Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಕ್ಸ್‌ಪರ್ಟ್ ಟಿಪ್ಸ್: ಇದ್ದಕ್ಕಿದ್ದಂತೆ ತಲೆಸುತ್ತಿದರೆ ವರ್ಟಿಗೋ ಸಮಸ್ಯೆಯೇ? ಕಾರಣವೇನು, ತಡೆಗಟ್ಟುವುದು ಹೇಗೆ?
ಕೆಲವರಿಗೆ ಬೆಳಗ್ಗೆ ಎದ್ದಾಗ ಅಥವಾ ಕುಳಿತಲ್ಲಿಯೇ ಇದ್ದಕ್ಕಿಂದ್ದಂತೆ ತಲೆತಿರುಗಿದಂತೆ ಅನಿಸುವುದು, ಈ ರೀತಿ ಕೆಲವು ಸೆಕೆಂಡ್‌ಗಳವರೆಗೆ ಇದ್ದು ನಂತರ ಸರಿಹೀಗುವುದು, ಆದರೆ ನೀವು ಈ ರೀತಿಯಾದಾಗ ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಅಪಾಯಕ್ಕೆ ಗುರಿಯಾಗಬಹುದು, ಹೌದು, ಈ ರೀತಿಯ ಸಡನ್ ತಲೆ ತಿರುಗುವಿಕೆ ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅದು ವರ್ಟಿಗೋ ಸಮಸ್ಯೆ ಆಗಿರಬಹುದು ಆದ್ದರಿಂದ ನಿರ್ಲಕ್ಷ್ಯ ಬೇಡ್ವೆ ಬೇಡ.
ಏನಿದು ವರ್ಟಿಗೋ? ಇದರ ಲಕ್ಷಣಗಳೇನು? ಯಾರಲ್ಲಿ ಇದು ಕಂಡು ಬರಲಿದೆ, ಇದಕ್ಕೆ ಪರಿಹಾರವೇನು ಎಂಬುವುದನ್ನು ಡಾ ಪಿ.ಆರ್. ಕೃಷ್ಣನ್, ಹಿರಿಯ ಸಲಹೆಗಾರರು - ನ್ಯೂರಾಲಜಿ, ಫೋರ್ಟಿಸ್ ಆಸ್ಪತ್ರೆ ವಿವರವಾಗಿ ತಿಳಿಸಿದ್ದಾರೆ ನೋಡಿ...

ಏನಿದು ವರ್ಟಿಗೋ?
ವರ್ಟಿಗೋ ಸಮಸ್ಯೆ ಬಂದರೆ ತಲೆತಿರುಗುವಿಕೆ, ವಾಕರಿಕೆ ಬಂದರೂ, ಈ ಸಮಸ್ಯೆ ಮೂಲ ಕಿವಿ. ಹೌದು, ಸಾಮಾನ್ಯವಾಗಿ 'ಬಿನೈನ್ ಪ್ಯಾರಾಕ್ಸಿಸ್ಮಲ್ ಪೊಸಿಷನಲ್ ವರ್ಟಿಗೋ(ಬಿಪಿಪಿವಿ)' ಎಂಬ ಒಳಗಿವಿಯ ಸಮಸ್ಯೆಯಿಂದ ಈ ವರ್ಟಿಗೋ ಸಮಸ್ಯೆ ಕಾಡುವುದು. ಈ ಸಮಸ್ಯೆ ಇದ್ದವರಿಗೆ ಆಗಾಗ್ಗೇ ತಲೆ ತಿರುಗುವಿಕೆ ಅಥವಾ ನಿಮತಲ್ಲಿಯೇ ತಲೆ ತಿರುಗಿದಂತೆ ಅನಿಸುವುದು, ಕೆಲವೊಮ್ಮೆ ವಾಕರಿಕೆ ಬಂದಂತೆ ಅನಿಸುವುದು ಈ ಅನುಭವ ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಡುವುದಿಲ್ಲ ಮತ್ತು ಹಠಾತ್ ಅಥವಾ ಒಂದು ನಿರ್ದಿಷ್ಟ ಭಂಗಿಯಲ್ಲಿ ತಲೆಯ ಚಲನೆ ವರ್ಟಿಗೋವನ್ನುಂಟು ಮಾಡುತ್ತದೆ. ಇದಷ್ಟೇ ಅಲ್ಲದೆ, ಇನ್ನಷ್ಟು ಕಾರಣಗಳಿಂದ ಸಹ ಈ ವರ್ಟಿಗೋ ಸಮಸ್ಯೆ ಕಾಡಬಹುದು. ಈ ವರ್ಟಿಗೋ ಸಮಸ್ಯೆ ಹೆಚ್ಚಾಗಿ ಮಹಿಳೆಯರು ಹಾಗೂ ವಯಸ್ಸಾದವರಲ್ಲಿ ಕಂಡು ಬರಲಿದೆ, ಕೆಲವೊಮ್ಮೆ ವಯಸ್ಕರಲ್ಲೂ ಸಹ ಕಾಣಿಸಬಹುದು.
