Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ತುಂಬಾ ಹೊತ್ತು ಕೂತು ಮಾಡುವ ಕೆಲಸ ಸ್ಟ್ರೋಕ್ ಅಪಾಯ ಹೆಚ್ಚಿಸುವುದೇ? ವೈದ್ಯರು ಹೇಳುವುದೇನು?
ಅಕ್ಟೋಬರ್ 29ನ್ನು ವಿಶ್ವ ಸ್ಟ್ರೋಕ್ ದಿನವನ್ನಾಗಿ ಆಚರಿಸಲಾಗುವುದು. ಸ್ಟ್ರೋಕ್ ಬಗ್ಗೆ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಈ ವರ್ಷ #GreaterThanStroke active challenge ಎಂಬ ಥೀಮ್‌ನಡಿಯಲ್ಲಿ ವಿಶ್ವ ಸ್ಟ್ರೋಕ್ ದಿನವನ್ನು ಆಚರಿಸಲಾಗುವುದು. ಸ್ಟ್ರೋಕ್ ಬಗ್ಗೆ ಜಾಗ್ರತೆ ಮೂಡಿಸುವುದು ಹಾಗೂ ಸ್ಟ್ರೋಕ್ ತಡೆಗಟ್ಟಲು ಪ್ರಯತ್ನಿಸುವುದು ಈ ಥೀಮ್‌ನ ಉದ್ದೇಶವಾಗಿದೆ.
ಸ್ಟ್ರೋಕ್ ಉಂಟಾದರೆ FAST ಲಕ್ಷಣಗಳು ಕಂಡು ಬಂದ ತಕ್ಷಣ ತುರ್ತು ಚಿಕಿತ್ಸೆಯ ಅಗ್ಯತವಿದೆ.

FAST
F: face, ಮುಖದ ಸ್ನಾಯುಗಳು ದುರ್ಬಲವಾಗುವುದು
A: Arm ಕೈಗಳ ಸ್ನಾಯಗಳು ದುರ್ಬಲವಾಗುವುದು
S: Speech ಮಾತು ತೊದಲುವುದು
T: Time ( ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ಪಡೆಯಬೇಕು)
ಸ್ಟ್ರೋಕ್ ತಡೆಗಟ್ಟಲು ವಿಧಾನಗಳು
ಆರೋಗ್ಯಕರ ಜೀವನಶೈಲಿ
ಧೂಮಪಾನ ತಡೆಗಟ್ಟುವುದು
ಮದ್ಯಪಾನ ಮಿತಿಯಲ್ಲಿ ಮಾಡುವುದು
ದೈಹಿಕ ಚಟುವಟಿಕೆ
ಸೋಡಿಯಂ ಆಹಾರ, ಸಿಹಿ ತಿಂಡಿ, ಮಾಂಸಾಹಾರ ಇವುಗಳನ್ನು ಮಿತಿಯಲ್ಲಿ ಸೇವನೆ ಮಾಡುವುದು
ನಿಯಮಿತ ಆರೋಗ್ಯ ತಪಾಸಣೆ
ಇವೆಲ್ಲಾ ಸ್ಟ್ರೋಕ್ ಅಪಾಯ ಕಡಿಮೆ ಮಾಡುತ್ತದೆ.
ಹಾಗಾಗಿ ದೀರ್ಘಾವಧಿ ಕೂತು ಕೆಲಸ ಮಾಡುವವರಾದರೆ ಈ ಬಗ್ಗೆ ಜಾಗ್ರತೆವಹಿಸಬೇಕು, ದೀರ್ಘಾವಧಿ ಕೂತು ಮಾಡುವ ಕೆಲಸ ಸ್ಟ್ರೋಕ್ ಅಪಾಯ ಹೆಚ್ಚಿಸುತ್ತದೆ ಹೇಗೆ ಎಂಬುವುದರ ಬಗ್ಗೆ ಡಾ. ಆದಿತ್ಯ ಕುಲಕರ್ಣಿ, ಕನ್ಸಲ್ಟೆಂಟ್ - ನ್ಯೂರೊಲೊಜಿ ಮಣಿಪಾಲ್ ಆಸ್ಪತ್ರೆ ಸರ್ಜಾಪುರ ರಸ್ತೆ ನಮ್ಮ ಓದುಗರಿಗೆ ಕೆಲ ಉಪಯುಕ್ತ ಮಾಹಿತಿ ನೀಡಿದ್ದಾರೆ, ಈ ಸಲಹೆ ಸ್ಟ್ರೋಕ್ ಅಪಾಯ ತಡೆಗಟ್ಟಲು ಸಹಾಯ ಮಾಡುತ್ತದೆ.
ದೀರ್ಘಾವಧಿ ಕೂತು ಮಾಡುವ ಕೆಲಸ ಹಾಗೂ ಸ್ಟ್ರೋಕ್ ಇದರ ಬಗ್ಗೆ ಅಧ್ಯಯನ ವರದಿ ಏನು ಹೇಳಿದೆ?
2016ರಲ್ಲಿ ದೀರ್ಘಾವಧಿಯ ಕೆಲಸದಿಂದ ಉಂಟಾಗುವ ಸ್ಟ್ರೋಕ್‌ನಿಂದ ಆಗ್ನೇಯ ಏಷ್ಯಾದಲ್ಲಿ ಸುಮಾರು 159,000 ಸಾವುಗಳು ಸಂಭವಿಸಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಆಗ್ನೇಯ ಏಷ್ಯಾದಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. 2000ದಿಂದ 2016ರವರೆಗೆ ನಡೆಸಿದ ಅಧ್ಯಯನದ ವರದಿಯ ಅಂಕಿ ಅಂಶ ಪ್ರಕಾರ ಆಫ್ರಿಕಾದಲ್ಲಿ ಸ್ಟ್ರೋಕ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ,ಅದೇ ಯುರೋಪ್‌ನಲ್ಲಿ ಕಡಿಮೆಯಿದೆ.
ತಜ್ಞರು ಹೇಳುವುದೇನು?
ದೀರ್ಘಾವಧಿ ಕೂತು ಕೆಲಸ ಮಾಡುವುದರಿಂದ ಒತ್ತಡದ ಹಾರ್ಮೋನ್‌ಗಳಾದ ಅಡ್ರಿನಾಲಿನ್, ನೊರಾಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಬಿಡುಗಡೆಯಾಗುತ್ತದೆ. ಇದರಿಂದ ಹೃದಯದ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು, ಅತ್ಯಧಿಕ ರಕ್ತದೊತ್ತಡ ಉಂಟಾಗುವುದು, ಹೃದಯ ನಾಳಗಳಲ್ಲಿ ಕೊಬ್ಬಿನಂಶ ಸಂಗ್ರಹವಾಗಿ ಸ್ಟ್ರೋಕ್‌ಅಪಾಯ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಹಾಗಾಗಿ ದೀರ್ಘಾವಧಿ ಕೂತು ಕೆಲಸ ಮಾಡುವುದು, ಹೆಚ್ಚಿನ ಒತ್ತಡ ತೆಗೆದುಕೊಳ್ಳುವುದು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ.
ಇದರ ಜೊತೆಗೆ ಜೀವನ ಶೈಲಿ ಕೂಡ ಪರಿಣಾಮ ಬೀರುವುದು
ತಂಬಾಕು ಬಳಕೆ, ಆಲ್ಕೋಹಾಲ್ , ಅನಾರೋಗ್ಯಕರ ಆಹಾರ ಶೈಲಿ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿರುವುದು ಇವೆಲ್ಲಾ ಮೆದುಳಿನ ಸ್ಟ್ರೋಕ್ ಅಪಾಯ ಹೆಚ್ಚಿಸುತ್ತದೆ.
ತುಂಬಾ ಹೊತ್ತು ಕೂತು ಕೆಲಸ ಮಾಡುವುದಾದರೆ ಸ್ಟ್ರೋಕ್ ಅಪಾಯ ತಪ್ಪಿಸುವುದು ಹೇಗೆ?
ಒಂದೇ ಕಡೆ ಕೂರುವುದು ತಪ್ಪಿಸಿ, ಸ್ವಲ್ಪ ಎದ್ದು ಓಡಾಡಿ
ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಿ
ಧ್ಯಾನ, ಯೋಗ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿಯಾಗಿದೆ.
ಆರೋಗ್ಯಕ್ಕೆ ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications