Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಶ್ವ ನಗು ದಿನ: ನಗಬಾರದ ಸ್ಥಳದಲ್ಲಿ ನಗು ಬಂದರೆ ಏನು ಮಾಡಬೇಕು ಗೊತ್ತಾ?
ಇಂದು ವಿಶ್ವ ನಗುವಿನ ದಿನ. ನಾವು ಎಷ್ಟು ನಗುತ್ತೇವೆ ಅಷ್ಟು ಆರೋಗ್ಯವಾಗಿರುತ್ತೇವ. ಮನಸಾರೆ ನಕ್ಕರೆ ಸಾಕು ನಮ್ಮ ಟೆನ್ಷೆನ್ ಎಲ್ಲಾ ಕ್ಷಣಾರ್ಧದಲ್ಲಿ ದೂರಾಗುವುದು. ಮುಖದಲ್ಲಿ ಮಂದಹಾಸವಿದ್ದರೆ ಆ ಮುಖ ನೋಡಲು ಸುಂದರವೆನಿಸುವುದು. ನಗುವಿನಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
ಇಲ್ಲಿ ನಾವು ಕೆಲವೊಂದು ಸಂದರ್ಭದಲ್ಲಿ ನಗು ನಿಲ್ಲಿಸಲು ಏನು ಮಾಡಬೇಕು ಎಂಬುವುದರ ಬಗ್ಗೆ ಹೇಳುತ್ತಿದ್ದೇವೆ. ಏಕೆಂದರೆ ಕೆಲವು ಸಂದರ್ಭದಲ್ಲಿ ನಗು ಬಂದರೂ ನಗಬಾರದು, ಆ ನಗು ಆ ಸಂದರ್ಭಕ್ಕೆ ಸೂಕ್ತ ಅಲ್ವೇ ಅಲ್ಲ, ಅಂಥ ಸಂದರ್ಭದಲ್ಲಿ ನಗು ನಿಲ್ಲಿಸಲು ಏನು ಮಾಡಬೇಕು ಎಂದು ನೋಡೋಣ ಬನ್ನಿ.

ನಿಮ್ಮ ಕೈಯನ್ನು ನೀವೇ ಚಿವುಟಿ
ಕೆಲವೊಮ್ಮೆ ಏನಾದರೂ ಒಂದು ಘಟನೆ ನಡೆದಾಗ ಉದಾಹರಣೆ ನೀವು, ನಿಮ್ಮ ಸ್ನೇಹಿತರು ನಡೆದುಕೊಂಡು ಹೋಗ್ತಾ ಇರುತ್ತೀರಿ, ಅವರು ಕಾಲುಜಾರಿ ಬಿದ್ದಾಗ ನೀವು ನಗಲಾರಂಭಿಸಿದರೆ ಅವರಿಗೆ ಹೇಗಾಗಬೇಡ. ಇತ್ತೀಚೆಗೆ ಒಂದು ವೀಡಿಯೋ ತುಂಬಾನೇ ವೈರಲ್ ಆಗಿತ್ತು. ಸಾವು ಮನೆಯಲ್ಲಿ ಒಬ್ಬ ಹೆಂಗಸು ಸತ್ತವರನ್ನು ನೆನೆಸಿಕೊಂಡು ಅಳುತ್ತಿದ್ದರು, ಅವರ ಅಳು ನಗು ಬರಿಸುವಂತಿತ್ತು... ಅವರು ರಾಗಾವಾಗಿ ಹೇಳುತ್ತಾ ಅಳುತ್ತಿದ್ದರು, ಅದನ್ನು ನೋಡುವಾಗ ಯಾರಿಗಾದರೂ ನಗು ಬರುತ್ತೆ, ಆದರೆ ಅದು ನಗುವಂಥ ಸಂದರ್ಭವೇ? ಹೀಗೆ ಕೆಲವೊಂದು ಸಂದರ್ಭದಲ್ಲಿ ನಗು ಬರುವುದು ಆದರೆ ನೀವು ನಗುವನ್ನು ನಿಯಂತ್ರಿಸಿ. ನಗು ನಿಯಂತ್ರಿಸಲು ಸಾಧ್ಯವಾಗದಿದ್ದೆ ನಿಮ್ಮ ಕೈಗೆ ನೀವೇ ಚಿವುಟಿಕೊಳ್ಳಿ. ನಗು ನಿಯಂತ್ರಣಕ್ಕೆ ಬರುವುದು.
ನಿಮ್ಮ ವರ್ತನೆ ಬದಲಾಯಿಸಿ
ಕೆಲವೊಮ್ಮೆ ಬಾಸ್ ಕೆಲಸ ಸರಿಯಾಗಿರಲ್ಲ ಎಂದು ಬೈಯ್ಯುತ್ತಿರುತ್ತಾರೆ, ಆದರೆ ಅವರು ಬೈಯ್ಯುವ ದಾಟಿ ನಗು ಭರಿಸುವಂತಿರುತ್ತದೆ, ಆದರೆ ನಕ್ಕರೆ ಬಾಸ್ ಪಿತ್ತ ನೆತ್ತಿಗೇರುವುದು. ಇನ್ನು ಕೆಲವರು ಆತ್ಮವಿಶ್ವಾಸವಿಲ್ಲದಿದ್ದಾಗ ತಾವು ಏನು ಹೇಳಬೇಕೆಂದು ಗೊತ್ತಾಗದೇ ಇದ್ದಾಗ ನಗುತ್ತಾರೆ. ಆದರೆ ಈ ರೀತಿ ನಗುವುದರಿಂದ ನಿಮಗೆ ನಷ್ಟ ಉಂಟಾಗುವುದು. ಅಂಥ ಸಮಯದಲ್ಲಿ ನಗುವನ್ನು ಕಂಟ್ರೋಲ್ ಮಾಡಬೇಕು.
ಈ ಸಮಯದಲ್ಲಿ ನೀವು ನಾಲಗೆಯಿಂದ ತುಟಿ ಸವರುವುದು, ನಿಧಾನಕ್ಕೆ ಉಸಿರು ತೆಗೆದು ಬಿಡುವುದು, ತಲೆ ಅಲ್ಲಾಡಿಸುವುದು ಮಾಡಿದರೆ ನಗು ನಿಯಂತ್ರಿಸಬಹುದು. ದೀರ್ಘ ಉಸಿರು ತೆಗೆದುಕೊಂಡಾಗ ಕೂಡ ನಗು ನಿಯಂತ್ರಿಸಬಹುದು.
ಸಾವು ಮನೆಗೆ ಹೋದಾಗ ಅಲ್ಲಿ ಪರಿಚಿತರನ್ನು ಕಂಡಾಗ ನಕ್ಕು ಮಾತನಾಡಿಸಲು ಹೋಗಬೇಡಿ, ಕೆಲವರು ಈ ತಪ್ಪು ಮಾತನಾಡುತ್ತಾರೆ. ಕೆಲವರಿಗೆ ಸಾವು ಮನೆಯಲ್ಲಿ ಪರಿಚಯದವರು ಸಿಕ್ಕಾಗ ಮಾತನಾಡಿಸದೆ ಇದ್ದರೆ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂಬ ಭಯ, ಹೀಗಾಗಿ ನಕ್ಕು ಮಾತನಾಡಿಸುತ್ತಾರೆ, ಅದರ ಬದಲಾಗಿ ತಲೆಯನ್ನು ಅಲ್ಲಾಡಿಸಿ.
ಒತ್ತಡದಿಂದಾಗಿ ನಗಬೇಡಿ
ಸಂದರ್ಶನಕ್ಕೆ ಹೋದಾಗ ತುಂಬಾನೇ ಒತ್ತಡಕ್ಕೆ ಒಳಗಾಗುವುದು ಸಹಜ, ಈ ಸಂದರ್ಭದಲ್ಲಿ ನೀವು ನಗಲು ಹೋಗಬೇಡಿ, ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ. ಹೀಗೆ ಹಲವು ಸಂದರ್ಭದಲ್ಲಿ ಅಲ್ಲಿ ನಗುವಿನ ಅವಶ್ಯಕೆಯೇ ಇಲ್ಲದಿದ್ದರೂ ನಗು ಬರುತ್ತದೆ, ಆವಾಗ ನಗು ನಿಯಂತ್ರಿಸಿದರೆ ನಮ್ಮ ನಗುವಿಗೆ ಬೆಲೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
