Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಾಸಿವೆ ಎಣ್ಣೆಯಿಂದಾಗುವ ಉಪಯೋಗ ತಿಳಿದರೆ ಅಚ್ಚರಿಯಾಗುತ್ತೆ..!
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಎಣ್ಣೆಯೆಂದರೆ ಸಾಸಿವೆ ಎಣ್ಣೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಗೂ ಕೆಲವು ಆರೋಗ್ಯ ಸುಧಾರಣೆಯ ಆರೈಕೆಯಲ್ಲಿ ಬಳಸುತ್ತಾರೆ. ಇದನ್ನು ವೈಜ್ಞಾನಿಕವಾಗಿ ಬ್ರಾಸಿಕಾ ಜುನ್ಸಿಕಾ ಎಂದು ಕರೆಯುವರು. ಸಾಸಿವೆ ಎಣ್ಣೆಯು ಅತ್ಯುತ್ತಮ ಸುವಾಸನೆಯನ್ನು ಹೊಂದಿರುತ್ತೆ. ಹೀಗಾಗಿ ಅಡುಗೆಗೆ ಒಂದು ಸ್ಪೂನ್ ಬಳಸಿದರೆ ಅದರ ವಾಸನೆಯೂ ಇಡೀ ಅಡುಗೆಯನ್ನು ಮತ್ತಷ್ಟು ರುಚಿಯಾಗಿಸುತ್ತೆ.
ಆಯುರ್ವೇದದ ಚಿಕಿತ್ಸಾ ವಿಧಾನದಲ್ಲಿ ಸಾಸಿವೆ ಎಣ್ಣೆ ಬಹಳ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ನಿದರ್ಶನ #2: ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಆರೋಗ್ಯಕರ ಕೊಬ್ಬಿನಾಂಶವಿರುವುದಿಲ್ಲ ಇದು ನಮ್ಮ ಮಿದುಳಿನ ಕಾರ್ಯವನ್ನು ಆರೋಗ್ಯವಾಗಿರುವುದಲ್ಲದೆ ನೆನಪಿನ ಶಕ್ತಿಯನ್ನು ಚುರುಕುಗೊಳ್ಳಿಸುತ್ತದೆ ಎಂದು ತಿಳಿದುಬಂದಿದೆ.

ನೀವು ಈ ಸಾಸಿವೆ ಎಣ್ಣೆಯ ಉಪಯೋಗ ತಿಳಿದರೆ ಮತ್ತೆಂದು ಬೇರೆ ಎಣ್ಣೆಯನ್ನು ಬಳಸುವುದೇ ಇಲ್ಲ. ಏಕೆಂದರೆ ಇದೊಂದು ಜೀವ ರಕ್ಷಕ ಎಣ್ಣೆಯಾಗಿದೆ. ಇತ್ತೀಚಿಗೆ ಎಣ್ಣೆ ಪದಾರ್ಥಗಳ ಸೇವಿಸಬೇಡಿ ಎಂಬುದು ಮನೆ ಮಾತಾಗಿದೆ, ಆದ್ರೆ ಸಾಸಿವೆ ಎಣ್ಣೆ ಮಾತ್ರ ಇದಕ್ಕೆಲ್ಲ ತದ್ವಿರುದ್ದವಾಗಿದೆ. ಹಾಗಾದ್ರೆ ಸಾಸಿವೆ ಎಣ್ಣೆಯ ಉಪಯೋಗವೇನು? ಎಲ್ಲಿ ನಾವು ಬಳಸಬಹುದು ಎಂಬುದನ್ನು ನಾವಿಂದು ಈ ಕೆಳಗೆ ನೀಡಲಾದ ಅಂಶಗಳಿಂದ ತಿಳಿದುಕೊಳ್ಳೋಣ.
ವಾತಾವರಣದ ವ್ಯತ್ಯಾಸದಿಂದ ಉಂಟಾಗುವ ಕೆಮ್ಮು, ಶೀತ, ಜ್ವರಕ್ಕೆ ಈ ಸಾಸಿವೆ ಎಣ್ಣೆ ಮನೆಮದ್ದು, ಇದರ ಜೊತೆಗೆ ನಿಮಗೆ ಕೀಲು ನೋವಿದ್ದರೆ ಸಾಸಿವೆ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಗಂಟುಗಳಿಗೆ ಹಚ್ಚುವುದರಿಂದ ನೋವಿ ಕಡಿಮೆಯಾಗುತ್ತದೆ. ಇದರಲ್ಲಿ ನೋವು ನಿವಾರಕ ಗುಣಗಳಿವೆ. ಹೀಗಾಗಿಯೇ ಆಯುರ್ವೇದದ ಬಹುತೇಕ ಚಿಕಿತ್ಸೆಗಳಲ್ಲಿ ಸಾಸಿವೆ ಎಣ್ಣೆಯನ್ನೇ ಬಳಸಲಾಗುತ್ತದೆ.
