Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರೇ, ನಿಮ್ಮ ಅಂಡರ್‌ವೇರ್ ಮಧ್ಯಭಾಗ ಬಣ್ಣಮಾಸುತ್ತಿದೆಯೇ? ಏನಿದರ ಸೂಚನೆ?
ಹೊಸ ಕಾಚ ಬಳಸಲಾರಂಭಿಸಿ ಕೆಲವು ತಿಂಗಳಾಗಿರುವುದಿಲ್ಲ, ಅಷ್ಟರಲ್ಲಿ ಅದರ ಮಧ್ಯಭಾಗದಲ್ಲಿ ಬಣ್ಣ ಹೋಗಿ ಬಿಳಿಯಾಗುವುದರಿಂದ ಆ ಕಾಚ ಧರಿಸಲು ಅಸಹ್ಯ ಪಟ್ಟು ತುಂಬಾ ಜನ ಬಿಸಾಡುತ್ತಾರೆ. ಈ ರೀತಿ ಬಣ್ಣ ಹೋದ ಕಾಚ ನೋಡಲು ತುಂಬಾ ಜನರಿಗೆ ಮುಜುಗರ, ಒಗೆದು ಹಾಕಿದಾಗ ಆ ಕಾಚ ಬೇರೆಯವರ ಕಣ್ಣಿಗೆ ಬಿದ್ದರೆ ಶುದ್ಧತೆ ಕಾಪಾಡಿಕೊಳ್ಳದವಳೇ? ಎಂದು ಭಾವಿಸುತ್ತಾರೆ ಎಂಬ ಮುಜುಗರ ತುಂಬಾ ಮಹಿಳೆಯರಲ್ಲಿರುತ್ತದೆ.

ಈ ಕಾರಣಕ್ಕೆ ಕಾಚವನ್ನು ಬಿಸಾಡಿ ಹೊಸದು ಧರಿಸಲಾರಂಭಿಸುತ್ತಾರೆ, ಆ ಕಾಚ ಧರಿಸಲಾರಂಭಿಸಿದ ಕೆಲವೇ ಸಮಯದಲ್ಲಿ ಅದರ ಮಧ್ಯಭಾಗದಲ್ಲಿ ಬಣ್ಣವು ಮಾಸುತ್ತದೆ. ಮಹಿಳೆಯರೇ ನಿಮಗೊಂದು ವಿಷಯ ಗೊತ್ತಾ ನೀವು ಅಂಥ ಕಾಚವನ್ನು ಬಿಸಾಡಬೇಕಾಗಿಲ್ಲ, ಅಲ್ಲದೆ ನಿಮ್ಮ ಕಾಚ ಈ ರೀತಿ ಬಣ್ಣ ಮಾಸುತ್ತಿದ್ದರೆ ನೀವು ಖುಷಿಪಡಿ, ಏಕೆ ಎಂದು ತಿಳಿಯಲು ಈ ಲೇಖನ ಓದಿ:
ಆರೋಗ್ಯಕರ ಜನನೇಂದ್ರೀಯದ ಲಕ್ಷಣವಾಗಿದೆ
ಕಾಚದ ಬಣ್ಣ ಮಾಸುತ್ತಿದ್ದರೆ ನಿಮ್ಮ ಜನನೇಂದ್ರೀಯ ಆರೋಗ್ಯಕರವಾಗಿದೆ ಎಂದು ಖುಷಿ ಪಡಿ. ಬಿಳುಪು ಹೋಗುವುದು ಸಹಜ ಕ್ರಿಯೆ (ತುಂಬಾ ಹೋಗುವುದಲ್ಲ). ಹೀಗೆ ಬಿಳುಪು ಹೋದಾಗ ಬಿಳುಪಿನಲ್ಲಿರುವ ಅಸಿಡಿಕ್ ಅಂಶದಿಂದಾಗಿ ನಿಮ್ಮ ಕಾಚಾದ ಬಣ್ಣ ಬದಲಾಗುವುದು. ಆದ್ದರಿಂದ ಈ ರೀತಿ ನಿಮಗೆ ಮಾತ್ರ ಉಂಟಾಗುತ್ತಿದೆ ಎಂಬ ಮುಜುಗರ ಬೇಡ. ಆರೋಗ್ಯಕರವಾದ ಜನನೇಂದ್ರೀಯದ ಲಕ್ಷಣವಾಗಿರುವುದರಿಂದ ಈ ರೀತಿ ಕಂಡು ಬಂದರೆ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಖುಷಿ ಪಡಿ. ಆದ್ದರಿಂದ ಕಾಚಾ ಬೆಳ್ಳಗಾದರೆ ಅವುಗಳನ್ನು ಬಿಸಾಡಬೇಕು ಎಂದು ಭಾವಿಸಬೇಕಾಗಿಲ್ಲ. ಆರೋಗ್ಯಕರವಾದ ಜನನೇಂದ್ರೀಯ pH ಪ್ರಮಾಣ 3.8ರಿಂದ 5ರ ನಡುವೆ ಇರುತ್ತದೆ.
