Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
Year Ender 2023: ಈ ವರ್ಷ ಗಮನ ಸೆಳೆದ ಯೋಗಾ ಭಂಗಿಗಳಿವು, ಈ ಯೋಗಾಗಳಿದಿಂದ ಪಡೆಯಬಹುದು ಚಿರಯೌವನ
ಯೋಗ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತದೆ. ಕಾರಣ ಯೋಗ ಮಾಡುವುದರಿಂದ ಜನರು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಂಡುಕೊಳ್ಳುತ್ತಿದ್ದರೆ. ಸರಳ ಭಂಗಿಯಿಂದ ಕಠಿಣ ಭಂಗಿವರೆಗೂ ಯೋಗಾ ಭಂಗಿಗಳಿವೆ. ಈ ವರ್ಷ ಕೆಲವೊಂದು ಯೋಗಾ ಭಂಗಿ ತುಂಬಾನೇ ಗಮನ ಸೆಳೆದಿತ್ತು, ಆ ಯೋಗಾ ಭಂಗಿಗಳೆಂದರೆ...

ಏರಿಯಲ್ ಯೋಗಾ: ಏರಿಯಲ್ ಯೋಗಾ ಗಾಳಿಯಲ್ಲಿ ನೇತಾಡುವ ಭಂಗಿಯ ಯೋಗಾ ಭಂಗಿಯಾಗಿದೆ. ಬಟ್ಟೆಯನ್ನು ಮಕ್ಕಳಿಗೆ ತೊಟ್ಟಿಲು ಕಟ್ಟುತ್ತಾರಲ್ಲ ಆ ರೀತಿ ಕಟ್ಟಿ ನೇತಾಡುವ ಭಂಗಿಯಾಗಿದೆ. ಇದು ಬೆನ್ನು ಮೂಳೆಗಳಿಗೆ ಒಳ್ಳೆಯದು, ರಕ್ತ ಸಂಚಾರಕ್ಕೆ ಒಳ್ಳೆಯದು. ಈ ಯೋಗಾ ಭಂಗಿ ಈ ವರ್ಷ ತುಂಬಾನೇ ಗಮನ ಸೆಳೆದಿತ್ತು.
ಬ್ರೈನ್ ಯೋಗಾ
ಮೆದುಳಿನ ಆರೋಗ್ಯ ತುಂಬಾನೇ ಮುಖ್ಯ. ಈ ಹೆಸರೇ ಸೂಚಿಸುವಂತೆ ಮೆದುಳಿನ ಆರೋಗ್ಯ ವೃದ್ಧಿಸುವ ಯೋಗಾ ಭಂಗಿಯಾಗಿದೆ. ಇದು ಉಸಿರಾಟದ ವಿಧಾನವಾಗಿದೆ. ಈ ಯೋಗಾ ಭಂಗಿ ಮಾನಸಿಕ ಒತ್ತಡ ಕಡಿಮೆ ಮಾಡಲ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಫೇಸ್ ಯೋಗಾ
ಫೇಸ್ ಯೋಗಾ ಮುಖದಲ್ಲಿ ಯೌವನ ಕಳೆ ಕಾಪಾಡಲು ಸಹಕಾರಿಯಾಗಿದೆ. ಇದು ಮುಖದ ಸ್ನಾಯುಗಳಿಗೆ ರಿಲ್ಯಾಕ್ಸ್ ನೀಡುವುದು, ತ್ವಚೆಯ ಕಾಂತಿ ಹೆಚ್ಚಿಸುವುದು, ಮುಖದ ಸ್ನಾಯುಗಳು ಬಿಗಿಯಾಗುವುದು, ಇದರಿಂದ ಮುಖದಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು.
ವ್ಹೀಲ್ ಯೋಗಾ: ಈ ಯೋಗಾ ಸ್ನಾಯುಗಳನ್ನು ಸ್ಟ್ರೆಚ್ ಮಾಡಲು ಸಹಕಾರಿ, ಮೈ ಕೈ ನೋವು ಕಡಿಮೆ ಮಾಡುತ್ತದೆ, ದೇಹಕ್ಕೆ ಫ್ಲಕ್ಸಿಬಲಿಟಿ ನೀಡುತ್ತದೆ, ಈ ಯೋಗಾಸನ ಕೂಡ ಈ ವರ್ಷ ಟ್ರೆಂಡ್‌ನಲ್ಲಿದ್ದ ಯೋಗಾಸನವಾಗಿದೆ.