ಕಾರಣಗಳೇನು?
* ಸಾಮಾನ್ಯವಾಗಿ ಕಿವಿಯಲ್ಲಿನ ದ್ರವದಲ್ಲಿ ಅಸಮತೋಲನ ಕಾಡಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ
* ಕಿವಿಯಲ್ಲಿ ಸೋಂಕು, ಕಿವಿ ನೋವು, ಕಿವಿಸೋರುವಿಕೆಯಿಂದಲೂ ತಲೆತಿರುಗುವಿಕೆ ಕಾಣಿಸಿಕೊಳ್ಳಲಿದೆ. ಇನ್ನೂ ಕೆಲವರಿಗೆ ಮೈಗ್ರೇನ್ ಸಮಸ್ಯೆ ಹೆಚ್ಚಿದ್ದಾಗ, ವರ್ಟಿಗೋ ಕಾಣಿಸಬಹುದು, ಮೆದುಳಿನ ಸಮಸ್ಯೆಗಳಾದ ಸೋಂಕು, ಮೆದುಳಿನ ಗಡ್ಡೆ, ಮೆದುಳಿನ ಗಾಯ ಅಥವಾ ಸ್ಟ್ರೋಕ್ ಸಂಭವಿಸಿದಾಗ ಈ ರೀತಿಯ ತಲೆಸುತ್ತು ಕಾಣಿಸಿಕೊಳ್ಳಬಹುದು. * ದೇಹದಲ್ಲಿನ ರಕ್ತದೊತ್ತಡ ಅತಿಯಾದಾಗ ಅಥವಾ ಲೋ ಬಿಪಿಯಾದಾಗ ತಲೆಸುತ್ತು ಉಂಟಾಗುತ್ತದೆ. ಈ ಎಲ್ಲಾ ಕಾರಣದಿಂದ ತಲೆಸುತ್ತು ಕಾಣಿಸಿಕೊಳ್ಳಬಹುದು, ಇನ್ನೂ ಕೆಲವರಿಗೆ ಇದರಿಂದ ವಾಕರಿಕೆ, ಕಣ್ಣು ಮಂಜಾಗುವ ಸಮಸ್ಯೆಯೂ ಕಾಡಬಹುದು. ಇದಲ್ಲದೆ, ಪಾರ್ಶ್ವವಾಯು, ಗರ್ಭಕಂಠದ ಸ್ಪಾಂಡಿಲೋಸಿಸ್, ಮಲ್ಟಿಪಲ್ ಸ್ಕ್ಲೆರೋಸಿಸ್ ಮುಂತಾದ ನರವೈಜ್ಞಾನಿಕ ಸಮಸ್ಯೆಗಳು ಕೇಂದ್ರೀಯ ವರ್ಟಿಗೋವನ್ನು ಉಂಟುಮಾಡಬಹುದು.
ವರ್ಟಿಗೋ ಸಮಸ್ಯೆ ಕಾಡುತ್ತಿದ್ದರೆ ತಡೆಗಟ್ಟುವುದು ಹೇಗೆ?