ಈ ಬಗ್ಗೆ ಕಂಡು ಬಂದರೆ ಗಮನಹರಿಸಿ
ಬಿಳುಪು ಹೋಗುವುದು ಸಹಜ. ಆದ್ದರಿಂದ ನೀವು ಚಿಂತಿಸಬೇಕಾಗಿಲ್ಲ. ಋತುಮತಿಯಾದಾಗಿನಿಂದ ಮೆನೋಪಾಸ್ ಹಂತದವರೆಗೆ ಈ ರೀತಿ ಬಿಳುಪು ಹೋಗುವುದು ಅಹಜ. ಈ ಬಿಳುಪು ಜನನೇಂದ್ರೀಯ ತುಂಬಾ ಡ್ರೈಯಾಗದಂತೆ ಕಾಪಾಡುತ್ತದೆ.
ಆದರೆ ಬಿಳುಪು ತುಂಬಾ ಹೋಗುತ್ತಿದ್ದರೆ, ಚೀಸ್ ರೀತಿ ಹೋಗುತ್ತಿದ್ದರೆ, ಹಾಲು ಕೆನೆ ರೀತಿಯಿದ್ದರೆ, ದುರ್ವಾಸನೆಯಿಂದ ಕೂಡಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು. ಬಿಳುಪಿನ ಬಣ್ಣ ಬದಲಾದರೂ ನಿರ್ಲಕ್ಷ್ಯ ಮಾಡಬಾರದು. ಜನನೇಂದ್ರೀಯ ಸುತ್ತ ತುರಿಕೆ, ಕೆಂಪು-ಕೆಂಪು ಗುಳ್ಳೆಗಳು ಈ ರೀತಿ ಕಂಡು ಬಂದರೆ ನಿಮ್ಮ ವೈದ್ಯರ ಬಳಿ ಹೇಳಿ ಸೂಕ್ತ ಔಷಧ, ಸಲಹೆ ಸೂಚನೆ ಪಡೆಯಿರಿ.
ಒಳಉಡುಪಿನ ಬಣ್ಣ ಬದಲಾಗುವುದನ್ನು ತಡೆಗಟ್ಟಬಹುದೇ?
ನಿಮಗೆ ಈ ರೀತಿ ಕಾಚಾದ ಬಣ್ಣ ಬದಲಾಗುವುದು ಇಷ್ಟವಿಲ್ಲದಿದ್ದರೆ ಪ್ರತಿಬಾರಿ ಮೂತ್ರ ವಿಸರ್ಜನೆ ಮಾಡಿದಾಗ ಮೃದುವಾದ ಟಿಶ್ಯೂವಿನಿಂದ ಒರೆಸಿ
* ಪ್ಯಾಂಟಿ ಲೈನರ್ ಬಳಸಿ
* ಈ ರೀತಿಯಾಗುವುದು ತುಂಬಾ ಸಹಜ, ಆದ್ದರಿಂದ ತಲೆಕೆಡಿಸಿಕೊಳ್ಳಬೇಡಿ.
* ಕಾಚಾ ಬಿಳಿಯಾದರೆ ನೀವು ಸ್ವಚ್ಛವಾಗಿ ಒಳಉಡುಪು ಒಗೆಯುತ್ತಿಲ್ಲ ಎಂದು ಭಾವಿಸಬೇಕಾಗಿಲ್ಲ, ಎಲ್ಲಾ ಮಹಿಳೆಯರಿಗೂ ಈ ರೀತಿಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