ಔಟ್‌ಡೋರ್ ಯೋಗಾ
ಪರಿಸರದಲ್ಲಿ ಯೋಗಾಸನ ಅಭ್ಯಾಸ ಮಾಡುವುದು ಈಗೀನ ಟ್ರೆಂಡ್ ಆಗಿದೆ. ಪಾರ್ಕ್ ಅಥವಾ ಹಸಿರು ಗಿಡಗಳಿರುವ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುವುದು, ಉಸಿರಾಟದ ವ್ಯಾಯಾಮ ಮಾಡುವುದು ಈ ವರ್ಷದ ಟ್ರೆಂಡ್ ಆಗಿದೆ.
ಯೋಗಾದ ಪ್ರಯೋಜನಗಳು
* ಯೋಗಾ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಾಗುವುದು
ಯೋಗ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುವುದು.
* ಮೈ ಕೈ ನೋವು ಕಡಿಮೆಯಾಗುವುದು
ದೇಹದ ಫ್ಲಕ್ಸಿಬಿಲಿಟಿ ಹೆಚ್ಚಾಗುವುದು, ಮೈಕೈ ನೋವು ಕಡಿಮೆಯಾಗುವುದು. ಬೆನ್ನುನೋವು, ಸೊಂಟ ನೋವು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
* ಸಂಧಿವಾತದ ಸಮಸ್ಯೆ ತಡೆಗಟ್ಟಲು ಸಹಕಾರಿ
ಸಂಧಿವಾತದ ಸಮಸ್ಯೆ ಇರುವವರು ಯೋಗಾ ಅಭ್ಯಾಸ ಮಾಡುವುದರಿಂದ ಸಂಧಿವಾತ ನೋವು ಕಡಿಮೆಯಾಗುವುದು.
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
ದೇಹದಲ್ಲಿ ಉರಿಯೂತ ಕಡಿಮೆಯಾಗುವುದು. ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ಮೈ ತೂಕ ನಿಯಂತ್ರಣದಲ್ಲಿಡುತ್ತದೆ.
* ನಿದ್ದೆಗೆ ಒಳ್ಳೆಯದು
ಯೋಗಾ ಅಭ್ಯಾಸ ಮಾಡುವವರಗೆ ನಿದ್ರಾಹೀನತೆ ಸಮಸ್ಯೆ ಕಾಡುವುದಿಲ್ಲ, ಮಲಗುದ ತಕ್ಷಣ ಒಳ್ಳೆಯ ನಿದ್ದೆ ಬರುತ್ತದೆ.
* ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ನೀವು ಉಸಿರಾಟದ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಪ್ರತಿದಿನ ಹತ್ತು ನಿಮಿಷ ಧ್ಯಾನಕ್ಕಾಗಿ ಮೀಸಲಿಡಿ.
ಯಾವ ಸಮಯದಲ್ಲಿ ಯೋಗಾಭ್ಯಾಸ ಮಾಡುವುದು ಒಳ್ಳೆಯದು?
ದಿನದಲ್ಲಿ ಯಾವ ಸಮಯದಲ್ಲಿ ಬೇಕಾದರೂ ಯೋಗಾಭ್ಯಾಸ ಮಾಡಬಹುದು, ಆದರೆ ಬೆಳಗ್ಗೆ ಹಾಗೂ ಯೋಗಾಭ್ಯಾಸ ಮಾಡುವುದು ಒಳ್ಳೆಯದು. ಅಲ್ಲದೆ ಯೋಗಾ ಮಾಡುವ ಎರಡು ಗಂಟೆಯ ಮುನ್ನ ಏನೂ ಆಹಾರ ಸೇವಿಸಬೇಡಿ.
ಪ್ರತಿದಿನ ಸೂರ್ಯ ನಮಸ್ಕಾರ ಮಾಡಿ
ಬೆಳಗ್ಗೆ ಬೇಗನೆ ಎದ್ದು ಸೂರ್ಯ ಸಮಸ್ಕಾರ ಮಾಡಿ, ಪ್ರಾರಂಭದಲ್ಲಿ ಕಷ್ಟವಾಗಬಹುದು, ಅಭ್ಯಾಸ ಮಾಡ್ತಾ ದಿನದಲ್ಲಿ 6 ರೌಂಡ್‌ನಿಂದ 21 ರೌಂಡ್ ಸೂರ್ಯನಮಸ್ಕಾರ ಮಾಡಿ, ನಿಮ್ಮ ದೇಹದಲ್ಲಿ ತುಂಬಾ ಆರೋಗ್ಯಕರ ಬದಲಾವಣೆ ಕಾಣಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
