Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬರೋಬ್ಬರಿ 500 ಮಂದಿಗೆ ಝಿಕಾ ವೈರಸ್ ಪತ್ತೆ..! ಇದು ಹರಡುವುದು ಹೇಗೆ?
ಮಳೆಗಾಲದ ಆರಂಭದಲ್ಲಿ ನಾವು ಹಲವು ರೀತಿಯ ವೈರಸ್‌ಗಳು, ಕಾಯಿಲೆಗಳು ಹರಡುವುದನ್ನು ನೋಡಬಹುದು. ಅದರಲ್ಲೂ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾ, ಹಂದಿ ಜ್ವರ, ಹಕ್ಕಿ ಜ್ವರ ಹೀಗೆ ಪಟ್ಟಿಗಳು ಬೆಳೆಯುತ್ತವೆ. ಇದರ ಜೊತೆಗೆ ಒಂದಿಷ್ಟು ಹೊಸ ಕಾಯಿಲೆಗಳು ಸಹ ನೋಡಬಹುದು. ಕೊರೊನಾ, ಝಿಕಾ, ಎಬೋಲಾ ಹೀಗೆ ಹೊಸ ಹೊಸ ವೈರಸ್ ಕಾಯಿಲೆಗಳನ್ನು ಕೂಡ ನಾವು ನೋಡಿದ್ದೇವೆ.
ಸದ್ಯ ಝಿಕಾ ವೈರಸ್ ರಾಜ್ಯದಲ್ಲಿ ಈ ಹಿಂದೆ ದೊಡ್ಡ ಆಘಾತಕ್ಕೆ ಕಾರಣವಾಗಿತ್ತು. ಶಿವಮೊಗ್ಗದ 73 ವರ್ಷದ ವ್ಯಕ್ತಿಯೊಬ್ಬರು ಝಿಕಾ ವೈರಸ್‌ಗೆ ಬಲಿಯಾಗಿದ್ದರು, ಇದು ಭಾರೀ ಅತಂಕ ಹುಟ್ಟಿಸಿತ್ತು, ಆದ್ರೆ ಈ ಪ್ರಕರಣದ ಬಳಿಕ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ. ಅದ್ರೆ ಭಾರತದಲ್ಲಿ ಝಿಕಾ ವೈರಸ್ ಹಾವಳಿ ಇಂದಿಗೂ ಇದೆ. ಕೊರೊನಾಗಿಂತಲೂ ಪ್ರಬಲವಾಗಿ ಹರಡುತ್ತಿದೆ.

ಗುಜರಾತ್‌ನ ಗಾಂಧಿನಗರದಲ್ಲಿ ಝಿಕಾ ವೈರಸ್ ಹರಡುತ್ತಿದೆ. ಈವರೆಗೆ ಒಟ್ಟು 500ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣ ವರದಿಯಾಗಿದೆ. 70 ವರ್ಷದ ವ್ಯಕ್ತಿಯೊಬ್ಬರು ಝಿಕಾ ವೈರಸ್ ಸೋಂಕಿಗೆ ಒಳಗಾದ ನಂತರ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಝಿಕಾ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಶೀತ, ಜ್ವರ ಮತ್ತು ಕೀಲು ನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಝಿಕಾ ವೈರಸ್ ಇರುವುದು ಪತ್ತೆಯಾಗಿತ್ತು, ನಂತರ ತೀವ್ರ ನಿಗಾ ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, ಈಗ ಅವರು ವೈರಸ್‌ನಿಂದ ಮುಕ್ತಿ ಪಡೆದಿದ್ದು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಝಿಕಾ ವೈರಸ್ ಲಕ್ಷಣಗಳೇನು?
- ವಿಪರೀತ ಜ್ವರ ಬರುವುದು
- ಕಣ್ಣುಗಳು ಕೆಂಪಾಗುವುದು
- ಮೈ ಮೇಲೆ ಕೆಂಪು ಗುಳ್ಳೆಗಳು
- ಸ್ನಾಯುಗಳ ನೋವು, ಮೈಕೈ ನೋವು
- ಸುಸ್ತು
- ವಾಂತಿ
- ಅತಿಸಾರ
ಈ ಝಿಕಾ ವೈರಸ್ ಹರಡುವುದು ಹೇಗೆ?
ಝೀಕಾ ವೈರಸ್ ಸೋಂಕಿತ ಸೊಳ್ಳೆಗಳು ಕಚ್ಚಿದಾಗ ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆಗಳು ಝೀಕಾ ವೈರಸ್ ಸೋಂಕು ಹರಡುತ್ತದೆ. ಈ ಸೋಳ್ಳೆಗಳು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಚ್ಚುತ್ತದೆ ಎಂದು ತಿಳಿದುಬಂದಿದೆ. ಹಾಗೆ ಝಿಕಾ ವೈರಸ್ ಹರಡಿರುವ ವ್ಯಕ್ತಿಯಿಂದ ರಕ್ತವನ್ನು ಪಡೆದಾಗ ಮತ್ತೊಬ್ಬರಲ್ಲಿ ಇದು ಕಂಡುಬರುತ್ತದೆ.
ಝಿಕಾ ವೈರಸ್ ಸೋಂಕಿತ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದಾಗ ಕೂಡ ಈ ಸೋಂಕು ಹರಡುವುದು. ಝಿಕಾ ವೈರಸ್ ಗರ್ಭಿಣಿಯಲ್ಲಿದ್ದರೆ ಹುಟ್ಟುವ ಮಗುವಿನಲ್ಲಿಯೂ ಕಂಡು ಬರುತ್ತದೆ. ಝಿಕಾ ವೈರಸ್ ತಗುಲಿರುವವರ ದೇಹದ ದ್ರವಾಂಶ ತಗುಲಿದರೂ ಸೋಂಕು ಹರಡುವುದು.
ಝಿಕಾ ಹರಡಿದರೆ ಚಿಕಿತ್ಸೆಯೇನು?
ಝಿಕಾ ವೈರಸ್‌ಗೆ ನಿರ್ದಿಷ್ಟವಾದ ಯಾವುದೇ ಚಿಕಿತ್ಸೆ ಎಂಬುದಿಲ್ಲ, ರೋಗಿಯ ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಝಿಕಾ ವೈರಸ್ ತಗುಲಿದರೆ ಚಿಕಿತ್ಸೆ ಪಡೆಯುವುದರ ಜೊತೆಗೆ ತುಂಬಾನೇ ವಿಶ್ರಾಂತಿಯ ಅವಶ್ಯಕತೆ ಇದೆ. ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು.
ಝಿಕಾ ಹರಡದಂತೆ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ?
ಝಿಕಾ ಸೊಳ್ಳೆಗಳ್ಳಿಂದ ಹರಡುವುದರಿಂದ ಸೊಳ್ಳೆ ಕಚ್ಚುವುದರಿಂದ ನಾವು ಪಾರಾಗುವಂತಹ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅದರಲ್ಲೂ ಹಗಲಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ. ಹೀಗಾಗಿ ಮನೆಯ ಸುತ್ತಲು ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಾಗೆ ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
