Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ!
ಝೀಕಾ ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ: ಸೊಳ್ಳೆಯಿಂದ ಬರುವ ಈ ಭಯಾನಕ ಕಾಯಿಲೆಯ ಲಕ್ಷಣಗಳೇನು?
ಡೆಂಗ್ಯೂ ಆರ್ಭಟ ಸ್ವಲ್ಪ ತಗ್ಗಿರುವಾಗ ರಾಜ್ಯದಲ್ಲಿ ಝೀಕಾ ವೈರಸ್‌ಗೆ ಒಂದು ಬಲಿಯಾಗಿದೆ. ಶಿವಮೊಗ್ಗದ 73 ವರ್ಷದ ವ್ಯಕ್ತಿಯೊಬ್ಬರು ಝೀಕಾ ವೈರಸ್‌ಗೆ ಬಲಿಯಾಗಿದ್ದಾರೆ. ಆ ವ್ಯಕ್ತಿಯಲ್ಲಿ ಝೀಕಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಝೀಕಾ ವೈರಸ್ ಕರ್ನಾಟಕದಲ್ಲಿ 2022ರಲ್ಲಿ ಮೊಟ್ಟ ಮೊದಲಿಗೆ ಪತ್ತೆಯಾಯ್ತು
2022ರಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು, ಭಾರತದಲ್ಲಿ 2018ರಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು. ಆವಾಗ ರಾಜಾಸ್ಥಾನ, ಮಧ್ಯಪ್ರದೇಶ. ಗುಜರಾತ್‌ನಲ್ಲಿ ಆತಂಕ ಸೃಷ್ಟಿಸಿತ್ತು. ಸುಮಾರು 280 ಜನರಲ್ಲಿ ಈ ಸೋಂಕು ಕಂಡು ಬಂದಿತ್ತು, ಮೂವರು ಬಲಿಯಾಗಿದ್ದರು.
ಈ ಝೀಕಾ ವೃರಸ್ ಲಕ್ಷಣಗಳೇನು?
ವಿಪರೀತ ಜ್ವರ
ಕಣ್ಣುಗಳು ಕೆಂಪಾಗುವುದು
ಮೈ ಮೇಲೆ ಕೆಂಪು ಗುಳ್ಳೆಗಳು ಕಂಡು ಬರುವುದು
ಸ್ಬಾಯುಗಳಲ್ಲಿ ನೋವು, ಮೈಕೈ ನೋವು
ತುಂಬಾ ಸುಸ್ತು
ವಾಂತಿ, ಬೇಧಿ
ಈ ಝೀಕಾ ವೈರಸ್ ಹರಡುವುದು ಹೇಗೆ?
ಸೊಳ್ಳೆಗಳು ಹೆಚ್ಚು ಅಪಾಯಕಾರಿ: ಝೀಕಾ ವೈರಸ್ ಸೋಂಕಿತ ಸೊಳ್ಳೆಗಳು ಕಚ್ಚಿದಾಗ ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆಗಳು ಝೀಕಾ ವೈರಸ್ ಸೋಂಕು ಹರಡುತ್ತದೆ. ಈ ಸೋಲ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಗಳಾಗಿವೆ.
ಝೀಕಾ ವೈರಸ್ ತಗುಲಿರುವ ವ್ಯಕ್ತಿಯ ರಕ್ತ ಪಡೆದಾಗ ಕೂಡ ಈ ಸೋಂಕು ಹರಡುವುದು
ಝೀಕಾ ವೈರಸ್ ಸೋಂಕಿತ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದಾಗ ಕೂಡ ಈ ಸೋಂಕು ಹರಡುವುದು.
ಝೀಕಾ ವೈರಸ್ ಗರ್ಭಿಣಿಯಲ್ಲಿದ್ದರೆ ಹುಟ್ಟುವ ಮಗುವಿನಲ್ಲಿಯೂ ಕಂಡು ಬರುವುದು.
ಝೀಕಾ ವೈರಸ್ ತಗುಲಿರುವವರ ದೇಹದ ದ್ರವಾಂಶ ತಗುಲಿದರೂ ಸೋಂಕು ಹರಡುವುದು.
ಝೀಕಾ ವೈರಸ್‌ಗೆ ಚಿಕಿತ್ಸೆಯೇನು?
ಝೀಕಾ ವೈರಸ್‌ಗೆ ನಿರ್ದಿಷ್ಟವಾದ ಯಾವುದೇ ಚಿಕಿತ್ಸೆಯಿಲ್ಲ, ರೋಗಿಯ ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು. ಜೀಕಾ ವೈರಸ್ ತಗುಲಿದರೆ ನಚಿಕಿತ್ಸೆ ಪಡೆಯುವುದರ ಜೊತೆಗೆ ತುಂಬಾನೇ ವಿಶ್ರಾಂತಿಯ ಅವಶ್ಯಕತೆ ಇದೆ. ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು.
ಝೀಕಾ ವೈರಸ್ ಬರದಂತೆ ಮುನ್ನೆಚ್ಚರಿಕೆ ಹೇಗೆ ವಹಿಸಬೇಕು?
ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಐಸೋಲೇಟ್ ಮಾಡಬೇಕು. ನಂತರ ಅವರಿಗೆ ಚಿಕಿತ್ಸೆ ಮಾಡಬೇಕು. ಅವರನ್ನು ಮುಟ್ಟುವಾಗ, ಆರೈಕೆ ಮಾಡುವಾಗ ಮಾಸ್ಕ್, ಗ್ಲೌಸ್ ಹಾಕಿ ಆರೈಕೆ ಮಾಡಬೇಕು.
ಸೊಳ್ಳೆಗಳು ಕಚ್ಚದಂತೆ ಜಾಗ್ರತೆವಹಿಸಬೇಕು.
ಸೊಳ್ಳೆ ಕಚ್ಚದಿರಲು ಕ್ರೀಮ್‌ಗಳನ್ನು ಹಚ್ಚಿ(ಸೊಳ್ಳೆ ಕಚ್ಚದಿರಲು ಸಿಗುತ್ತೆ, ಬಾಡಿ ಲೋಷನ್ ಇತರ ಸ್ಕಿನ್ ಕೇರ್ ಲೋಷನ್‌ಗಳು ಸೊಳ್ಳೆಗಳನ್ನು ಆಕರ್ಷಿಸುತ್ತದೆ)
ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು:
ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ತುಂಬಾನೇ ಅಪಾಯಕಾರಿ, ಹಾಗಾಗಿ ಈ ಸಮಯದಲ್ಲಿ ಗರ್ಭಿಣಿಯರು ಸೊಳ್ಳೆ ಕಚ್ಚದಂತೆ, ಕಾಯಿಲೆ ಇರುವವರ ಹತ್ತಿರ ಹೋಗದಂತೆ ಜಾಗ್ರತೆವಹಿಸಬೇಕು.
ಬೆಂಗಳೂರಿನಲ್ಲಿ ಐವರಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ
ಬೆಂಗಳೂರಿನಲ್ಲಿ ಝೀಕಾ ವೈರಸ್ ಐವರಲ್ಲಿ ಕಂಡು ಬಂದಿದೆ, ಅವರಲ್ಲಿ ಇಬ್ಬರು ಗರ್ಭಿಣಿಯರು ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications