Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದೇಹದ ಈ 6 ಭಾಗ ತುಂಬಾ ಸ್ವಚ್ಛ ಮಾಡಲು ಹೋಗಬಾರದು, ಈ ತಪ್ಪು ಮಾಡುತ್ತಿದ್ದರೆ ಇಂದೇ ಸ್ಟಾಪ್ ಮಾಡಿ
ಶುಚಿತ್ವ ಕಡೆಗೆ ಗಮನಹರಿಸಬೇಕು, ಹಾಗಂತ ದೇಹದ ಕೆಲವೊಂದು ಭಾಗವನ್ನು ನೀವು ಅತಿಯಾಗಿ ಕ್ಲೀನ್ ಮಾಡಿದರೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು. ಹಾಗಾಗಿ ಶುದ್ಧತೆ ಹೆಸರಿನಲ್ಲಿ ನೀವು ಈ ತಪ್ಪು ಮಾಡಲೇಬೇಡಿ. ದೇಹದ ಯಾವ ಭಾಗವನ್ನು ಅತಿಯಾಗಿ ಕ್ಲೀನ್ ಮಾಡಬಾರದು ಎಂದು ನೋಡೋಣ ಬನ್ನಿ:

ಕಿವಿ
ಕೆಲವರಿಗೆ ಕಿವಿಯನ್ನು ಆಗಾಗ ಶುದ್ಧ ಮಾಡುವ ಅಭ್ಯಾಸವಿರುತ್ತದೆ, ಆದರೆ ಆ ಅಭ್ಯಾಸ ಬಿಡುವುದು ಒಳ್ಳೆಯದು, ಇಲ್ಲದಿದ್ದರೆ ಕಿವಿ ಹಾಳಾಗುವುದು. ಕಿವಿಯಲ್ಲಿನ ಗುಗ್ಗೆ ತೆಗೆಯಲು ಕಿವಿಗೆ ಬಡ್ಸ್ ಹಾಕುವ ಅಭ್ಯಾಸವರುತ್ತದೆ, ಮಕ್ಕಳ ಕಿವಿಗೂ ಬಡ್ಸ್ ಹಾಕಿ ಶುಚಿ ಗೊಳಿಸುತ್ತಾರೆ, ಆದರೆ ಹೀಗೆ ಮಾಡುವುದರಿಂದ ಕಿವಿ ತಟೆಗೆ ಹಾನಿಯುಂಟಾಗಿ ಕೇಳುವಿಕೆಗೆ ತೊಂದರೆಯಾಗುವುದು. ಹಾಗಾಗಿ ದಿನಾ ಕಿವಿ ಸ್ವಚ್ಛಗೊಳಿಸಬೇಡಿ. ಕಿವಿಯಲ್ಲಿ ಗುಗ್ಗೆ ತುಂಬಿ ಮೇಲೆ ಬರುತ್ತದೆ, ನಂತರ ತೆಗೆಯಬಹುದು, ಹಾಗಾಗಿ ದಿನಾ ಕಿವಿಗೆ ಬಡ್ಸ್ ಹಾಕಿ ಕ್ಲೀನ್ ಮಾಡಬೇಡಿ.
ಡೆಡ್ ಸ್ಕಿನ್ ದಿನಾ ತೆಗೆಯಬೇಡಿ
ಮಖದ ಡೆಡ್ ಸ್ಕಿನ್ ದಿನಾ ಮಾಡಬೇಡಿ. ದಿನಾ ಡೆಡ್ ಸ್ಕಿನ್ ತೆಗೆಯುವುದು ತ್ವಚೆಗೆ ಒಳ್ಳೆಯದಲ್ಲ, ಹಾಗಾಗಿ ದಿನ ಎಕ್ಸ್ಫೋಲೆಟ್ ಮಾಡುವುದು ಸ್ಕ್ರಬ್ಬರ್ ಹಾಕಿ ತಿಕ್ಕಿ ಮುಖದ ಡೆಡ್‌ಸ್ಕಿನ್ ತೆಗೆಯುವುದು ಮಾಡಬೇಡಿ. ವಾರದಲ್ಲಿ ಒಂದು ದಿನ ಮಾತ್ರ ಸ್ಕ್ರಬ್ ಮಾಡಿ ವಾರದಲ್ಲಿ ಎರಡು ಬಾರಿ ತಿಕ್ಕಿದರೂ ತೊಂದರೆಯಿಲ್ಲ, ಆದರೆ ದಿನಾ ಸ್ಕ್ರಬ್ಬರ್ ಹಾಕುವ ಅಣ್ಯಾಸ ಬಿಟ್ಟು ಬಿಡಿ.
