Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸಾಂಕ್ರಾಮಿಕವಾಗಿ ಬದಲಾಗಬಹುದಾದ ಮಿಕ್ ವೈರಸ್ ಪತ್ತೆ..! ಏನಿದು ಗೊತ್ತಾ?
ಇತ್ತೀಚಿಗೆ ಒಂದಲ್ಲಾ ಒಂದು ವೈರಸ್‌ಗಳು ಜನರ ಜೀವ ಹಿಂಡಲು ಆರಂಭಿಸಿವೆ. ಒಂದರ ಹಿಂದೆ ಒಂದು ವೈರಸ್ ಕಾಡತೊಡಗಿವೆ. ಅದರಲ್ಲೂ ಈ ಕೊರೊನಾ ವೈರಸ್ ಕಾಣಿಸಿಕೊಂಡ ಬಳಿಕ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ನೋಡಬಹುದು. ಸೊಳ್ಳೆಗಳಿಂದ ಹರಡುವ ವೈರಸ್‌ಗಳು, ಪ್ರಾಣಿಗಳಿಂದ, ಪಕ್ಷಿಗಳಿಂದ ಹೀಗೆ ಸಾಲು ಸಾಲು ವೈರಸ್ ಈಗ ನಮ್ಮ ನಡುವೆಯೇ ಇವೆ.
ಆದ್ರೆ ಈಗ ಹೊಸದೊಂದು ವೈರಸ್ ಹರಡಲು ಆರಂಭಗೊಂಡಿದ್ದು, ಸಾಂಕ್ರಾಮಿಕವಾಗಿ ಬದಲಾಗುವ ಎಲ್ಲಾ ಅಪಾಯವನ್ನು ತಜ್ಞರು ತಿಳಿಸಿದ್ದಾರೆ. ಚೀನಾದಲ್ಲಿ ಫರ್ ಫಾರ್ಮ್ ತನಿಖೆಯು ನ್ಯುಮೋನಿಯಾ ಏಕಾಏಕಿ ಸಾವನ್ನಪ್ಪಿದ ಮಿಂಕ್‌ಗಳ ಶ್ವಾಸಕೋಶದಲ್ಲಿ HKU5 ಎಂದು ಕರೆಯಲ್ಪಡುವ ಹೊಸ ವೈರಸ್ ಪತ್ತೆಯಾಗಿದೆ.

ಮಿಂಕ್ ಎಂದರೆ ಚೀನಾದಲ್ಲಿರುವ ಮುಂಗುಸಿ ಜಾತಿಗೆ ಸೇರಿದ ಪ್ರಾಣಿಯಾಗಿದೆ. ಈಗ ಕಂಡುಬಂದಿರುವ ಈ ವೈರಸ್ ಸಹ ಈ ಪ್ರಾಣಿಯ ದೇಹದಲ್ಲಿ ಪತ್ತೆಯಾಗಿದೆ. ಈ ವೈರಸ್ ಪ್ರಾಣಿಗಳ ದೇಹದಿಂದ ನೀರಿನೊಂದಿಗೆ ಬೆರೆತು ಇತರ ಪ್ರಾಣಿಗಳಿಗೆ ಹಾಗೂ ಮಾನವರಿಗೆ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ವಿವರಿಸಿದ್ದಾರೆ.
HKU5 ವೈರಸ್ ಎಂದರೇನು?
ವಿಜ್ಞಾನಿಗಳ ಪ್ರಕಾರ, HKU5 ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ ಅಥವಾ MERS ಗೆ ಸಂಬಂಧಿಸಿದೆ - ಇದನ್ನು ಒಂಟೆ ಜ್ವರ ಎಂದೂ ಸಹ ಕರೆಯುತ್ತಾರೆ, ಇದು ಮನುಷ್ಯರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಂದ ಇದು ಹರಡುತ್ತದೆ ಎಂದು ಸಹ ನಂಬಲಾಗಿದೆ.
ವಿಜ್ಞಾನಿಗಳು ಸುಮಾರು ಮೂರು ಡಜನ್ ವೈರಸ್‌ಗಳು ರೂಪಾಂತರವಾಗಬಹುದು ಎಂಬ ಚಿಂತೆಯಲ್ಲಿದ್ದಾರೆ. ಅದರಲ್ಲಿ ಹೆಚ್ಚಾಗಿ ಈ ವೈರಸ್‌ಗಳು ಪ್ರಾಣಿಗಳಿಂದ ಪ್ರಾಣಿಗೆ ಬದಲಾಗುತ್ತದೆ. ನಾಯಿ, ರಕೂನ್ ಮತ್ತು ಮಿಂಕ್ ಏನಿಲ್ಲವೆಂದರೆ 10 ಜಾತಿಯ ವೈರಸ್‌ಗಳನ್ನು ತಮ್ಮೊಡನೆ ಒಯ್ಯಬಹುದು ಎಂದು ಅಂದಾಜಿಸಲಾಗಿದೆ.
ಚೀನಾದಲ್ಲಿ ನಡೆಸಿರುವ ಈ ಫರ್ ಫಾರ್ಮ್ ತನಿಖೆಯಲ್ಲಿ ತಜ್ಞರ ತಂಡ ಬರೋಬ್ಬರಿ 125 ವೈರಸ್ ಪತ್ತೆ ಮಾಡಿದ್ದು ಅದರಲ್ಲಿ 36 ವೈರಸ್‌ಗಳು ಹೊಸ ತಿಳಿಯ ವೈರಸ್ ಎಂದು ತಿಳಿದುಬಂದಿದೆ. ಈ 36ರಲ್ಲಿ ಹೆಪಟೈಟಿಸ್ ಇ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ನಂತಹ ಕೆಲವು ವೈರಸ್‌ಗಳು ಮನುಷ್ಯರಿಗೆ ತಿಳಿದಿವೆ, ಹಾಗೆ 13 ಹೊಸ ತಳಿಯ ವೈರಸ್ ಆಗಿವೆ. ಇವುಗಳನ್ನು ಇನ್ನು ವರ್ಗೀಕರಿಸುವುದು ಬಾಕಿ ಉಳಿದಿದೆ.
ಭಾರತದಲ್ಲಿ ಹೊಸದಾಗಿ ನೊರೊ ವೈರಸ್ ಪತ್ತೆ!
ಇನ್ನು ಭಾರತದಲ್ಲೂ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಿವೆ. ಝಿಕಾ ವೈರಸ್ ಕೇರಳದಲ್ಲಿ ಆತಂಕ ಹುಟ್ಟಿಸಿದ್ದರೆ ಉತ್ತರ ಭಾರತದಲ್ಲಿ ಚಂಡೀಪುರ ವೈರಸ್ ಮಕ್ಕಳ ಸಾವಿಗೆ ಕಾರಣವಾಗಿತ್ತು. ಇದೆಲ್ಲದರ ನಡುವೆ ನೊರೊ ಎಂಬ ಹೊಸ ವೈರಸ್ ಸಹ ಪತ್ತೆಯಾಗಿತ್ತು. ಇದರ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಈ ವೈರಸ್‌ನ ಹರಡುವಿಕೆಯ ವೇಗ ಎಷ್ಟರ ಪ್ರಮಾಣದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಸದ್ಯ ಹೈದರಾಬಾದ್‌ನಲ್ಲಿ ಆತಂಕ ಹುಟ್ಟಿಸಿದೆ. ಓಲ್ಡ್ ಸಿಟಿ, ದಬೀರ್‌ಪುರ್, ಯಾಕುತ್‌ಪುರ್, ಮೊಘಲ್ ಪುರ್ ಸೇರಿ ಕೆಲವೊಂದು ಪ್ರದೇಶದಲ್ಲಿ ವೈರಸ್ ಪ್ರಕರಣ ಹೆಚ್ಚುತ್ತಲೇ ಇದೆ. ಈ ವೈರಸ್ ಹರಡಲು ಪ್ರಮುಖ ಕಾರಣ ಅನೈರ್ಮಲ್ಯ ಎಂದು ತಿಳಿದುಬಂದಿದೆ. ಅಲ್ಲದೆ ನೀರಿನ ಮೂಲಕ ಅತ್ಯಂತ ವೇಗವಾಗಿ ಇದು ಹರಡುತ್ತಿದೆ.
ನೊರೊವೈರಸ್ ಹೆಚ್ಚು ಸಾಂಕ್ರಾಮಿಕ ವೈರಸ್ ಆಗಿದ್ದು ಅದು ಹೊಟ್ಟೆ ಮತ್ತು ಕರುಳಿನ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಇದು ವಿಶ್ವದಾದ್ಯಂತ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ಗೆ ಪ್ರಮುಖ ಕಾರಣವಾಗಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