ಸಾಸಿವೆ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಲ್ಲಿ ಮತ್ತು ಉತ್ತಮ ಕೊಲೆಸ್ಟರಾಲ್ ಅನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ಅಸಂಘಟಿತ ಕೊಬ್ಬುಗಳು ಮತ್ತು ಬಹುಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಸಹ ಒಳಗೊಂಡಿದೆ. ಜೊತೆಗೆ ಇದೊಂದು ಮೋಯಿಶ್ಚರೈಸರ್ ಆಗಿಯೂ ಕೆಲಸ ಮಾಡುತ್ತೆ. ಮುಖ, ಕೈ ಕಾಲು ಒಣಗಿದರೆ, ತೇವಾಂಶ ಇಲ್ಲದಿದ್ದರೆ ಈ ಎಣ್ಣೆ ಹಚ್ಚಿಕೊಳ್ಳಬಹುದು. ಬೇರೆ ಎಲ್ಲಾ ಎಣ್ಣೆಗಳಿಂತ ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಪೋಷಕಾಂಶಗಳಿರುವುದರಿಂದ ಇದು ಕೊಲೆಸ್ಟ್ರಾಲ್ ತಡೆಗಟ್ಟುತ್ತದೆ.
ಸಾಸಿವೆ ಎಣ್ಣೆ ಹಲ್ಲುಗಳ ಬಲಪಡಿಸಲು, ಒಸಡುಗಳಲ್ಲಿನ ಬ್ಯಾಕ್ಟೀರಿಯ ಮತ್ತು ಹಲ್ಲಿನ ಬ್ಯಾಕ್ಟೀರಿಯವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಇದು ಹಲ್ಲುನೋವು ನಿವಾರಣೆಗೆ ಸಹ ಸಹಾಯ ಮಾಡುತ್ತದೆ. ಅಲ್ಲದೆ ತಲೆ ಹೊಟ್ಟು ಇದ್ದರೆ ಇದನ್ನು ಸ್ವಲ್ಪ ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಉತ್ತಮ.
ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಈ ಎಣ್ಣೆಯನ್ನು ಕುಡಿಯಲು ಬಹುದು. ಜೊತೆಗೆ ಹೊಟ್ಟೆಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿದರೆ ಮಲಬದ್ಧತೆ ನಿವಾರಣೆಯಾಗಲಿದೆ. ನಾವು ಸೇವಿಸುವ ಆಹಾರದಲ್ಲಿ ಅತಿ ಕಷ್ಟದಲ್ಲಿ ಜೀರ್ಣವಾಗುವ ಆಹಾರಗಳೆಂದರೆ ಎಣ್ಣೆ ಮತ್ತು ಉಪ್ಪು. ಸಾಸಿವೆ ಎಣ್ಣೆ ಹೊಟ್ಟೆಯಲ್ಲಿ ಕೊಂಚ ಪ್ರಚೋದನೆ ನೀಡುತ್ತದೆ.
ಕಿವಿಯಲ್ಲಿ ನೋವು ಕಂಡುಬಂದರೆ ಇದನ್ನು ಕರಿಬೇವಿನ ಎಲೆಗಳ ಜೊತೆಗೆ ಕಾಯಿಸಿ ಕಿವಿಯಲ್ಲಿ ಬಿಡುತ್ತಿದ್ದರು. ಇದು ಅಪಾಯಕಾರಿ ಮಾರ್ಗವಾಗಿತ್ತು, ಆದರೆ ಇದರ ಅನುಕೂಲವು ಅದರಲ್ಲಿತ್ತು. ಇದಕ್ಕೆಂದೆ ನಾಟಿ ವೈದ್ಯರು ಇರುತ್ತಿದ್ದರು. ಕಿವಿಯಲ್ಲಿ ಹುಳು, ಕೀಟ ಸೇರಿಕೊಂಡಿದ್ದರೆ ಅವುಗಳು ಹೊರಬರುವಂತೆ ಮಾಡಲು ಈ ರೀತಿ ಮಾಡುತ್ತಿದ್ದರು, ಆದರೆ ಇದೊಂದು ಅಪಾಯಕಾರಿ ಮಾರ್ಗವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

