Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರಪಂಚದ 27 ದೇಶಕ್ಕೆ ಹರಡಿದ ಕೋವಿಡ್‌ನ XEC ರೂಪಾಂತರ..! ಅಪಾಯದ ಮುನ್ಸೂಚನೆ ಎಂದ ತಜ್ಞರು..!!
ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಇಡೀ ಜಗತ್ತನ್ನೇ ದುರಂತಗಳ ವರ್ಷಕ್ಕೆ ತಳ್ಳಿದ್ದ ಕೋವಿಡ್ ಇಂದಿಗೂ ಕಾಡುತ್ತಲೇ ಇದೆ. ವರ್ಷಗಳು ಉರುಳಿದಂತೆ ಹೊಸ ಹೊಸ ರೂಪಾಂತರಗಳು ಕಾಡಲು ಆರಂಭಿಸಿದ್ದು, ಹೊಸ ಹೊಸ ರೂಪಾಂತರವು ಮತ್ತಷ್ಟು ಭೀತಿಗೆ ಕಾರಣವಾಗಿದೆ. ಅದರಲ್ಲೂ ಯೂರೋಪಿಯನ್ ದೇಶಗಳಲ್ಲಿ ಹೊಸ ರೂಪಾಂತರ ಮತ್ತೊಂದು ದುರಂತ ಸೃಷ್ಟಿಸುವ ಆತಂಕವಿದೆ.
ಈ ಮೊದಲು ಒಮಿಕ್ರಾನ್ ರೂಪಾಂತರವು ಹಲವು ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಮೊದಲ ಅಲೆಯ ಬಳಿಕ 2ನೇ ಅಲೆಯಲ್ಲಿ ಅತ್ಯಧಿಕ ಸಾವಿಗೆ ಕಾರಣವಾಗಿತ್ತಲ್ಲದೆ ಇಡಿ ವಿಶ್ವದಲ್ಲಿ ಒಮಿಕ್ರಾನ್ ಆತಂಕಕ್ಕೆ ಕಾರವಾಗಿತ್ತು. ಆದರೆ ಈಗ ಕೋವಿಡ್‌ನ ಹೊಸ ರೂಪಾಂತರವಾದ ಎಕ್ಸ್‌ಇಸಿ (XEC) ಹರಡಲು ಆರಂಭಿಸಿದ್ದು, ಸುಮಾರು 27 ದೇಶಗಳಿಗೆ ಹರಡಿದೆ ಎಂದು ತಿಳಿಸಿದ್ದಾರೆ.
ಪ್ರಪಂಚದಾದ್ಯಂತದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರದ ಹರಡುವಿಕೆ ಕುರಿತು ಮುನ್ಸೂಚನೆ ನೀಡಿದ್ದಾರೆ. ಈ ರೂಪಾಂತರವನ್ನು ಅವರು XEC ಎಂದು ಕರೆದಿದ್ದಾರೆ. ಇದು ಯುರೋಪಿನಾದ್ಯಂತ ಹರಡುತ್ತಿದೆ. ಬೇಸಿಗೆಯಲ್ಲಿ ಜರ್ಮನಿಯಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು, ಬಳಿಕ ಸ್ಪೈನ್, ಯುಕೆ, ನೆದರ್‌ಲ್ಯಾಂಡ್, ಡೆಲ್ಮಾರ್ಕ್ ಸೇರಿದಂತೆ ಹಲವು ಕಡೆಗಳಲ್ಲಿ ವೇಗವಾಗಿ ಹರಡುತ್ತಿದೆ.

