Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಯೀಸ್ಟ್ ಸೋಂಕು ಉಂಟಾದಾಗ ಪತಿ ಜೊತೆ ಸೇರಬಹುದೇ?
ಯೀಸ್ಟ್ ಸೋಂಕು ಉಂಟಾದಾಗ ಜನನೇಂದ್ರೀಯ ಬಳಿ ತುಂಬಾ ನೋವು, ಮೂತ್ರ ವಿಸರ್ಜನೆಗೆ ಹೋಗುವಾಗ ಉರಿ ಎಲ್ಲಾ ಉಂಟಾಗುವುದು. ಈ ರೀತಿಯಾದಾಗ ವೈದ್ಯರು ನಿಮಗೆ ಹಚ್ಚಲು ಕ್ರೀಮ್ ನೀಡಬಹುದು ಅಥವಾ ಕೆಲವರು ಮನೆಮದ್ದು ಕೂಡ ಮಾಡಬಹುದು. ಈ ರೀತಿ ಯೀಸ್ಟ್ ಸೋಂಕು ಉಂಟಾದಾಗ ಗಂಡ-ಹೆಂಡತಿ ಸೇರಬಹುದೇ? ಇದರಿಂದ ಏನಾದರೂ ಅಪಾಯವಿದೆಯೇ ಎಂದು ನೋಡೋಣ ಬನ್ನಿ:

ಯೀಸ್ಟ್ ಸೋಂಕು ಎಂದರೇನು?
ಯೀಸ್ಟ್ ಸೋಂಕು ಎಂಬುವುದು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಜನನೇಂದ್ರೀಯಲ್ಲಿ ಫಂಗಸ್‌ಗಳ ಉತ್ಪತ್ತಿ ಹೆಚ್ಚಾಗಿ ಯೀಸ್ಟ್ ಸೋಂಕು ಉಂಟಾಗುವುದು. ಈ ರೀತಿ ಫಂಗಸ್ ಮುಟ್ಟಿನ ಸಮಯದಲ್ಲಿ ಉಂಟಾಗುವುದು. ಮೆನೋಪಾಸ್ ನಂತರ ಈ ರೀತಿ ಉಂಟಾಗುವುದು ತುಂಬಾ ಕಡಿಮೆ. ಅಲ್ಲದೆ ಋತುಚಕ್ರ ಪ್ರಾರಂಭವಾಗುವ ಮುನ್ನ ಕೂಡ ಈ ರೀತಿ ಕಂಡು ಬರುವುದು ಕಡಿಮೆ.
ಲೈಂಗಿಕ ಕ್ರಿಯೆ ಮತ್ತು ಯೀಸ್ಟ್ ಸೋಂಕು
candida albicans ಎಂಬ ಫಂಗಸ್‌ನಿಂದಾಗಿ ಯೀಸ್ಟ್ ಸೋಂಕು ಉಂಟಾಗುವುದು. ಇದು ಲೈಂಗಿಕ ಕ್ರಿಯೆಯಿಂದ ಹರಡುವ ರೋಗವಲ್ಲ. ಕನ್ಯೆಯರಲ್ಲೂ ಇದು ಕಂಡು ಬರಬಹುದು. ಆದರೆ ಲೈಂಗಿಕವಾಗಿ ಸಕ್ರೀಯವಾದ ಮೇಲೆ ಈ ರೀತಿ ಯೀಸ್ಟ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುವುದು. ಅಲ್ಲದೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಹಿಳೆಯರಲ್ಲಿ ಅಂದರೆ ಇತರ ಆರೋಗ್ಯ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದರೆ (ಕ್ಯಾನ್ಸರ್, ಕೀಮೋಥೆರಪಿ, ಸ್ಟಿರಾಯ್ಡ್ಸ್) ಯೀಸ್ಟ್ ಸೋಂಕಿನ ಸಾಧ್ಯತೆ ಹೆಚ್ಚುವುದು.
ಯೀಸ್ಟ್ ಸೋಂಕು ಉಂಟಾದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದೇ?
* ಇದರಿಂದ ತುಂಬಾ ನೋವು ಉಂಟಾಗಬಹುದು
* ಸೋಂಕು ಸಂಗಾತಿಗೆ ಹರಡಬಹುದು
* ಯೀಸ್ಟ್ ಸೋಂಕಿನ ಲಕ್ಷಣಗಳು ಹೆಚ್ಚಾಗುವುದು
* ಗುಣವಾಗಲು ಸಮಯವಾಗುವುದು
ಕಾಂಡೋಮ್ ಸಹಕಾರಿಯೇ?
ಕಾಂಡೋಮ್ ಬಳಸುವುದರಿಂದ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡಬಹುದು ಅಲ್ಲದೆ ಸೋಂಕು ಹರಡುವುದು ಕೂಡ ತಡೆಗಟ್ಟಬಹುದು, ಆದರೆ ಯೀಸ್ಟ್ ಸೋಂಕು ಉಂಟಾದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೆ ಬೇಗನೆ ಗುಣಮುಖವಾಗುವುದು. ಇಲ್ಲದಿದ್ದರೆ ತುರಿಕೆ, ಉರಿಯೂತ, ನೋವು ಇವೆಲ್ಲಾ ಅಧಿಕವಾಗುವುದು.
ಯೀಸ್ಟ್ ಸೋಂಕಿನಿಂದ ಗುಣಮುಖರಾಗಲು ಎಷ್ಟು ಸಮಯ ಬೇಕಾಗಬಹುದು?
ಸಾಮಾನ್ಯವಾಗಿ ಒಂದೆರಡು ದಿನದಲ್ಲಿ ಕಡಿಮೆಯಾಗುವುದು, ಕೆಲವರಿಗೆ 5-6 ದಿನಗಳು ಬೇಕಾಗುವುದು. ಎರಡು ದಿನದಲ್ಲಿ ಕಡಿಮೆಯಾಗದಿದ್ದರೆ ನಿಮ್ಮ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ, ಅವರು ಕ್ರೀಮ್ ಸೂಚಿಸಬಹುದು. ಇದು ಉರಿಯೂತ, ತುರಿಕೆ ಕಡಿಮೆಯಾಗುವುದು.
ಮನೆಮದ್ದು
ತೆಂಗಿನೆಣ್ಣೆ
ತೆಂಗಿನೆಣ್ಣೆ ಯೀಸ್ಟ್ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ, ತೆಂಗಿನೆಣ್ಣೆ ಬಳಸುವಾಗ ಶುದ್ಧವಾದ ತೆಂಗಿನೆಣ್ಣೆ ಬಳಸಿ.
ಆಪಲ್ ಸಿಡರ್ ವಿನೆಗರ್
ನೀವು ಒಂದು ಟಬ್‌ಗೆ ಬಿಸಿ ನೀರು ಹಾಕಿ ಅದಕ್ಕೆ ಸ್ವಲ್ಪ ವಿನೆಗರ್ ಹಾಕಿ ಅದರಲ್ಲಿ ಕೂರುವುದರಿಂದ ಫಂಗಲ್ ಸೋಂಕು ತಡೆಗಟ್ಟಬಹುದು.
ಪ್ರೊಬಯೋಟಿಕ್ ಆಹಾರ ಸೇವಿಸಿ
ಮೊಸರು, ಯೋಗರ್ಟ್, ಪ್ರೊಬಯೋಟಿಕ್ ಸಪ್ಲಿಮೆಂಟ್ಸ್ ಇವೆಲ್ಲಾ ಯೀಸ್ಟ್ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
