Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಾರ್ಶ್ವವಾಯು ಉಂಟಾಗಲಿದೆ ಎಂದು ಸೂಚಿಸುವ 5 ಲಕ್ಷಣಗಳಿವು
ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುವುದು. ಈ ವರ್ಷ "Together We Are # Greater Than Stroke" ಎಂಬ ಥೀಮ್‌ನಲ್ಲಿ ಆಚರಿಸಲಾಗುವುದು. ಪಾರ್ಶ್ವವಾಯು ತಡೆಗಟ್ಟುವುದರ ಬಗ್ಗೆ ಜನರಿಗೆ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಪಾರ್ಶ್ವವಾಯು ಉಂಟಾದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತರೆ ದೊಡ್ಡ ಅನಾಹುತ ಉಂಟಾಗುವುದಿಲ್ಲ, ಮೆದುಳಿ ರಕ್ತ ಸಂಚಾರ ಸರಿಯಾಗಿ ನಡೆಯದಿದ್ದಾಗ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಉಂಟಾಗುವುದು. ರಕ್ತ ನಾಳದಲ್ಲಿ ಏನಾದರೂ ಬ್ಲಾಕ್ ಉಂಟಾಗಿದ್ದರೆ ಅಥವಾ ರಕ್ರಸ್ರಾವ(hemorrhagic stroke) ಉಂಟಾದಾಗ ಪಾರ್ಶ್ವವಾಯು ಉಂಟಾಗುವುದು.

ಪಾರ್ಶ್ವವಾಯು ಉಂಟಾಗುವ ಮೊದಲು ದೇಹದಲ್ಲಿ ಕೆಲ ಲಕ್ಷಣಗಳು ಕಂಡು ಬರುವುದು, ಆ ಲಕ್ಷಣಗಳು ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಪಾರ್ಶ್ವವಾಯು ತಗುಲಿ ದೇಹದ ಅಂಗಾಂಗಗಳು ಸ್ವಾದೀನ ಕಳೆದುಕೊಳ್ಳುವುದನ್ನು ತಡೆಗಟ್ಟಬಹುದು. ಪಾರ್ಶ್ವವಾಯು ಲಕ್ಷಣಗಳೇನು ಎಂದು ನೋಡೋಣ ಬನ್ನಿ:
1. ದೇಹದ ಯಾವುದೋ ಒಂದು ಭಾಗ ಮರಗಟ್ಟಿದಂತಾಗುವುದು
ಪಾರ್ಶ್ವವಾಯು ಸಂಭವಿಸಲಿದೆ ಎಂದು ಸೂಚಿಸುವ ಪ್ರಮುಖ ಲಕ್ಷಣವೆಂದರೆ ದೇಹದ ಭಾಗ ಮರಗಟ್ಟಿದಂತಾಗುವುದು, ಕಾಲು, ಕೈ ಅಥವಾ ಮುಖದಲ್ಲಿ ವ್ಯತ್ಯಾಸ ಕಂಡು ಬರುವುದು. ನಗುವುದು ಕಷ್ಟವಾಗುವುದು, ತುಟಿ ಒಂದು ಕಡೆಗೆ ತಿರುಗುತ್ತದೆ.
2. ಮಾತನಾಡಲು ಕಷ್ಟವಾಗುವುದು
ಮಾತು ತೊದಲುವುದು, ಮಾತನಾಡಲು ಕಷ್ಟವಾಗುವುದು ಇದು ಪಾರ್ಶ್ವವಾಯುವಿನ ಲಕ್ಷಣವಾಗಿದೆ. ಒಂದು ಸರಳ ಪದ ಹೇಳಲು ಕಷ್ಟವಾಗುವುದು, ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅದು ಪಾರ್ಶ್ವವಾಯು ಲಕ್ಷಣವಾಗಿದೆ.
3. ಗೊಂದಲ: ವ್ಯಕ್ತಿಗೆ ತುಂಬಾನೇ ಗೊಂದಲ ಉಂಟಾಗುವುದು, ಎರಡು ಕೈಗಳನ್ನು ಎತ್ತಲು ಕೂಡ ಕಷ್ಟವಾಗುವುದು, ನೀವು ಏನಾದರೂ ಹೇಳಿದರೆ ಅದು ಅವರಿಗೆ ಅರ್ಥ ಆಗಲ್ಲ, ಮೈ ತುಂಬಾ ಬೆವರುತ್ತದೆ.
4. ತುಂಬಾ ತಲೆನೋವು: ಇದ್ದಕ್ಕಿದ್ದಂತೆ ತುಂಬಾ ತಲೆನೋವು ಕಂಡು ಬಂದರೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗುವುದು.
5. ಕಣ್ಣುಗಳು ಮಂಜಾಗುವುದು:
ಕಣ್ಣುಗಳು ಇದ್ದಕ್ಕಿದ್ದಂತೆ ಮಂಜಾಗುವುದು, ತಲೆಸುತ್ತು ಕಂಡು ಬರುವುದು. ದೇಹದ ಬ್ಯಾಲೆನ್ಸ್ ತಪ್ಪುವುದು. ನಡೆದಾಡಲು ಕಷ್ಟವಾಗುವುದು.
ಈ ರೀತಿಯ ಲಕ್ಷಣಗಳು ಕಂಡು ಬಂದ ತಕ್ಷಣ ಗಮಟೆಯ ಒಳಗಾಗಿ ಸೂಕ್ತ ಚಿಕಿತ್ಸೆ ದೊರೆತರೆ ಪಾರ್ಶ್ವವಾಯು ದೇಹವನ್ನು ಗಂಭೀರವಾಗಿ ಬಾಧಿಸುವುದನ್ನು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