ವರ್ಟಿಗೋ ಸಮಸ್ಯೆಯಿದ್ದರೆ ಈ ಸಲಹೆ ಪಾಲಿಸುವುದು ಒಳ್ಳೆಯದು
*. ನಿಮ್ಮ ತಲೆಯನ್ನು ಒಂದು ಕಡೆಯಿಂದ ಮತ್ತೊಂದುಕಡೆಗೆ ಹಠಾತ್ತನೆ ಸರಿಸಬೇಡಿ.
* ಕಿವಿ ಶುಚಿಗೊಳಿಸಲು ಚೂಪಾದ ವಸ್ತುಗಳು, ಇಯರ್ ಬಡ್ಸ್ ಬಳಸಬೇಡಿ, ಯಾವುದೇ ವಸ್ತುವಾಗಲಿ ಕಿವಿಯ ಆಳದವರೆಗೂ ಹಾಕಬೇಡಿ, ಇದರಿಂದ ಕಿವಿಗೆ ಹಾನಿಯಾಗಬಹುದು.
* ವೇಗವಾಗಿ ಸುತ್ತುವ ಆಟಗಳನ್ನು ಆಡಬೇಡಿ.
* ಆಳವಾದ ಡೈವಿಂಗ್ ಅಥವಾ ಸ್ವಿಮ್ಮಿಂಗ್ ಮಾಡುವಾಗ ಕಿವಿಗೆ ನೀರು ಹೋಗದಂತೆ ಜಾಗ್ರತೆವಹಿಸಿ. ಒಡ್ಡಿಕೊಳ್ಳುವುದರಿಂದ ಒಳಗಿನ ಕಿವಿ ಸೋಂಕಿಗೆ ತುತ್ತಾಗಬಹುದು.
* ನೀವು ಗರ್ಭಕಂಠದ ಸ್ಪಾಂಡಿಲೋಸಿಸ್ ಹೊಂದಿದ್ದರೆ ನಿಗದಿತ ಚಿಕಿತ್ಸೆಯನ್ನು ಅನುಸರಿಸುವ ಮೂಲಕ ನಿಮ್ಮ ಗರ್ಭಕಂಠದ ಬೆನ್ನುಮೂಳೆಯ ಬಗ್ಗೆ ಕಾಳಜಿ ವಹಿಸಿ.
ಯಾವ ಪರೀಕ್ಷೆ ಮಾಡಿದರೆ ಒಳ್ಳೆಯದು?
ವರ್ಟಿಗೋದ ಕಾರಣವನ್ನು ನಿರ್ಧರಿಸಲು ರೇಡಿಯೋ ಇಮೇಜಿಂಗ್ ಪರೀಕ್ಷೆಗಳನ್ನು ನಡೆಸಬಹುದು. CT ಸ್ಕ್ಯಾನ್ (ಹೆಡ್), CT ಕುತ್ತಿಗೆ, MRI ಮೆದುಳು, MRI ಗರ್ಭಕಂಠದ ಬೆನ್ನೆಲುಬು ಈ ಪರೀಕ್ಷೆಗಳಿಂದ ಕಾರಣ, ಕಿವಿಯ ಒಳಗಿನ ಸಮಸ್ಯೆಗಳು ಅಥವಾ ಗರ್ಭಕಂಠದ ಸ್ಪಾಂಡಿಲೋಸಿಸ್, ಮೆದುಳಿನ ಗೆಡ್ಡೆ, ಇತ್ಯಾದಿಗಳಂತಹ ಇತರ ತಲೆ ಮತ್ತು ಕತ್ತಿನ ಸಮಸ್ಯೆಗಳು ಏನೆಂದು ತಿಳಿಸಲಿವೆ. ತಲೆ ತಿರುಗುವಿಕೆ ಪ್ರಮಾಣ ಹೆಚ್ಚಿದ್ದರೆ ನಿರ್ಲಕ್ಷಿಸದೇ ಕೂಡಲೇ ವೈದ್ಯರನ್ನು ಭೇಟಿ ನೀಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications