Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೊಬೈಲ್ ಹಿಡಿದು ಟಾಯ್ಲೆಟ್‌ಗೆ ಹೋಗುತ್ತಿದ್ದೀರಾ? ಹಾಗಾದರೆ ಜೋಕೆ!
ನಮ್ಮ ಜೊತೆ ದಿನದ 24 ಗಂಟೆಯೂ ನಮ್ಮ ಜೊತೆಗಿರುವ ವಸ್ತುವೆಂದರೆ ಅದು ಮೊಬೈಲ್. ನಿದ್ದೆ ಮಾಡುವಾಗಲೇ ಪಕ್ಕದಲ್ಲಿಯೇ ಇಟ್ಟು ಮಲಗುತ್ತೇವೆ, ಆದರೆ ಈ ಮೊಬೈಲ್ ನಲ್ಲಿ ಟಾಯ್ಲೆಟ್‌ಗಿಂತ ಅಧಿಕ ಸೋಂಕಾಣಗಳು ಇರುತ್ತದೆ ಎಂಬುವುದು ಗೊತ್ತೇ? ಹೌದು ಇದು ಸತ್ಯ. ಆದರೆ ನಮ್ಮಲ್ಲಿ ಬಹುತೇಕರು ಈ ಮೊಬೈಲ್ ಸ್ವಚ್ಛತೆ ಕಡೆಗೆ ಗಮನ ಹರಿಸುವುದೇ ಇಲ್ಲ. ಕೊರೊನಾ ಸಮಯದಲ್ಲಿ ಮೊಬೈಲ್ ಸ್ಕ್ರೀನ್ ಅನ್ನು ಕೆಲವರು ಕ್ಲೀನ್ ಮಾಡುತ್ತಿದ್ದರು, ಆದರೆ ಇಗ ಮೊಬೈಲ್ ಸ್ವಚ್ಛ ಮಾಡಬೇಕು ಎಂದು ಯಾರು ಯೋಚಿಸುವುದೇ ಇಲ್ಲ.

ಟಾಯ್ಲೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗುವುದು ಇನ್ನೂ ಅಪಾಯಕಾರಿ
ತುಂಬಾ ಜನರಿಗೆ ಟಾಯ್ಲೆಟ್‌ಗೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗಿ ಗಂಟೆ ಗಟ್ಟಲೆ ಕೂರುವ ಅಭ್ಯಾಸ ಇರುತ್ತದೆ. ನಿಮ್ಮ ಈ ಅಭ್ಯಾಸ ಎಷ್ಟೊಂದು ಅಪಾಯಕಾರಿ ಎಂಬುವುದು ಗೊತ್ತೇ, ರೋಗ ಬರಲು ನಿಮ್ಮ ಈ ಅಭ್ಯಾಸವೇ ಸಾಕು. ಟಾಯ್ಲೆಟ್‌ನಲ್ಲಿರುವ ಕೀಟಾಣುಗಳು ಮೊಬೈಲ್‌ನಲ್ಲಿ ಕೂತು ಮನೆಯೊಳಗೆ ಬರುತ್ತದೆ. ಇದರಿಂದ ಫುಡ್ ಪಾಯಿಸನ್ ಉಂಟಾಗುವುದು.
ಮೂತ್ರ ಸೋಂಕು ಉಂಟಾಗುವುದು
ತುಂಬಾ ಹೊತ್ತು ಮೊಬೈಲ್ ಅನ್ನು ಹಿಡಿದು ಟಾಯ್ಲೆಟ್‌ನಲ್ಲಿ ಕೂರುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು. ಮೂತ್ರ ಸೋಂಕು ಇರುವವರು ಆ ಟಾಯ್ಲೆಟ್ ಕೂತಿದ್ದರೆ ನೀವು ಹೋಗಿ ತುಂಬಾ ಹೊತ್ತು ಕೂರುವುದರಿಂದ ಮೂತ್ರ ಸೋಂಕು ನಿಮಗೂ ಹರಡುವುದು
ಹೆಮೊರಾಯ್ಡ್ ಸಮಸ್ಯೆ ಬರುವುದು
ಟಾಯ್ಲಟ್‌ನಲ್ಲಿ ತುಂಬಾ ಹೊತ್ತು ಕೂರುವುದರಿಂದ ಹೆಮೊರಾಯ್ಡ್ ಸಮಸ್ಯೆ ಬರುತ್ತದೆ.
ಹೊಟ್ಟೆಯ ಆರೋಗ್ಯ ಹಾಳಾಗುತ್ತದೆ
ಟಾಯ್ಲೆಟ್‌ನಲ್ಲಿ ಹೊಟ್ಟೆ ಹಿಡಿದು ಕೂರುವುದರಿಂದ ಮಲವಿಸರ್ಜನೆ ಸಂಪೂರ್ಣವಾಗಿ ಮಾಡುವುದಿಲ್ಲ, ಗಮನವೆಲ್ಲಾ ಮೊಬೈಲ್ ಮೇಲೆಯೇ ಇರುತ್ತದೆ, ಇಲ್ಲದಿದ್ದರೆ ಮಲವಿಸರ್ಜನೆಯಾದರೂ ಸುಮ್ಮನೆ ಕೂರುವುದರಿಂದ ಗುದದ್ವಾರದ ಮೇಲೆ ಹೆಚ್ಚಿನ ಒತ್ತಡ ಬೀಳುವುದು, ಹೀಗಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಈ ಅಭ್ಯಾಸವನ್ನು ಬಿಡುವುದು ಹೇಗೆ?
ಕೆಲವರಿಗೆ ಟಾಯ್ಲೆಟ್‌ಗೆ ಮೊಬೈಲ್ ಹಿಡಿದುಕೊಂಡು ಹೋಗದಿದ್ದರೆ ಮಲವಿಸರ್ಜನೆಯಾಗುವುದೇ ಅಷ್ಟೊಂದು ಅಡಿಕ್ಟ್ ಆಗಿರುತ್ತಾರೆ. ನೀವು ಮೊಬೈಲ್ ಅನ್ನು ಟಾಯ್ಲೆಟ್ ಒಳಗೆ ತೆಗೆದುಕೊಂಡು ಹೋಗಲೇಬೇಡಿ, ಮನಸ್ಸು ಗಟ್ಟಿ ಮಾಡಿ ಮೊಬೈಲ್ ಹೊರಗಡೆಯೇ ಇಟ್ಟು ಟಾಯ್ಲೆಟ್ ಒಳಗಡೆ ಹೋಗಿ , ಇದರಿಂದ ಕಾಯಿಲೆ ಹರಡುವುದು ತಪ್ಪುವುದು.
ಮೊಬೈಲ್ ಸ್ವಚ್ಛತೆ ಕಡೆಗೆ ಗಮನ ನೀಡಿ
* ಮೊಬೈಲ್ ಅನ್ನು ನೀವು ಸ್ವಚ್ಛ ಮಾಡುತ್ತಲೇ ಇರುತ್ತದೆ. ಮೊಬೈಲ್ ಕ್ಲೀನ್ ಮಾಡಲು ಸ್ಪ್ರೇ ಸಿಗುತ್ತೆ, ಅದನ್ನು ಬಳಸಿದರೆ ಮೊಬೈಲ್ ಶುದ್ಧವಾಗಿರುವುದು, ಅದರಲ್ಲಿ ಕೀಟಾಣುಗಳು ಕಡಿಮೆಯಾಗುವುದು.
ಟಾಯ್ಲೆಟ್ ಕ್ಲೀನಿಂಗ್ ಬಗ್ಗೆ ಗಮನಹರಿಸಬೇಕು
* ಮನೆಯ ಟಾಯ್ಲೆಟ್ ಅನ್ನು ಪ್ರತಿನಿತ್ಯ ಸ್ವಚ್ಚಗೊಳಿಸಿ, ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಸ್ಪ್ರೇ ಅಥವಾ ಲಿಕ್ವಿಡ್ ಬಳಸಬೇಕು.
* ಒಬ್ಬರು ಬಳಸಿದ ಟಾಯ್ಲೆಟ್ ಮತ್ತೊಬ್ಬರು ಬಳಸುವಾಗ ಹಾಗೇ ಹೋಗಿ ಕೂರಬೇಡಿ, ನೀರು ಹಾಕಿ ಸ್ವಚ್ಛ ಗೊಳಿಸಿ ನಂತರವಷ್ಟೇ ಕೂರಿ, ಅದರ ಮೊದಲು ಟಾಯ್ಲೆಟ್ ಪೇಪರ್‌ನಿಂದ ವೈಪ್ ಮಾಡಿ.
ವೆಸ್ಟರ್ನ್ ಟಾಯ್ಲೆಟ್ ಬಳಸುವವರು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು
ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್‌ನಿಂದ ಸೋಂಕಾಣುಗಳು ಹೆಚ್ಚಾಗಿ ಹರಡುವುದು, ಆದ್ದರಿಂದ ಪಬ್ಲಿಕ್ ಟಾಯ್ಲೆಟ್ ಬಳಸುವಾಗ ಇಂಡಿಯನ್ ಬಳಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