ಈ XEC ರೂಪಾಂತರವು ಮುಂದಿನ ದಿನಗಳಲ್ಲಿ ಬಹುದೊಡ್ಡ ಸವಾಲಿಗೆ ಕಾರಣವಾಗಲಿದೆ. ಈ ರೂಪಾಂತರವು ಕೋವಿಡ್ ಹರಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮತ್ತೆ ಆತಣಕ ಹುಟ್ಟಿಸಲಿದೆ ಎಂದು ಡಾ. ಎರಿಕ್ ಟೋಪೋಲ್, ಸ್ಕ್ರಿಪ್ಸ್ ರಿಸರ್ಚ್ ಟ್ರಾನ್ಸ್ಲೇಷನಲ್ ನಿರ್ದೇಶಕ ಕ್ಯಾಲಿಫೋರ್ನಿಯಾದ ಇನ್ಸ್ಟಿಟ್ಯೂಟ್, ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಓಮಿಕ್ರಾನ್ ರೂಪಾಂತರಗಳಾಗಿದ್ದ KS.1.1 ಮತ್ತು KP.3.3. KS.1.1 ಒಂದು FLiRT ಸಂಯೋಜಕಗಳು ಇಂದು ಪ್ರಪಂಚದಾದ್ಯಂತ ಇಂದು ಹರಡುತ್ತಿರುವ ಕೋವಿಡ್ ರೂಪಾಂತರಗಳಾಗಿವೆ. ಆದ್ರೆ ಈ ಎಕ್ಸ್ಇಸಿ ರೂಪಾಂತರ ಈ ಓಮಿಕ್ರಾನ್ ಸ್ಟ್ರೈನ್‌ಗೆ ಸೇರಿದ್ದ ತಳಿ ಎಂದು ತಿಳಿದುಬಂದಿದೆ. ಹಾಗೆ ಇದು ಹಲವು ತಳಿಯ ಸಂಯೋಜಕವಾಗಿದ್ದು ಅತ್ಯಂತ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಇದಕ್ಕೆ ಬೂಸ್ಟರ್ ಡೋಸ್ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗಿದ್ದರೂ, ಅದರ ಕೆಲವು ಪೂರ್ವವರ್ತಿಗಳಂತೆ ಮಾರಣಾಂತಿಕವಾಗಿರುವುದಿಲ್ಲ. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿರುವ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ಪ್ರಕಾರ, ಇತರ ಕೋವಿಡ್ ರೂಪಾಂತರಗಳಿಗಿಂತ XEC ಹರಡುವಿಕೆ ಹೆಚ್ಚಾಗಿದ್ದು ಅಷ್ಟೊಂದು ಮಾರಣಾಂತಿಕವಲ್ಲ ಎಂದಿದೆ.
ಈ ಹೊಸ ರೂಪಾಂತರದ ಲಕ್ಷಣವೇನು?
ಜ್ವರ
ಆಯಾಸ
ತಲೆನೋವು
ಗಂಟಲು ನೋವು
ಮೈ-ಕೈ ನೋವು
ಮೂಗು ಸ್ರವಿಸುವುದು
ಹಸಿವಾಗದಿರುವುದು
ಕೀಲು ನೋವು
ಸದ್ಯ ಈ ಹೊಸ ರೂಪಾಂತರವು ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್, ಪೋರ್ಚುಗಲ್ ಮತ್ತು ಚೀನಾ ಸೇರಿದಂತೆ, XEC ಅನ್ನು ಒಳಗೊಂಡಿರುವುದು ಕಂಡುಬಂದಿದೆ. ಹೆಚ್ಚಾಗಿ 65 ವರ್ಷ ಮೇಲ್ಪಟ್ಟವರು ಈ ಸೋಂಕಿನಿಂದ ಅಪಾಯ ಎದುರಿಸುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗೆ ಈವರೆಗೆ ಕೋವಿಡ್ ಡೋಸ್ ಪಡೆಯದೇ ಇರುವ ಜನರಲ್ಲಿ ಹೆಚ್ಚು ಕಾಡುತ್ತಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ವೈರಸ್ ತಗುಲುವ ಮುನ್ನವೇ ಬೂಸ್ಟರ್ ಡೋಸ್ ಪಡೆಯುವುದು ಉತ್ತಮ ಎಂದಿದ್ದಾರೆ.
ಏಷ್ಯಾದಲ್ಲೂ ಇದೆ ರೂಪಾಂತರ
ಈ ಹೊಸ ರೂಪಾಂತರವು ಯೂರೋಪ್‌ನಲ್ಲಿ ದಾಳಿ ನಡೆಸುತ್ತಿದೆ. ಇನ್ನು ಏಷ್ಯಾದ ಹಲವು ದೇಶಗಳಲ್ಲಿ ಈ ಎಕ್ಸ್ಇಸಿ ರೂಪಾಂತರ ಸಹ ಹರಡುತ್ತಿದೆ. ಇದಕ್ಕೂ ಮೊದಲು FLiRT ರೂಪಾಂತರವು ಆತಂಕ ಸೃಷ್ಟಿಸಿತ್ತು. ಈಗ ಹೊಸ ಕೋವಿಡ್ ರೂಪಾಂತರವು ಚೀನಾ ಸೇರಿ ಬಹುತೇಕ ದೇಶಗಳಲ್ಲಿ ಕಂಡುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
