Latest Updates
-
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ!
ಯುವ ಸಮುದಾಯದಲ್ಲಿ ಹೃದಯಾಘಾತ ಹೆಚ್ಚಲು ಇಲ್ಲಿದೆ ಕಾರಣಗಳು? ಈ ತಪ್ಪುಗಳಿಂದ ದೂರವಿರಿ..
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೃದಯಾಘಾತದಂತಹ ಗಂಭೀರ ಸಮಸ್ಯೆಗೆ ಒಳಗಾಗಿರುವುದು ಆತಂಕಕಾರಿ ವಿಚಾರವಾಗಿದೆ. ಇತ್ತೀಚಿಗೆ ಸಂಭವಿಸುತ್ತಿರುವ ಹೃದಯಾಘಾತಗಳ ಪೈಕಿ 30ರಿಂದ 40 ವರ್ಷದೊಳಗಿನವರ ಸಂಖ್ಯೆಯೇ ಅಧಿಕವಾಗಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಇನ್ನು 2023ರಲ್ಲೂ ಈ ಸಂಖ್ಯೆ ಹೆಚ್ಚಾಗಿದ್ದು ಹಲವು ಖ್ಯಾತನಾಮರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರೆ ಇನ್ನೂ ಹಲವರು ಸಾವು ಗೆದ್ದು ಬಂದಿದ್ದಾರೆ. 47 ವರ್ಷದ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೊಳಗಾದಾಗ ಇಡೀ ಚಿತ್ರರಂಗ ಆತಂಕ ಹೊರಹಾಕಿತ್ತು. ಆದರೆ ಅವರು ಚೇತರಿಸಿಕೊಂಡು ಪುನರ್ ಜನ್ಮ ಪಡೆದರು. ಪ್ರಸಿದ್ಧ ತೆಲುಗು ನಟ ಹರಿಕಾಂತ್ ಜುಲೈ 1 ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾದಾಗ ಇಡೀ ತೆಲುಗು ಚಿತ್ರರಂಗ ಸ್ತಬ್ಧವಾಗಿತ್ತು.

ಈ ವರ್ಷ ಹೃದಯಾಘಾತದಿಂದ ನಿಧನರಾದ ಇವರೆಲ್ಲರಿಗೂ ಅನಾರೋಗ್ಯವಾಗಲಿದೆ ಅಥವಾ ವಯಸ್ಸಿನ ಕಾರಣವಾಗಲಿ ಕಂಡುಬರಲಿಲ್ಲ. ನಿತ್ಯ ವ್ಯಾಯಾಮ ಮಾಡಿ, ಅತ್ಯುತ್ತಮ ಆಹಾರ ಸೇವಿಸುತ್ತಿದ್ದವರು ಸಹ ಹೃದಯಾಘಾತಕ್ಕೆ ಒಳಗಾಗಿದ್ದು ಅಚ್ಚರಿಗೂ ಕಾರಣವಾಗಿತ್ತು. ಹಾಗಾದ್ರೆ ಇಂತಹ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗಲು ಕಾರಣವೇನು? ಯುವ ಸಮುದಾಯಕ್ಕೆ ಹೃದಯಾಘಾತವೇಕೆ ಹೆಮ್ಮಾರಿಯಾಗಿ ಕಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಆಲ್ಟಿಯಸ್ ಆಸ್ಪತ್ರೆಯ ಕ್ಲಿನಿಕಲ್ ಕಾರ್ಡಿಯಾಲಜಿಸ್ಟ್ ಡಾ. ನಿತಿನ್ ಪ್ರಕಾಶ್ ಅವರು ಹೇಳುವಂತೆ, ಹೃದ್ರೋಗ ಸಮಸ್ಯೆಗಳು ವಯಸ್ಸಾದವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗುರುತಿಸುವುದು ಅತ್ಯಗತ್ಯ ಏಕೆಂದರೆ ಯುವ ವಯಸ್ಕರು ಹೃದಯ ಸಮಸ್ಯೆಗಳನ್ನು ಎದುರಿಸಲು ಹಲವಾರು ಕಾರಣಗಳಿವೆ. "ಕೆಲವು ವ್ಯಕ್ತಿಗಳು ತಮ್ಮ ಕುಟುಂಬದ ಇತಿಹಾಸದ ಕಾರಣದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ಆನುವಂಶಿಕವಾಗಿ ಪಡೆಯಬಹುದು. ಉದಾಹರಣೆಗೆ, ಕೌಟುಂಬಿಕ ಹೈಪರ್ ಕೊಲೆಸ್ಟಾರಲ್ಮಿಯಾವು ಹೆಚ್ಚಿನ ಕೊಲೆಸ್ಟರಲ್ ಮಟ್ಟಗಳಿಗೆ ಕಾರಣವಾಗಬಹುದು, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಇದರ ಜೊತೆಗೆ ಕಳಪೆ ಜೀವನಶೈಲಿಯ ಆಯ್ಕೆಗಳು, ವ್ಯಾಯಾಮ ಮಾಡದಿರುವುದು, ಸಾಕಷ್ಟು ಸಂಸ್ಕರಿಸಿದ ಮತ್ತು ಕೊಬ್ಬಿನ ಆಹಾರಗಳನ್ನು ತಿನ್ನುವುದು, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ಥೂಲಕಾಯತೆಯು (ಒಬೆಸಿಟಿ) ಹೃದಯ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ ಎಂದಿದ್ದಾರೆ.
ಅತೀಯಾದ ತೂಕ ಹೆಚ್ಚಳದಿಂದಾಗಿ ರಕ್ತದೊತ್ತಡ ಹೆಚ್ಚಾಗಲಿದೆ. ಜೊತೆಗೆ ಮಧುಮೇಹದಂತಹ ಸ್ಥಿತಿಗೆ ಕಾರಣವಾಗಬಹುದು. ಇವೆಲ್ಲವೂ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ದೈಹಿಕ ಚಟುವಟಿಕೆಯ ಕೊರತೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಸಹ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಯುವ ವಯಸ್ಕರು ಈ ಅಪಾಯಕಾರಿ ಅಂಶಗಳ ಬಗ್ಗೆ ತಿಳಿದಿರುವುದು ಮತ್ತು ಹೃದಯ-ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ, ಇದರಲ್ಲಿ ನಿಯಮಿತ ವ್ಯಾಯಾಮ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಸಮತೋಲಿತ ಆಹಾರ, ಒತ್ತಡವನ್ನು ನಿರ್ವಹಿಸುವುದು ಮತ್ತು ತಂಬಾಕು ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸುವುದು. ನಿಯಮಿತ ತಪಾಸಣೆ ಮತ್ತು ಸ್ಕ್ರೀನಿಂಗ್ಗಳು ಆರಂಭಿಕ ಹಂತದಲ್ಲಿ ಹೃದಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ ಎಂಬ ಸಲಹೆ ನೀಡುತ್ತಾರೆ.
ಭಾರತೀಯರಲ್ಲಿ ಹೃದಯಾಘಾತ ಹೆಚ್ಚು
ಭಾರತದ ಜನಸಂಖ್ಯೆಗೆ ಅನುಗುಣವಾಗಿ ಹೃದಯಾಘಾತದ ಪ್ರಮಾಣ ಬೇರೆಲ್ಲಾ ದೇಶಕ್ಕಿಂತಲೂ ತುಸು ಹೆಚ್ಚಾಗಿದೆ ಎಂದು ಡಾ.ಪಿ ಅಶೋಕ್ ಕುಮಾರ್ ಆತಂಕ ಹೊರಹಾಕಿದ್ದಾರೆ. ಏಕೆಂದರೆ ನಮ್ಮ ಅಪಧಮನಿಗಳು ಸ್ವಲ್ಪ ಚಿಕ್ಕದಾಗಿರುತ್ತವೆ ಮತ್ತು ಧೂಮಪಾನ, ತಂಬಾಕು ಸೇವನೆ, ಕಳಪೆ ಆಹಾರ ಪದ್ಧತಿ, ವೇಗದ ಮತ್ತು ಪೂರ್ವಸಿದ್ಧ ಆಹಾರಗಳು, ಹೆಚ್ಚಿನ ಒತ್ತಡ, ಅತಿಯಾದ ಮದ್ಯ ಸೇವನೆಯಂತಹ ಅಪಾಯಕಾರಿ ಅಂಶಗಳು ನಮ್ಮಲ್ಲಿ ಸೇರಿಕೊಂಡಿವೆ ಎನ್ನುತ್ತಾರೆ.
ಅಪಾಯಕ್ಕೆ ಕಾರಣವೇನು?
ಡಾ ನಿತಿನ್ ಪ್ರಕಾಶ್ ಅವರ ಪ್ರಕಾರ, ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಹೃದಯ ಸಮಸ್ಯೆಗಳು ಜೀವನಶೈಲಿ ಮತ್ತು ಪರಿಸರ ಅಂಶಗಳ ಮಿಶ್ರಣದಿಂದ ಉಂಟಾಗುತ್ತದೆ. ಫಾಸ್ಟ್ಫುಡ್, ಹೆಚ್ಚು ಸಂಸ್ಕರಿಸಿದ ವಸ್ತುಗಳು ಮತ್ತು ಸಕ್ಕರೆ ಪಾನೀಯಗಳಿಂದ ತುಂಬಿದ ಆಧುನಿಕ ಆಹಾರಗಳು ಯುವ ವಯಸ್ಕರಲ್ಲಿ ಹೆಚ್ಚಿನ ಪ್ರಮಾಣದ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಅನಾರೋಗ್ಯಕರ ಲಿಪಿಡ್ ಪ್ರೊಫೈಲ್ಗಳ ಕೊಡುಗೆ ನೀಡಿವೆ.
ಅನೇಕ ಯುವಕರು ಕೆಲಸದ ಸಮಯದ ಬಳಿಕ ದೈಹಿಕ ಕಸರತ್ತಿನಿಂದ ತಪ್ಪಿಸಿಕೊಳ್ಳುತ್ತಾರೆ. ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಇಚ್ಛಿಸುತ್ತಾರೆ. ಈ ವಿಶ್ರಾಂತಿ ವೇಳೆ ಕರಿದ ಆಹಾರ ಸೇವನೆ ಇಷ್ಟಪಡುತ್ತಾರೆ. ಈ ರೀತಿಯ ಅಭ್ಯಾಸವು ಹೃದಯರಕ್ತನಾಳದ ಫಿಟ್ನೆಸ್ನಲ್ಲಿ ಕುಸಿತ ಮತ್ತು ಹೃದಯ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