ಆಗಾಗ ಡಿಟಕ್ಸ್ ಮಾಡಬೇಡಿ
ಹೊಟ್ಟೆಯನ್ನು ಡಿಟಾಕ್ಸ್ ಮಾಡುವುದು ಅಂತ ಆಗಾಗ ಏನೆಲ್ಲಾ ಸೇವಿಸಬೇಡಿ. ನಮ್ಮ ದೇಹವು ನೈಸರ್ಗಿಕವಾಗಿ ಡಿಟಾಕ್ಸ್ ಮಾಡುತ್ತದೆ. ಕರುಳಿನಲ್ಲಿ ಕೆಲ ಒಳ್ಳೆಯ ಬ್ಯಾಕ್ಟಿರಿಯಾ ಕೂಡ ಇರುತ್ತದೆ, ನಾವು ಅದನ್ನು ನಾಶ ಪಡಿಸಬಾರದು, ಹಾಗಾಗಿ ನೀವು ದೇಹವನ್ನು ಜಾಹೀರಾತು ನೋಡಿ ಅಥವಾ ಸೋಷಿಯಲ್ ಮೀಡಿಯಾ ನೋಡಿ ಡಿಟಾಕ್ಸ್ ಮಾಡುವುದು ಮಾಡಬೇಡಿ. ಡಿಟಾಕ್ಸ್ ಮಾಡುವುದಾದರೆ ನೀವು ಡಯಟಿಷಿಯನ್ ಅಥವಾ ತಜ್ಞರ ಸಲಹೆ ಪಡೆಯಿರಿ.
ಕೂದಲು ದಿನಾ ತೊಳೆಯಬೇಡಿ
ದಿನಾ ತಲೆ ತೊಳೆದರೆ ತಲೆ ಬುಡಕ್ಕೆ ಒಳ್ಳೆಯದಲ್ಲ, ದಿನಾ ತಲೆ ತೊಳೆದರೆ ತಲೆ ಬುಡ ಡ್ರೈಯಾಗುವುದು. ಹಾಗಾಗಿ ದಿನಾ ತಲೆ ತೊಳೆಯುವ ಬದಲಿಗೆ ವಾರದಲ್ಲಿ ಎರಡು ಬಾರಿ ತೊಳೆದರೆ ಸಾಕು. ತಲೆ ತುಂಬಾ ಜಿಡ್ಡಾಗಿದ್ದರೆ ವಾರದಲ್ಲಿ ಮೂರು ಬಾರಿ ತಲೆ ತೊಳೆಯಬಹುದು, ತಲೆಸ್ನಾನ ದಿನಾ ಮಾಡುವುದು ಬೇಡ.
ಮೂಗಿನೊಳಗಡೆ ಸ್ವಚ್ಛ ಮಾಡಬೇಡಿ
ಮೂಗಿನೊಳಗಡೆ ಕೂದಲು ಕೀಳುವುದು ಅಥವಾ ಚಿವುಟುವುದು ಮಾಡಬೇಡಿ, ನಿಮಗೆ ಮೂಗು ಸ್ವಚ್ಛ ಗೊಳಿಸಬೇಕೆಂದಿದ್ದರೆ ಟಿಶ್ಯೂ ಹಿಡಿದು ಜೋರಾಗಿ ಉಸಿರು ಬಿಡಿ, ಶೀತ ಬಂದಾಗ ಮಾಡುತ್ತೇವೆ ಅಲ್ವಾ ಆ ರೀತಿ ದಿನದಲ್ಲಿ ಒಮ್ಮೆ ಮಾಡಿದರೆ ಸಾಕು.
ಜನೇಂದ್ರೀಯ
ಜನೇಂದ್ರೀಯ ಭಾಗವನ್ನು ಸ್ವಚ್ಛಗೊಳಿಸಲು ಸೋಪು ಅಥವಾ ಕ್ರೀಮ್, ಲಿಕ್ವಿಡ್ ಬಳಸಿದರೆ ಜನನನೇಂದ್ರೀಯದಲ್ಲಿನ pH ಪ್ರಮಾಣ ವ್ಯತ್ಯಾಸವಾಗುವುದು, ಹೀಗಾದರೆ ಬ್ಯಾಕ್ಟಿರಿಯಾ ಸೋಂಕು ಬರಬಹುದು. ಬರಿ ನೀರು ಹಾಕಿ ತೊಳೆದರೆ ಸಾಕಾಗುತ್ತದೆ, ಕೆಲವೊಮ್ಮೆ ಸೋಂಕು ಉಂಟಾದಾಗ ವೈದ್ಯರು ಸ್ವಲ್ಪ ದಿನ ಬಳಸಲು ಕ್ರೀಮ್ ಅಥವಾ ಸೋಪ್ ಸೂಚಿಸಬಹುದು, ಅದನ್ನು ನಿರಂತರವಾಗಿ ಬಳಸುವ ಅಗ್ಯತವಿಲ್ಲ. ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಒರೆಸಿದರೆ ಸಾಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
