Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
2023ರಲ್ಲಿ ಜನ ಸ್ವಿಗ್ಗಿ ಮೂಲಕ ಹೆಚ್ಚಾಗಿ ಆರ್ಡರ್ ಮಾಡಿದ್ದು ಏನು ಗೊತ್ತಾ?
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವ ಅವಕಾಶ ಈಗ ನಮ್ಮ ಹವ್ಯಾಸವೇ ಆಗಿಹೋಗಿದೆ. ಮನೆಯಲ್ಲಿ ಅಡುಗೆ ಮಾಡುವ ಬದಲು ಜನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಮ್ಮಿಷ್ಟದ ಖಾದ್ಯ ಸೇವಿಸುತ್ತಾರೆ. ಭಾರತದಲ್ಲಿ ಈ ರೀತಿ ಫುಡ್ ಡೆಲಿವರಿಗಾಗಿ ಹತ್ತಾರು ಮೊಬೈಲ್ ಆಪ್ ಗಳಿವೆ. ಅದರಲ್ಲಿ ಸ್ವಿಗ್ಗಿ, ಜೊಮ್ಯಾಟೋ ಅತ್ಯಂತ ಜನಪ್ರಿಯವಾಗಿದೆ.
ಹೀಗೆ ಈ ವರ್ಷ ಸ್ವಿಗ್ಗಿ ಮೂಲಕ ಜನ ಏನೆಲ್ಲಾ ಆರ್ಡರ್ ಮಾಡಿದ್ದಾರೆ. ಭಾರತದಲ್ಲಿ ಅತೀ ಹೆಚ್ಚಿ ಜನ ಆರ್ಡರ್ ಮಾಡಿದ ಆಹಾರ ಯಾವುದು ಎಂಬುದನ್ನು ಸ್ವಿಗ್ಗಿ ರಿವೀಲ್ ಮಾಡಿದೆ. ಜನರು ಆಹಾರದ ಆಯ್ಕೆಗಳು ನಮ್ಮ ಅಭಿರುಚಿಗಳು, ಆದ್ಯತೆಗಳು ಮತ್ತು ಕಡುಬಯಕೆಯ ಆಹಾರ ಆರ್ಡರ್ ಮಾಡಿದ್ದಾರೆ. ಸ್ವಿಗ್ಗಿ 'ವಾರ್ಷಿಕ ಟ್ರೆಂಡ್‌ಗಳ ವರದಿ: ಹೌ ಇಂಡಿಯಾ ಸ್ವಿಗ್ಗಿ'ಡ್ 2023' ಅನ್ನು ಸತತ 8ನೇ ವರ್ಷವೂ ಬಿಡುಗಡೆ ಮಾಡಿದೆ.
ಈ ವರದಿಯಲ್ಲಿ ಭಾರತೀಯರು ಯಾವ ಆಹಾರಗಳನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ, ಎಷ್ಟು, ಎಲ್ಲಿಂದ ಮತ್ತು ಹೆಚ್ಚಿನವುಗಳ ಬಗ್ಗೆ ವರ್ಷಪೂರ್ತಿ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.

ಯಾರು ಏನು ಮತ್ತು ಎಲ್ಲಿ ಆರ್ಡರ್ ಮಾಡಿದ್ದಾರೆ?
ಮುಂಬೈನ ಗದ್ದಲದ ಬೀದಿಗಳಿಂದ ದೆಹಲಿಯ ಹೃದಯದವರೆಗೆ, ಭಾರತದಾದ್ಯಂತದ ಆಹಾರ ಪ್ರಿಯರು ಆರ್ಡರ್ ಮಾಡುವಲ್ಲಿ ನಿರತರಾಗಿದ್ದರು. ಸ್ವಿಗ್ಗಿಯ ಮೆನುವಿನಲ್ಲಿ ರಾಷ್ಟ್ರವ್ಯಾಪಿಯಾಗಿ 6.6 ಮಿಲಿಯನ್‌ಗಿಂತಲೂ ಹೆಚ್ಚು ವಿಶಿಷ್ಟ ಫುಡ್ ಆರ್ಡರ್ ಮಾಡಲಾಗಿದೆ.
2023ರ ಅತೀ ಹೆಚ್ಚು ಆರ್ಡರ್ ಮಾಡಿದ್ಯಾರು?
ಮುಂಬೈನಲ್ಲಿ ಒಬ್ಬ ವ್ಯಕ್ತಿ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾನೆ. ಝಾನ್ಸಿಯಂತಹ ಸಣ್ಣ ಪಟ್ಟಣಗಳಲ್ಲೂ ಜನ ಬಹಳಷ್ಟು ಆಹಾರವನ್ನು ಆರ್ಡರ್ ಮಾಡಿದ್ದಾರೆ, ಒಬ್ಬ ಬಳಕೆದಾರ ಪಾರ್ಟಿಗಾಗಿ ಒಂದೇ ಆರ್ಡರ್‌ನಲ್ಲಿ 269 ಐಟಂಗಳನ್ನು ಆರ್ಡರ್ ಮಾಡಿದ್ದ ಎಂದು ಸ್ವಿಗ್ಗಿ ಹೇಳಿಕೊಂಡಿದೆ.
ಗುಲಾಬ್ ಜಾಮೂನ್‌ಗೆ ಮುಗಿಬಿದ್ದ ಜನ
ಗುಲಾಬ್ ಜಾಮೂನ್‌ಗಳು 7.7 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳೊಂದಿಗೆ ದುರ್ಗಾ ಪೂಜೆಯ ಸಮಯದಲ್ಲಿ ಆರ್ಡರ್ ಆಗಿವೆ. ನವರಾತ್ರಿಯ ಎಲ್ಲಾ ಒಂಬತ್ತು ದಿನಗಳ ಟಾಪ್ ವೆಜ್ ಆರ್ಡರ್ ಆಗಿ ಮಸಾಲಾ ದೋಸೆ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ ಗ್ರಾಹಕರು ಬರೋಬ್ಬರಿ 6 ಲಕ್ಷ ಖರ್ಚು ಮಾಡಿ ಇಡ್ಲಿ ಆರ್ಡರ್ ಮಾಡಿದ್ದಾರೆ. ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡುವುದರೊಂದಿಗೆ ಸತತ ಎಂಟನೇ ವರ್ಷಕ್ಕೆ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ತನ್ನ ಆಳ್ವಿಕೆಯನ್ನು ಮುಂದುವರೆಸಿದೆ ಎಂದಿದೆ ಸ್ವಿಗ್ಗಿ.
'ದಿ ಕೇಕ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದ ನಗರ
ಬೆಂಗಳೂರು ಚಾಕೊಲೇಟ್ ಕೇಕ್‌ಗಾಗಿ 8.5 ಮಿಲಿಯನ್ ಆರ್ಡರ್‌ಗಳೊಂದಿಗೆ 'ಕೇಕ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದೆ. ಪ್ರೇಮಿಗಳ ದಿನದಂದು ಭಾರತ ಪ್ರತಿ ನಿಮಿಷಕ್ಕೆ 271 ಕೇಕ್‌ಗಳನ್ನು ಆರ್ಡರ್ ಮಾಡಿದೆ. ಅದರಲ್ಲೂ ಬೆಂಗಳೂರು ನಗರದಲ್ಲೇ ಅತೀ ಹೆಚ್ಚು ಆರ್ಡರ್‌ಗಳು ಬಂದಿದ್ದವು ಎಂದು ಸ್ವಿಗ್ಗಿ ತಿಳಿಸಿದೆ.
ಹೊಸ್ ಡಿಶ್‌ಗೆ ಜನ ಫಿದಾ
ಭಾರತದಲ್ಲಿ ಜಪಾನ್ ಖಾದ್ಯಗಳಿಗೆ ಜನ ಫಿದಾ ಆಗಿದ್ದಾರೆ. ಸಸ್ಯಹಾರಿ ಖಾದ್ಯದಲ್ಲಿ ಶೇ146ರಷ್ಟು ಏರಿಕೆ ಕಂಡಿದೆ. ಜಪಾನ್ ಹೊರತುಪಡಿಸಿ ಕೊರಿಯನ್ ಡಿಶ್ ಗಳಿಗೆ ಜನ ಮನಸೋತಿದ್ದಾರೆ. ಕೊರಿಯನ್‌ನ ಅನಿಮೆ ಎಂಬುವ ಖಾದ್ಯವನ್ನು ಜನ ಹೆಚ್ಚಾಗಿ ಇಷ್ಟಪಟ್ಟಿದ್ದಾರೆ.
Swiggy One ಮತ್ತು One Lite ಬಳಕೆದಾರರು 900 ಕೋಟಿಗಳಷ್ಟು ಉಳಿತಾಯ ಮಾಡಿದ್ದಾರೆ ಎಂದಿ ಸ್ವಿಗ್ಗಿ ತಿಳಿಸಿದೆ. ಆದರೆ Swiggy Dineout ಬಳಕೆದಾರರು 300 ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. Instamart ವಿಶ್ವದ 17ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 'Insta-pur' ನಿಂದ ಆರ್ಡರ್ ಮಾಡಿದ್ದಾರೆ ಮತ್ತು ಜೈಪುರದ ಒಬ್ಬ ಬಳಕೆದಾರರು ಒಂದೇ ದಿನದಲ್ಲಿ 67 ಆರ್ಡರ್‌ಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ಕೇವಲ 65 ಸೆಕೆಂಡುಗಳಲ್ಲಿ ನೂಡಲ್ಸ್ ಡೆಲಿವರಿ ಮಾಡಲಾಗಿತ್ತು ಎಂದು ಸ್ವಿಗ್ಗಿ ಹೇಳಿಕೊಂಡಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications