಪಡಿಸಿ. ಮಕ್ಕಳು ಹಾಗೂ ಗರ್ಭಿಣಿಯರು ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ತುಂಬು ತೋಳಿನ ಸಡಿಲವಾದ ಬಟ್ಟೆ ಧರಿಸಿ. ಇಷ್ಟೇ ಅಲ್ಲ ರೋಗ ನಿರೋಧಕ ಶಕ್ತಿ ಹೆಚ್ಚುವ ಆಹಾರ ಸೇವಿಸಿ. ಜ್ವರ ಇದ್ದರೆ ತಕ್ಷಣ ವೈದ್ಯರ ಸಂಪರ್ಕಿಸಿ ತಡಮಾಡದೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications